ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರು ತಮ್ಮ ಜಮೀನಿನ ಪಹಣಿಯಲ್ಲಿ ತೋರಿಸಿದಷ್ಟು ಎಕರೆ ಇರುವುದಿಲ್ಲ. ಪಹಣಿಯಲ್ಲಿ ಜಮೀನು ಹೆಚ್ಚಿರುತ್ತದೆ. ಆದರೆ ವಾಸ್ತವದಲ್ಲಿ ಆ ಜಮೀನು ಕಡಿಮೆಯಾಗಿರುತ್ತದೆ. ಹೀಗಾಗಿ ಕೆಲವು ರೈತರು ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರೈತರು ತಮ್ಮ ಜಮೀನು ಇನ್ನೊಬ್ಬರಿಂದ ಅಥವಾ ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕೆಂಬುದರ ಮಾಹಿತಿ ಇಲ್ಲಿದೆ.
Thank you for reading this post, don't forget to subscribe!ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರು ತಮ್ಮ ಜಮೀನಿನ ಪಹಣಿಯಲ್ಲಿ ತೋರಿಸಿದಷ್ಟು ಎಕರೆ ಇರುವುದಿಲ್ಲ. ಪಹಣಿಯಲ್ಲಿ ಜಮೀನು ಹೆಚ್ಚಿರುತ್ತದೆ. ಆದರೆ ವಾಸ್ತವದಲ್ಲಿ ಆ ಜಮೀನು ಕಡಿಮೆಯಾಗಿರುತ್ತದೆ. ಹೀಗಾಗಿ ಕೆಲವು ರೈತರು ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜಮೀನು ಒತ್ತುವರಿಯಾಗಿದ್ದರೆ ಯಾರಿಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸಿದ ನಂತರ ಜಮೀನು ಅಳತೆ ಮಾಡಲು ಯಾರು ಬರುತ್ತಾರೆ? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಮೀನು ಅಥವಾ ಖಾಲಿ ನಿವೇಶನಗಳನ್ನು ಅಕ್ಕಪಕ್ಕದವರು ಅತಿಕ್ರಮಣ ಅಥವಾ ಒತ್ತುವರಿ ಮಾಡಿಕೊಂಡು ಆ ಜಾಗದ ಸುಪರ್ದಿಯನ್ನು ತಾವೇ ಪಡೆದುಕೊಂಡು ಅಸಲಿ ಮಾಲಿಕನಿಗೆ ದೂರ ಇಡುವುದನ್ನು ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎನ್ನುವರು.
ಪ್ರತಿ ಜಮೀನಿಗೆ ಹದ್ದುಬಸ್ತು ಇದ್ದೇ ಇರುತ್ತದೆ. ಅಂದರೆ ಸರ್ವೆ ದಾಖಲೆಗಳ ಪ್ರಕಾರ ಜಮೀನು ಅಳತೆಯಾಗಿರುತ್ತದೆ. ಆಯಾ ಜಮೀನಿನ ಗಡಿ ಭಾಗವನ್ನು ಪತ್ತೆಹಚ್ಚಿ ಗುರುತು ಸಹ ಮಾಡಲಾಗಿರುತ್ತದೆ. ಆದರೆ ಈ ಜಮೀನು ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು
ರೈತರು ತಮ್ಮ ಜಮೀನು ಒತ್ತುವರಿಯಾಗಿದೆ ಎಂಬ ಸಂಶಯ ಬಂದರೆ ಅಂದರೆ ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಇದೆ ಎಂಬ ಸಂಶಯವಿದ್ದರು ಅರ್ಜಿ ಸಲ್ಲಿಸಬಹುದು.
ರೈತರು ಅರ್ಜಿಯನ್ನು ತಮ್ಮ ಹತ್ತಿರದ ನಾಡ ಕಚೇರಿ ಅಥವಾ ತಹಶೀಲ್ದಾರಾ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ರಸೀದಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರು ತಮ್ಮ ಜಮೀನಿಗೆ ಬರುವ ಮಾಹಿತಿಯನ್ನು ಸಹ ಫೋನ್ ಕರೆ ಮಾಡಿ ತಿಳಿಸಬಹುದು. ಅಂದರೆ ಒಂದು ದಿನಾಂಕ ನಿಗದಿಪಡಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಕಾರ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಮುಂಚಿತವಾಗಿ ನೋಟಿಸ್ ಸಹ ಕಳಿಸಲಾಗುವುದು. ಜಮೀನಿನ ಸರ್ವೆಯನ್ನು ಎಲ್ಲಾ ಜಮೀನಿನ ಮಾಲಿಕರ ಸಮ್ಮುಖದಲ್ಲಿಮಾಡುವರು. ಅಳತೆ ಮಾಡಿದ ನಂತರ ಜಮೀನು ಒತ್ತುವರಿಯಾಗಿದ್ದರೆ ತಿಳಿಸುವರು. ಹಾಗೂ ಹದ್ದುಬಸ್ತು ಕಲ್ಲುಗಳನ್ನಿಟ್ಟು ಹೋಗುವರು. ಈ ಆಧಾರದ ಮೇಲೆ ತಮ್ಮ ಜಮೀನು ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕರು ಭೂಮಾಲಿಕರ ಜಮೀನಿಗೆ ಬಂದು ಅಳತೆ ಮಾಡುತ್ತಾರೆ. ಸರ್ವೆ ದಾಖಲೆಗಳ ಪ್ರಕಾರ ಜಮೀನಿನ ಅಳತೆ ಮಾಡಿ ಗಡಿಭಾಗವನ್ನು ಪತ್ತೆ ಹಚ್ಚಿ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.
ಅರ್ಜಿ ಸಲ್ಲಿಸಲು ಸಹಜವಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇದರೊಂದಿಗೆ ಜಮೀನಿನ ಪಹಣಿ (ಆರ್.ಟಿ.ಸಿ) ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು ಲಗತ್ತಿಸಬೇಕೆಂಬುದರ ಕುರಿತು ಅರ್ಜಿಯಲ್ಲಿ ತಿಳಿಸಿರುತ್ತಾರೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವುದನ್ನು ಮರೆಯಬಾರದು. ಅರ್ಜಿಯಲ್ಲಿ ಒತ್ತುವರಿಯಾಗಿರುವ ಜಮೀನಿನ ಸರ್ವೆ ನಂಬರ್, ಚೆಕ್ಕುಬಂದಿ, ಅಕ್ಕಪಕ್ಕದ ರೈತರ ಸರ್ವೆ ನಂಬರ್ ಹಾಗೂ ಜಮೀನಿನ ಮಾಲಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿಯೊಂದಿಗೆ ಭೂ ಒತ್ತುವರಿಗೆ ನಿಗದಿಪಡಿಸಲಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿರುವ ಭೂ ಮಾಪಕ ಅಧಿಕಾರಿಗಳಿಗೆ ಸಂಪರ್ಕಿಸಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…