ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಗುರುತಿಸಿಕೊಂಡಿರುವ ಬಹುಭಾಷಾ ನಟರಾದ, ತಮ್ಮ ನೈಸರ್ಗಿಕ ನಟನೆಯ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯವನ್ನು ಅಳುತ್ತಿರುವ ಕಿಚ್ಚ ಸುದೀಪ್ ಹಲವು ಹಿಟ್ ಸಿನೆಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ನಟಿಸಿ ತಾವು ಯಾವ ಲೆಜೆಂಡ್ ನಟರಿಗಿಂತ ಕಡಿಮೆ ಏನಿಲ್ಲ ಎಂದು ಸಾಬೀತು ಪಡಿಸಿದ್ದಾರೆ.
ಸದ್ಯ ಅವರು ಹತ್ತು ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ಬ್ಲಾಕ್ ಬಸ್ಟರ್ ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಯಾವುವು ಆ ಬಿಗ್ ಬಜೆಟ್ ಸಿನಿಮಾಗಳು ಮತ್ತು ಅವು ಯಾವಾಗ ರಿಲೀಸ್ ಆಗಲಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ಮ್ಯಾಕ್ಸ್ : ಮುಂಚೆ ಕಿಚ್ಚ 46 ಎಂದು ಕರೆಯಲಾಗುತ್ತಿದ್ದ ಈ ಸಿನಿಮಾ ಇದೀಗ ಅಧಿಕೃತವಾಗಿ ಮ್ಯಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಸದ್ಯ ಒಂದು ತಿಂಗಳ ಕಾಲ ಶೂಟಿಂಗ್ ಮುಗಿದಿದ್ದು, ಚಿತ್ರ ತಂಡ ಇದೇ ವರ್ಷದ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಅಂದಹಾಗೆ ಈ ಚಿತ್ರದಲ್ಲಿ ಸುದೀಪ್ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
2.ಕಿಚ್ಚ 47: ಮುಂಚೆ ಸುದೀಪ್ ಅವರೇ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಹೊಂದಿದ್ದ ಈ ಸಿನೆಮಾ ಮೊನ್ನೆ ಅವರ ಬರ್ತ್ ಡೇ ಸಂದರ್ಭದಲ್ಲಿ ಇದನ್ನು ತಮಿಳಿನ ನಿರ್ದೇಶಕರಾದ ಚೇರನ್ ಅವರು ನಿರ್ದೇಶಿಸುತ್ತಾರೆ ಎಂದು ಘೋಷಿಸಲಾಯಿತು. ಇನ್ನು ಚಿತ್ರ ಡಿಸೆಂಬರ್ನಲ್ಲಿ ಸೆಟ್ಟೆರಲಿದ್ದು, ಮುಂದಿನ ವರ್ಷದ ಮಧ್ಯದಲ್ಲಿ ಬಿಡುಗಡೆ ಆಗಲಿದೆ.
3.KK: ಇದು ಕಿಚ್ಚ ಸುದೀಪ್ ಅವರ ನಿರ್ದೇಶನದಲ್ಲಿಯೇ ಮೂಡಿ ಬರಲಿರುವ ಚಿತ್ರವಾಗಿದ್ದು, ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೆರಲಿದ್ದು 2024 ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.
4.ಗ್ಲೋಬಲ್ ಮೂವಿ : ರಾಜಮೌಳಿ ವರ ತಂದೆಯಾದ ವಿಜಯೇಂದ್ರ ಮೌಳಿ ಅವರು ಈ ಚಿತ್ರದ ಕಥೆಯನ್ನು ಬರೆಯುತ್ತಿದ್ದಾರೆ. ಬಾಹುಬಲಿ ಚಿತ್ರದ ಕಥೆಯನ್ನು ಕೂಡ ಇವರೇ ಬರೆದಿದ್ದರು.ಸುದೀಪ್ ಅವರ ಹುಟ್ಟು ಹಬ್ಬದ ದಿನದಂದು ಅವರು ಈ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಿದ್ದಾರೆ. ಆರ್ ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ
5.ಬಿಲ್ಲ ರಂಗ ಭಾಷಾ : ಅನುಪ ಭಂಡಾರಿ ಅವರ ನಿರ್ದೇಶನದಲ್ಲಿ ಸೆಟ್ಟೇರಲ್ಲಿರುವ ಈ ಚಿತ್ರವು ಸುದೀಪ್ ಅವರ ಬ್ಯಾನರ್ ಆದಂತಹ ಸುದೀಪ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.
6. ಅಶ್ವಥಮ : ಇದು ಕೂಡ ಅನುಪ ಬಂಡಾರಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರವಾಗಿದ್ದು, ಮುಂದಿನ ವರ್ಷ ಸೆಟ್ಟೆರುವ ಸಾಧ್ಯತೆಗಳಿವೆ.
7.ಕಬ್ಜ-2: ಕಬ್ಜದಲ್ಲಿ ಮಾಡಿದಂತಹ ಪಾತ್ರವನ್ನು ಸುದೀಪ ಅವರು ಇಲ್ಲಿ ಕೂಡ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಚಿತ್ರವು ಕೂಡ ಮುಂದಿನ ವರ್ಷ ಸೆಟ್ಟು ಇರುವ ಸಾಧ್ಯತೆಗಳಿದ್ದು ಮುಂದಿನ ವರ್ಷದ ಅಂತ್ಯದಲ್ಲಿ ಚಿತ್ರ ಬಿಡುಗಡೆಯಾಗುವ ಲಕ್ಷಣಗಳಿವೆ.
ಸ್ನೇಹಿತರೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ಮುಂದಿನ ಪೋಸ್ಟ್ಗಳ ನೋಟಿಫಿಕೇಶನ್ ಗಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ.