Categories: information

Karnataka Politics: ಡಿ.ಕೆ ಶಿವಕುಮಾರ್‌ಗೆ ಪಟ್ಟಾಭಿಷೇಕದ ಜೊತೆ ಸಿದ್ದರಾಮಯ್ಯ ನಾಲ್ವರು ಆಪ್ತರಿಗೆ ಡಿಸಿಎಂ ಹುದ್ದೆ ಸಾಧ್ಯತೆ

ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ನಾಯಕತ್ವ ಬದಲಾವಣೆ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಡಿ.ಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಪಟ್ಟಾಭಿಷೇಕ ಸಾಧ್ಯತೆ ಎನ್ನಲಾಗುತ್ತಿದ್ದರೆ, ಸಿದ್ದರಾಮಯ್ಯ ಆಪ್ತ ನಾಲ್ವರು ನಾಯಕರಿಗೆ ಡಿಸಿಎಂ ಹುದ್ದೆ ನೀಡುವ ಫಾರ್ಮುಲಾ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆ ಶುರುವಾಗಿದೆ. ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ವೇದಿಕೆ ಸಿದ್ಧವಾಗಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ!

Spread the love

ಕರ್ನಾಟಕ ರಾಜಕೀಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುವ ಮುನ್ಸೂಚನೆ ಸಿಕ್ಕಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಸುದ್ದಿಯ ಹಿಂದೆಯೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಹಾಗೂ ಕರ್ನಾಟಕದಲ್ಲಿ ಹಲವು ಉಪ ಮುಖ್ಯಮಂತ್ರಿಗಳ ಆಯ್ಕೆಯಾಗುವ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದೆ.

Thank you for reading this post, don't forget to subscribe!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 2 ವರ್ಷಗಳು ಮಾತ್ರ ಬಾಕಿ ಉಳಿದಿದೆ. ಈ ಹಂತದಲ್ಲಿ ರಾಜಕೀಯವಾಗಿ ಆಗುವ ಯಾವುದೇ ಸಣ್ಣ ಬದಲಾವಣೆಯೂ ಸಹ ಕರ್ನಾಟಕ ರಾಜಕೀಯ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕ ಅಸಮಾಧಾನ ತಪ್ಪಿಸುವುದು ಹಾಗೂ ಸಿದ್ದರಾಮಯ್ಯ ಅವರ ಆಪ್ತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗಿದೆ. ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ನಾಲ್ವರು ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಮತ್ತು ನಾಲ್ವರು ಉಪ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28 ರಂದು ರಾಜೀನಾಮೆ ನೀಡುವ ನಿರೀಕ್ಷೆಯಿದೆ ಎಂದು ಸಿಎಂಒ ಮೂಲಗಳು ತಿಳಿಸಿವೆ ಎಂದು ಹಿರಿಯ ಪತ್ರಕರ್ತೆ ನಬಿಲಾ ಜಮಾಲ್ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ, ಹಲವು ಕಾಂಗ್ರೆಸ್ ನಾಯಕರು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದ, ಹಲವು ಹಿರಿಯ ಕಾಂಗ್ರೆಸ್ ನಾಯಕರ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ನಾಲ್ವರು ಡಿಸಿಎಂ

ಪ್ರಸ್ತುತ ಪ್ರಸ್ತಾವನೆಯಲ್ಲಿ ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಮತ್ತು ಒಬಿಸಿ ಸಮುದಾಯಗಳಿಂದ ತಲಾ ಒಬ್ಬ ಉಪಮುಖ್ಯಮಂತ್ರಿ ಸೇರಿದ್ದಾರೆ ಎಂದು ವರದಿಯಾಗಿದೆ. ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಉಪ ಮುಖ್ಯಮಂತ್ರಿಗಳ ಆಯ್ಕೆ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಉಪ ಮುಖ್ಯಮಂತ್ರಿಗಳ ಆಕಾಂಕ್ಷಿಗಳ ಹೆಸರಿನಲ್ಲಿ ಸಚಿವ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ಜಿ. ಪರಮೇಶ್ವರ್‌ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ ಎನ್ನಲಾಗಿದೆ.

ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಖುದ್ದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸದಸ್ಯರಾಗುವ ಆಹ್ವಾನ ನೀಡಿದ್ದು, ತನ್ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವಂತೆ ಪರೋಕ್ಷ ಸೂಚನೆ ನೀಡಿದ್ದಾರೆ

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28) ತಮ್ಮ ಸಂಪುಟದ ಎಲ್ಲ ಸಚಿವರಿಗೆ ಉಪಾಹಾರ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಯಾವ ಸಂದೇಶ ನೀಡುವರು ಹಾಗೂ ಯಾವ ನಿರ್ಧಾರ ಕೈಗೊಳ್ಳುವರು ಎಂಬ ತೀವ್ರ ಕುತೂಹಲ ನಿರ್ಮಾಣವಾಗಿದ್ದು, ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಗುರುವಾರ ಮಹತ್ವದ ದಿನವಾಗುವ ಸಂಭವವಿದೆ.

ಕಳೆದು ಆರು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ಸನ್ನು ಕಾಡುತ್ತಿದ್ದ ಗೊಂದಲಗಳಿಗೆ ಪರಿಹಾರ ಹುಡುಕಲು ದೆಹಲಿಯಲ್ಲಿ ಮಂಗಳವಾರ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ಸುಮಾರು ಆರು ತಾಸುಗಳ ಸರಣಿ ಸಭೆ ನಡೆಸಿದ ಕಾಂಗ್ರೆಸ್‌ ಹೈಕಮಾಂಡ್‌ ಈ ರಾಜಕೀಯ ತಿಸ್ರಾ ಪ್ರಯೋಗ ಮಾಡಿದೆ.

ಹಿಂದುಳಿದ ವರ್ಗದ ಮೇರು ನಾಯಕರಾದ ನಿಮ್ಮ ಅಗತ್ಯ ರಾಷ್ಟ್ರ ರಾಜಕಾರಣಕ್ಕೆ ಇದೆ. ಹೀಗಾಗಿ ರಾಜ್ಯಸಭೆ ಸದಸ್ಯರಾಗಿ ಎಂದು ಖುದ್ದು ರಾಹುಲ್‌ ಗಾಂಧಿ ಅವರೇ ಆಫರ್ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ತಮಗೆ ಆಸಕ್ತಿಯಿಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಆದಾಗ್ಯೂ, ಈ ಬಗ್ಗೆ ಮರು ಚಿಂತನೆ ಮಾಡಿ ಎಂದು ಹೈಕಮಾಂಡ್ ಕೋರಿದೆ. ಇದಕ್ಕೆ ಆಪ್ತರೊಂದಿಗೆ ಚರ್ಚಿಸಿ ಎರಡು-ಮೂರು ದಿನದಲ್ಲಿ ತೀರ್ಮಾನ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಆಫರ್‌ ಎಂಬುದೇ ಮುಖ್ಯಮಂತ್ರಿ ಹುದ್ದೆ ತ್ಯಜಿಸುವಂತೆ ಹೈಕಮಾಂಡ್‌ ನೀಡಿದ ಪರೋಕ್ಷ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಆಫರ್‌ಗೆ ಎರಡು-ಮೂರು ದಿನದಲ್ಲಿ ನಿಲುವು ತಿಳಿಸುವೆ ಎಂದಿರುವ ಸಿದ್ದರಾಮಯ್ಯ ಅವರ ಅಂತಿಮ ಪ್ರತಿಕ್ರಿಯೆ ಏನಾಗಲಿದೆ ಎಂಬ ತೀವ್ರ ಕುತೂಹಲ ಹುಟ್ಟಿಕೊಂಡಿದೆ.ಹೀಗಾಗಿ ಎರಡು-ಮೂರು ದಿನ ಅರ್ಥಾತ್‌ ಮೇ 28ಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ

ಹಲವು ಸುತ್ತಿನ ಸಭೆ

ಸುಮಾರು ಆರು ತಾಸುಗಳ ಕಾಲ ಹಲವು ಸುತ್ತಿನ ಸಭೆ ನಡೆಸಿದ ನಂತರವೂ ಈ ಸಭೆಗಳ ಮುಖ್ಯ ಉದ್ದೇಶ ರಾಜ್ಯಸಭೆ ಅಭ್ಯರ್ಥಿ ಅಖೈರು ಮಾಡುವುದೇ ಆಗಿತ್ತು. ನಾಯಕತ್ವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹೇಳಿದರೂ ಅದನ್ನು ನಂಬಲಾಗದಂತಹ ಬೆಳವಣಿಗೆಗಳು ಅನಂತರ ನಡೆದವು.

ಈ ಸಭೆಯಿಂದ ಹೊರ ಬಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಂಗಿಕ ಭಾಷೆಯು ಸಭೆಯಲ್ಲಿ ಹೈಕಮಾಂಡ್‌ ನೀಡಿದ ಸೂಚನೆಗಳು ಇಬ್ಬರಿಗೂ ಸಂಪೂರ್ಣ ಸಮಾಧಾನ ಕೊಟ್ಟಿಲ್ಲ ಎಂಬುದನ್ನು ವೇದ್ಯಗೊಳಿಸುವಂತಿತ್ತು.

ಏಕೆಂದರೆ, ಮೂಲವೊಂದರ ಪ್ರಕಾರ, ತಮಗೆ ರಾಜ್ಯಸಭೆಗೆ ಆಫರ್‌ ನೀಡಿದ ನಂತರ ಮುಂದಿನ ಸಿಎಂ ವಿಚಾರವೇನು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಆಗ ಹೈಕಮಾಂಡ್‌, ಈ ಬಗ್ಗೆ ತಾವು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದು, ದಲಿತ ಸಿಎಂನಂತಹ ವಿಚಾರಗಳ ಚರ್ಚೆಗೆ ಆಸ್ಪದ ನೀಡಿಲ್ಲ. ಇದೇ ವೇಳೆ, ಸಿದ್ದರಾಮಯ್ಯ ಅವರು ರಾಜ್ಯಸಭೆಗೆ ತೆರಳಿದ ನಂತರ ಡಿ.ಕೆ. ಶಿವಕುಮಾರ್‌ ಅವರೇ ಸಿಎಂ ಆಗುವರೇ ಎಂಬ ಪ್ರಶ್ನೆಗೂ ನೇರ ಉತ್ತರ ನೀಡಿಲ್ಲ.

ಹೀಗಾಗಿ, ಸಿದ್ದರಾಮಯ್ಯ ಅವರು ರಾಜ್ಯಸಭೆ ಆಫರ್‌ ವಿಚಾರದಲ್ಲಿ ಯಾವ ನಿಲುವು ಪ್ರಕಟಿಸುವರು ಎಂಬದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ. ಆ ಹಂತ ದಾಟುವವರೆಗೂ ಮುಂದಿನ ಸಿಎಂ ಇಂತಹವರೇ ಎಂಬುದನ್ನು ಸ್ಪಷ್ಟಪಡಿಸುವ ಇರಾದೆಯನ್ನು ಹೈಕಮಾಂಡ್‌ ಈ ಸಭೆಯಲ್ಲಿ ವ್ಯಕ್ತಪಡಿಸಿಲ್ಲ ಎನ್ನಲಾಗುತ್ತಿದೆ.

ಆದರೆ, ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಆಫರ್‌, ದಲಿತ ಸಿಎಂ ವಿಚಾರ ಚರ್ಚೆಗೆ ಆಸ್ಪದ ನೀಡದೆ ಇರುವ ಹೈಕಮಾಂಡ್‌ ಧೋರಣೆಯು ಸ್ಪಷ್ಟವಾಗಿ ಡಿ.ಕೆ. ಶಿವಕುಮಾರ್‌ ಅವರ ಒಪ್ಪಂದ ಪಾಲನೆಯಾಗಬೇಕು ಎಂಬ ನಿಲುವಿಗೆ ಪೂರಕವಾಗಿದೆ ಎಂದೇ ಶಿವಕುಮಾರ್‌ ಬಣ ವ್ಯಾಖ್ಯಾನಿಸುತ್ತಿದೆ.

ಇನ್ನು ಸಿದ್ದರಾಮಯ್ಯ ಅವರು ರಾಜ್ಯಸಭೆ ಸದಸ್ಯ ಸ್ಥಾನವನ್ನು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಪರೋಕ್ಷ ಸೂಚನೆಯಾಗಿರುವ ಸಿಎಂ ಹುದ್ದೆ ತ್ಯಜಿಸಲು ಮುಂದಾದರೂ ರಾಷ್ಟ್ರ ರಾಜಕಾರಣಕ್ಕೆ ತೆರಳದೆ ಸಕ್ರಿಯ ರಾಜಕಾರಣದಿಂದ ತಟಸ್ಥರಾಗುವ ಸಂದೇಶವನ್ನು ಹೈಕಮಾಂಡ್‌ಗೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೀಗಾದಲ್ಲಿ ಅದನ್ನು ಹೈಕಮಾಂಡ್‌ ಅರಗಿಸಿಕೊಳ್ಳುವುದು ಕಷ್ಟ. ಏಕೆಂದರೆ, ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದಾದರೆ ಅದು ಹೈಕಮಾಂಡ್‌ ನಿರ್ಧಾರದ ಬಗೆಗಿನ ಅಸಮಾಧಾನ ಎಂದು ಅಹಿಂದ ವರ್ಗಕ್ಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯೇ ಹೆಚ್ಚು.

ಹೀಗಾಗಿ, ರಾಜ್ಯಸಭೆ ಹುದ್ದೆ ಒಪ್ಪುವಂತೆ ಹಾಗೂ ಮುಂದಿನ ಸರ್ಕಾರದಲ್ಲಿ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುವಂತಹ ಫಾರ್ಮುಲಾ ನೀಡಿ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಮಾರ್ಗ ಅರಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮತ್ತೊಂದು ಮೂಲಗಳ ಪ್ರಕಾರ, ರಾಹುಲ್ ಗಾಂಧಿಯೇ ನೇರವಾಗಿ ಈ ಸಂದೇಶ ನೀಡಿರುವ ಕಾರಣ ಹೆಚ್ಚಿನ ಬೆಳವಣಿಗೆಗಳಿಗೆ ಅವಕಾಶ ನೀಡದೇ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿರ್ದೇಶನ ಪಾಲಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಮುಂದಿನ ಎರಡು ದಿನಗಳ ಕಾಲ ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಂಭವವೇ ಹೆಚ್ಚು.

ಸಭೆಯಲ್ಲಿ ನಡೆದಿದ್ದೇನು?

ಹಿಂದುಳಿದ ವರ್ಗಗಳ ಮೇರುನಾಯಕರಾಗಿರುವ ನೀವು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದು ರಾಹುಲ್‌ ಸಲಹೆ

– ರಾಜ್ಯಸಭೆ ಸದಸ್ಯರಾಗುವಂತೆ ರಾಹುಲ್‌ ಗಾಂಧಿ ಆಫರ್‌. ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಸಿದ್ದು ಸ್ಪಷ್ಟನೆ

– ಮರುಚಿಂತನೆ ಮಾಡುವಂತೆ ಹೈಕಮಾಂಡ್‌ ನಾಯಕರ ಕೋರಿಕೆ. 2-3 ದಿನದಲ್ಲಿ ಹೇಳುವುದಾಗಿ ಸಿಎಂ ಭರವಸೆ

– ರಾಜ್ಯಸಭೆ ಆಫರ್‌ ಎಂದರೆ ಸಿಎಂ ಹುದ್ದೆ ತ್ಯಜಿಸುವಂತೆ ಸಿದ್ದರಾಮಯ್ಯ ಅವರಿಗೆ ನೀಡಿದ ಸೂಚನೆ ಎಂದು ವ್ಯಾಖ್ಯಾನ

– ಸಿದ್ದರಾಮಯ್ಯ ಮುಂದೇನು ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ. ಮೇ 28ರಂದು ಮಹತ್ವದ ಬೆಳವಣಿಗೆ ಸಾಧ್ಯತೆ

ಸಿದ್ದು ಮುಂದೇನು

1. ರಾಜ್ಯಸಭಾ ಸದಸ್ಯತ್ವವನ್ನು ಒಪ್ಪದೆ ಸಿದ್ದರಾಮಯ್ಯ ತಟಸ್ಥವಾಗಿ ಉಳಿದುಬಿಡಬಹುದು

2. ಅಂತಹ ಸಂದರ್ಭದಲ್ಲಿ ಅವರನ್ನು ಒಪ್ಪಿಸಲು ಹೈಕಮಾಂಡ್‌ ಹೊಸ ಸೂತ್ರ ರಚಿಸಬಹುದು

3. ರಾಹುಲ್‌ ಗಾಂಧಿ ಅವರೇ ಸೂಚಿಸಿರುವ ಕಾರಣ ಹೈಕಮಾಂಡ್‌ ನಿರ್ಧಾರ ಪಾಲಿಸಬಹುದು

ದಿಲ್ಲಿಯಲ್ಲಿ ಆಗಿದ್ದೇನು?

ಬೆಳಗ್ಗೆ 11.05: ದೆಹಲಿಯ ಇಂದಿರಾ ಭವನಕ್ಕೆ ಸಿದ್ದರಾಮಯ್ಯ, ಡಿಕೆಶಿ ಭೇಟಿ. ಪರಸ್ಪರ ಚರ್ಚೆ

ಬೆಳಗ್ಗೆ 11.20: ಮೊದಲು ವೇಣುಗೋಪಾಲ್‌ ಬಳಿಕ ಖರ್ಗೆ, ರಾಹುಲ್‌ ಗಾಂಧಿ ಆಗಮನ

ಬೆಳಗ್ಗೆ 11.30: ಸಭೆ ಆರಂಭ. ಸಿದ್ದರಾಮಯ್ಯ ಜತೆ ಹೈಕಮಾಂಡ್‌ 50 ನಿಮಿಷ ಮಾತುಕತೆ

ಮಧ್ಯಾಹ್ನ 3.30: ಸೋನಿಯಾ ಜತೆ ಸಮಾಲೋಚನೆ ನಡೆಸಲು ರಾಹುಲ್‌ ನಿರ್ಗಮನ

ಸಂಜೆ 4.20: ಇಂದಿರಾ ಭವನಕ್ಕೆ ರಾಹುಲ್‌ ವಾಪಸ್‌. ಖರ್ಗೆ ಜತೆ ಮಾತುಕತೆ

ಸಂಜೆ 5.50: ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜತೆ ಮಹತ್ವದ ಸಮಾಲೋಚನೆ

ಸಂಜೆ 5.45: ಸಭೆ ಅಂತ್ಯ. ಬಳಿಕ ಇಬ್ಬರೂ ನಾಯಕರ ಜತೆ ಸುದ್ದಿಗಾರರ ಭೇಟಿಯಾದ ವೇಣು

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Share

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

57 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

57 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

57 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

57 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

57 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

57 years ago