Categories: information

ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ ಮುನ್ಸೂಚನೆ, ಯೆಲ್ಲೂ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ, ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Spread the love

ಬೆಂಗಳೂರು, ಮೇ 27-ನೈಋತ್ಯ ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ.

Thank you for reading this post, don't forget to subscribe!

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್‌ 2ರವರೆಗೂ ಮಳೆ ಮುಂದುವರೆಯಲಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಮುನ್ಸೂಚನೆಗಳಿದ್ದು, ಹವಾಮಾನ ಇಲಾಖೆ ಆರೇಂಜ್‌ ಅಲರ್ಟ್‌ ಘೋಷಣೆ ಮಾಡಿದ್ದು, ಮೇ 29 ಮತ್ತು 30ರಂದು ಯೆಲ್ಲೂ ಅಲರ್ಟ್‌ ನೀಡಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮೇ 30ರವರೆಗೆ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್‌ ನೀಡಿದೆ. ಮೇ 30ರ ನಂತರ ಮಳೆಯ ತೀವ್ರತೆ ಕಡಿಮೆಯಾದರೂ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯಲಿದೆ.ಮುಂಗಾರು ಆರಂಭಕ್ಕೆ ಪೂರಕವಾದ ವಾತಾವರಣಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ. ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಗುಡುಗು, ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಹೆಚ್ಚಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆಗಳಿಲ್ಲ. ವಾಡಿಕೆ ಪ್ರಮಾಣದ ಮಳೆಯಾಗುವ ಲಕ್ಷಣಗಳಿವೆ.

ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಸೊಂಗನಹಳ್ಳಿಯಲ್ಲಿ 96 ಮಿ.ಮೀ. ನಷ್ಟು ಭಾರೀ ಮಳೆಯಾಗಿದೆ. ಕಲಬುರಗಿ, ಬೀದರ್‌, ಹಾಸನ, ತುಮಕೂರು, ಯಾದಗಿರಿ, ಕೋಲಾರ, ಬೆಂಗಳೂರು ನಗರ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದೆ.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದರೆ, ಬೇಸಿಗೆ ಬೆಳೆಯ ರಾಗಿ, ಬತ್ತ ಕೊಯ್ಲಿಗೆ ಮಳೆಯಿಂದ ತೊಂದರೆಯಾಗಿದೆ. ಹಲವೆಡೆ ಆಲಿಕಲ್ಲು ಸಹಿತ ಗಾಳಿ ಮಳೆಗೆ ಮಾವು,ಬಾಳೆ, ಟೊಮಾಟೋ ಸೇರಿದಂತೆ ಹಲವು ಬೆಳಿಗಳು ಹಾನಿಗೀಡಾಗಿವೆ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

https://chat.whatsapp.com/FM1qVgdNtJm5m1M9SL0BHc?mode

Share

Recent Posts

Karnataka Rain: ವಾಯುಭಾರ ಕುಸಿತ, ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ! ಕೆಲವೆಡೆ ಒಣ ಹವೆ

Karnataka Rain Alert: ರಾಜ್ಯದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 4 ದಿನಗಳ ಮಳೆಯ ಮುನ್ಸೂಚನೆ ಕುರಿತು ಹವಾಮಾನ ಇಲಾಖೆ…

57 years ago

ಶಾರುಖ್ ಖಾನ್ ಜೈಲು ಸೇರಿದ್ರು.. ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ರು; ಈ ಘಟನೆ ಹಲವರಿಗೆ ಗೊತ್ತಿಲ್ಲ! ಇಲ್ಲಿದೆ  ಸಂಪೂರ್ಣ ಮಾಹಿತಿ!

ಬಾಲಿವುಡ್ ನಟ ಶಾರುಖ್ ಖಾನ್ ಜೈಲು ಸೇರಿದ್ದರು, ಅವರನ್ನು ನಟ ನಾನಾ ಪಾಟೇಕರ್ ಬಿಡಿಸಿಕೊಂಡು ಬಂದಿದ್ದರು ಎಂಬ ಕುತೂಹಲಕಾರಿ ವಿಚಾರ…

57 years ago

RRB Recruitment 2026: ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌; 3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ

RRB Recruitment 2026: ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ! ರೈಲ್ವೆ ನೇಮಕಾತಿ ಮಂಡಳಿಯು 3,548 ಹುದ್ದೆಗಳ…

57 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

57 years ago

ರೈತ ಬಾಂದವರೇ ಕೂಡಲೇ ಈ ಕೆಲಸ ಮಾಡಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ

PM Kisan Yojana: ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಈ ಪ್ರಮುಖ ಕೆಲಸಗಳನ್ನು ಪರಿಶೀಲಿಸಿ. ನಿಮ್ಮ…

57 years ago

ರಾಜ್ಯದ 31 ಜಿಲ್ಲಾ, 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ! ಸಂಪೂರ್ಣ ವಿವರ ಇಲ್ಲಿದೆ !

ಕರ್ನಾಟಕದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಯಾವ…

57 years ago