Categories: information

Copra: ತಿಪಟೂರು ತೆಂಗು ಬೆಳೆಗಾರರಿಗೆ ಬಂಪರ್: ನಾಗಾಲೋಟದಲ್ಲಿ ಉಂಡೆ ಕೊಬ್ಬರಿ ದರ

ಉಂಡೆ ಕೊಬ್ಬರಿ ದರ ನಾಗಾಲೋಟದಲ್ಲಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಉತ್ತಮ ಬೇಡಿಕೆ ಇರುವುದರಿಂದ ರೈತರಿಗೆ ಲಾಭದಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Spread the love

ರಾಜ್ಯದಲ್ಲೇ ಅತ್ಯಧಿಕ ಗುಣಮಟ್ಟದ ತೆಂಗಿನಕಾಯಿಗೆ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ದಾಖಲೆಯ ಗರಿಷ್ಠ ದರ ತಿಪಟೂರು ಉಂಡೆ ಕೊಬ್ಬರಿಗೆ ಬಂದಿದೆ. ನೋಡ ನೋಡುತ್ತಿದ್ದಂತೆ ಏಪ್ರಿಲ್ ತಿಂಗಳ ಈ ಮೂರು ವಾರಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 38,000 ರೂಪಾಯಿಗೆ ಮಾರಾಟವಾಗುತ್ತಿದೆ.

Thank you for reading this post, don't forget to subscribe!

ವ್ಯಾಪ್ತಿಯಲ್ಲಿ ಹೇರಳವಾಗಿ ತೆಂಗಿನ ಕಾಯಿ ಬೆಳೆಯಲಾಗುತ್ತದೆ. ಅದರಲ್ಲೂ ತಿಪಟೂರು ತೆಂಗಿನ ಕಾಯಿ ಗುಣಮಟ್ಟದಿಂದ ಕೂಡಿದ್ದು, ದಪ್ಪ ಕೊಬ್ಬರಿ ಇರುತ್ತದೆ. ಹೆಚ್ಚಿನ ಎಣ್ಣೆ ಅಂಶ ಇರುವ ಕಾರಣ, ರುಚಿಯು ಹೆಚ್ಚಿರುತ್ತದೆ. ಅಡುಗೆಗೆ ಹಾಗೂ ಇನ್ನಿತರ ಪದಾರ್ಥಗಳಿಗೆ ಬಳಕೆ ಆಗುತ್ತದೆ. 2026ರಲ್ಲಿ ತಿಪಟೂರು ಉಂಡೆ ಕೊಬ್ಬರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ರಫ್ತಾಗುತ್ತಿದೆ.

ಇಂದು ಏಪ್ರಿಲ್ 27 ರಂದು ಉಂಡೆ ಕೊಬ್ಬರಿಗೆ ತಿಪಟೂರು ಎಪಿಎಂಸಿ ಮಾರಕಟ್ಟೆಯಲ್ಲಿ ಕ್ವಿಂಟಾಲ್ ದರ 38,000 ರೂಪಾಯಿ ಗರಿಷ್ಠ, 32,500 ರೂಪಾಯಿ ಕನಿಷ್ಠ ಬೆಲೆ ಇದೆ. ಸರಾಸರಿ 36,711 ರೂಪಾಯಿ ದಾಖಲಾಗಿದೆ. 30,000 ರೂಪಾಯಿ ಆಸುಪಾಸು ಮಾರಾಟವಾದರೆ ಅದೃಷ್ಟದಂತೆ ಭಾವಿಸುತ್ತಿದ್ದ ಬೆಳೆಗಾರರಿಗೆ ಈ ವರ್ಷ ಬಂಪರ್ ಲಾಟರಿ ಹೊಡೆದಂತಾಗಿದೆ. ಬೇರೆ ಬೇರೆ ಭಾಗಗಲ್ಲಿ ಉತ್ಪಾದನೆ ಕೊರತೆ ಕಾರಣಕ್ಕೆ ಉಂಡೆ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಎಪಿಎಂಸಿ ವರ್ತಕರೊಬ್ಬರು ತಿಳಿಸಿದ್ದಾರೆ.

ವಿವಿಧ ಮಾರುಕಟ್ಟೆಗಳ ಇಂದಿನ ಕೊಬ್ಬರಿ ಗರಿಷ್ಠ ದರ

ಕಳೆದ ಒಂದು ವಾರದಲ್ಲಿ (ಏಪ್ರಿಲ್ 15-24) ಪ್ರತಿ ದಿನವು 38,000 ರೂಪಾಯಿ ದರವಿದ್ದು, ಇದು ವ್ಯಾಪಾರಿಗಳು, ರೈತರ ಹರ್ಷಕ್ಕೆ ಕಾರಣವಾಗಿದೆ.

* ಗುಬ್ಬಿ ಮಾರುಕಟ್ಟೆ: ಕೊಬ್ಬರಿ ಗರಿಷ್ಠ ಬೆಲೆ 30,000 ರೂಪಾಯಿ
* ಅರಸಿಕೆರೆ ಮಾರುಕಟ್ಟೆ: 32,000 ರೂಪಾಯಿ
* ತುಮಕೂರು ನಗರ ಮಾರುಕಟ್ಟೆ: 32,6000 ರೂಪಾಯಿ
* ಹೊಸದುರ್ಗ ಮಾರುಕಟ್ಟೆ: 30,000 ರೂಪಾಯಿ
* ಬೆಂಗಳೂರು ಮಾರುಕಟ್ಟೆ: 35,000 ರೂಪಾಯಿ
* ದಾವಣಗೆರೆ ಎಪಿಎಂಸಿ: 12,800 ರೂಪಾಯಿ

ತುಮಕೂರು ಭಾಗದಲ್ಲಿ ತೆಂಗು ಬೆಳೆಯಲು ಪೂರಕ ವಾತಾವರಣ ಇದೆ. ಶ್ರೀಮಂತ ಕೃಷಿ ಪರಂಪರೆ ಇಲ್ಲಿದ್ದು, ಎಲ್ಲಿ ನೋಡಿದರೂ ಆಗಸದೆತ್ತರಕ್ಕೆ ಬೆಳೆದು ನಿಂತ ತೆಗಿನ ಮರಗಳನ್ನೇ ಕಾಣುತ್ತೇವೆ. ಈ ವಾಣಿಜ್ಯ ಬೆಳೆ ಇಲ್ಲಿನ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿದೆ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Share
Tags: #ಅಗ್ರಿಕಲ್ಚರ್‌ನ್ಯೂಸ್#ಕೃಷಿಅಪ್ಡೇಟ್#ಕೃಷಿಉತ್ಪಾದನೆ#ಕೃಷಿಟ್ರೆಂಡ್#ಕೃಷಿಮಾರುಕಟ್ಟೆ#ಕೃಷಿಲಾಭ#ಕೊಬ್ಬರಿಬಂಪರ್#ಗ್ರಾಮೀಣಅರ್ಥವ್ಯವಸ್ಥೆ#ತೆಂಗುಬೆಳೆ#ತೆಂಗುಬೆಳೆಗಾರರಸಂತೋಷ#ತೆಂಗುಮಾರುಕಟ್ಟೆ#ಬೆಳೆಬೆಲೆ#ರೈತಆದಾಯ#ರೈತಸುದ್ದಿಇಂದಿನ ಕೊಬ್ಬರಿ ದರಉಂಡೆ ಕೊಬ್ಬರಿ ಮಾರುಕಟ್ಟೆ ದರಕರ್ನಾಟಕ ಕೃಷಿ ಸುದ್ದಿಕರ್ನಾಟಕ ರೈತರುಕೃಷಿ ಅಪ್ಡೇಟ್ಕೃಷಿ ಅರ್ಥವ್ಯವಸ್ಥೆಕೃಷಿ ಟ್ರೆಂಡ್ಕೃಷಿ ಮಾರುಕಟ್ಟೆ ಮಾಹಿತಿಕೊಬ್ಬರಿ ಬೆಲೆ ಇಂದುಕೊಬ್ಬರಿ ಬೆಲೆ ಏರಿಕೆಕೊಬ್ಬರಿ ಬೇಡಿಕೆಕೊಬ್ಬರಿ ಮಾರುಕಟ್ಟೆತಿಪಟೂರು ಉಂಡೆ ಕೊಬ್ಬರಿ ದರತಿಪಟೂರು ಎಪಿಎಂಸಿತಿಪಟೂರು ಕೃಷಿ ಸುದ್ದಿತಿಪಟೂರು ಸುದ್ದಿತೆಂಗು ಉತ್ಪಾದನೆತೆಂಗು ಬೆಲೆತೆಂಗು ಬೆಳೆ ಮಾಹಿತಿ 🌴🥥📈ತೆಂಗು ಬೆಳೆಗಾರರುತೆಂಗು ಮಾರುಕಟ್ಟೆ ಸುದ್ದಿತೆಂಗು ವ್ಯಾಪಾರರೈತ ಸುದ್ದಿರೈತರ ಆದಾಯರೈತರಿಗೆ ಲಾಭ

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago