ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು.
ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು. ಇದೇ ಅಲ್ಲವೇ ಕನ್ನಡದ ನಿಜವಾದ ಪ್ರೇಮ ಇದಕ್ಕಾಗಿಯೇ ನಮ್ಮ ವರಕವಿ ಇವರನ್ನ “ಕನ್ನಡಕ್ಕೆ ಕನ್ನಡಿಯ ಹಿಡಿದು ದುಡಿದವ ನೀನು” ಎಂದು ಹಾಡಿ ಹೊಗಳಿದ್ದಾರೆ.
Thank you for reading this post, don't forget to subscribe!ಆ ಧೀಮಂತ ವ್ಯಕ್ತಿಯೇ ರೆವರೆಂಡ್ ಜಾರ್ಜ್ ಫರ್ಡಿನೆಂಡ್ ಕಿಟ್ಟೆಲ್.1832 ರಲ್ಲಿ ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ ಜನಿಸಿದ ಇವರ ತಂದೆ ಪ್ರೊಟೆಸ್ಟಂಟ್ ಚರ್ಚ್ ಪಾದ್ರಿ ಇವರು ಕ್ರೈಸ್ತ ಧರ್ಮ ಪ್ರಚಾರಕ್ಕೆಂದು 1853 ಮಂಗಳೂರಿಗೆ ಬಾಸೆಲ್ ಮಿಷನ್ ವತಿಯಿಂದ ಬಂದಿರುತ್ತಾರೆ. ಆಗ ಇವ್ರಿಗೆ 21 ವಯಸ್ಸು. ಇವರಿಗೆ ಬಹುಭಾಷಾ ಆಸಕ್ತಿ ಇರುವುದರಿಂದ ಮಂಗಳೂರಿಗೆ ಬರುವಷ್ಟರಲ್ಲಿ ಫ್ರೆಂಚ್,ಗ್ರೀಕ್,ಲ್ಯಾಟಿನ್, ಹೀಬ್ರೂ ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು. ಮಂಗಳೂರಿನ ಬಾಸೆಲ್ ಮಿಷನ್ ನಲ್ಲಿ ಕೆಲಸ ಮಾಡುತ್ತಾ ಕನ್ನಡ
ಕಲಿಯಲಾರಂಭಿಸಿದರು. ನಂತರದ ದಿನಗಳಲ್ಲಿ ಧಾರವಾಡ ಬಾಸೆಲ್ ಮಿಷನ್ ಹೈಸ್ಕೂಲ್ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಮುಖ್ಯಸ್ಥ ನಿಘಂಟನ್ನು ರಚಿಸಲು ಹೇಳಿದಾಗ. ಅವರು ಹೇಳುವ ಮುಂಚೆಯೇ “ಮಂಗರಾಜು” ಎಂಬ ನಿಘಂಟನ್ನು ರಚಿಸಿದ್ದರು. ನಂತರ ಕನ್ನಡವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಕಲಿಯಲೆಂದು ಮತ್ತೆ ಮಂಗಳೂರಿನ ಬಾಸೆಲ್ ಮಿಷನ್ ಗೆ
ತೆರಳಿದರು.
ಇವರು ಕನ್ನಡಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ “ಸಂಸಾರ ಕ್ರಮ” “ಉಭಯ ಮಾರ್ಗ” “ನಂಬಿ ಜೀವಿಸಿರಿ”
“ಡೆನಿಯಲನೂ ಅವನ ಜೊತೆಗಾರರು” ಎಂಬ ಪ್ರಬಂಧಗಳನ್ನು ಹಾಗೂ ವಿಚಿತ್ರ ವರ್ತಮಾನ ಸಂಗ್ರಹ, ಸಚಿತ್ರ ಕನ್ನಡ ಮಾಸ ಪತ್ರಿಕೆ, ಅರುಗೋದಯ ಪತ್ರಿಕೆಗಳ ಲೇಖಕರು ಸಹಸಂಪಾದಕರಾಗಿದ್ದರು.
ಎಲ್ಲಕಿಂತ ಮುಖ್ಯ ಸಂಗತಿ ಎಂದರೆ ಕಿಟ್ಟೆಲ್ ಅವ್ರು ಕರ್ನಾಟಕ ಗ್ರಾಮೀಣ ಜನತೆಯಿಂದ ಸಣ್ಣ ಸಣ್ಣ ಪದಗಳ ಕಲೆಹಾಕಿ ಮೊಟ್ಟ ಮೊದಲ ಕನ್ನಡ-ಇಂಗ್ಲಿಷ್ ಡಿಕ್ಷನರಿ ಸಿದ್ಧಪಡಿಸಿದರು. ಶಬ್ದಕೋಶವು ಗಾದೆಮಾತು, ಹಳೆಗನ್ನಡ, ಹೊಸಗನ್ನಡ ಅರ್ಥ ಸಂಗ್ರಹಿಸಿ ಪ್ರತಿಶಬ್ಧದ ಉಚ್ಚಾರಣೆಯನ್ನು ಬರೆಯುತ್ತಾರೆ. 25 ವರ್ಷಗಳ ಕಾಲ ಶ್ರಮವಹಿಸಿ 70 ಸಾವಿರ ಕನ್ನಡ ಪದಗಳನ್ನು ಸಂಗ್ರಹಿಸಿದರು. ಕೊನೆಗೆ 1894 ರಲ್ಲಿ ಮೊಟ್ಟಮೊದಲ ಕನ್ನಡ ಇಂಗ್ಲಿಷ್- ಡಿಕ್ಷನರಿ ಸಿದ್ಧಪಡಿಸಿದರು.
ಆ ಕಿಟ್ಟೆಲ್ ಡಿಕ್ಷನರಿ ಇವತ್ತಿಗೂ ಕನ್ನಡ ಇಂಗ್ಲಿಷ್ ಡಿಕ್ಷನರಿ ಆಗಿ ಕನ್ನಡಿಗರ ಮನೆಮನಗಳಲ್ಲಿ ರಾರಾಜಿಸುತ್ತಿದೆ. ಇವರ ಚಿರಸ್ಮರಣೀಯ ಕೃತಿಯಾದ ಕನ್ನಡ ಇಂಗ್ಲಿಷ್ ನಿಘಂಟನ್ನು ಗುರುತಿಸಿ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ವಿಶೇಷವೆಂದರೆ ಇದು ಕನ್ನಡಕ್ಕೆ ಸ್ಕಂದ ಎರಡನೇ ಡಾಕ್ಟರೇಟ್
ಪದವಿಯಾಗಿದೆ…
ಕನ್ನಡಿಗರೇ.. ನಮ್ಮ ಮಾತೃ ಭಾಷೆಯನ್ನು ಪ್ರೀತಿಸೋಣ ಉಳಿಸೋಣ ಬೆಳೆಸೋಣ ಕನ್ನಡಿಗರಾಗಿ ಮಾತೃಭಾಷೆಯ ರಕ್ಷಣೆಯಾಗದಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಹಾಗೆಯೇ ಬೇರೆ ಭಾಷೆಯನ್ನು ಗೌರವಿಸೋಣ.
~ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ~
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…