ಕಂಬಳ ಎಂದರೇನು ಕಂಬಳ ಹೇಗೆ ಶುರುವಾಯ್ತು, ಕಂಬಳದ ಕೋಣಗಳನ್ನು ಹೇಗೆ ಸಿದ್ಧತೆ ಮಾಡುತ್ತಾರೆ? ಸಿದ್ಧತೆಗೆ ಎಷ್ಟು ಖರ್ಚಾಗುತ್ತದ? ಇದಕ್ಕೂ ದೈವಕ್ಕೂ ಇರುವ ಸಂಬಂಧವೇನು? ಇವೆಲ್ಲವನ್ನೂ ತಿಳಿಯೋಣ ಬನ್ನಿ!
ಸ್ನೇಹಿತರೇ ತುಳುನಾಡಿನಲ್ಲಿ ಹೆಸರಾದ ಕಂಬಳ ಈಗ ರಾಜಧಾನಿ ಬೆಂಗಳೂರಲ್ಲೂ ಕಾಲಿಟ್ಟಿದೆ. ಹಾಗಾದರೆ ಕಂಬಳ ಎಂದರೇನು ಕಂಬಳ ಹೇಗೆ ಶುರುವಾಯ್ತು, ಕಂಬಳದ ಕೋಣಗಳನ್ನು ಹೇಗೆ ಸಿದ್ಧತೆ ಮಾಡುತ್ತಾರೆ? ಸಿದ್ಧತೆಗೆ ಎಷ್ಟು ಖರ್ಚಾಗುತ್ತದ? ಇದಕ್ಕೂ ದೈವಕ್ಕೂ ಇರುವ ಸಂಬಂಧವೇನು? ಇವೆಲ್ಲವನ್ನೂ ತಿಳಿಯೋಣ ಬನ್ನಿ!
Thank you for reading this post, don't forget to subscribe!ಕಂಬಳ ಕಂಪ ಮತ್ತು ಕಲಾ ಎಂಬ ಪದಗಳಿಂದ ಬಂದಿದೆ. ಕಂಪ ಎಂದರೆ ಕೆಸರು ಕಲಾ ಎಂದರೆ ಮೈದಾನ ಎಂದರ್ಥ ಇದು ಕೃಷಿ ಬದುಕಲ್ಲಿ ಹುಟ್ಟಿಕೊಂಡ ಕ್ರೀಡೆ. ಇದು ತುಳುನಾಡಿನ ಕ್ರೀಡೆ ಮತ್ತು ದೈವಗಳಿಗೆ ತೋರಿಸುವ ಗೌರವ. ಇತಿಹಾಸ ಹೇಳುವಂತೆ ಕಂಬಳ ಆಚರಣೆಯನ್ನು ಸಾವಿರ ವರ್ಷಗಳ ಹಿಂದೆ ಹೊಯ್ಸಳರು ಶುರು ಮಾಡಿದರು ಅವುಗಳನ್ನು ಯುದ್ಧದಲ್ಲಿ ಬಳಸಿಕೊಳ್ಳುವುದು, ಅವುಗಳ ವೇಗ ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು. ನಂತರ ಅದನ್ನು ಜಮೀನ್ದಾರರು ಕ್ರೀಡೆಯಾಗಿ, ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದರೆಂದು ಹೇಳಲಾಗುತ್ತದೆ. ಇದು ಸಾಮಾನ್ಯವಾಗಿ ನವೆಂಬರ್ ನಲ್ಲಿ ಅಂದರೆ ಬೆಳೆ ಕಟಾವಿನ ಸಮಯದಲ್ಲಿ ಶುರುವಾಗಿ ಮಾರ್ಚ್-ಏಪ್ರಿಲ್ ವರೆಗೂ ನಡೆಯುತ್ತದೆ. ಕೋಣಗಳ ಸಿದ್ಧತೆ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಉತ್ತಮ ಬೆಳೆಗಾಗಿ ಕದ್ರಿ ಮಂಜುನಾಥನಿಗೆ ಕಂಬಳ ನಡೆಸಲಾಗುತ್ತದೆ ಎಂಬ ನಂಬಿಕೆ ಇದೆ. ರೈತರಿಗೆ ಬೆಳೆ ನಾಟಿಯಿಂದ ಕಟಾವಿನವರೆಗೂ ಬಿಡುವಿಲ್ಲದೆ ಸ್ವಲ್ಪ ರಿಲ್ಯಾಕ್ಸ್ ಆಗಲೆಂದು ಕಂಬಳ ನಡೆಸಲಾಗುವುದು ಮತ್ತು ಕಂಬಳ ಎಂದರೆ ದೈವಗಳಿಗೆ ಪ್ರೀತಿ ನಡೆಸದಿದ್ದರೆ ದೈವಗಳು ಕೋಪಗೊಳ್ಳುತ್ತವೆ ಎಂಬ ನಂಬಿಕೆಯೂ ಇದೆ.
ಸಾಮಾನ್ಯವಾಗಿ ಕೆಸರುಗದ್ದೆ ಅಥವಾ ನದಿಯ ತಟವನ್ನು ಕಂಬಳದ ಟ್ರ್ಯಾಕ್ ಆಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಎರಡು ಕೋಣಗಳ ಎರಡು ಜೋಡಿ ಒಂದು ಭಾರಿ ಸವಾರಿಗೆ ಇಳಿಯುತ್ತವೆ. ಸುಮಾರು 150 ಜೋಡಿಗಳು ಭಾಗವಹಿಸುತ್ತವೆ. ಎರಡು ಕೋಣಗಳನ್ನು ನೇಗಿಲ ಮೂಲಕ ಕಟ್ಟಲಾಗುತ್ತದೆ. ಅವುಗಳ ವೆಗದಲ್ಲಿಯೆ ಸ್ಪರ್ಧಿಯು ಕೂಡ ಹಗ್ಗ ಹಿಡಿದು ಓಡಬೇಕಾಗುತ್ತದೆ. ಒಂದು ಕಂಬಳ ಗದ್ದೆಯಲ್ಲಿ ಎರಡು ಟ್ರ್ಯಾಕ್ ಗಳಿರುತ್ತವೆ, 120 ರಿಂದ 160 ಮೀಟರ್ ಉದ್ದ ಮತ್ತು 8 ರಿಂದ 12 ಮೀಟರ್ ಅಗಲ ಅಳತೆ ಹೊಂದಿರುತ್ತದೆ.
ಕಂಬಳ ಕೋಣವನ್ನು ಸಾಕುವುದು ಕಠಿಣವಾಗಿದ್ದು ಒಂದು ವರ್ಷಕ್ಕೆ ಒಂದು ಜೋಡಿ ಕೋಣಕ್ಕೆ ಸುಮಾರು ಹತ್ತು ಲಕ್ಷ ಖರ್ಚಾಗುತ್ತದೆ. ಅದನ್ನು ಮಾಲೀಕರು ಮನೆಮಗನಂತೆ ನೋಡಿಕೊಳ್ಳುತ್ತಾರೆ ಪ್ರತಿದಿನ ಎಣ್ಣೆ ಮಸಾಜ್ ಮಾಡಿ ಬಿಸಿಲಿಗೆ ನಿಲ್ಲಿಸಬೇಕು ನಂತರ ಬಿಸಿನೀರಿನಿಂದ ಸ್ನಾನ ಮಾಡಿಸಬೇಕು. ಮೈ ಹೊಳಪು ಹೋಗದಂತೆ ಪ್ರತಿದಿನ ಕೊಬ್ಬರಿ ಎಣ್ಣೆ ಹಚ್ಚಲಾಗುತ್ತದೆ. ಇವುಗಳಿಗೆ ಆಹಾರ ಪ್ರತಿದಿನ ಬೇಯಿಸಿದ ಹುರುಳಿ ಮತ್ತು ಹುಲ್ಲು. ದೇಹದ ಉಷ್ಣಾಂಶ ಕಡಿಮೆ ಮಾಡಲು ಕಲ್ಲಂಗಡಿ ಮತ್ತು ಕುಂಬಳಕಾಯಿ ತಿನಿಸಲಾಗುತ್ತದೆ. ಕಂಬಳ ಸಮೀಪ ಬಂದಂತೆ ಅವುಗಳಿಗಂತು ರಾಜಮರ್ಯಾದೆ.
ಕಂಬಳದಲ್ಲಿ ಭಾಗಿಯಾಗುವರಿಗೆ ನಿಯಮಗಳು!!!!!
ಕಂಬಳ ಸ್ಪರ್ಧೆಯಲ್ಲಿ ಯಾರೂ ಬೇಕಾದರೂ ಭಾಗವಹಿಸುವಂತಿಲ್ಲ ಹಾಗಾದರೆ ಕೆಲವು ವ್ರತಗಳನ್ನು ಅನುಸರಿಸಬೇಕು. ಭಾಗಿಯಾಗುವವರು ಕಂಬಳ ನಡೆಯುವ ಹಲವು ದಿನಗಳ ಮುನ್ನವೇ ಮಾಂಸಾಹಾರ ಮತ್ತು ಮದ್ಯಸೇವನೆ ಬಿಡಬೇಕು, ಮನೆಯಲ್ಲಿ ಯಾವುದೇ ಸೂತಕ ಇರಬಾರದು, ಕಂಬಳದ ಗದ್ದೆಗೆ ಚಪ್ಪಲಿ ಕೂಡ ಹಾಕಬಾರದು.
ಕಂಬಳ ಮುಗಿದ ನಂತರ ಕಂಬಳದ ಗದ್ದೆಯ ನೀರಿನಲ್ಲಿ ಔಷಧೀಯ ಗುಣವಿದ್ದು ಅದನ್ನು ಹುಷಾರಿಲ್ಲದ ಕೋಣದ ಮೇಲೆ ಸುರಿದರೆ ಹುಷಾರಾಗುತ್ತೆ ಎನ್ನುವ ನಂಬಿಕೆ ಇದೆ. ಕಂಬಳ ಕೊಣ ಸಾಕುವ ವಿವಿಧ ಮನೆತನಗಳು ಅದರಲ್ಲಿ ಗುತ್ತು ಮನೆತನದ ಕೋಣಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಈ ಕೋಣಗಳಿಗೆ 5 ರಿಂದ 50 ಲಕ್ಷ ಬೆಲೆ ಇದೆ. ಕಂಬಳ ನಡೆಸುವ ಸುಮಾರು ಹದಿನೆಂಟು ಸಮಿತಿಗಳು ಇವೆ ವರ್ಷಕ್ಕೆ ಸುಮಾರು 45 ಕಂಬಳಗಳು ನಡೆಯುತ್ತವೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…