Categories: information

ಇಸ್ರೇಲ್ ಮೇಲೆ ಅಮೆರಿಕಾಗೆ ಯಾಕೆ ಇಷ್ಟು ಮೋಹ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ಲದ ಸಂಗತಿ!

ಸ್ನೇಹಿತರೆ ಪ್ಯಾಲೇಸ್ತೀನ ಮೂಲದ ಭಯೋತ್ಪಾದಕ ಸಂಘಟನೆಯಾದ 'ಹಮಾಸ್' ಇಸ್ರೇಲ್ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಅಮೆರಿಕಾದ ರಾಷ್ಟ್ರಪತಿಯಾದ ಜೋ ಬಿಡೆನ್ ಇಸ್ರೇಲ್ಗೆ ಧಾವಿಸಿದರು. "ಇಸ್ರೇಲ್ ಜೊತೆಗೆ ನಾವಿದ್ದೇವೆ ನಾವು ಇರುವವರೆಗೂ ಇಸ್ರೆಲನ್ನ ಯಾರು ಮುಟ್ಟಲು ಸಾಧ್ಯವಿಲ್ಲ" ಎಂದು ಘಂಟಾಘೋಷವಾಗಿ ಘೋಷಿಸಿದರು.

Spread the love
FacebookFacebookTwitterTwitterRedditRedditLinkedinLinkedinPinterestPinterestMeWeMeWeMixMixWhatsappWhatsapp

ಸ್ನೇಹಿತರೆ ಪ್ಯಾಲೇಸ್ತೀನ ಮೂಲದ ಭಯೋತ್ಪಾದಕ ಸಂಘಟನೆಯಾದ ‘ಹಮಾಸ್’ ಇಸ್ರೇಲ್ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಅಮೆರಿಕಾದ ರಾಷ್ಟ್ರಪತಿಯಾದ ಜೋ ಬಿಡೆನ್ ಇಸ್ರೇಲ್ಗೆ ಧಾವಿಸಿದರು. “ಇಸ್ರೇಲ್ ಜೊತೆಗೆ ನಾವಿದ್ದೇವೆ ನಾವು ಇರುವವರೆಗೂ ಇಸ್ರೆಲನ್ನ ಯಾರು ಮುಟ್ಟಲು ಸಾಧ್ಯವಿಲ್ಲ” ಎಂದು ಘಂಟಾಘೋಷವಾಗಿ ಘೋಷಿಸಿದರು. ತನ್ನ ಮೇಲಾದ ಭಯೋತ್ಪಾದಕ ದಾಳಿಗೆ ಇಸ್ರೇಲ್ ಪ್ರತಿ ದಾಳಿಯಾಗಿ ಇಡೀ ಗಾಜಾವನ್ನೇ ಆಕ್ರಮಿಸಿಕೊಂಡು ಇಲ್ಲಿಯವರೆಗೆ 9,000 ನಾಗರಿಕರನ್ನ ಕೊಂದು ಹಾಕಿದರೂ ಈ ಕುರಿತು ಅಮೆರಿಕ ಒಂದೇ ಒಂದು ಮಾತನ್ನು ಇಸ್ರೇಲ್ ವಿರುದ್ಧವಾಗಿ ಮಾತನಾಡಿಲ್ಲ. ಮೊನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ದಾಳಿಯನ್ನು ಖಂಡಿಸಿ ಯುದ್ಧವಿರಾಮಕ್ಕೆ ರೆಸಲ್ಯೂಶನ್ ಪಾಸ್ ಮಾಡಿದಾಗ ಅದನ್ನು ಅಮೆರಿಕ ತನ್ನ ‘ವಿಟೋ ಪವರ್’ ನಿಂದ ತಿರಸ್ಕರಿಸಿತು. ಅಮೆರಿಕ ಮತ್ತು ಇಸ್ರೇಲ್ ದೇಶದ ಪ್ರಧಾನಿಗಳ ನಡುವೆ ಇತಿಹಾಸದುದ್ದಕ್ಕೂ ವ್ಯಕ್ತಿತ್ವದ ಭಿನ್ನಾಭಿಪ್ರಾಯ ಇದ್ದರೂ, ದೇಶಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಸಮಸ್ಯೆ ಒದಗಿದಾಗ ಎರಡೂ ದೇಶಗಳು ಒಡಹುಟ್ಟಿದವರ ಹಾಗೆ ಇಲ್ಲಿಯವರೆಗೆ ಸಂಬಂಧವನ್ನು ಕಾಪಾಡಿಕೊಂಡು ಬಂದಿವೆ. ಈ ಆರ್ಟಿಕಲ್ ನಲ್ಲಿ ಅಮೆರಿಕ ಇಸ್ರೇಲ್ ನಡುವಿನ ಸಂಬಂಧಗಳ ಇತಿಹಾಸವನ್ನು ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

ಅಮೆರಿಕ ಮತ್ತು ಇಸ್ರೇಲ್ ನಡುವೆ ಸಂಬಂಧ ಯಾವಾಗ ಶುರುವಾಯಿತು ?

ಸ್ನೇಹಿತರೆ ಇಸ್ರೇಲ್ 1948ರಲ್ಲಿ ಉಗಮ ಆಗುವುದಕ್ಕೆ ಮೊದಲೇ ಅಮೆರಿಕ ಪ್ಯಾಲೆಸ್ಥಿನ್ ಅನ್ನು ‘ಯಹೂದಿಗಳ ದೇಶ’ ಎಂದು ಘೋಷಿಸಿತ್ತು. 1919 ರಲ್ಲಿ ಯಹೂದಿಗಳು ಬ್ರಿಟಿಷರಿಗೆ ಮೊದಲ ವಿಶ್ವಯುದ್ಧದಲ್ಲಿ ಪ್ರೋತ್ಸಾಹ ನೀಡಿದ್ದಕ್ಕಾಗಿ ‘ಬಾಲ್ಫರ್ ಡಿಕ್ಲರೇಷನ್’ ಪ್ರಕಾರ ಬ್ರಿಟಿಷರು ಪ್ಯಾಲೆಸ್ತೀನಿನಲ್ಲಿ ಇಸ್ರೇಲಿಗಳಿಗೆ ಒಂದು ಪ್ರತ್ಯೇಕ ದೇಶ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಮೊದಲ ವಿಶ್ವಯುದ್ಧದಲ್ಲಿ ಬ್ರಿಟನ್ ಮತ್ತು ಅಮೆರಿಕ ದೇಶಗಳ ಗುಂಪು ಜಯಗಳಿಸಿದ ಕಾರಣ ಬ್ರಿಟಿಷರು ಪ್ಯಾಲೆಸ್ತೀನಿ ನಲ್ಲಿ ಇಸ್ರೇಲಿಗಳಿಗೆ ದೇಶವನ್ನು ನಿರ್ಮಿಸಿ ಕೊಟ್ಟರು. ಎರಡನೇ ವಿಶ್ವ ಯುದ್ಧದ ಬಳಿಕ ನಿರ್ಮಿತವಾದ ಇಸ್ರೇಲ್ ದೇಶವನ್ನು ಮೊದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಅಧಿಕೃತವಾಗಿ “ದೇಶ” ಎಂದು ಗುರುತಿಸಿದ ಕೆಲವೇ ರಾಷ್ಟ್ರಗಳಲ್ಲಿ ಅಮೆರಿಕ ಕೂಡ ಒಂದಾಗಿತ್ತು. ಇಸ್ರೇಲ್ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಿದ ಕೇವಲ 11 ನಿಮಿಷಗಳಲ್ಲಿ ಅಮೆರಿಕ ಅದನ್ನು ದೇಶ ಎಂದು ಪರಿಗಣಿಸಿತ್ತು. ಇಸ್ರೇಲ್ಅನ್ನ ಅಮೇರಿಕಾ ರಾಷ್ಟ್ರವೆಂದು ಗುರುತಿಸಿದ್ದೇನೋ ನಿಜ, ಆದರೆ ಅವೆರಡು ದೇಶಗಳ ನಡುವಿನ ಸಂಬಂಧವು ಮುಂದೆ 20 ವರ್ಷಗಳ ಕಾಲ ಸುಗಮವಾಗಿರಲಿಲ್ಲ. ಇಸ್ರೇಲ್, ಫ್ರಾನ್ಸ್ ಮತ್ತು ಬ್ರಿಟನ್ ನೊಂದಿಗೆ ಸುಯೆಜ್ ಕ್ಯಾನಲ್ ಗೋಸ್ಕರ ಮಾಡಿದ ಯುದ್ಧಕ್ಕಾಗಿ ಅಮೇರಿಕಾದ ಅಂದಿನ ರಾಷ್ಟ್ರಪತಿ ಆದ ಐಸೆನ್ ಹೂವರ್ ಆಡಳಿತವೂ ಇದರಿಂದ ಅಸಮಾಧಾನಗೊಂಡಿತ್ತು. ಆ ಸಂದರ್ಭದಲ್ಲಿ ಅಮೆರಿಕ ಇಸ್ರೆಲ್ ಗೆ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ನಿಲ್ಲಿಸುವುದಾಗಿ ಬೆದರಿಸುತ್ತು. ಅದೇ ರೀತಿ ಮುಂದೆ 1960 ರಲ್ಲಿ ಇಸ್ರೇಲ್ ರಹಸ್ಯವಾಗಿ ಅಣ್ವಸ್ತ್ರಗಳನ್ನು ಪರೀಕ್ಷಿಸುವುದನ್ನ ಕಂಡು ಅಂದಿನ ಅಮೆರಿಕಾದ ರಾಷ್ಟ್ರಪತಿಯಾದ ಕೆನ್ನಿ ಅವರು ಇಸ್ರೇಲ್ಗೆ ಎಚ್ಚರಿಸಿದ್ದರು. ಆದರೆ ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧ ಮಹತ್ವದ ತಿರುವು ಪಡೆದಿದ್ದು 1967 ರಲ್ಲಿ ನಡೆದ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಯುದ್ಧ. ಈ ಯುದ್ಧವನ್ನ ಇಸ್ರೇಲ್ ಕೇವಲ ಆರು ದಿನಗಳಲ್ಲಿ ಗೆದ್ದು ಬಿಗಿತ್ತು. ಅಲ್ಲಿಯವರೆಗೂ ಇಸ್ರೆಲನ್ನ ದುರ್ಬಲವಾಗಿ ಕಂಡಿದ್ದ ಅಮೆರಿಕಾಗೆ, ಇಸ್ರೆಲ್ ಸಾಮರ್ಥ್ಯ ಏನು ಎಂಬುದು ಮನವರಿಕೆಯಾಗಿತ್ತು. ಅಲ್ಲದೆ ಅದೇ ಸಂದರ್ಭದಲ್ಲಿ ಸೋವಿಯತ್ ರಷ್ಯಾ ತನ್ನ ಕಬಂಧ ಬಾಹುಗಳನ್ನ ಪಶ್ಚಿಮ ಏಷ್ಯಾ ದೇಶಗಳಲ್ಲಿ ಹರಡುತ್ತಿರುವುದನ್ನ ಕಂಡ ಅಮೆರಿಕವು ಅದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಅನ್ನ ಬೆಳೆಸಲು ನಿರ್ಧರಿಸಿತು.

ಪ್ರಸ್ತುತ ಅಮೆರಿಕ ಇಸ್ರೇಲ್ ನಡುವಿನ ಸಂಬಂಧ ಹೇಗಿದೆ ?

ಪ್ರಸ್ತುತ ಇಸ್ರೇಲ್ ಅಮೆರಿಕಾದ “ಸರ್ವಋತು” ಮಿತ್ರ ರಾಷ್ಟ್ರವಾಗಿದೆ. ಅಮೆರಿಕವೂ ಇಸ್ರೇಲ್ ಗೆ ಅವ್ಯಾಹತವಾಗಿ ಆರ್ಥಿಕ,ಮಿಲಿಟರಿ ಮತ್ತು ರಾಜಕೀಯ ಪ್ರೋತ್ಸಾಹವನ್ನು ನೀಡುತ್ತಿದೆ. ಇಸ್ರೇಲ್ ಇಲ್ಲಿಯವರೆಗೆ ತಾನು ‘ಅಣ್ವಸ್ತ್ರ ಶಕ್ತ ರಾಷ್ಟ್ರ’ ಎಂದು ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ ಅದರ ಮೇಲೆ ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ,ಪರಿಶೀಲನೆ ಯಾವುದು ನಡೆದಿಲ್ಲ. ಇದಕ್ಕೆ ಕಾರಣ ಮತ್ತದೇ ಅಮೆರಿಕ. ಇಷ್ಟೇ ಅಲ್ಲದೆ ಅಮೆರಿಕವೂ ಇಸ್ರೇಲ್ಗೆ ಇಲ್ಲಿಯವರೆಗೆ 158 ಬಿಲಿಯನ್ ಡಾಲರ್ ನಷ್ಟು ಆರ್ಥಿಕ ಸಹಾಯವನ್ನು ಮಾಡಿದೆ. ಪ್ರಸ್ತುತ ಇಸ್ರೇಲ್ ಪ್ರತಿ ವರ್ಷ ಅಮೆರಿಕದಿಂದ 3.8 ಬಿಲಿಯನ್ ಡಾಲರ್ ನಷ್ಟು ಮಿಲಿಟರಿ ಸಹಾಯವನ್ನು ಪಡೆದುಕೊಳ್ಳುತ್ತದೆ ಮತ್ತು ಈ ಮೊತ್ತದಲ್ಲಿ 16% ಅನ್ನು ಇಸ್ರೇಲ್ ತನ್ನ ಮಿಲಿಟರಿ ಬಜೆಟ್ಗೆ ಮೀಸಲಿಡುತ್ತದೆ. ಅಷ್ಟೇ ಅಲ್ಲದೆ ಅಮೇರಿಕಾ ಇಸ್ರೆಲ್ ನ ಅತಿ ದೊಡ್ಡ ವ್ಯಾಪಾರದ ಮಾರುಕಟ್ಟೆಯಾಗಿದೆ. ಪ್ರತಿ ವರ್ಷ ಈ ಎರಡು ದೇಶಗಳ ನಡುವೆ 50 ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಸ್ರೇಲ್ ನ ಡಿಪೆನ್ಸ್ ಟೆಕ್ನಾಲಜಿಯ ಪ್ರಸಿದ್ಧ ಆಯುಧವಾದ ‘ಐರನ್ ಡೊಮ್’ ಭಾಗಗಳನ್ನು ಕೂಡ ಇದೇ ಅಮೆರಿಕ ಇಸ್ರೇಲ್ಗೆ ಒದಗಿಸುತ್ತದೆ. ಇದೆಲ್ಲವುಗಳನ್ನು ಮೀರಿ ಅಮೇರಿಕಾ ಇಲ್ಲಿಯವರೆಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಪಾಸ್ ಆದ ಐವತ್ತಕ್ಕೂ ಹೆಚ್ಚು ರೆಸಲ್ಯೂಷನ್ ಗಳನ್ನು ತನ್ನ ವಿಟೋ ಪವರ್ ನಿಂದ ತಿರಸ್ಕರಿಸಿದೆ.

ಇಸ್ರೇಲ್ ಮೇಲೆ ಅಮೆರಿಕಾಗೆ ಯಾಕೆ ಇಷ್ಟು ಪ್ರೀತಿ?

ಸ್ನೇಹಿತರೆ ಈ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸುವುದಾದರೆ ಸದಾ ಸಮರದಲ್ಲಿ ತೊಡಗಿಕೊಂಡಿರುವ ಪಶ್ಚಿಮ ಏಷ್ಯಾದ ರಾಜಕೀಯ ಪರಿಸ್ಥಿತಿ. ಅಮೆರಿಕ ಮತ್ತು ರಷ್ಯಾ ದೇಶಗಳ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಸೋವಿಯತ್ ರಷ್ಯಾ ತನ್ನ ಕಬಂಧ ಬಾಹುಗಳನ್ನ ಪಶ್ಚಿಮ ಏಷ್ಯಾ ದೇಶಗಳತ್ತ ಚಾಚಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ಇಸ್ರೆಲ್ ಅನ್ನು ಬೆಳೆಸಿ ನಿಲ್ಲಿಸಿತು. ಅಲ್ಲದೆ ಪಶ್ಚಿಮ ಏಷ್ಯಾ ರಾಷ್ಟ್ರವಾದ ಇರಾನ್ ಅಮೆರಿಕಾದ ಅತಿ ದೊಡ್ಡ ಶತ್ರುವಾಗಿದ್ದು, ಅದನ್ನು ಕೂಡ ಮಟ್ಟ ಹಾಕಲು ಅಮೆರಿಕ ಇಸ್ರೆಲನ್ನ ತನ್ನ ಕಿರಿಯ ಸಹೋದರನಂತೆ ಬೆಳೆಸಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕಾದಲ್ಲಿ ನೆಲೆಸಿರುವ ಯಹೂದಿಗಳು ಅಮೆರಿಕಾದ ಅತ್ಯುನ್ನತ ರಾಜಕೀಯ ಹುದ್ದೆಯವರೆಗೂ ಪ್ರಭಾವವನ್ನು ಹೊಂದಿದ್ದಾರೆ. ಅವರು ಅಲ್ಲಿಯ ರಾಜಕೀಯವನ್ನು ಒಂದು ಹಂತದವರೆಗೂ ನಿಯಂತ್ರಿಸುತ್ತಾರೆ. ಹೀಗಾಗಿ ಅಮೆರಿಕಾಗೆ ಯಾವುದೇ ರಾಷ್ಟ್ರಪತಿ ಆಯ್ಕೆಯಾದರೂ ಅವರ ಮೊದಲ ಆದ್ಯತೆ ಇಸ್ರೇಲ್ ಆಗಿರುತ್ತದೆ. ಇನ್ನು ಅಮೆರಿಕದಲ್ಲಿ ನೆಲೆಸಿರುವ ಯಹೂದಿ ವ್ಯಾಪಾರಿಗಳು ಅಮೆರಿಕಾದ ಆರ್ಥಿಕತೆಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಾರೆ. ಈ ಕಾರಣಕ್ಕಾಗಿಯೂ ಅವರನ್ನ ಸಂತೈಸಲು ಅಮೆರಿಕ ಇಸ್ರೆಲನ್ನ ತನ್ನ ಕಿರಿಯ ಸಹೋದರನಂತೆ ಕಾಣುತ್ತದೆ.

ಸ್ನೇಹಿತರೆ ಒಟ್ಟಾರೆಯಾಗಿ ಹೇಳುವುದಾದರೆ ಕೇವಲ ಒಂದು ಶತಮಾನದ ಹಿಂದೆ ತಮ್ಮ ಗುರುತೇ ಇಲ್ಲದಂತೆ ಇದ್ದ ಯಹೂದಿಗಳು, ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ, ಅದೂ ಅಮೆರಿಕಾದಂತಹ ಜಗತ್ತಿನ ದೊಡ್ಡಣ್ಣನ ಆಪ್ತಮಿತ್ರನಾಗಿ ಬೆಳೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದೇ ರೀತಿಯ ಕುತೂಹಲಕಾರಿ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.

FacebookFacebookTwitterTwitterRedditRedditLinkedinLinkedinPinterestPinterestMeWeMeWeMixMixWhatsappWhatsapp

Recent Posts

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago

Bele Parihara List: ಹಳ್ಳಿವಾರು ಬೆಳೆ ಪರಿಹಾರ ಜಮಾ ಆಗಿರುವ ರೈತರ ಪಟ್ಟಿ ಬಿಡುಗಡೆ ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮೆಯಾದ ಅರ್ಹ ರೈತರ ಹಳ್ಳಿವಾರು ಪಟ್ಟಿ (bele parihara village wise list)…

55 years ago