ಸ್ನೇಹಿತರೇ ನಮ್ಮ ಜೀವನವು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಸರಿಯಾದ ನಿರ್ಧಾರಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದರೆ, ನಮ್ಮ ತಪ್ಪು ನಿರ್ಧಾರಗಳು ನಮ್ಮನ್ನು ಅಧೋಗತಿಗೆ ಇಳಿಸುತ್ತವೆ. ಆದರೆ ಇಂತಹ ಒಳ್ಳೆಯ ನಿರ್ಧಾರಗಳು ಯಾವಾಗ ಹೊರಬರುತ್ತವೆ ಎಂದು ಹೊಸ ಅಧ್ಯಯನ ಒಂದು ಬಹಿರಂಗ ಪಡಿಸಿದೆ. ಹಾಗದರೆ ಏನದು ಹೊಸ ಅಧ್ಯಯನ? ಅಷ್ಟಕ್ಕೂ ಅದು ಏನು ವರದಿ ಮಾಡಿದೆ ಎಂದು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!ಯೂನಿವರ್ಸಿಟಿ ಆಫ್ ಲಂಡನ್ ವಿಜ್ಞಾನಿಗಳು ಇತ್ತೀಚೆಗೆ ಇಲಿಗಳ ಮೇಲೆ ಒಂದು ಪ್ರಯೋಗವನ್ನು ಮಾಡಿದ್ದರು. ಈ ಪ್ರಯೋಗದ ಮೂಲಕ ಅವರು ನಮ್ಮ ಆಹಾರವು ನಮ್ಮ ವರ್ತನೆ ಮತ್ತು ನಮ್ಮ ನಿರ್ಧಾರಗಳನ್ನು ನಿರ್ಧರಿಸುತ್ತದೆ ಎಂದು ಅವರು ಕಂಡು ಕೊಂಡಿದ್ದಾರೆ. ನಾವು ಸಾಮಾನ್ಯವಾಗಿ ಹಸಿವಿನಿಂದ ಇದ್ದಾಗ ತೆಗೆದುಕೊಳ್ಳುವ ನಿರ್ಣಯಗಳು ಹೆಚ್ಚಿನ ಸಂದರ್ಭದಲ್ಲಿ ತಪ್ಪಾಗಿರುತ್ತವೆ ಮತ್ತು ದುಡುಕು ಬುದ್ದಿಯಿಂದ ಕೂಡಿರುತ್ತದೆ ಎಂದು ಅವರ ಅಧ್ಯಯನದಿಂದ ತಿಳಿದುಬಂದಿದೆ. ಅವರು ಮನುಷ್ಯನ ಮೆದುಳನ್ನು ಹೋಲುವ ಇಲಿಗಳ ಮೆದುಳನ್ನು ವರ್ಟಿಕಲ್ ಇಮೇಜಿಂಗ್ ತಂತ್ರಜ್ಞಾನದ ಸಹಾಯದಿಂದ ಅದರ ಮೆದುಳಿನ ಭಾಗವಾದ ಹಿಪ್ಪೋಕ್ಯಾಂಪಸ್ ಎಂಬ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಕಂಡು ಬಂದ ಹಾರ್ಮೋನುಗಳ ವೈಪರೀತ್ಯದ ಮೇಲೆ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ನಾವು ನಿತ್ಯವೂ ಕ್ರಮವಾಗಿ ಆಹಾರ ಸೇವಿಸುವುದರಿಂದ ನಮ್ಮ ಮೆದುಳಿನಲ್ಲಿ ಆಮ್ಲಜನಕ ಪೂರೈೆಯಾಗಿ ನಮ್ಮ ನೆನಪಿನ ಶಕ್ತಿಯೂ ಹೆಚ್ಚುತ್ತದೆ ಎಂದು ಅವರು ಕಂಡು ಕೊಂಡಿದ್ದಾರೆ. ಹಾಗಾಗಿ ನೀವು ಕೂಡ ಸೆನ್ಸಿಟಿವ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸರಿಯಾಗಿ ಆಹಾರ ಸೇವಿಸುವುದು ಒಳ್ಳೆಯದು.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.