ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ರಾಜ್ಯದ ಮಹಿಳೆಯರಿಗೆ ಹೊಸ ವರ್ಷಕ್ಕೂ ಮುನ್ನವೇ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ಇಂದಿನಿಂದ (ಸೋಮವಾರದಿಂದ) ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿದ ಮಹಿಳೆಯರಿಗೆ 24ನೇ ಕಂತಿನ ಹಣ ಜಮೆ ಮಾಡಲಾಗುವುದು.
ಯಾವ ಯಾವ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಯಾವಾಗ ಜಮೆಯಾಗಲಿದೆ ನಿಮಗೂ ಹಣ ಜಮೆಯಾಗಿದೆಯೇ ಇಲ್ಲೇ ಚೆಕ್ ಮಾಡಿ.
ಗೃಹಲಕ್ಷ್ಮೀ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಕಂತು ಎಂದು ಹೇಳುತ್ತೇನೆ. ತಿಂಗಳ ಹೆಸರು ಹೇಳುವುದಿಲ್ಲ. ಈಗಾಗಲೇ ಆರ್ಥಿಕ ಇಲಾಖೆ ಅವರು ನಮಗೆ 24ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಡಿಸೆಂಬರ್ 22 ರಿಂದ ಮುಂದಿನ ಶನಿವಾರದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ 24ನೇ ಕಂತಿನ ಹಣ ಜಮೆ ಮಾಡಲಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ 1.26 ಕೋಟಿ ಗೃಹಲಕ್ಷ್ಮೀಯರ ಖಾತೆಗೆ ಸೋಮವಾರದಿಂದ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದ ಸಚಿವರು, ಫೆಬ್ರವರಿ ತಿಂಗಳ ಹಣ ಬಿಡುಗಡೆಮಾಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಅವರು ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟದ ವಿಸ್ತರಣೆ ಕುರಿತ ಪ್ರಶ್ನೆಗೆ, ಇವೆರಡೂ ವಿಚಾರಗಳ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಇದನ್ನು ನಿರ್ಧರಿಸುತ್ತದೆ. ಅದು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು
ಗೃಹಲಕ್ಷ್ಮೀ ಹಣ ನಿಮಗೆ ಜಮೆಯಾಗಿದೆಯೇ ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳು ನಿಮಗೆ ಸಿಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.dbtkarnataka&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದನಂತರ DBT APP ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ.. ಇದಾದ ನಂತರ ನೋಂದಣಿ ಮಾಡಿದ ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಸರ್ಕಾರದ ವಿವಿಧ ಯೋಜನೆಗಳಿಂದ ನಿಮಗೆ ಹಣ ಜಮೆಯಾಗಿರುವ ಸ್ಥಿತಿಯನ್ನು (ಸ್ಟೇಟಸನ್ನು) ಚೆಕ್ ಮಾಡಬಹುದು.
ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆದಿದ್ದೀರೋ ಇಲ್ಲವೋ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ನೀವು ಆ ಯೋಜನೆಗೆ ಅರ್ಹತೆ ಪಡೆದಿದ್ದಿರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಹೌದು, ಈ ಯೋಜನೆ ಸೌಲಭ್ಯ ಪಡೆಯಬೇಕಾದರೆ ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇರಬೇಕು.ನಿಮ್ಮ ಕುಟುಂಬದಲ್ಲಿ ಯಾರಿಗೂ ಸರ್ಕಾರಿ ನೌಕರಿ ಇರಬಾರದು. ಇದರೊಂದಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ನಲ್ಲಿ ಒಂದೇ ರೀತಿ ಹೆಸರು ಇರಬೇಕು. ಹೆಸರು ವ್ಯತ್ಯಾಸವಿದ್ದರೆ ಸರ್ಕಾರದ ಸೌಲಭ್ಯ ಜಮಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಬ ವಿಚಾರವಿದೆ. ಆಡಳಿತಾತ್ಮಕ ಅನುಕೂಲತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕಿದೆ. ಹಾಗಾಗಿ ಮುಖ್ಯಮಂತ್ರಿ ಚರ್ಚೆಯನ್ನೂ ನಡೆಸಿದರು. ಎರಡು ಅಥವಾ ಜಿಲ್ಲೆ ರಚನೆಗೆ ಯೋಜಿಸಿದ್ದರು. ಆದರೆ ಬೇರೆ ತಾಲೂಕುಗಳನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹಲವರು ನಿಯೋಗ ತಂದರು. ಹಾಗಾಗಿ ಅಳೆದು ತೂಗಿ ನಿರ್ಧಾರ ಮಾಡಲು ಮುಂದಾಗಿದ್ದಾರೆ ಎಂದರು.
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode