WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಒಂದು ದೇಹ ಎರಡು ತಲೆಯ ವಿಚಿತ್ರ ಪಕ್ಷಿಯ ಬಗ್ಗೆ ನಿಮಗೆ ಸಾಕಷ್ಟು ಗೊತ್ತಿರಬಹುದು ಈಗಂತೂ ಯುವಕರಿಗೆ ಈ ವಿಚಿತ್ರ ಪಕ್ಷಿಯ ಅಚ್ಚೆ ಹಾಕಿಸಿಕೊಳ್ಳುವುದು ಒಂದು ಕ್ರೇಜ್ ಆಗಿಬಿಟ್ಟಿದೆ. ಎರಡು ತಲೆಗಳನ್ನು ಹೊಂದಿರುವುದು ಒಂದು ವಿಶೇಷವಾದರೆ ಈ ಪಕ್ಷಿ ತನ್ನ ಎರಡು ಕೊಕ್ಕುಗಳಲ್ಲಿ ಮತ್ತು ಎರಡು ಕಾಲುಗಳಲ್ಲಿ ಆನೆಯನ್ನು ಹಿಡಿದುಕೊಂಡಿರುವುದು ಇನ್ನೊಂದು ವಿಶೇಷವಾಗಿದೆ . ಈ ವಿಚಿತ್ರ ಪಕ್ಷಿಯನ್ನು ನೋಡಿದಾಗೆಲ್ಲ ನಮಗೆ ನೆನಪಾಗುವುದು ಕರ್ನಾಟಕ ರಾಜ್ಯದ ಅಧಿಕೃತ ಲಾಂಛನ. ನಮ್ಮ ರಾಜ್ಯದ ಅಧಿಕೃತ ಲಾಂಛನ ಒಂದು ರೋಚಕ ಕಹಾನಿಯನ್ನು ಹೊಂದಿದೆ ಈ ವಿಚಿತ್ರ ದೇಹ ಹೊಂದಿರುವ ಈ ಪಕ್ಷಿಯನ್ನು ಪುರಾಣಗಳಲ್ಲಿ ಗಂಡಬೇರುಂಡ ಎಂದು ಕರೆಯುತ್ತಾರೆ. ಈ ಚಿತ್ರ ದೇಹಕಾರ ಹೊಂದಿರುವ ಪಕ್ಷಿ ನಿಜಕ್ಕೂ ಇದೆಯಾ? ಏಕೆ ಇಷ್ಟೊಂದು ಮಹತ್ವ ಪಡೆದುಕೊಂಡಿದೆ ಎಂದು ತಿಳಿದುಕೊಳ್ಳಬೇಕಾದರೆ ನಮ್ಮ ರಾಜ್ಯದ ಗತವೈಭವದ ಕಡೆ ಹಿಂತಿರುಗಿನೋಡಬೇಕು. ಅಂದು ನಮ್ಮ ರಾಜ್ಯ ಮೈಸೂರು ಒಡೆಯರ ಅಧಿಪತ್ಯದಲ್ಲಿ ಉತ್ತುಂಗವನ್ನು ಪಡೆದುಕೊಂಡ ಕಾಲ, ಇಡೀ ಭರತ ಖಂಡದಲ್ಲಿ ಮೈಸೂರು ಪ್ರಾಂತ್ಯ ಗುರುತಿಸಿಕೊಂಡಂತ ವೈಭವದ ಕಾಲ. 16ನೇ ಶತಮಾನದಲ್ಲಿ ಮೈಸೂರಿನ ರಾಜರು, ಗಂಡಬೇರುಂಡ ಪಕ್ಷಿಯ ಲಾಂಛನವನ್ನು ಶಕ್ತಿಯ ಸಂಕೇತವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದರು. 1973 ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾದಾಗಲು ಗಂಡಭೇರುಂಡ ರಾಜ್ಯದ ಲಾಂಛನವಾಗಿ ಅಧಿಕೃತ ಸ್ಥಾನ ಪಡೆಯಿತು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಅಷ್ಟಕ್ಕೂ ಈ ಗಂಡಬೇರುಂಡ ಇತಿಹಾಸವನ್ನು ತಿಳಿದುಕೊಳ್ಳಲು ಪುರಾಣದ ಕಡೆ ತಿರುಗಿ ನೋಡಬೇಕು. ಮಾರ್ಕಂಡೇಯ ಎಂಬ ಪುರಾಣದಲ್ಲಿ ಇದರ ಉಲ್ಲೇಖವಿದ್ದು ವಿಷ್ಣುವಿನ ಇನ್ನೊಂದು ಅವತಾರ ಎಂದು ಹೇಳಲಾಗಿದೆ ಏಕೆಂದರೆ ಅಸುರ ರಾಜ ಹಿರಣ್ಯಕಶಪುವನ್ನು ಕೊಂದ ನಂತರ ನರಸಿಂಹ ಅವತಾರಿ ವಿಷ್ಣುವಿನ ಕೋಪ ಕಡಿಮೆಯಾಗಲಿಲ್ಲವಂತೆ ವಿಷ್ಣುವಿನ ಕೋಪವನ್ನು ಕಡಿಮೆ ಮಾಡಲು ಶಿವನು ಶರಭೇಶ್ವರನ ರೂಪದಲ್ಲಿ ಬಂದನಂತೆ ಶರಭನ ಆಕ್ರೋಶವನ್ನು ತಡೆಯಲು ವಿಷ್ಣು ಈ ಗಂಡಭೇರುಂಡ ಅವತಾರವನ್ನು ಪಡೆಯುತ್ತಾನೆ ಎಂದು ಈ ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಶಿಲ್ಪ ಶಾಸ್ತ್ರದಲ್ಲಿ ಮಹತ್ವ ಹೊಂದಿರುವ ಈ ಪಕ್ಷಿ ಕೆಳದಿಯ ಪ್ರಾಚೀನ ರಾಮೇಶ್ವರ ದೇಗುಲಗಳಲ್ಲಿ ಬೇಲೂರಿನ ಚನ್ನಕೇಶವ ದೇಗುಲಗಳನ್ನು ಹಿಡಿದು ವಿಶ್ವದ ಪ್ರಾಚೀನ ದೇವಾಲಯಗಳಲ್ಲಿ ಅಲಂಕಾರಿಕ ಶಿಲ್ಪವಾಗಿ ಕೆತ್ತಲಾಗಿದೆ.

ಈ ಗಂಡಭೇರುಂಡ ಪಕ್ಷಿಗೆ ಮೊದಲು ಮಾನವ ಅವತಾರವನ್ನು ನೀಡಿದವರು ಚಾಲುಕ್ಯರು. ಅವರ ಆಳ್ವಿಕೆ ಕಾಲದಲ್ಲಿ ಬಳ್ಳಿಗಾವಿ ಕೇದಾರೇಶ್ವರ ದೇವಾಲಯದಲ್ಲಿ ಬೃಹತ್ ಆಕಾರದ ಮಾನವರೂಪದ ಗಂಡಭೇರುಂಡವನ್ನು ಕೆತ್ತಲಾಯಿತು. ಇದನ್ನು ಅಲ್ಲಿಯ ಜನರು ಗಂಡಭೇರುಂಡೇಶ್ವರ ಎಂದು ಕರೆಯುತ್ತಾರೆ. ಇದನ್ನು ಕೆತ್ತಲ್ಪಟ್ಟಿದ್ದು 1047 ಎಂದು ನಂಬಲಾಗಿದೆ. ಹೊಯ್ಸಳರು ಕೂಡ ತಮ್ಮ ವಾಸ್ತುಶಿಲ್ಪದಲ್ಲಿ ಬಳಸಿಕೊಂಡಿದ್ದಾರೆ. ಬೇಲೂರಿನ ಚನ್ನಕೇಶವ ದೇವಾಲಯಗಳಲ್ಲಿ ಆಹಾರ ಸರಪಳಿ ಶಿಲ್ಪವನ್ನು ಕೆತ್ತಲಾಗಿದ್ದು ಅದರಲ್ಲಿ ಗಂಡಬೇರುಂಡ ಪಕ್ಷಿಯನ್ನು ಮೇಲ್ ಸ್ತರದಲ್ಲಿ ಇರಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಅರಸ ಅಚ್ಚುತರಾಯ (1529 ರಿಂದ 1542)ಪಕ್ಷಿಯ ಚಿತ್ರವನ್ನು ಚಿನ್ನದ ನಾಣ್ಯಗಳಲ್ಲಿ ಮುದ್ರಿಸಿ ಶಕ್ತಿಯ ಸಂಕೇತವಾಗಿ ಬಳಸಲಾಗಿದೆ. ಅಚ್ಯುತರಾಯನ ಆಳ್ವಿಕೆಯ ಕಾಲದಲ್ಲಿ ಸಾಮ್ರಾಜ್ಯವು ನಾಲ್ಕು ಶತ್ರು ಸಾಮ್ರಾಜ್ಯಗಳಾದ ಗೋಲ್ಕೊಂಡ, ಬೀದರ್, ಗುಲ್ಬರ್ಗ, ಅಹಮದ್ನಗರ ಈ ನಾಲ್ಕು ಸಾಮ್ರಾಜ್ಯಗಳು, ವಿಜಯನಗರ ಸಾಮ್ರಾಜ್ಯದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದವು. ಆದರೆ ಈ ನಾಲ್ಕು ಸಾಮ್ರಾಜ್ಯಗಳಿಗೆ ಸೆಡ್ಡು ಹೊಡೆದು ವಿಜಯನಗರ ಸಾಮ್ರಾಜ್ಯ ಸಮೃದ್ಧವಾಗಿ ಬೆಳೆದಿದ್ದನ್ನು ಗಂಡಭೇರುಂಡ ಪಕ್ಷಿಯು ನಾಲ್ಕು ಕಡೆ ಆನೆಯನ್ನು ಕಚ್ಚಿ ಹಿಡಿದ ಚಿತ್ರನಕ್ಕೆ ಹೋಲಿಸಲಾಗಿದೆ.

ವಿಜಯನಗರ ಅರಸರ ನಂತರ ಮೈಸೂರಿನ ಒಡೆಯರು ಸುಮಾರು 16ನೇ ಶತಮಾನದಲ್ಲಿ ಗಂಡುಬೇರುಂಡವನ್ನು ರಾಜಲಾಂಛನವಾಗಿ ಬಳಸಲಾರಂಭಿಸಿದರು. ಮೊದಲ ಬಾರಿಗೆ ಯದುರಾಯ ಒಡೆಯರು ಗಂಡಭೇರುಂಡವಿದ್ದ ಧ್ವಜವನ್ನು ವಿಜಯ ಯಾತ್ರೆಯಲ್ಲಿ ಬಳಸಿದರು. ನಂತರ ಗಂಡ ಬೇರುಂಡ ವಿದ್ದ ಕೆಂಪು ಧ್ವಜವನ್ನು ಮೈಸೂರು ರಾಜ್ಯದ ಧ್ವಜವಾಗಿ ಬಳಸಲಾಯಿತು. ಈ ಧ್ವಜವು “ಸತ್ಯಮೇವೋ ಭವರಮ್ಯಹಂ” ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡಿದ್ದು ಸತ್ಯ ಹಾಗೂ ಧರ್ಮದ ಸಂಕೇತವಾಗಿ ರಾರಾಜಿಸುತ್ತಿತ್ತು. 1947ರಲ್ಲಿ ನಮ್ಮ ದೇಶ ಸ್ವತಂತ್ರವಾದ ನಂತರವೂ 1956ರ ವರೆಗೆ ಕೂಡ ಗಂಡಭೇರುಂಡ ರಾಜ್ಯದ ಲಾಂಛನವಾಗಿ ಬಳಕೆಯಾಯಿತು. 1973 ರಲ್ಲಿ ಮೈಸೂರು ರಾಜ್ಯ ಬದಲಾವಣೆಗೊಂಡು ಕರ್ನಾಟಕ ರಾಜ್ಯವಾದಾಗಲು ಕೂಡ ಯಾವುದೇ ಬದಲಾವಣೆಯಾಗದೆ ಈ ಲಾಂಛನ ಅಧಿಕೃತವಾಗಿ ಕರ್ನಾಟಕ ರಾಜ್ಯದ ಲಾಂಛನವಾಗಿ ಇಂದಿಗೂ ಕರ್ನಾಟಕದ ಹೆಮ್ಮೆ ಮತ್ತು ಘನತೆಯ ಸಂಕೇತವಾಗಿ ರಾರಾಜಿಸುತ್ತಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *