WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ,ರಾಜ್ಯದ ರೈತರ ಆರ್ಥಿಕ ಸ್ಥಿರತೆ ಮತ್ತು ಕೃಷಿ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಅದಕ್ಕೆ ಪೂರಕವಾಗಿ ಸಹಕಾರಿ ಸಂಸ್ಥೆಗಳ ಮೂಲಕವೂ ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳು (Farmers Loan Schemes) ಒದಗಿಸಲಾಗುತ್ತಿದೆ. ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಬುಡ್ನ ಸಿದ್ದಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದು, ಸಹಕಾರಿ ಸಂಸ್ಥೆಗಳ ಮೂಲಕ ದೊರೆಯುವ ಸಾಲ ಯೋಜನೆಗಳ ವಿವರ ಹಂಚಿಕೊಂಡಿದ್ದಾರೆ

Thank you for reading this post, don't forget to subscribe!

ಶೂನ್ಯ ಬಡ್ಡಿಯ ಬೆಳೆಸಾಲ:

      
                    WhatsApp Group                             Join Now            
   
                    Telegram Group                             Join Now            

ರೈತರಿಗೆ ಗರಿಷ್ಠ ರೂ. 5 ಲಕ್ಷದವರೆಗೆ ಬೆಳೆಸಾಲ ಹಾಗೂ ರೂ. 2 ಲಕ್ಷದವರೆಗೆ ಪಶುಸಂಗೋಪನೆ/ಮೀನುಗಾರಿಕೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಈ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (PACS), ಲ್ಯಾಂಪ್ಸ್, ಪಿಕಾರ್ಡ್ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (DCC ಬ್ಯಾಂಕುಗಳು) ಮೂಲಕ ವಿತರಿಸುತ್ತವೆ. ರೈತರು ತಮ್ಮ ಭೂಮಿ ಇರುವ ಸಹಕಾರಿ ಸಂಘದಲ್ಲೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಸಂಘ ನಿಷ್ಕ್ರಿಯವಾಗಿದ್ದರೆ ಸಂಬಂಧಿತ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ಇತರ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ ಹಾಗೂ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಮಾತ್ರ ಬಡ್ಡಿ ಸಹಾಯಧನ ಸಿಗುತ್ತದೆ.

ಮಧ್ಯಮ ಮತ್ತು ದೀರ್ಘಾವಧಿ ಸಾಲ:

ಕೃಷಿ ಯಾಂತ್ರೀಕರಣ, ತೋಟಗಾರಿಕೆ, ನೀರಾವರಿ ಹೀಗೆ ದೀರ್ಘಾವಧಿ ಹೂಡಿಕೆಗಳಿಗೆ ರೈತರು ರೂ. 15 ಲಕ್ಷದವರೆಗೆ ಶೇ.3 ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಈ ಸಾಲವನ್ನು ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ನಬಾರ್ಡ್ ನಿಗದಿಪಡಿಸಿದ ಯುನಿಟ್ ಕಾಸ್ಟ್ ಮತ್ತು ಭದ್ರತೆ ಆಧರಿಸಿ ವಿತರಿಸುತ್ತವೆ. ಗರಿಷ್ಠ 10 ವರ್ಷಗಳ ಮರುಪಾವತಿ ಅವಧಿ ಇದೆ. ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಬಡ್ಡಿ ಸಹಾಯಧನ ಸಿಗುತ್ತದೆ.

ಅಡಮಾನ ಸಾಲದ ಉಪಯೋಗ:

ರೈತರು ತಮ್ಮ ಉತ್ಪನ್ನಗಳನ್ನು ಸಹಕಾರಿ ಗೋದಾಮಿನಲ್ಲಿ ಶೇಖರಿಸಿದರೆ, ಆ ಉತ್ಪನ್ನದ ಮೌಲ್ಯದ 70% ಅಥವಾ ಗರಿಷ್ಠ ರೂ. 2 ಲಕ್ಷದವರೆಗೆ ಸಾಲ ಪಡೆಯಬಹುದು. ಬಡ್ಡಿದರ ಶೇ.7 ಇದ್ದರೂ, ಸರ್ಕಾರ ರೈತರ ಪರವಾಗಿ ಶೇ.4ರ ಬಡ್ಡಿ ಸಹಾಯಧನ ನೀಡುತ್ತದೆ. ಈ ಸಾಲ ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ಲಭ್ಯ.

ಪಿಕ್-ಅಪ್ ವ್ಯಾನ್ ಖರೀದಿಸಲು ಸಾಲ:

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶ ರೈತರಿಗೆ ಸಾರಿಗೆ ಸೌಲಭ್ಯ ಸುಧಾರಿಸಲು ಈ ಯೋಜನೆ ಜಾರಿಯಲ್ಲಿದೆ. ರೈತರು 1.75 ಟನ್ ಸಾಮರ್ಥ್ಯದ ನಾಲ್ಕು ಚಕ್ರದ ಪಿಕ್-ಅಪ್ ವ್ಯಾನ್ ಖರೀದಿಸಲು ರೂ. 7 ಲಕ್ಷದವರೆಗೆ ಸಾಲವನ್ನು ಶೇ.4ರ ಬಡ್ಡಿಯಲ್ಲಿ ಪಡೆಯಬಹುದು. ಪ್ರತಿ ಜಿಲ್ಲೆಗೆ 100 ಫಲಾನುಭವಿಗಳು ಮಾತ್ರ ಆಯ್ಕೆ. ರೈತರು ಪ್ರತಿ ಆರು ತಿಂಗಳಿಗೊಮ್ಮೆ ಕಂತು ಪಾವತಿಸಿ, ಗರಿಷ್ಠ 7 ವರ್ಷಗಳಲ್ಲಿ ಸಾಲ ತೀರಿಸಿದರೆ, ಸರ್ಕಾರ ಬಡ್ಡಿ ಸಹಾಯಧನ ಒದಗಿಸುತ್ತದೆ. ಹೀಗಾಗಿ ರೈತರಿಗೆ ಅಂತಿಮವಾಗಿ ಸಾಲದ ಬಡ್ಡಿದರ ಕೇವಲ ಶೇ.4 ಮಾತ್ರವಾಗುತ್ತದೆ.

ಗೊದಾಮು ನಿರ್ಮಿಸಲು ರೂ.20 ಲಕ್ಷಗಳ ವರೆಗೆ ಸಾಲ:

ರೈತರು ಕೃಷಿ ಉತ್ಪನ್ನ ಸಂಗ್ರಹಿಸಲು ₹20 ಲಕ್ಷದವರೆಗೆ ಗೋದಾಮು ನಿರ್ಮಾಣ ಸಾಲ ಪಡೆಯಬಹುದು. ಸರ್ಕಾರ ಈ ಸಾಲದ ಮೇಲೆ ಶೇ.7ರ ಬಡ್ಡಿ ಸಹಾಯಧನ ನೀಡುವುದರಿಂದ ರೈತರಿಗೆ ಕೇವಲ ಶೇ.4ರ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ.

ಗೋದಾಮುಗಳನ್ನು ಗ್ರಾಮೀಣ ಪ್ರದೇಶದ ಜಮೀನು ಅಥವಾ ಪಂಚಾಯಿತಿ ನಿವೇಶನದಲ್ಲಿ, ನಬಾರ್ಡ್/WDRA ಅನುಮೋದಿತ ವಿನ್ಯಾಸದಂತೆ ನಿರ್ಮಿಸಬೇಕು. ಸಾಲವನ್ನು ಡಿಸಿಸಿ ಬ್ಯಾಂಕುಗಳು, ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳು ವಿತರಿಸುತ್ತವೆ. ರೈತರು 7 ವರ್ಷಗಳೊಳಗೆ, ಆರು ತಿಂಗಳಿಗೊಮ್ಮೆ ಕಂತು ಪಾವತಿಸಿದರೆ, ಬಡ್ಡಿ ಸಹಾಯಧನ ಸಿಗುತ್ತದೆ..

ಸಾಲ ಪಡೆಯುವ ಸಾಮಾನ್ಯ ನಿಬಂಧನೆಗಳು

      
                    WhatsApp Group                             Join Now            
   
                    Telegram Group                             Join Now            

* ರೈತರು ತಮ್ಮ ಭೂಮಿ ಇರುವ ಸಹಕಾರಿ ಸಂಘದಲ್ಲೇ ಅರ್ಜಿ ಸಲ್ಲಿಸಬೇಕು.
* ಇತರ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರೆ ಈ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ.
* ಬೆಳೆ ವಿಮೆ ಕಡ್ಡಾಯ.
*ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿದಾಗ ಮಾತ್ರ ಬಡ್ಡಿ ಸಹಾಯಧನ ಲಭ್ಯ.
* ಡಿಸಿಸಿ ಬ್ಯಾಂಕುಗಳು ಮತ್ತು ಪಿಕಾರ್ಡ್ ಬ್ಯಾಂಕುಗಳು ನಬಾರ್ಡ್‌ನಿಂದ ದೊರೆಯುವ ಪುನರ್ಧನ ಮತ್ತು ತಮ್ಮ ಬಂಡವಾಳವನ್ನು ಆಧರಿಸಿ ಸಾಲ ವಿತರಿಸುತ್ತವೆ.

ಅಂತಿಮ ನುಡಿ:

ಸರ್ಕಾರದ ಈ ಸಾಲ ಯೋಜನೆಗಳು ರೈತರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶ ಹೊಂದಿವೆ. ತಾತ್ಕಾಲಿಕ ಬೆಳೆಸಾಲದಿಂದ ಹಿಡಿದು ದೀರ್ಘಾವಧಿಯ ಹೂಡಿಕೆ, ಉತ್ಪನ್ನ ಸಂಗ್ರಹಣೆ, ಸಾರಿಗೆ ಸೌಲಭ್ಯಗಳವರೆಗೂ ರೈತರಿಗೆ ನೆರವಾಗುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಾಲವನ್ನು ಸಮಯಕ್ಕೆ ತೀರಿಸಲು ಸಾಧ್ಯವಾಗದಿದ್ದರೆ ಬಡ್ಡಿ ಸಹಾಯಧನ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಕೃತಿ ವಿಕೋಪಗಳು ಅಥವಾ ಮಾರುಕಟ್ಟೆ ಅಸ್ಥಿರತೆ ಎದುರಾದಾಗ ರೈತರಿಗೆ ಸವಾಲುಗಳೂ ಎದುರಾಗುತ್ತವೆ. ಯೋಜನೆಗಳು ಸರಿಯಾಗಿ ಜಾರಿಗೆ ಬಂದರೆ, ರಾಜ್ಯದ ರೈತರ ಜೀವನಮಟ್ಟ ಸುಧಾರಿಸಲು ಮತ್ತು ಕೃಷಿ ಕ್ಷೇತ್ರ ಬಲಪಡಿಸಲು ಮಹತ್ತರ ಪಾತ್ರ ವಹಿಸಲಿವೆ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *