ಕೃಷಿ ಪಂಪ್ ಸೆಟ್ ಹೊಂದಿರುವ ರೈತರಿಗೆ ಮಹತ್ವದ ಮಾಹಿತಿ! ತಪ್ಪದೇ ಓದಿ !

ಇಂಧನ ಸಚಿವ ಕೆ. ಜೆ.ಜಾರ್ಜ್ ಮಾತನಾಡಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ರಾಜ್ಯದಲ್ಲಿ ಎಷ್ಟು ಜನ ರೈತರು ಕೃಷಿ ಪಂಪ್ ಸೆಟ್ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯುತ್ತಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಸಿಗುತ್ತದೆ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಹೊಲದಲ್ಲಿ ಕೃಷಿ ಪಂಪ್ ಸೆಟ್ (krushi pump set) ಹೊಂದಿದ್ದರೆ ನಿಮಗೆ ಇಲ್ಲೊಂದು ಮಹತ್ವದ ಮಾಹಿತಿ ಇದೆ. ಅದೇನೆಂದರೆ ನಿಮ್ಮ ಕೃಷಿ ಪಂಪ್ ಸೆಟ್ ಗೆ ನಿಮ್ಮ ಆಧಾರ ಲಿಂಕ್ ಮಾಡುವ ಕುರಿತು.

Thank you for reading this post, don't forget to subscribe!

ಹೌದು ರೈತ ಮಿತ್ರರೇ, ರಾಜ್ಯ ಸರ್ಕಾರವು ಕೃಷಿ ಉತ್ಪಾದನೆ ಹೆಚ್ಚಿಸಲು ಬಡ ಮತ್ತು ಹಿಂದುಳಿದ ರೈತರಿಗೆ ಸಬ್ಸಿಡಿ ರೂಪದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಪ್ರಧಾನಿ ಮೋದಿ ಗಿಫ್ಟ್! ಪಿಎಂ ಕಿಸಾನ್ 18 ನೇ ಕಂತು ಈ ದಿನಾಂಕದಂದು ಜಮಾ ಆಗುತ್ತದೆ ! ತಪ್ಪದೇ ಈ ಕೆಲಸ ಮಾಡಿ

ಈ ರೀತಿಯಾಗಿ ಸಬ್ಸಿಡಿ ರೂಪದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ನೀಡಲಾಗುತ್ತಿರುವ ವಿದ್ಯುತ್ ಅರ್ಹ ಫಲಾನುಭವಿ ರೈತರಿಗೆ ತಲುಪುತ್ತಿದೆಯೋ ಇಲ್ಲವೋ ಅಥವಾ ಅಕ್ರಮವಾಗಿ ಅನರ್ಹರು ಬಳಸುತ್ತಿದ್ದಾರೋ ಎಂಬುದನ್ನು ಪತ್ತೆ ಹಚ್ಚಲು ಮತ್ತು ಎಷ್ಟು ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಇನ್ನು ಈ ಕುರಿತು ರೈತರಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಾಡಿದರೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ,ಮತ್ತು ಹೆಚ್ಚಿನ ವಿದ್ಯುತ್ ದರ ಭರಿಸಬೇಕಾಗುತ್ತದೆ ಅಥವಾ ಸಬ್ಸಿಡಿ ಕಡಿತಗೊಳಿಸಲಾಗುತ್ತದೆ ಎಂಬ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಈ ವರ್ಷದ ಬೆಳೆ ವಿಮೆ ಹಣ ಜಮಾ! ನಿಮಗೂ ಬಂತಾ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಇಂಧನ ಸಚಿವ ಕೆ. ಜೆ.ಜಾರ್ಜ್ ಮಾತನಾಡಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ರಾಜ್ಯದಲ್ಲಿ ಎಷ್ಟು ಜನ ರೈತರು ಕೃಷಿ ಪಂಪ್ ಸೆಟ್ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯುತ್ತಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಸಿಗುತ್ತದೆ.

ಈ ಮಾಹಿತಿ ಆಧರಿಸಿ ಮುಂಬರುವ ರಾಜ್ಯ ಸರಕಾರದ ಜನಕಲ್ಯಾಣ ಯೋಜನೆಗಳಿಗೆ ಸಹಕಾರಿಯಾಗುತ್ತದೆ. ಅಲ್ಲದೆ ಇಂತಹ ರೈತಪರ ಯೋಜನೆಗಳಿಂದ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.

ಈಗಾಗಲೇ ರಾಜ್ಯದಲ್ಲಿರುವ 34 ಕೃಷಿ ಪಂಪ್ ಸೆಟ್ ಹೊಂದಿರುವ ರೈತರಲ್ಲಿ 32 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಈಗಾಗಲೇ ಆಯಾ ರೈತರ ಆಧಾರ್ ಲಿಂಕ್ ಆಗಿದ್ದು, ಇನ್ನುಳಿದ ರೈತರಿಗೆ ತಮ್ಮ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ ಲಿಂಕ್ ಮಾಡುವಂತೆ ಸೂಚನೆ ನೀಡಿದರು.

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಇನ್ನು ಆಯಾ ಭಾಗದ ಎಸ್ಕಾಂ ಕಂಪನಿಗಳು ನಿಯೋಜಿಸಿರುವ ಲೈನ್ ಮ್ಯಾನ್ ಗಳು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುತ್ತಾರೆ. ಹಾಗಾಗಿ ರೈತರು ತಮ್ಮ ಭಾಗದ ಲೈನ್ ಮನ್ ಕರೆಸಿ ತಮ್ಮ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago