WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಕರೆಂಟ್ ಇಲ್ಲ ಅಂದ್ರೆ ನಮ್ಮ ಮನೆಯಲ್ಲೂ ಕತ್ತಲು ಆವರಿಸುತ್ತದೆ, ಲೈಫಲ್ಲೂ ಕತ್ತಲು ಆವರಿಸುತ್ತದೆ. ದೂರದರ್ಶನ ಲಾಪ್ ಟಾಪ್, ಫ್ಯಾನ್ , ಗಿರಣಿ ಫ್ಯಾಕ್ಟರಿ ಕಾರ್ಯನಿರ್ವಹಿಸಲು ಎಲ್ಲದಕ್ಕೂ ವಿದ್ಯುತ್ ಬೇಕು. ಅದು ಪಕ್ಕದಲ್ಲಿ ಇದ್ದರೆ ಚಂದ. ಅದೇ ಟಚ್ ಮಾಡಿದರೆ ಚಟ್ಟ ತರುತ್ತೆ. ನಾವು ಸಾಕಷ್ಟು ಸಾರಿ ಕರೆಂಟ್ ಅಪಘಾತಗಳನ್ನು ಕೇಳುತ್ತೇವೆ. ಹೀಗೆ ಕರೆಂಟ್ ಶಾಕ್ ನಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು ಹನ್ನೆರಡುವರೆ ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ . ಒಬ್ಬ ಮನುಷ್ಯ ಅಥವಾ ಪ್ರಾಣಿ ವಿದ್ಯುತ್ ಶಾಕ್ ದಿಂದ ಮರಣ ಹೊಂದುವುದನ್ನು ವಿದ್ಯುತ್ ಅಪಘಾತ ಎನ್ನುತ್ತಾರೆ . ಹಾಗಾದರೆ ನಮ್ಮ ದೇಹಕ್ಕೆ ಕರೆಂಟ್ ಹೊಡೆದಾಗ ಏನಾಗುತ್ತೆ?ವಿದ್ಯುತ್ ಹೇಗೆ ಹರಿಯುತ್ತದೆ? Current ಶಾಕ್ ಹೊಡೆದಾಗ ಬಿಡಿಸಿಕೊಳ್ಳಲು ಆಗುವುದಿಲ್ಲ ಏಕೆ?. ನಮ್ಮ ದೇಹ ಹೇಗೆ ಕರೆಂಟ್ ಉತ್ಪಾದಿಸುತ್ತದೆ? ಮುಂತಾದ ಪ್ರಶ್ನೆಗಳಿಗೆ ಈ ಆರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಕರೆಂಟ್ ಎಂದರೇನು? ಹೇಗೆ ಇದು ಚಲಿಸುತ್ತದೆ?

ಸ್ನೇಹಿತರೆ ಕರೆಂಟ್ ಅಥವಾ ವಿದ್ಯುತ್ ಎಂದರೆ ಎಲೆಕ್ಟ್ರಾನ ಗಳ ಪ್ರವಾಹ ಎಂದು ಸ್ಕೂಲ್ ಅಲ್ಲಿ ಓದಿರುತ್ತೇವೆ. ಭೂಮಿಯಲ್ಲಿರುವ ಪ್ರತಿಯೊಂದು ವಸ್ತು ಚಿಕ್ಕ ಕಣಗಳಿಂದ ಮಾಡಲ್ಪಟ್ಟಿದೆ ನಮ್ಮ ದೇಹವನ್ನು ಸೇರಿಸಿ. ಈ ಕಣ ಮುಖ್ಯವಾಗಿ ಪ್ರೋಟಾನ್(+) ನ್ಯೂಟ್ರಾನ್, ಎಲೆಕ್ಟ್ರಾನ್ (-) ಎಂಬ ಮೂರು ಅತಿ ಚಿಕ್ಕ ಕಣಗಳನ್ನು ಒಳಗೊಂಡಿರುತ್ತದೆ. ಈ ಕಣದ ಕೇಂದ್ರ ಭಾಗವಾದ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಬಿಗಿಯಾಗಿ ಬಂಧಿ ಆಗಿರುತ್ತವೆ. ಎಲೆಕ್ಟ್ರಾನ್ ಗಳು ಮಾತ್ರ ಇದರ ಸುತ್ತ free agi ಸುತ್ತುತ್ತಿರುತ್ತದೆ. ಎಲೆಕ್ಟ್ರಾನ್ ಗಳು ಚಲಿಸುವುದನ್ನು ವಿದ್ಯುತ್ or ಕರೆಂಟ್ ಎನ್ನುತ್ತೇವೆ. ಯಾವ ವಸ್ತುಗಳು ಕಟ್ಟಿಗೆಯಿಂದ ಮಾಡಲ್ಪಟ್ಟಿರುತ್ತವೆ ಮತ್ತು ತೇವಾಂಶ ಮುಕ್ತವಾಗಿರುತ್ತವೆ (ಉದಾ: ರಬ್ಬರ್) ಅವುಗಳಲ್ಲಿ ಕರೆಂಟ್ ಇರುವುದಿಲ್ಲ. ಏಕೆಂದರೆ ಇದರಲ್ಲಿ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಗಳ ಸಂಖ್ಯೆ ಸಮನಾಗಿರುತ್ತದೆ. ಈ ರೀತಿ ಫ್ರೀ ಎಲೆಕ್ಟ್ರಾನ್ ಗಳಿಲ್ಲದ ವಸ್ತುಗಳನ್ನು ಇನ್ಸುಲೇಟರ್ ಗಳು ಎನ್ನುತ್ತಾರೆ. ಲೋಹಗಳು, ನೀರು ಇವುಗಳಲ್ಲಿ ಎಲೆಕ್ಟ್ರಾನ್ ಗಳು ಫ್ರೀ ಆಗಿರುತ್ತವೆ . ಇವುಗಳಿಗಳಿಗೆ ಚಾರ್ಜ್ ನೀಡಿದರೆ ಇದರಲ್ಲಿ ವಿದ್ಯುತ್ ಹರಿಯುತ್ತದೆ. ಇವುಗಳಿಗೆ ವಾಹಕಗಳು (ಕಂಡಕ್ಟರ್) ಎನ್ನುತ್ತಾರೆ. ನಮ್ಮ ದೇಹ ಕೂಡ ವಾಹಕ. ಏಕೆಂದರೆ ನಮ್ಮ ದೇಹವು 70 ಪ್ರತಿಶತ ನೀರಿನಿಂದ ಮತ್ತು ಪೊಟ್ಯಾಸಿಯಂ, ಕ್ಲೋರೈಡ್, ಸೋಡಿಯಂ ನಂತಹ ಎಲೆಕ್ಟ್ರೋಲೈಟ್ (ಲವಣಗಳು) ಹೊಂದಿರುವ ಅಂಗಾಂಶದಿಂದ ಮಾಡಲ್ಪಟ್ಟಿದೆ. ನರವ್ಯೂಹದ ಮೂಲಕ ಎಲೆಕ್ಟ್ರಿಕ್ impulse ಗಳು ಚಲಿಸುತ್ತಾ ಇರುತ್ತವೆ. ಇವುಗಳ ಚಲನೆ ಯಿಂದ ದೇಹದ ಚಟುವಟಿಕೆಗಳ ಸಾಗುವುದು. ಹಾಗಾದರೆ ನಮ್ಮ ದೇಹ ಕೂಡ ವಿದ್ಯುತ್ ಶಕ್ತಿ ಇಂದಲೇ ನಡೆಯುತ್ತೆ. ಆದ್ದರಿಂದ current ನಮ್ಮ ಸಂಪರ್ಕಕ್ಕೆ ಬಂದಾಗ ಎಲೆಕ್ಟ್ರಾನ್ ಗಳು ನಮ್ಮ ದೇಹದಲ್ಲಿ ಪ್ರವಹಿಸಲು ಆರಂಭ ಮಾಡುತ್ತವೆ. ಕಬ್ಬಿಣ, ತಾಮ್ರದಲ್ಲಿ ಕರೆಂಟ್ ಹರಿದಂತೆ ನಮ್ಮ ದೇಹದಲ್ಲಿ ಕರೆಂಟ್ ಹರಿಯುತ್ತದೆ. ಆದರೆ ಅವು( ಕಬ್ಬಿನ,ತಾಮ್ರ) ಸುಡುವುದಿಲ್ಲ, ನಮ್ಮ ದೇಹ ಸುಟ್ಟು ಬೂದಿ ಆಗುತ್ತದೆ. ಏಕೆಂದರೆ ನಮ್ಮ ದೇಹ ವೋಲ್ಟೇಜ್ ಲಿಮಿಟನ್ನು ಹೊಂದಿರುತ್ತದೆ. ಕಬ್ಬಿಣ ತಾಮ್ರದಲ್ಲಿ ರೋಧಕ ಶಕ್ತಿ ಕಮ್ಮಿ ಇರುತ್ತದೆ. ನಮ್ಮ ಅಂಗಾಂಶಗಳು ಹೆಚ್ಚು ರೋಧಕ ಶಕ್ತಿಯನ್ನು ಹೊಂದಿರುತ್ತವೆ. ಆಗ ನಮ್ಮಅಂಗಾಂಶಗಳು ವಿದ್ಯುತ್ ಅನ್ನು ತಡೆ ಹಿಡಿಯುತ್ತವೆ. ಆಗ ಎಲೆಕ್ಟ್ರಾನ್ ಗಳು resistance ತೋರಿಸೋ ಅಂಗಾಂಶಗಳನ್ನು ಸುಟ್ಟು ಕರಕಲು ಮಾಡಿ ಮುನ್ನುಗ್ಗುತ್ತವೆ. ಅದಕ್ಕೆ ಈ ದೇಹ ಸುಟ್ಟು ಕರಕಲಾಗುತ್ತದೆ.

ನಮ್ಮ ದೇಹಕ್ಕೆ 1 million amphere ಕರೆಂಟ್ ಅನುಭವಿಸಿದಾಗ ನಮಗೆ ಜುಂ ಎನ್ನುತ್ತದೆ 75 million amphere ಗಿಂತ ಹೆಚ್ಚಿನ ವಿದ್ಯುತ್ ಅನುಭವಿಸಿದಾಗ ನಮ್ಮ ಹೃದಯದ ಎಲೆಕ್ಟ್ರಿಕ್ system ಹಾಳಾಗುತ್ತೆ. ಹೃದಯ ಎಲೆಕ್ಟ್ರಿಕ್ ಸಿಗ್ನಲ್ ಗಳಿಂದ ಬಡಿತಾ ಇರುತ್ತದೆ. ದೇಹದಲ್ಲಿ ವಿದ್ಯುತ್ ಹರಿದಾಗ ವೆಂಟ್ರಿಕಲ್ ಗಳು ಯದ್ವಾತದ್ವ ಕಾರ್ಯನಿರ್ವಹಿಸುತ್ತವೆ. ಇದನ್ನು ventricular fabrillation ಎನ್ನುತ್ತೇವೆ. ಈ ಸಮಯದಲ್ಲಿ ಹೃದಯ ಸರಿಯಾಗಿ ರಕ್ತವನ್ನು ಪಂಪ್ ಮಾಡುವುದಿಲ್ಲ. ಹೀಗೆ ಬಹಳ ಸಮಯ ಆದರೆ ಸಾವು ಉಂಟಾಗುತ್ತದೆ. ಹೀಗೆ 1500 mAh ವಿದ್ಯುತ ಪ್ರವಹಿಸಿದರೆ ದೇಹ ಬೂದಿ ಆಗುತ್ತದೆ.

ಹಾಗಾದರೆ ವಿದ್ಯುತ್ ತಗುಲಿದಾಗ ಏನು ಮಾಡಬೇಕು?

ಶಾಕ್ ತಗುಲಿದ ವ್ಯಕ್ತಿಯನ್ನು ಮುಟ್ಟಬಾರದು ಪವರ್ ಅನ್ನು ಆಫ್ ಮಾಡಿ ವ್ಯಕ್ತಿಯ ಕೈಯಲ್ಲಿದ್ದ current wire ಅನ್ನು ಒಣಗಿದ (ಹಸಿ ಕಟ್ಟಿಗೆ ಅಪ್ಪಿ ತಪ್ಪಿಯೂ ಬಳಸಬಾರದು) ಕಟ್ಟಿಗೆಯಿಂದ ಬಿಡಿಸಬೇಕು. ನಂತರ CPR ( Cardiopulmonary resuscitation) ಇದು ‘heart attack’ breathing ಪ್ರಾಬ್ಲಮ್ ನಿಂದ ಹೊರ ತರುತ್ತದೆ. ಕರೆಂಟ್ ಜೊತೆ ಕೆಲಸ ಮಾಡುವಾಗ ಸಾಧ್ಯವಾದಷ್ಟು ಕರೆಂಟ್ ರೋಧಕ ವಸ್ತುಗಳಾದ ರಬ್ಬರ್, ಒಣ ಕಟ್ಟಿಗೆ, ಫೈಬರ್ ವಸ್ತುಗಳನ್ನು ಬಳಸಿಕೊಂಡು ಕೆಲಸ ಮಾಡಿ.

      
                    WhatsApp Group                             Join Now            
   
                    Telegram Group                             Join Now            

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *