ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ರಾಜ್ಯ ಸರಕಾರವು ಬೆಳೆ ಹಾನಿ ಆಗುವ ರೈತರಿಗೆ ಪರಿಹಾರ ರೂಪದಲ್ಲಿ ಹಣವನ್ನು ನೀಡುತ್ತದೆ.
Thank you for reading this post, don't forget to subscribe!ಬೆಳೆ ಹಾನಿ ಪರಿಹಾರ ಹಣ ಜಮಾ ಆಗಲು ನಿಮ್ಮ ಬೆಳೆ ಕಡ್ಡಾಯವಾಗಿ ಸಮೀಕ್ಷೆ (crop survey) ಆಗಿರಬೇಕು. ಯಾವ ರೈತರ ಬೆಳೆ ಸಮೀಕ್ಷೆ ಆಗಿರುವುದಿಲ್ಲವೋ ಅಂತಹ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗುವುದಿಲ್ಲ.
ಇದನ್ನೂ ಓದಿ: ಬೆಳೆ ವಿಮೆ ಹಣ ಜಮಾ ಆಗಿಲ್ಲವೇ ? ಈ ನಂಬರಿಗೆ ಒಂದು ಕರೆ ಮಾಡಿ ಸಾಕು! ನಿಮ್ಮ ಹಣ ಜಮಾ ಆಗುತ್ತೆ
ಹಾಗಾದರೆ ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಮೊಬೈಲ್ ನಲ್ಲಿ ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ. Crop Survey App
ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?
ಹಂತ -1) ಮೊಟ್ಟ ಮೊದಲು ನೀವು ಕೆಳಗೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ ಬೆಳೆ ಸಮೀಕ್ಷೆ ಆ್ಯಪ್ ಆದ ಬೆಳೆ ದರ್ಶಕ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ
https://play.google.com/store/apps/details?id=com.crop.offcskharif_2021
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ರೈತ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ಎಲ್ಲಾ ಆಯ್ಕೆಗಳಿಗೆ while using the app ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ಕೆಳಗೆ ತೋರಿಸಿದಂತೆ ವರ್ಷ, ಋತು,ಜಿಲ್ಲೆ, ತಾಲ್ಲೂಕು ,ಹೋಬಳಿ ಹಾಗೂ ಗ್ರಾಮದ ಹೆಸರನ್ನು ಹಾಕಿ ಸರ್ವೆ ನಂಬರ್ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ. ನಂತರ ಹಿಸ್ಸಾನಂಬರ್ ಹಾಕಿ ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿರಿ. ಆಗ ನಿಮಗೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ವಿವರಗಳು ಕಾಣಿಸುತ್ತವೆ.

ಹಂತ -5) ನಂತರ ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆಯನ್ನು ಯಾರು ಸಮೀಕ್ಷೆ ಮಾಡಿದ್ದಾರೆ ಮತ್ತು ಅವರ ಮೊಬೈಲ್ ನಂಬರ್ ಕೂಡ ನಿಮಗೆ ಸಿಗುತ್ತದೆ


ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಪಿಎಂ ಕಿಸಾನ್: ಅರ್ಹ ಫಲಾನುಭವಿ ರೈತರ ಹೊಸ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ರೈತರೇ ಒಂದು ವೇಳೆ ನಿಮ್ಮ ಬೆಳೆ ಸಮೀಕ್ಷೆ ಆಗದಿದ್ದರೆ ಬೆಳೆ ಸಮೀಕ್ಷೆಗಾರರಿಗೆ ಕರೆ ಮಾಡಿ ಬೆಳೆ ಸಮೀಕ್ಷೆ ಮಾಡಿಸಿ. ಇಲ್ಲದಿದ್ದರೆ ನಿಮಗೆ ಬೆಳೆ ಹಾನಿ ಪರಿಹಾರ ಹಣ ಜಮಾ ಆಗುವುದಿಲ್ಲ.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode