ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧೀಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಇಂದು ನಾವು ಸರ್ಕಾರದ ಎಲ್ಲಾ ರೀತಿಯ ಯೋಜನೆಗಳ ಲಾಭ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳು ತುಂಬಾ ಅವಶ್ಯಕ ಆಗಿವೆ.
Thank you for reading this post, don't forget to subscribe!ಮಗುವಿನ ಶಾಲೆಗೆ ದಾಖಲಾತಿ ಮಾಡುವುದರಿಂದ ಹಿಡಿದು, ಆಸ್ತಿ ವರ್ಗಾವಣೆ ಅಂತಹ ಪ್ರಮುಖ ವಿಷಯಗಳಿಗೆ ಅತ್ಯವಶ್ಯಕವಾಗಿ ಬೇಕಾಗುವ ದಾಖಲೆಗಳೆಂದರೆ ಅವು ಜನನ ಮತ್ತು ಮರಣ ಪ್ರಮಾಣ ಪತ್ರ.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ
ಇಂತಹ ಪ್ರಮುಖ ದಾಖಲಾತಿಗಳ ಕುರಿತ ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಿದ್ದು, ಇದು ಜನ ಸಾಮಾನ್ಯರಿಗೆ ಶಾಕ್ ನೀಡಿದೆ.
ಹಾಗಾದರೆ ಯಾವುದು ಆ ನಿಯಮ,ಇದರಿಂದ ಜನಸಾಮಾನ್ಯರಿಗೆ ಹೇಗೆ ತೊಂದರೆ ಉಂಟು ಮಾಡಲಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.ತಪ್ಪದೇ ಕೊನೆಯವರೆಗೂ ಓದಿರಿ.
ಏನಿದು ರಾಜ್ಯ ಸರಕಾರದ ಹೊಸ ನಿಯಮ?
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ ಬರೋಬ್ಬರಿ ಹತ್ತು ಪಟ್ಟು ಏರಿಸಿದೆ.
ಹೌದು ಸ್ನೇಹಿತರೆ ಈ ಹಿಂದೆ ಮರಣ ಪ್ರಮಾಣ ಪತ್ರ 21 ದಿನಗಳ ಒಳಗಡೆ ಪಡೆದುಕೊಳ್ಳಲು ₹0 ಶುಲ್ಕ ಆಗಿತ್ತು.
21 ದಿನಗಳ ಮೇಲೆ 6 ತಿಂಗಳ ಒಳಗಡೆ ಪಡೆದುಕೊಳ್ಳುವವರಿಗೆ 2 ರುಪಾಯಿ ಇತ್ತು.
6 ತಿಂಗಳ ನಿಂದ 1 ವರ್ಷದ ಒಳಗೆ ಪಡೆದು ಕೊಳ್ಳಬೇಕೆನ್ನುವವರಿಗೆ ₹5 ರೂ ಶುಲ್ಕ ನಿಗದಿ ಪಡಿಸಲಾಗಿತ್ತು.
ಇದನ್ನೂ ಓದಿ: ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ
ಆದರೆ ಇದೀಗ 2 ರುಪಾಯಿ 5 ರುಪಾಯಿ ಬದಲಾಗಿ ₹50 ಮಾಡಲಾಗಿದೆ. ಇದು ಜನಸಾಮಾನ್ಯರ ಮೇಲೆ ತೀವ್ರ ಪರಿಣಮ ಬೀರಿದೆ.
ಅಲ್ಲದೆ ಕರ್ನಾಟಕ ಸರ್ಕಾರ ಜನನ, ಮರಣ ನೋಂದಣಿ ನಿಯಮಗಳು 2024 (ತಿದ್ದುಪಡಿ) ಅನ್ನು ಕೂಡ ತಿದ್ದುಪಡಿ ಮಾಡಲಾಗಿದೆ.
ಸಾರ್ವಜನಿಕರಿಗೆ ಜನನ ಪ್ರಮಾಣ ಪತ್ರವು ತಮ್ಮ ಮಕ್ಕಳ ಹೆಸರು ಬದಲಾವಣೆ ,ಹಾಗೂ ಜನ್ಮ ದಿನಾಂಕ ಬದಲಾವಣೆಗೆ ಜನನ ಪ್ರಮಾಣ ಪತ್ರ ತುಂಬಾ ಅವಶ್ಯಕತೆಯಾಗಿರುತ್ತದೆ.
ಇನ್ನು ಮರಣ ಪ್ರಮಾಣ ಪತ್ರವು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ಅಥವಾ ಅಪಘಾತ ಸಂಭವಿಸಿ ದಾರಿಯಲ್ಲಿ ಮರಣ ಹೊಂದಿದ್ದರೆ , ಆಸ್ತಿ ವರ್ಗಾವಣೆಗೆ, ವಂಶಾವಳಿ ಪಡೆದುಕೊಳ್ಳಲು ಬೇಕಾಗುತ್ತದೆ .
ಇದಲ್ಲದೆ ಪ್ರಮಾಣಪತ್ರಗಳು ಹಲವು ಉದ್ದೇಶಕ್ಕೆ ಬೇಕಾಗುತ್ತವೆ. ಮಕ್ಕಳ ಜನನ ಪ್ರಮಾಣಪತ್ರವನ್ನು ಪೋಷಕರು ಶಾಲೆಗಳ ಪ್ರವೇಶಾತಿಗೆ ಸಲ್ಲಿಸಬೆಕಾಗುತ್ತದೆ.
ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೂಡ ಜನನ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.
ಮೊದಲು ಉಚಿತವಾಗಿದ್ದಾಗಲೇ ಜಡ ಹಿಡಿದಿರುವ ರಾಜ್ಯ ಸರಕಾರದ ಸರ್ಕಾರಿ ಕಚೇರಿಗೆ ಹೋಗಿ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳಲು ನೂರಾರು ರೂಪಾಯಿ ತೆರಬೇಕಾಗುತ್ತಿತ್ತು.
ಇನ್ನು ಇದೀಗ ರಾಜ್ಯ ಸರ್ಕಾರವು ಜನನ ಮತ್ತು ಮರಣ ಪ್ರಮಾಣ ಪತ್ರದ ಬೆಲೆ ಏರಿಕೆ ಮಾಡಿರುವುದರಿಂದ ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಗ್ಯಾರಂಟಿ.
ರಾಜ್ಯ ಸರ್ಕಾರವು ತನ್ನ ಗ್ಯಾರಂಟೀ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಇಂತಹ ದಾರಿಗಳನ್ನು ಹುಡುಕುತ್ತಿದೆ ಎಂದು ವಿಪಕ್ಷದವರು ಆರೋಪ ಮಾಡುತ್ತಿದ್ದಾರೆ.
ರಾಜಕೀಯ ಏನೇ ಇರಲಿ. ಆದರೆ ಜನಸಾಮಾನ್ಯರ ಪಾಲಿಗೆ ಸರಕಾರಿ ಕಚೇರಿಗಳು ಹಣ ವಸೂಲಿ ಮಾಡುವ ಕೇಂದ್ರಗಳಾಗುತ್ತಿವೆ ಎಂಬ ಕೂಗು ಕೇಳಿ ಬರುತ್ತಿರುವ ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯು ಜನಸಾಮಾನ್ಯರ ಜೇಬಿನಿಂದ ಮತ್ತಷ್ಟು ಹಣ ವಸೂಲಿ ಮಾಡಲು ಸರಕಾರಿ ಕಚೇರಿಗಳಿಗೆ ಅಧಿಕೃತ ಪರವಾನಿಗೆ ನೀಡಿದಂತಾಗಿದೆ ಎಂಬ ಕೂಗು ಕೇಳಿಬರುತ್ತಿವೆ.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M