ಆತ್ಮೀಯ ಓದುಗರೇ ಇನ್ನೇನು ಚಳಿಗಾಲ ಬಂದೇ ಬಿಟ್ಟಿತು. ಕೊರೆಯುವ ಚಳಿಗೆ ನಮ್ಮ ದೇಹದ ಆರೋಗ್ಯ ಏರುಪೇರು ಆಗುವ ಸಂಭವ ಜಾಸ್ತಿ ಇರುತ್ತದೆ. ಉದಾಹರಣೆಗೆ ಬಿರುಕು ಬಿಟ್ಟ ಕಾಲುಗಳು, ಒಡೆದ ತುಟಿಗಳು ಹೀಗೆ ಮುಂತಾದ ಹಲವು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ರೀತಿಯ ಕಾಯಿಲೆಗಳು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಂತ ಚಳಿಗಾಲ ಎಂದರೆ ಅದೊಂದು ಕಾಯಿಲೆಯನ್ನು ಹೊತ್ತು ತರುವ ಸೀಸನ್ ಅಲ್ಲ. ಬದಲಿಗೆ ಅದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೃತಕಾಲವೂ ಆಗಿದೆ. ಹಾಗಾದರೆ ಬನ್ನಿ ಸ್ನೇಹಿತರೆ ಇವತ್ತಿನ ಈ ಆರ್ಟಿಕಲ್ ನಲ್ಲಿ ಚಳಿಗಾಲದಲ್ಲಿ ನಾವು ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಕ್ರಮವನ್ನು ಪಾಲಿಸಬೇಕು ಮತ್ತು ಯಾವ ರೀತಿಯ ಆಹಾರ ಪದಾರ್ಥಗಳ ಮೇಲೆ ಹೆಚ್ಚಿನ ಗಮನವನ್ನು ವಹಿಸಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳೋಣ.
ಸ್ನೇಹಿತರೆ ಸಾಮಾನ್ಯವಾಗಿ ಪ್ರಾಣಿಯ ಮೂಲಗಳಿಂದ ಸಿಗುವ ಎಲ್ಲ ರೀತಿಯ ಆಹಾರ ಪದಾರ್ಥಗಳು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿರಿಸಲು ಸಹಾಯಕ ಮಾಡುತ್ತವೆ ( ಉದಾಹರಣೆಗೆ ಹಾಲಿನ ಉತ್ಪನ್ನ ಮಾಂಸ ಮೀನು ಹಾಗೂ ಚಿಕನ್ ). ಇವೆಲ್ಲವುಗಳಿಗಿಂತ ಮುಖ್ಯವಾಗಿ ನಮ್ಮ ದೇಹಕ್ಕೆ ಬೆಚ್ಚನೆಯ ಭಾವವನ್ನು ಉಂಟುಮಾಡುವ ಆಹಾರ ಪದಾರ್ಥಗಳು ಯಾವುವು ಎಂದರೆ ತರಕಾರಿಗಳು ಅದರಲ್ಲಿಯೂ ಬೇರುಗಳ ಮೂಲಗಳಿಂದ ಸಿಗುವ ತರಕಾರಿ. ಉದಾಹರಣೆಗೆ ಗಜ್ಜರಿ, ಬಟಾಟೆ, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಮೂಲಂಗಿ, ಗೆಣಸು, ಸಿಹಿಗೆಣಸು, ಬೀಟ್ರೂಟ್, ಟರ್ನಿಪ್ ಇತ್ಯಾದಿ. ಇದರ ಜೊತೆಗೆ ಹಸಿರು ತರಕಾರಿಗಳಾದ ಪಾಲಕ್ ಮೆಂತೆ ಪುದಿನ ಇತ್ಯಾದಿಗಳು ಕೂಡ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತವೆ. ಯಾವ ಯಾವ ಆಹಾರ ಪದಾರ್ಥಗಳಲ್ಲಿ ಯಾವ ಯಾವ ಅಂಶಗಳಿರುತ್ತವೆ ಮತ್ತು ಅವು ನಮ್ಮ ದೇಹಕ್ಕೆ ಯಾವ ರೀತಿಯಾಗಿ ಸಹಾಯ ಮಾಡುತ್ತದೆ ಎಂಬುದನ್ನ ಈ ಕೆಳಗೆ ನೀಡಲಾಗಿದೆ…
1.ಗಜ್ಜರಿ : ಗಜ್ಜರಿಯಲ್ಲಿರುವ ಬೀಟಾ ಕ್ಯಾರೋಟಿನ್ ಎಂಬ ಅಂಶವು ವಿಟಮಿನ್ A ನ ಅತ್ಯದ್ಭುತ ಮೂಲವಾಗಿದ್ದು ಇದು ಆಂಟಿ ಆಕ್ಸಿಡೆಂಟ್ ಆಗಿ ನಮ್ಮ ದೇಹದಲ್ಲಿ ಕಾರ್ಯನಿರ್ವಹಿಸುತ್ತದೆ.
2. ಬಿಳಿ ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ : ಇವುಗಳಲ್ಲಿ ಐಸೋಥಯಾನೆಟ್ಸ್ ಮತ್ತು ಇಂಡೋಲ್ಸ್ ನಂತಹ ಅಂಶಗಳಿದ್ದು ಇವು ಕ್ಯಾನ್ಸರ್ ಬರುವುದನ್ನ ತಡೆಗಟ್ಟುತ್ತವೆ.
3. ಬಟಾಟೆ ಮತ್ತು ಗೆಣಸು : ಇವು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತವೆ
4. ಹಸಿರು ತರಕಾರಿ: ಮೆಂತೆ ಪಾಲಕ್ ಪುದಿನಗಳು ಬೀಟಾ ಕ್ಯಾರೋಟಿನ್ ಅಂಶವನ್ನು ಹೊಂದಿದ್ದು ಇವು ವಿಟಮಿನ್ ಸಿ ಯ ಮೂಲ ಆಧಾರಗಳಾಗಿವೆ. ಹಾಗಾಗಿ ಇವು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗ ಬರಲಾರದಂತೆ ತಡೆಯುತ್ತವೆ. ಕೊತ್ತಂಬರಿ ಮೂಲಂಗಿ ಕೂಡ ಈ ಅಂಶವನ್ನು ಹೊಂದಿವೆ.
5. ಇತರೆ ತರಕಾರಿಗಳು : ಕಾಳುಗಳು ಮತ್ತು ಬೀಜಗಳು ನಮ್ಮ ದೇಹಕ್ಕೆ ಬೇಕಾದ ಅತ್ಯವಶ್ಯವಾದ ಪ್ರೋಟೀನ್ ಗಳನ್ನು ಮತ್ತು ಶಕ್ತಿಯನ್ನು ನೀಡುತ್ತವೆ.
6. ಹಣ್ಣುಗಳು ಮತ್ತು ಡ್ರೈಡ್ ಫ್ರೂಟ್ಸ್ : ಪಪಾಯಿ ಮತ್ತು ಪೈನಾಪಲ್ ಗಳು ಚಳಿಗಾಲದಲ್ಲಿ ನಮಗೆ ಹೆಚ್ಚು ಬೆಚ್ಚಗಿರಲು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿರುವ ಆಮ್ಲ ಅಂಶವು ವಿಟಮಿನ್ ಸಿ ಯನ್ನು ಹೊಂದಿದ್ದು ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ನೀವು ರಸ್ತೆಗಳಲ್ಲಿ ನೋಡಬಹುದು ಚಳಿಗಾಲದಲ್ಲಿ ಮೊಸಂಬಿ ಜ್ಯೂಸ್ ಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ.
ಖರ್ಜೂರ ದೇಹದ ಆರೋಗ್ಯವನ್ನು ಬೆಚ್ಚಗಿಡಲು ಸಹಾಯಕ ಮಾಡುತ್ತವೆ ಹೀಗಾಗಿ ಅವುಗಳನ್ನು ಚಳಿಗಾಲದ ಸಂದರ್ಭದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ ನೀಡಲಾಗುತ್ತದೆ. ಇವು ಕಬ್ಬಿಣ, ಫೈಬರ್, ಮೆಗ್ನೇಶಿಯಂ,ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಂತಹ ಅಂಶಗಳಷ್ಟೇ ಅಲ್ಲದೆ ಅವು ಶಕ್ತಿಯ ಮೂಲ ಕೇಂದ್ರಗಳು ಆಗಿವೆ.
7. ಮಸಾಲೆ ಪದಾರ್ಥಗಳು : ಸಾಸಿವೆ,ಕರಿಮೆಣಸು, ಅಜ್ವಾನ ದಂತಹ ಮಸಾಲೆ ಪದಾರ್ಥಗಳು ನಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿರಿಸಲು ಸಹಾಯ ಮಾಡುತ್ತವೆ. ಇವು ಚಳಿಗಾಲದಲ್ಲಿ ನಮಗೆ ಸಾಮಾನ್ಯವಾಗಿ ಬರಬಹುದಾದ ಕೆಮ್ಮು ನೆಗಡಿ ಅಂತಹ ರೋಗಗಳಿಗೆ ಔಷಧಿಯಾಗಿಯೂ ಕೆಲಸ ಮಾಡುತ್ತವೆ. ಅವು ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ರಕ್ತ ಪರಿಚಲನ ವ್ಯವಸ್ಥೆಯನ್ನು ಬಲಪಡಿಸುತ್ತವೆ.
8. ಔಷಧೀಯ ಸಸ್ಯಗಳು : ಸ್ನೇಹಿತರೆ ತುಳಸಿಯು ಔಷಧಿಯ ಸಸ್ಯವಾಗಿದ್ದು ಇದನ್ನು ಚಳಿಗಾಲದಲ್ಲಿ ತಿನ್ನುವುದರಿಂದ ನಮ್ಮ ದೇಹದ ಉಷ್ಣತೆಯನ್ನು ಕಾಪಾಡಬಹುದು. ಅಲ್ಲದೆ ಇದು ಕೆಮ್ಮು ಮತ್ತು ನಗಡಿಗಳಂತಹ ಸಾಮಾನ್ಯ ರೋಗಗಳಿಗೆ ಔಷಧಿಯಾಗಿಯೂ ಕೆಲಸವನ್ನು ನಿರ್ವಹಿಸುತ್ತದೆ. ಶುಂಠಿಯನ್ನು ಕೂಡ ನಾವು ನಿಯಮಿತವಾಗಿ ಬಳಸುವುದರಿಂದ ನಮ್ಮ ದೇಹದ ಉಷ್ಣವನ್ನು ಕಾಪಾಡಿಕೊಳ್ಳಬಹುದು.
ಪರಿಸರ ಎಂದರೇನು?
ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ನಾವು ಪರಿಸರ ಎಂದು ಕರೆಯುತ್ತೇವೆ. ಮನುಷ್ಯನಷ್ಟೇ ಅಲ್ಲದೆ ಭೂಮಿಯ ಮೇಲಿರುವ ಸಣ್ಣ ಕ್ರಿಮಿ ಯಿಂದ ಹಿಡಿದು ಎಲ್ಲ ಸಕಲ ಜೀವರಾಶಿಗಳ ಬದುಕಿಗೆ ಏಕೈಕ ತಾಣ ಎಂದರೆ ಅದು ಪರಿಸರ. ತನ್ನಲ್ಲಿರುವ ಅಘಾದ ಖನಿಜಗಳಿಂದ ಮತ್ತು ತನ್ನಲ್ಲಿರುವ ಅತ್ಯದ್ಭುತ ಸೌಂದರ್ಯದಿಂದ ಅದು ಪ್ರಾಣಿ ಸಂಕುಲವನ್ನು ಲಕ್ಷಾಂತರ ವರ್ಷದಿಂದ ಪೋಷಿಸುತ್ತಾ ಬಂದಿದೆ. ಆದರೆ ಮಹಾತ್ಮ ಗಾಂಧೀಜಿ ಅವರು ಹೇಳುವಂತೆ ಪ್ರಕೃತಿಗೆ ಮನುಷ್ಯನ ಆಸೆಯನ್ನು ಪೂರೈಸುವ ಸಾಮರ್ಥ್ಯವಿದೆ ಆದರೆ ಅವನ ದುರಾಸೆಯನ್ನಲ್ಲ ಎಂಬ ಮಾತಿನಂತೆ ಮನುಷ್ಯ ಇಂದು ಸ್ವಾರ್ಥ ಮನೋಭಾವನೆ ಮತ್ತು ದುರಾಸೆಯಿಂದ ತನಗೆ ಆಸರೆ ಕೊಟ್ಟ ಪ್ರಕೃತಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಿದ್ದಾನೆ. ಹಣ, ಮೋಹದ ಅಮಲಿಗೆ ಬಿದ್ದಿರುವ ಇಂದಿನ ಮನುಷ್ಯನು ತನ್ನ ಹಿತಾಸಕ್ತಿಗಾಗಿ ಪ್ರಕೃತಿಯನ್ನು ಬಲಿಕೊಡುತ್ತಿದ್ದಾನೆ. ದಿನೇ ದಿನೇ ಹೆಚ್ಚುತ್ತಿರುವ ಅವನ ಆಸೆಗಳಿಗೆ ಮಿತಿ ಇಲ್ಲದಾಗಿದೆ. ತನ್ನ ಆಸೆಯನ್ನು ಪೂರೈಸಿಕೊಳ್ಳಲು ಆತ ಎಂದೆಂದಿಗಿಂತಲೂ ಅತಿ ಹೆಚ್ಚು ಪ್ರಕೃತಿಯ ಮೇಲೆ ಶೋಷಣೆಯನ್ನು ಉಂಟು ಮಾಡುತ್ತಿದ್ದಾನೆ. ಹಾಗಂತ ಪ್ರಕೃತಿ ಮೂಕ ಪ್ರೇಕ್ಷಕನಲ್ಲ . ಯಾವಾಗ ಮನುಷ್ಯನ ದುರಾಸೆ ಹೆಚ್ಚಾಗುತ್ತದೆ ಆ ಸಂದರ್ಭದಲ್ಲಿ ಪ್ರಕೃತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಮುಂದಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚಿಗೆ ನಮ್ಮನ್ನು ಬೆಂಬಿಡದೆ ಕಾಡಿದ ಕರೋನ ಮಹಾಮಾರಿ. ಪ್ರಕೃತಿಯ ಸಹಜವಾದ ನಿಯಮ ಏನೆಂದರೆ ಭೂಮಿಯ ಮೇಲೆ ಎಲ್ಲರೂ ಸಮಾನವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಈ ಹಂತದಲ್ಲಿ ಯಾವುದೇ ಜೀವಿಯ ಸಂತತಿಯಲ್ಲಿ ಏರುಪೇರು ಆದರೂ ಅದು ಅದನ್ನು ಸಮತೋಲನ ಮಾಡಲು ಮುಂದಾಗುತ್ತದೆ. ಹೀಗಿರುವಾಗ ಮನುಷ್ಯನ ತನ್ನ ಹಿತಾಸಕ್ತಿಗೆ ಲೋಭಿಯಾಗಿದ್ದು ಆದಾ ತನಗೆ ಬೇಕಾದ ಖನಿಜಗಳನ್ನು ಹೊರ ತೆಗೆಯಲು ಎಂತಹ ಕೆಲಸಕ್ಕಾದರೂ ಹಿಂಜರಿಯುವವನಲ್ಲ. ಹಾಗಾದರೆ ಬನ್ನಿ ಪರಿಸರ ಮಾಲಿನ್ಯಕ್ಕಾಗುವ ಕಾರಣಗಳನ್ನು ಮತ್ತು ಅದರಿಂದ ಮನುಷ್ಯ ಜಾತಿಯ ಮೇಲೆ ಮತ್ತು ಉಳಿದ ಪ್ರಾಣಿ ಕುಲಗಳ ಮೇಲೆ ಉಂಟಾಗುವ ಪರಿಣಾಮಗಳು ಏನೆಂದು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ.
ಪರಿಸರ ಮಾಲಿನ್ಯ ಉಂಟಾಗಲು ಪ್ರಮುಖ ಕಾರಣಗಳು :-
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…