ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೇಂದ್ರದಿಂದ ಬೆಳೆ ಪರಿಹಾರಕ್ಕೆಂದು ಅನುದಾನವಾಗಿ ಬಂದ ಹಣವನ್ನು ರಾಜ್ಯ ಸರ್ಕಾರ ಎಲ್ಲಾ ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ. ಆದರೆ ಇನ್ನೂ ಹಲವು ರೈತರ ಖಾತೆಗೆ ಹಣ ಬಂದಿಲ್ಲ. ಹಾಗಾದರೆ ಹಣ ಯಾಕೆ ಬಂದಿಲ್ಲ, ಅದಕ್ಕೆ ಕಾರಣಗಳೇನು ಎಂಬುದನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!ಇದನ್ನೂ ಓದಿ: ಬೆಳೆ ಪರಿಹಾರ ಹಣ : ಸರ್ವೇ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಹಣ ಬರದೆ ಇರಲು ಕಾರಣಗಳೇನು?
- ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಆಗದೇ ಇರುವುದು
- ನಿಮ್ಮ ಜಮೀನಿನ ಪಹಣಿಗೆ FID ಸಂಖ್ಯೆ ಇಲ್ಲದಿರುವುದು
- NPCI ಹಾಗೂ FID ನಲ್ಲಿ ಬ್ಯಾಂಕ್ ಖಾತೆ ಬೇರೆ ಬೇರೆ ಆಗಿರುವುದು
- ಆಧಾರ ಕಾರ್ಡ ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು ಬೇರೆ ಬೇರೆ ಆಗಿರುವುದು
- ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿರುವುದು, ಬ್ಲಾಕ್ ಆಗಿರುವುದು ಅಥವಾ ಆಧಾರ ಕಾರ್ಡ ಬ್ಯಾಂಕ್ ಖಾತೆಗೆ ಸೀಡ್ ಆಗದೇ ಇರುವುದು.
- ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರದಲ್ಲಿ ಹೆಸರು ಬೇರೆ ಬೇರೆ ಆಗಿರುವುದು.
- ಸರಕಾರದಿಂದ ಹಣ ಹಂತ ಹಂತವಾಗಿ ಜಮೆ ಆಗುತ್ತಿದ್ದು, ತಾಂತ್ರಿಕ ಕಾರಣದಿಂದ ಜಮಾ ಆಗದೇ ಇರಬಹುದು.
ಇದನ್ನೂ ಓದಿ: ಬೆಳೆ ಪರಿಹಾರ ಹಣ : FID ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಹಣ ಜಮಾ ಆಗಬೇಕಾದರೆ ಏನು ಮಾಡಬೇಕು?
- ನಿಮ್ಮ ಬ್ಯಾಂಕ್ ಖಾತೆಗೆ NPCI ಕಡ್ಡಾಯವಾಗಿ ಲಿಂಕ್ ಮಾಡಿಸಿ.
- ನಿಮ್ಮ ಜಮೀನಿನ ಹೆಸರಲ್ಲಿ FID ಸಂಖ್ಯೆ ರಚಿಸಿ
- NPCI ಮತ್ತು FID ನಲ್ಲಿ ಒಂದೇ ಬ್ಯಾಂಕ್ ಖಾತೆಯ ಹೆಸರು ಇರುವಂತೆ ನೋಡಿಕೊಳ್ಳಿ.
- ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಇರುವಂತೆ ನೋಡಿಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದರೆ ಅಥವಾ ಬ್ಲಾಕ್ ಆಗಿದ್ದರೆ, ಅಥವಾ ಆಧಾರ್ ಕಾರ್ಡ್ ಸೀಡ್ ಆಗದೇ ಇದ್ದರೆ ಅದನ್ನು ಸರಿಪಡಿಸಿ.
- ಆಧಾರ ಕಾರ್ಡ ಮತ್ತು ಪಹಣಿ ಪತ್ರದಲ್ಲಿ ಹೆಸರು ಒಂದೇ ಇರುವಂತೆ ನೋಡಿಕೊಳ್ಳಿ.
- ತಾಂತ್ರಿಕ ಕಾರಣದಿಂದ ಹಣ ಜಮಾ ಆಗಿರುವುದಿಲ್ಲ. ಸ್ವಲ್ಪ ಕಾದು ನೋಡಿ. ಅಷ್ಟಕ್ಕೂ ಹಣ ಜಮಾ ಆಗದಿದ್ದರೆ, ಮೇಲಿರುವ ಅಂಶಗಳನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ: ಆಧಾರ್ ನಂಬರ್ ಹಾಕಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯೇ ಎಂಬುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಿ!
ಓದುಗರಲ್ಲಿ ವಿನಂತಿ :
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M