ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಅಧಿಕೃತ ಜಾಲತಾಣವಾದ ಮೀಡಿಯಾ ಚಾಣಕ್ಯಗೆ ಹಾರ್ದಿಕ ಸ್ವಾಗತ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಬರ ಪರಿಹಾರವೆಂದು ಅನುದಾನಗೊಂಡ 3,454 ಕೋಟಿ ರೂಪಾಯಿಯನ್ನು ನೇರವಾಗಿ ಅರ್ಹ 34 ಲಕ್ಷ ರೈತರ ಖಾತೆಗೆ ಜಮಾ ಮಾಡಿದೆ. ಇದೀಗ ಕೃಷಿ ಸಚಿವರಾದ ಕೃಷ್ಣಭೈರೇಗೌಡ ಅವರು ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ . ಏನು ಆ ಸಿಹಿ ಸುದ್ದಿ ಎಂಬುದನ್ನು ತಿಳಿಯಲು ಈ ಆರ್ಟಿಕಲ್ ಅನ್ನು ಕೊನೆಯವರೆಗೂ ತಪ್ಪದೇ ಓದಿರಿ.
Thank you for reading this post, don't forget to subscribe!ಇದನ್ನೂ ಓದಿ: ರೈತರೇ ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲವೇ? ಹಾಗಾದರೆ ತಪ್ಪದೇ ಮೊದಲು ಈ ಕೆಲಸ ಮಾಡಿ… ಹಣ ಬರುತ್ತೆ!
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ, ರಾಜ್ಯದಲ್ಲಿ ಮಳೆಯ ಆರ್ಭಟದಿಂದ ಮತ್ತು ಗುಡುಗು,ಸಿಡಿಲು, ಮಿಂಚುಗಳಿಂದ ಹಾನಿಗೊಳಗಾದ ಸುಮಾರು 16 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ಹೆಚ್ಚುವರಿಯಾಗಿ 3,000 ರೂಪಾಯಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲಾ 34.4 ಲಕ್ಷ ರೈತರ ಖಾತೆಗೂ ಹಣ ಜಮಾ ! ಯಾರಿಗೆ ಎಷ್ಟು ಬಂತು ಹಣ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
” ಇಂತಹ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳು ಮೊದಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಉಂಟಾದರೆ ಈ ಕುಟುಂಬಗಳು ಬಡತನ ರೇಖೆಗಿಂತಲೂ ಕೆಳಗೆ ನೂಕಲ್ಪಡುತ್ತವೆ. ಹಾಗಾಗಿ ಅಂತಹ ಸುಮಾರು 16 ಲಕ್ಷ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ನೇರವಾಗಿ ಬರ ಪರಿಹಾರ ಹಣ ಬಿಟ್ಟು, ಹೆಚ್ಚುವರಿಯಾಗಿ ಪ್ರತಿ ರೈತರ ಖಾತೆಗೆ 3,000 ಹಣ ಜಮಾ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ” ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ 17 ನೇ ಕಂತಿನ ಹಣ ಯಾವಾಗ ಬರುತ್ತೆ? ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
ಇನ್ನು ಕೇಂದ್ರದಿಂದ ಅನುಮೋದನೆಗೊಂಡ ಸುಮಾರು 3,454 ಕೋಟಿ ಬರ ಪರಿಹಾರ ಹಣವನ್ನು ಪ್ರಸ್ತುತ 33 ಲಕ್ಷ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದ್ದು, ತಾಂತ್ರಿಕ ಕಾರಣದಿಂದ ಇನ್ನೂ 1.5 ಲಕ್ಷ ರೈತರ ಖಾತೆಗೆ ಜಮಾ ಆಗಿಲ್ಲ. ಅದನ್ನೂ ಶೀಘ್ರದಲ್ಲೇ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದರು.
ಓದುಗರಲ್ಲಿ ವಿನಂತಿ :
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M