WhatsApp Group                             Join Now            
   
                    Telegram Group                             Join Now            
Spread the love

ಬಿಗ್‌ಬಾಸ್ ಫಿನಾಲೆ ಸಂಚಿಕೆ ಇಂದು ಸಂಜೆಮ 6 ಗಂಟೆಯಿಂದ ಪ್ರಸಾರವಾಗಲಿದ್ದು, ಕಾರ್ಯಕ್ರಮದ ಕೊನೆಗೆ ವಿನ್ನರ್ ಯಾರು ಎಂದು ಘೋಷಿಸಲಾಗುತ್ತದೆ. ಅದಕ್ಕೂ ಮುನ್ನವೇ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯೇ ವಿನ್ನರ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇದೀಗ ವಿಕಿಪಿಡಿಯಾದಲ್ಲಿ ವಿನ್ನರ್ ಯಾರು ಎಂದು ನಮೂದಿಸಲಾಗಿದೆ.

Thank you for reading this post, don't forget to subscribe!

ಬಿಗ್‌ಬಾಸ್ ಫಿನಾಲೆ ಸಂಚಿಕೆ

      
                    WhatsApp Group                             Join Now            
   
                    Telegram Group                             Join Now            

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೂ ಮುನ್ನವೇ ವಿಜೇತರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಧಿಕೃತ ಘೋಷಣೆಗೂ ಮುನ್ನ ವಿಕಿಪಿಡಿಯಾದಲ್ಲಿ ವಿನ್ನರ್ ಎಂದು ಒಬ್ಬರ ಹೆಸರು ತೋರಿಸುತ್ತಿದ್ದು, ಇದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಫಿನಾಲೆ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗೂಗಲ್ ಸರ್ಚ್

ಗೂಗಲ್‌ನಲ್ಲಿ ಏನೇ ಸರ್ಚ್ ಮಾಡಿದ್ರೂ ವಿಕಿಪಿಡಿಯಾ ಒಂದಿಷ್ಟು ವಿವರವಾದ ಮಾಹಿತಿಯನ್ನು ನೀಡುತ್ತದೆ. ಗೂಗಲ್‌ನಲ್ಲಿ Bigg Boss Kannada season 12 ಅಂತ ಸರ್ಚ್ ಮಾಡಿ ವಿಕಿಪಿಡಿಯಾ ಪೇಜ್ ಓಪನ್ ಮಾಡಿದಾಗ, ಶೋನ ಒಂದಿಷ್ಟು ಮಾಹಿತಿಯನ್ನು ಕಾಣಬಹುದು. ವಿಕಿಪಿಡಿಯಾ ಅಧಿಕೃತ ಮಾಹಿತಿ ಹೊರಬೀಳುವ ಮುನ್ನವೇ ವಿನ್ನರ್ ಹೆಸರನ್ನು ನಮೂದಿಸಿದೆ. ವಿಕಿಪಿಡಿಯಾ ಪೇಜ್‌ನ್ನು ಸಾರ್ವಜನಿಕರು ಸಹ ಎಡಿಟ್ ಮಾಡಬಹುದಾಗಿದೆ.

ವಿಕಿಪಿಡಿಯಾ ಹೇಳಿದ್ದೇನು?

ವಿಕಿಪಿಡಿಯಾದಲ್ಲಿರುವ ಮಾಹಿತಿ ಪ್ರಕಾರ, ಸೀಸನ್ 12ರ ವಿನ್ನರ್ ಗಿಲ್ಲಿ ನಟ ಮತ್ತು ಮೊದಲ ರನ್ನರ್ ರಕ್ಷಿತಾ ಶೆಟ್ಟಿ ಎಂದು ದಾಖಲಿಸಲಾಗಿದೆ. ಕೆಲ ಸಮಯದ ಹಿಂದೆಯಷ್ಟೇ ರಕ್ಷಿತಾ ಶೆಟ್ಟಿ ವಿನ್ನರ್ ಎಂದು ತೋರಿಸಲಾಗಿತ್ತು. ಇದೀಗ ಗಿಲ್ಲಿ ಹೆಸರು ಬರುತ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿ, ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್ ಸೀಸನ್ 12ರ ಫಿನಾಲೆ

ಬಿಗ್‌ಬಾಸ್ ಸೀಸನ್ 12ರ ಫಿನಾಲೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟಂಟ್ ರಘು, ಕಾವ್ಯಾ ಶೈವ ಮತ್ತು ಧನುಷ್ ಇದ್ದಾರೆ. ವರದಿಗಳ ಪ್ರಕಾರ ಟಾಪ್‌ ಮೂರರಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಇರ್ತಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಬಿಗ್‌ಬಾಸ್ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಪೊಲೀಸ್ ಭದ್ರತೆ

ಬಿಗ್‌ಬಾಸ್ ಕಾರ್ಯಕ್ರಮ ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇಂದು ಫಿನಾಲೆ ಆಗಿರೋದರಿಂದ ಜಾಲಿವುಡ್ ಸ್ಟುಡಿಯೋ ಮುಂದೆಯೇ ಅಭಿಮಾನಿಗಳು ಬ್ಯಾನರ್ ಹಾಕಲಾರಂಭಿಸಿದ್ದಾರೆ. ಮತ್ತೊಂದೆಡೆ ಜಾಲಿವುಡ್ ಸ್ಟುಡಿಯೋದತ್ತ ಆಗಮಿಸುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಓದುಗರಲ್ಲಿ ವಿನಂತಿ,

      
                    WhatsApp Group                             Join Now            
   
                    Telegram Group                             Join Now            

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *