ಸ್ನೇಹಿತರೇ ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತು ನೀವು ಕೇಳಿರುತ್ತೀರಿ. ಇದರ ಅರ್ಥ ಇಷ್ಟೇ ಯಾರಿಗೆ ಮಾತಿನ ಮೇಲೆ ಹಿಡಿತ ಇರುತ್ತದೋ ಅವರು ಎಂತಹ ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ತಿಳಿಗೊಳಿಸುತ್ತಾರೆ. ಅದೇ ಮಾತಿನ ಮೇಲೆ ಹಿಡಿತ ಇಲ್ಲದ ವ್ಯಕ್ತಿ ಸಣ್ಣ ವಿಷಯವನ್ನೇ ರಾದ್ದಾಂತ ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಹಾಗೆಯೇ ಯಾವ ವ್ಯಕ್ತಿಗೆ ತಮ್ಮ ದಿನ ನಿತ್ಯದ ಆಹಾರ ಕ್ರಮದ ಮೇಲೆ ಹಿಡಿತ ಇರುತ್ತದೋ ಅಂತಹ ವ್ಯಕ್ತಿ ದೀರ್ಘ ಕಾಲದ ವರೆಗೆ ಆರೋಗ್ಯಯುತವಾಗಿ ಬದುಕಬಲ್ಲ ಮತ್ತು ಯಾವುದೇ ರೋಗ ರುಜಿನಗಳು ಬರದಂತೆ ತಡೆಯಬಲ್ಲ. ಹಾಗಾದರೆ ನಾವು ಒಳ್ಳೆಯ ಆಹಾರ ಕ್ರಮ ರೂಡಿಸಿಕೊಳ್ಳುವುದು ಅತಿ ಅವಶ್ಯಕ.
Thank you for reading this post, don't forget to subscribe!ಒಳ್ಳೆಯ ಆಹಾರ ಕ್ರಮ ರೂಢಿಸಿಕೊಳ್ಳಲು ನಮಗೆ ಮೊದಲು ಆಹಾರದಲ್ಲಿರುವ ಪೋಷಕಾಂಶಗಳ ಮಾಹಿತಿ, ಅದರ ಜೀರ್ಣ ಕ್ರಿಯೆ ಸಮಯ ಇವೆ ಮೊದಲಾದ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಆರ್ಟಿಕಲ್ ನಲ್ಲಿ ನಾವು ವಿವಿಧ ಆಹಾರಗಳ ಜೀರ್ಣ ಕ್ರಿಯೆಗೆ ಬೇಕಾಗುವ ಸಮಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
1.ನೀರು – ಜೀರ್ಣ ಕ್ರಿಯೆಗೆ ಬೇಕಾಗುವ ಸಮಯ 10-20 ನಿಮಿಷಗಳು
2.ತರಕಾರಿ ಮತ್ತು ಇತರ ಪಾನೀಯ – 20-40 ನಿಮಿಷಗಳು
3. ಡೈರಿ utpannagalu- 1.5 ರಿಂದ 2 ಗಂಟೆ ಸಮಯ
4.ಬೀಜಗಳು ಮತ್ತು ಡ್ರೈ ಫ್ರೂಟ್ಸ್ -2.5 ರಿಂದ 3 ಗಂಟೆ ಸಮಯ
5. ಚಿಕನ್ – 24 ರಿಂದ 48 ಗಂಟೆ ಸಮಯ
6.ಮೀನು – 12 ರಿಂದ 24 ಗಂಟೆ ಸಮಯ
7.ಧಾನ್ಯಗಳು (ಅಕ್ಕಿ,ಗೋಧಿ..) – 2 ರಿಂದ 3 ಗಂಟೆ ಸಮಯ
ಸ್ನೇಹಿತರೇ,ಈ ಆಹಾರಗಳ ಜೀರ್ಣ ಕ್ರಿಯೆ ಸಮಯ ನೋಡಿಕೊಂಡು ನಿಮ್ಮ ದಿನ ನಿತ್ಯದ ಆಹಾರ ಕ್ರಮವನ್ನು ತಯಾರಿಸಿಕೊಂಡು ಅದನ್ನು ಪಾಲಿಸುತ್ತಾ ಹೋದಲ್ಲಿ ನಿಮ್ಮ ಅರೋಗ್ಯ ಎಂದಿಗೂ ಕೆಡುವುದಿಲ್ಲ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.