ಸ್ನೇಹಿತರೇ ಡಿಸೆಂಬರ್ 1 ರಂದು ತೆರೆಗೆ ಬಂದ ರಣಬೀರ್ ಕಪೂರ್ ನಟನೆಯ ANIMAL ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರವು ಸಾಕಷ್ಟು ಗಳಿಕೆ ಮಾಡಿ ಬಾಲಿವುಡ್ ಅಂಗಳದಲ್ಲಿ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ಹಾಗಾದರೆ ಇದುವರೆಗೆ ಈ ಚಿತ್ರ ಗಳಿಸಿರುವ ಒಟ್ಟು ಹಣವೇಷ್ಟು? ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ನಿಮಗೆ ಗೊತ್ತಿರುವಂತೆ ಈ ವರ್ಷದಲ್ಲಿ ಬಾಲಿವುಡ್ ಅಂಗಳದಲ್ಲಿ ಹಿಟ್ ಆದ ಕೆಲವೇ ಕೆಲವು ಸಿನಿಮಾಗಳಲ್ಲಿ ರಣಬೀರ್ ಕಪೂರ್ ನಟನೆಯ ANIMAL ಸಿನಿಮಾ ಕೂಡಾ ಒಂದಾಗಿದೆ. ಮೂಲತಃ ತಂದೆ ಮಗನ ಸಂಬಂಧದ ವಿಷಯವನ್ನು ಒಳಗೊಂಡಿರುವ ಈ ಸಿನೆಮಾ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರವಾಗಿದೆ. ಆ ಮೂಲಕ ಯಶಸ್ವಿ 2 ನೆ ವಾರಕ್ಕೆ ಕಾಲಿರಿಸಿದೆ. ಹಾಗಾಗಿ ಸಹಜವಾಗಿ ಎಲ್ಲಾ ಕಡೆ ಇದರ ಗಳಿಕೆಯ ವಿಷಯ ಕುರಿತಾಗಿ ಚರ್ಚೆ ನಡೆಯುತ್ತಿದೆ.
ಸಿನಿಮಾ ಬಿಡುಗಡೆಗೊಂಡ ಮೊದಲ ವಾರದಲ್ಲಿಯೇ ಈ ಚಿತ್ರವು ಬರೋಬ್ಬರಿ 312.96 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಆದರೆ ಚಿತ್ರ ಇನ್ನೂ ತೆರೆಯ ಮೇಲೆ ಓಡುತ್ತಿದ್ದು, ನಿಖರವಾದ ಮಾಹಿತಿ ಇನ್ನು ಚಿತ್ರದ ನಿರ್ಮಾಪಕರು ಬಹಿರಂಗ ಪಡಿಸಿಲ್ಲ. ಏಳನೇ ದಿನವಾದ ಬುಧವಾರ ಎಲ್ಲಾ ಚಿತ್ರ ಮಂದಿರಗಳು houseful ಪ್ರದರ್ಶನ ಕಾಣುತ್ತಿದ್ದು, ಬುಧವಾರ ಒಂದೇ ದಿನ 15.13 ಕೋಟಿ ರೂಪಾಯಿ ಗಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಚಿತ್ರವು ಯಶಸ್ಸಿನ ನಾಗಾಲೋಟದಲ್ಲಿದ್ದು,ಗಳಿಕೆ ಇನ್ನು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.