WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಭೂಮಿ ಸೌರಮಂಡಲದ ಅತ್ಯಂತ ಸುಂದರ ಗ್ರಹವಾಗಿದ್ದು ಭೂಮಿಯ ಮೇಲೆ ಸುಮಾರು 195 ದೇಶಗಳು ಇವೆ. ಈ ಎಲ್ಲಾ ದೇಶಗಳಲ್ಲಿ ಹಗಲು ಮತ್ತು ರಾತ್ರಿ ಸಮನಾಗಿ ಬರ್ತಾನೆ ಇರುತ್ತವೆ. ಆಶ್ಚರ್ಯ ಏನೆಂದರೆ ಪ್ರಪಂಚದ ಕೆಲವು ಪ್ರದೇಶಗಳಲ್ಲಿ ರಾತ್ರಿಯೇ ಸಂಭವಿಸುವುದಿಲ್ಲ. ಇಂತಹ ನೈಸರ್ಗಿಕ ವಿಸ್ಮಯಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸೂರ್ಯನು ಆ ಪ್ರದೇಶಗಳ ಜೊತೆಗೆ ಆಟವಾಡುತ್ತಿರುತ್ತಾನೆ. ಪ್ರಪಂಚದ 95% ನಷ್ಟು ದೇಶಗಳಲ್ಲಿ ರಾತ್ರಿ ಮತ್ತು ಹಗಲು ಸಮನಾಗಿ ಹಂಚಿಕೆ ಆಗುತ್ತವೆ. ಇನ್ನುಳಿದ 5% ನಷ್ಟು ದೇಶಗಳಲ್ಲಿ ಕೆಲವು ತಿಂಗಳುಗಳ ಕಾಲ ರಾತ್ರಿ ಅಥವಾ ಹಗಲು ಇರುವುದಿಲ್ಲ. ಹಾಗಾದರೆ ಆ ಪ್ರದೇಶಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ!

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ALASKA (ಅಲಾಸ್ಕಾ) :-

ಇದು ಅಮೆರಿಕದ ಅತಿ ದೊಡ್ಡ ರಾಜ್ಯ. ನಿಜ ಹೇಳಬೇಕು ಅಂದರೆ ಇದು ಅಮೆರಿಕದ ಭೂಭಾಗವಲ್ಲ. ಇದು ಮೊದಲು ರಷ್ಯಾ ದೇಶದ ಒಂದು ಭಾಗವಾಗಿತ್ತು. 1867ರಲ್ಲಿ ಅಮೆರಿಕ ಈ ಭೂ ಪ್ರದೇಶವನ್ನು ಖರೀದಿಸಿತು. ಈ ಪ್ರದೇಶದಲ್ಲಿ ಮೇ 15 ರಿಂದ ಜುಲೈ 15 ರವರೆಗೆ ಬರೀ ಹಗಲು ಮಾತ್ರ ಇರುತ್ತದೆ ರಾತ್ರಿ ಸೂರ್ಯನು ಹನ್ನೆರಡು ಮೂವತ್ತಕ್ಕೆ ಮುಳುಗಿ ಇದೇ ರೀತಿ ಮತ್ತೆ ಐವತ್ತು ನಿಮಿಷಗಳ ನಂತರ ಸೂರ್ಯ ಉದಯಿಸುತ್ತಾನೆ. ಆ ಐವತ್ತು ನಿಮಿಷಗಳು ರಾತ್ರಿ ಆಗಿದ್ದರೂ ಕತ್ತಲೆ ಇರುವುದಿಲ್ಲ.

ಕೆನಡಾ (CANADA)

ಕೆನಡಾ ದೇಶ ಪ್ರಪಂಚದ ಎರಡನೇ ಅತಿ ದೊಡ್ಡ ದೇಶವಾಗಿದ್ದು ಇಲ್ಲಿ ಅತಿ ಹೆಚ್ಚು ಭೂ ಭಾಗ ಮಂಜಿನಿಂದ ಆವರಿಸಿದೆ. ಇಲ್ಲಿಯೂ ಕೂಡ ಹಗಲು ಮತ್ತು ರಾತ್ರಿಗಳು ವಿಚಿತ್ರವಾಗಿರುತ್ತವೆ. ಬೇಸಿಗೆ ಕಾಲದಲ್ಲಿ ಕೆನಡಾದ ಉತ್ತರ ಪಶ್ಚಿಮ ಭಾಗಗಳಲ್ಲಿ 51 ದಿನಗಳ ಕಾಲ ಹಗಲು ಇರುತ್ತದೆ.

ಫಿನ್ಲ್ಯಾಂಡ್(FINLAND)

ಇಲ್ಲಿ ಸುಂದರವಾದ ಜಲಪಾತಗಳು ತುಂಬಾನೇ ಇವೆ ಬೇಸಿಗೆ ಕಾಲದಲ್ಲಿ ಐವತ್ತೊಂದು ದಿನಗಳ ಕಾಲ ಬರೀ ಹಗಲು ಮಾತ್ರ ಇರುತ್ತದೆ ಬೇಸಿಗೆಕಾಲದಲ್ಲಿ ಇದು ಒಂದು ಪ್ರವಾಸಿ ಸ್ಥಾನವಾಗಿ ಬದಲಾಗುತ್ತದೆ ಇಲ್ಲಿ. ರಾತ್ರಿ ಸಮಯದಲ್ಲೂ ಕೂಡ ಬೆಳಕು ಇರುತ್ತದೆ.

ISLAND (ಐಸ್ ಲ್ಯಾಂಡ್)

ಇದು ಯುರೋಪ್ ನ ಉತ್ತರ ಭಾಗದಲ್ಲಿರುವ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಯುರೋಪ್ ನ ಒಂದು ದೇಶವಾಗಿದೆ ಇಲ್ಲಿ ಮೇ 15 ರಿಂದ ಜುಲೈ 15 ರವರೆಗೆ ಬರೀ ಹಗಲು ಮಾತ್ರ ಇರುತ್ತದೆ.

NORWAY (ನಾರ್ವೆ)
ಇದು ಪ್ರಪಂಚದಲ್ಲಿ ಅತಿ ಸುಂದರವಾದ ದೇಶಗಳಲ್ಲಿ ಒಂದು ಎಂದು ಹೇಳಬಹುದು . ಇದನ್ನು country of midnight ಎಂದು ಕರೆಯುತ್ತಾರೆ. ಏಕೆಂದರೆ ಇದು ಅಂಟಾರ್ಕ್ಟಿಕ್ ಸರ್ಕಲ್ ಶ್ರೇಣಿಯಲ್ಲಿ ಬರುತ್ತದೆ ಇಲ್ಲಿ ಹಗಲು ಮತ್ತು ರಾತ್ರಿಗಳು ತುಂಬಾ ವಿಚಿತ್ರವಾಗಿರುತ್ತದೆ. ಈ ದೇಶದಲ್ಲಿ ಮೇ ಇಂದ ಹಿಡಿದು ಜುಲೈವರೆಗೆ ಸುಮಾರು 90 ದಿನಗಳ ಕಾಲ ರಾತ್ರಿಯೇ ಇರುತ್ತದೆ. ಈ 90 ದಿನಗಳ ಕಾಲ ಇಲ್ಲಿ ಸಂಜೆ ಇದ್ದಂತೆ ಇರುತ್ತದೆ ಅಂದರೆ ಹಗಲೂ ಅಲ್ಲ ಈ ಕಡೆ ಸಂಪೂರ್ಣ ರಾತ್ರಿಯೂ ಅಲ್ಲ.

      
                    WhatsApp Group                             Join Now            
   
                    Telegram Group                             Join Now            

SWEDEN (ಸ್ವಿಡೆನ್)
ದೇಶದಲ್ಲಿ ಮೇ ಯಿಂದ ಹಿಡಿದು ಅಗಸ್ಟ್ ವರೆಗೆ ಕೇವಲ ರಾತ್ರಿ ಇರುತ್ತದೆ ಅಂದರೆ ಸುಮಾರು 100 ದಿನಗಳ ಕಾಲ ಸೂರ್ಯ ಕಾಣಿಸುತ್ತಾನೆ. ಪ್ರದೇಶಗಳಲ್ಲಿ ರಾತ್ರಿ ಏಕೆ ಆಗುವುದಿಲ್ಲಾ ಎಂಬ ಪ್ರಶ್ನೆ ಕಾಡ್ತಾನೆ ಇರುತ್ತದೆ. ವಿಜ್ಞಾನದ ಪ್ರಕಾರ ಭೂಮಿಯು ಗೋಲಾಕಾರದಲ್ಲಿದ್ದು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಾ ಇರುತ್ತದೆ. ಭೂಮಿಯ ದೈನಂದಿನ ಚಲನೆ ಅಂದರೆ ಭೂಮಿಯು ತನ್ನ ಸುತ್ತ ಸುತ್ತುವುದರಿಂದ ರಾತ್ರಿ ಮತ್ತು ಹಗಲುಗಳು ಆಗುತ್ತದೆ ಅದರಿಂದ ಸೂರ್ಯಕಿರಣಗಳು ನಿರಂತರವಾಗಿ ಬೀಳುತ್ತಾನೆ ಇರುತ್ತವೆ. ಇದರಿಂದಾಗಿ ಪ್ರಪಂಚದಲ್ಲಿರುವ 95% ನಷ್ಟು ದೇಶದಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿ ಹಂಚಿಕೆಯಾಗಿವೆ ಇನ್ನು 5% ದೇಶಗಳಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿ ಹಂಚಿಕೆ ಆಗಿಲ್ಲ ಏಕೆಂದರೆ ಭೂಮಿಯ ಅಕ್ಷೆ ನೇರವಾಗಿ ಇರದೇ 23.5 ಡಿಗ್ರಿಯಲ್ಲಿ ಬಾಗಿದೆ. ಆದ್ದರಿಂದ ಭೂಮಿಯ ಉತ್ತರ ಧ್ರುವದಲ್ಲಿ ಕಿರಣಗಳು ನೇರವಾಗಿ ನಿರಂತರವಾಗಿ ಬಿಳುತ್ತಾಇರುತ್ತವೆ ಆದ್ದರಿಂದ ಉತ್ತರ ಧ್ರುವದಲ್ಲಿರುವ ಪ್ರದೇಶಗಳು ಹೆಚ್ಚು ಹಗಲನ್ನು ಅನುಭವಿಸುತ್ತದೆ ಈ ರೀತಿ ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವಾಗ ಈ ಅಕ್ಷೆ ವಿರುದ್ಧ ದಿಕ್ಕಿನಲ್ಲಿ ಇದ್ದಾಗ ಅಲ್ಲಿರುವ ಪ್ರದೇಶಗಳು ಹೆಚ್ಚಿನ ರಾತ್ರಿಯನ್ನು ಅನುಭವಿಸುತ್ತವೆ ಪ್ರದೇಶಗಳ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳ್ತಾ ಇರುತ್ತವೆ. ಅದರಿಂದ ಹೆಚ್ಚು ಹಗಲನ್ನು ಅನುಭವಿಸುತ್ತವೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *