Categories: information

ಅಬುಧಾಬಿಯಲ್ಲಿ ಉದ್ಘಾಟನೆಗೊಂಡ ಹಿಂದೂ ದೇವಾಲಯ ಕಟ್ಟಲು ಎಷ್ಟು ಹಣ ಖರ್ಚಾಗಿದೆ ಗೊತ್ತಾ?

ಸ್ನೇಹಿತರೆ ನೂರು ವರ್ಷಗಳ ಪ್ರಯತ್ನದ ಫಲವಾಗಿ ಹಿಂದುಗಳ ಪವಿತ್ರ ಭೂಮಿಯಲ್ಲಿ   ರಾಮ ಮಂದಿರ ಮಂದಿರ ನಿರ್ಮಾಣವಾಯಿತು ಇದು ಹಿಂದುಗಳಿಗೆ ಅತ್ಯಂತ ಖುಷಿ ಕೊಡುವ ವಿಚಾರವಾದರೆ, ಅದಕ್ಕಿಂತ ವಿಶೇಷವೆಂದರೆ ಕಟ್ಟರ್  ಇಸ್ಲಾಂ ಅನ್ನು ಪಾಲಿಸುವ ದೇಶದಲ್ಲಿ ಅಂದರೆ ಅರಬ್ನ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣವಾಗಿದ್ದು ಮತ್ತು ಅದರ ಉದ್ಘಾಟನೆಯನ್ನು ನಮ್ಮ ಪ್ರಧಾನಿ ಅವರೇ ಮಾಡಿದ್ದು ಹಿಂದೂಗಳಿಗೆ ಅತ್ಯಂತ ಸಂತೋಷ ಮತ್ತು ಆಶ್ಚರ್ಯಕರ ವಿಷಯ ಎಂದು ಹೇಳಬಹುದು.

Spread the love

ಸ್ನೇಹಿತರೆ ನೂರು ವರ್ಷಗಳ ಪ್ರಯತ್ನದ ಫಲವಾಗಿ ಹಿಂದುಗಳ ಪವಿತ್ರ ಭೂಮಿಯಲ್ಲಿ ರಾಮ ಮಂದಿರ ಮಂದಿರ ನಿರ್ಮಾಣವಾಯಿತು ಇದು ಹಿಂದುಗಳಿಗೆ ಅತ್ಯಂತ ಖುಷಿ ಕೊಡುವ ವಿಚಾರವಾದರೆ, ಅದಕ್ಕಿಂತ ವಿಶೇಷವೆಂದರೆ ಕಟ್ಟರ್ ಇಸ್ಲಾಂ ಅನ್ನು ಪಾಲಿಸುವ ದೇಶದಲ್ಲಿ ಅಂದರೆ ಅರಬ್ನ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣವಾಗಿದ್ದು ಮತ್ತು ಅದರ ಉದ್ಘಾಟನೆಯನ್ನು ನಮ್ಮ ಪ್ರಧಾನಿ ಅವರೇ ಮಾಡಿದ್ದು ಹಿಂದೂಗಳಿಗೆ ಅತ್ಯಂತ ಸಂತೋಷ ಮತ್ತು ಆಶ್ಚರ್ಯಕರ ವಿಷಯ ಎಂದು ಹೇಳಬಹುದು.

Thank you for reading this post, don't forget to subscribe!

ಈ ಮಂದಿರವನ್ನು ನಿರ್ಮಾಣ ಮಾಡುತ್ತಿರುವುದು BAPS. ಅಂದರೆ ಭೂಚಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ. ಮತ್ತು ಈ ಮಂದಿರದ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಸುಮಾರು 27 ಎಕರೆ ಜಮೀನನ್ನು ಕೊಟ್ಟಿದೆ. ಅಬುದಾಬಿಯಲ್ಲಿ ತಲೆಯೆತ್ತಿ ನಿಂತಿರುವ ಈ ಹಿಂದೂ ದೇವಾಲಯ ಸುಮಾರು 108 ಅಡಿ ಎತ್ತರ 262 ಅಡಿ ಉದ್ದ ಮತ್ತು 180 ಅಡಿ ಅಗಲ ಹೊಂದಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಬೃಹತ್ ಅಧ್ಯಯನ ಕೇಂದ್ರವನ್ನು ಒಳಗೊಂಡಿದೆ ಸನಾತನ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಒಳಗೊಂಡ ಬೃಹತ್ ಗ್ರಂಥಾಲಯವನ್ನು ಒಳಗೊಂಡಿದ್ದು ಕ್ರೀಡಾಂಗಣ, ಫುಡ್ ಕೋರ್ಟ್ ಬುಕ್ಸ್ ಮತ್ತು ಗಿಫ್ಟ್ಸ್ ಸೆಂಟರ್ ಹೀಗೆ ಸಾಕಷ್ಟು ವ್ಯವಸ್ಥೆಗಳನ್ನು ಒಳಗೊಂಡಿದೆ. ಧರ್ಮದ ಜೊತೆ ಜೊತೆಗೆ ಒಂದು ಅತ್ಯುತ್ತಮ ಪ್ರವಾಸಿ ಕೇಂದ್ರ ಎನಿಸಿಕೊಳ್ಳಲಿದೆ. ಎಲ್ಲ ಧರ್ಮೀಯರಿಗೆ ಪ್ರವೇಶದ ಅವಕಾಶ ನೀಡಲಾಗಿದ್ದು ಇಲ್ಲಿ ಹಿಂದೂ ಧರ್ಮದ ಪರಿಚಯ ಮಾಡಿಕೊಡಲಾಗುತ್ತದೆ.

ಅಂದ ಹಾಗೆ ಸ್ವಾಮಿ ನಾರಾಯಣ ಸಂಸ್ಥೆಯು 1997ರಲ್ಲಿ ಈ ದೇವಾಲಯವನ್ನು ಕಟ್ಟಲು ಮುಂದಾಯಿತು, 2015ರಲ್ಲಿ ಎಮಿರೇಟ್ಸ್ ಅರಬ್ ಸರ್ಕಾರ ಅಬುಧಬಿಯಲ್ಲಿ ದೇವಾಲಯ ನಿರ್ಮಿಸಲು ಅನುಮತಿ ಕೊಟ್ಟಿತು. 2018ರಲ್ಲಿ ನರೇಂದ್ರ ಮೋದಿಯವರು ಅರಬ್ ಕಂಟ್ರಿಗೆ ಭೇಟಿ ನೀಡಿದಾಗ ಅಂದಿನ ದೊರೆ ಶೇಕ್ ಮಹಮ್ಮದ್ ಬಿನ್ ಹಿಜಾಯತ್ ಅಲ್ ನಹ್ಯನ್ ಮತ್ತು ನರೇಂದ್ರ ಮೋದಿ ಅವರನ್ನು ಮಹಾಂತ ಮಹಾರಾಜರು ಭೇಟಿ ಮಾಡ್ತಾರೆ. ಅದೇ 2018 ಫೆಬ್ರವರಿ 11ರಂದು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುತ್ತದೆ ಕೊರೊನಾದ ನಡುವೆ ಕೂಡ ಮಂದಿರ ನಿರ್ಮಾಣದ ಕಾರ್ಯ ನಡೆಯಿತು. ಹೇಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆಯೋ ಅದೇ ರೀತಿಯಲ್ಲಿ ಯಾವುದೇ ಕಬ್ಬಿಣದ ತುಂಡನ್ನು ಬಳಸದೆ ಸಿಮೆಂಟ್ ನ ಪ್ರಮಾಣ ಕಡಿಮೆ ಮಾಡಿ ಹಾರುವ ಬೂದಿಯನ್ನು ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ. ಮಂದಿರ ನಿರ್ಮಾಣಕ್ಕೆ ಭಾರತದಿಂದ ಅಮೃತ ಶಿಲೆಗಳನ್ನು ಸುಮಾರು 700 ಕಂಟೇನರಗಳಲ್ಲಿ ಸಮುದ್ರ ಮಾರ್ಗದ ಮೂಲಕ ಕಳುಹಿಸಲಾಗಿದೆ. ಇನ್ನು ಈ ಮಂದಿರವನ್ನು ನಿರ್ಮಿಸಲು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ. ಕೊನೆಗೂ ನಿರ್ಮಾಣವಾದ ಈ ಸ್ವಾಮಿನಾರಾಯಣ ಮಂದಿರವನ್ನು ಫೆಬ್ರವರಿ 14ರಂದು ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

56 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

56 years ago