WhatsApp Group                             Join Now            
   
                    Telegram Group                             Join Now            

PMkisan amount will be released next week ಪಿಎಂ ಕಿಸಾನ್ 24ನೇ ಕಂತಿನ ಹಣ ಅಕ್ಟೋಬರ್ 30 ರಂದು ಬಿಡುಗಡೆ

By

#Farmer News Kannada, #Kannada agriculture news, #Karnataka Government Schemes, #pm kisan, #PM Kisan 2000 Rupees, #PM Kisan 24th Installment, #PM Kisan 24th Installment Date, #PM Kisan 24th Kist, #PM Kisan Aadhaar Link, #PM Kisan Bank Account, #pm kisan beneficiary status, #pm kisan ekyc, #PM Kisan Kannada News, #PM Kisan Karnataka, #pm kisan latest news, #pm kisan list, #PM Kisan Money Release Date, #PM Kisan Next Installment, #PM Kisan October 30, #PM Kisan Online Status, #PM Kisan payment status, #PM Kisan Registration, #pm kisan samman nidhi, #PM Kisan update 2026, #pm kisan yojana, #ಕರ್ನಾಟಕ ರೈತರು, #ಕರ್ನಾಟಕ ಸರ್ಕಾರಿ ಯೋಜನೆ, #ಪಿಎಂ ಕಿಸಾನ್, #ಪಿಎಂ ಕಿಸಾನ್ 24ನೇ ಕಂತು, #ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ, #ಪಿಎಂ ಕಿಸಾನ್ ಯೋಜನೆ, #ಪಿಎಂ ಕಿಸಾನ್ ಸ್ಟೇಟಸ್, #ಪಿಎಂ ಕಿಸಾನ್ ಹಣ, #ಪಿಎಂ ಕಿಸಾನ್ ಹಣ ಬಿಡುಗಡೆ, #ಪಿಎಂ ಕಿಸಾನ್ ಹೊಸ ಸುದ್ದಿ, #ಪಿಎಂ ಕಿಸಾನ್ ₹2000, #ರೈತರ ಖಾತೆಗೆ ಹಣ, #ರೈತರ ಯೋಜನೆಗಳು, #ರೈತರ ಸಹಾಯಧನ, #ರೈತರ ಹೊಸ ಸುದ್ದಿ, #ರೈತರಿಗೆ 2000 ರೂಪಾಯಿ, #ರೈತರಿಗೆ ಕೇಂದ್ರ ಸರ್ಕಾರದ ಯೋಜನೆ, #ರೈತರಿಗೆ ಗುಡ್ ನ್ಯೂಸ್,#ಸರ್ಕಾರಿ ಯೋಜನೆಗಳು
Spread the love

ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 30 ರಂದು ಬಿಡುಗಡೆ ಮಾಡಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಡಿಜಿಟಲ್ ಮೂಲಕ 9.44 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗೆಗಳಿಗೆ ನೇರವಾಗಿ ತಲಾ 2 ಸಾವಿರ ರೂಪಾಯಿ ಜಮೆಯಾಗಲಿದೆ. ಹೌದು, ಪಿಎಂ ಕಿಸಾನ್ ಜಮೆಗೆ ಕಾಯುತ್ತಿರುವ ರೈತರಿಗೆ ದೀಪಾವಳಿ ಹಬ್ಬಕ್ಕೆ ಮೊದಲು ಅರ್ಹ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ.

Thank you for reading this post, don't forget to subscribe!

ರೈತರ ಖಾತೆಗೆ 2 ಸಾವಿರ ರೂಪಾಯಿ ಜಮೆ

      
                    WhatsApp Group                             Join Now            
   
                    Telegram Group                             Join Now            


ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ವಾರ್ಷಿಕ 6 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ತಲಾ 2 ಸಾವಿರ ರೂಪಾಯಿಯಿಂತೆ ಮೂರು ಸಮಾನ ಕಂತುಗಳಲ್ಲಿ ರೈತರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ. ಇದೀಗ ಬಿಡುಗಡೆಯಾಗುತ್ತಿರುವುದು ಯೋಜನೆಯ 24ನೇ ಕಂತಾಗಿದ್ದು, ಪ್ರತಿಯೊಬ್ಬ ಅರ್ಹ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ.


ಅಕ್ಟೋಬರ್ 30 ರಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವು ರೈತರ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಅತ್ಯಂತ ಸಹಕಾರಿಯಾಗಲಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಖರೀಗಿಗೆ ಆರ್ಥಿಕ ನೆರವು ಸಿಗಲಿದೆ. ಈಗಾಗಲೇ ಮುಂಗಾರು ಹಂಗಾಮು ಕೈಕೊಟ್ಟಿದ್ದರಿಂದ ನಿರಾಶೆಯಲ್ಲಿದ್ದ ರೈತರಿಗೆ ಇದೊಂದು ಸಮಸ್ಯೆಯಿಂದ ಬಳತ್ತಿರುವ ರೈತರಿಗೆ ಅಲ್ಪ ಸಮಾಧಾನ ಸಿಕ್ಕಂತಾಗುತ್ತದೆ.




ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತರು ಇಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಂದಿನ ಕಂತು ಅಂದರೆ 24ನೇ ಕಂತಿನ ಹಣ ಜಮೆಯಾಗಬೇಕಾದರೆ ಬಯೋಮೆಟ್ರಿಕ್ ಅಥವಾ ಫೇಸ್ ಅಥಂಟಿಕೇಶನ್ ಮೂಲಕ ಇಕೆವೈಸಿ ಮಾಡಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಒಂದೇ ಕುಟುಂಬದವರು ಪ್ರತ್ಯೇಕ ಆಸ್ತಿ ಹೊಂದಿರುವುದು, ಪತಿ ಪತ್ನಿ, ಪ್ರಕರಣ, ಆದಾಯ ತೆರಿಗೆ ಪಾವತಿ ಒಬ್ಬರ ಹೆಸರಿನಲ್ಲೇ ಹಲವು ಆರ್.ಟಿ.ಸಿ ಜಮೀನುಗಳು ಇರುವುದು. ಪೌತಿ ಖಾತೆ ಹೀಗೆ ಹಲವು ಕಾರಣಗಳಿಂದಾಗಿ ರೈತರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇದರೊಂದಿಗೆ ಕೆಲವು ತಾಂತ್ರಿಕ ಕಾರಣಗಳೂ ಸೇರಿಕೊಂಡಿವೆ. ಪಿಎಂ ಕಿಸಾನ್ ಯೋಜನೆಯ ಪರಿಷ್ಕೃತ ಮಾರ್ಗಸೂಚಿ ಅನ್ವಯ ಪ್ರತಿ ವರ್ಷ ಆರ್ಥಿಕ ನೆರವು ಪಡೆಯಲು ಇಕೆವೈಸಿ ಕಡ್ಡಾಯವಾಗಿದೆ.

PMkisan amount will be released next week ಪಿಎಂ ಕಿಸಾನ್ ಹಣ ಜಮೆಗೆ ಇಕೆವೈಸಿ ಕಡ್ಡಾಯ

ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಮೂಲಕ ಇಕೆವೈಸಿ ಮಾಡಬೇಕು. ರೈತರು ಸಮೀಪದ ಸಾಮಾನ್ಯ ನಾಗರಿಕ ಸೇವಾ ಕೇಂದ್ರಗಳು, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಇ ಕೆವೈಸಿ ಮಾಡಿಸಬಹುದು.

PMkisan amount will be released next week ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ನೀವು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಊರಿನಲ್ಲಿ ಯಾರು ಯಾರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿದ್ದಾರೋ ಅವರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭಾಗುತ್ತದೆ ಎಂಬ ಆಧಾರ್ ಮೇಲೆ ಮುಂದಿನ ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಬಹುದು

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

      
                    WhatsApp Group                             Join Now            
   
                    Telegram Group                             Join Now            

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *