ಯಾರೋ ಒಂದು ಮಾತನ್ನ ಸರಿಯಾಗಿಯೇ ಹೇಳಿದ್ದಾರೆ. “ಕನಸು ಕಾಣುವುದು ತುಂಬಾ ಸುಲಭ ಆದರೆ ಆ ಕನಸನ್ನು ನನಸಾಗಿಸುವುದು ಇನ್ನೂ ಸುಲಭ” ಅಂತ. ಯಾಕೆಂದರೆ ನೀವು ಕೇವಲ ಎಂತಹ ಕನಸುಗಳನ್ನು ಕಾಣುತ್ತೀರಿ ಎಂದರೆ ನಿಮ್ಮ ಬಳಿ ಆ ಕನಸನ್ನು ನನಸು ಮಾಡುವ ಸಾಮರ್ಥ್ಯ ಇದ್ದಾಗ ಮಾತ್ರ. ಕೆಲವರು ಹೇಳ್ತಾರಲ್ಲ ದೊಡ್ಡ ದೊಡ್ಡ ಕನಸುಗಳನ್ನು ಕಾಣುವವರು ಏನು ಸಾಧಿಸಲು ಆಗುವುದಿಲ್ಲ ಎಂದು. ಆದರೆ ಯಾರು ತಾವು ಕಂಡ ಕನಸುಗಳನ್ನ ನನಸಾಗಿಸಲು ತಮ್ಮ ತಾಕತ್ತು ಎಲ್ಲವನ್ನ ಹಾಕಿ ಪ್ರಯತ್ನಿಸುತ್ತಾರೋ ಅಂತವರಿಗೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಸ್ನೇಹಿತರೆ ಕನಸು ಎಲ್ಲರೂ ಕಾಣುತ್ತಾರೆ ಆದರೆ ಆ ಕನಸನ್ನ ನನಸಾಗಿಸಲು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ಆಗುವವರು ತುಂಬಾ ಕಡಿಮೆ. ಆದರೆ ಸತ್ಯ ಏನು ಗೊತ್ತಾ ಸ್ನೇಹಿತರೆ? ನೀವು ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಶಕ್ತರಾಗಿದ್ದರೆ ಅವುಗಳನ್ನು ಸಾಧಿಸಲು ನೀವು ಶಕ್ತರಾಗಿದ್ದೀರಿ ಎಂಬುದು.
ಹೀಗೊಂದು ದಿನ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಅವರ ಆಟವನ್ನ ಕಂಡ ಈ ಬಾಲಕ ತಾನು ಮುಂದೆ ಒಬ್ಬ ಕ್ರಿಕೆಟರ್ ಆಗಬೇಕು ಎಂದು ಬಯಸುತ್ತಾನೆ. ನಿಧಾನವಾಗಿ ಕ್ರಿಕೆಟ್ ಅವನ ಫ್ಯಾಷನ್ ಆಗಿ ಬದಲಾಗುತ್ತದೆ. ಆದರೆ ಅವನ ಈ ಕನಸು ನನಸಾಗುವುದು ಅಷ್ಟು ಸುಲಭ ಆಗಿರಲಿಲ್ಲ. ಏಕೆಂದರೆ ಆತನ ಜೀವನದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಬೆಟ್ಟದಂತ ಕಷ್ಟಗಳು ಇದ್ದವು ಮತ್ತು ಆತ ಸಾಗುವ ದಾರಿ ಅಷ್ಟು ಸುಲಭ ಆಗಿರಲಿಲ್ಲ. ಆದರೂ ಆ ಬಾಲಕ ಎದೆಗುಂದದೆ ಅವೆಲ್ಲವುಗಳನ್ನ ಮೆಟ್ಟಿನಿಂತು ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಹೀರೋ ಆಗಿ ಮಿಂಚುತ್ತಾನೆ. ಆ ಬಾಲಕ ಬೇರಾರು ಅಲ್ಲ, ಆತನ ಹೆಸರು ಯಶಸ್ವಿ ಜೈಸ್ವಾಲ್. ಪ್ರಸ್ತುತ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರನಾಗಿ ಧೂಳೆಬ್ಬಿಸಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುಂಚೂಣಿಯಲ್ಲಿ ಇರುವ ಆಟಗಾರ.
ಸ್ನೇಹಿತರೆ ಯಶಸ್ವಿ ಜೈ ಸವಾಲ್ ಕಥೆ ಕೇಳಿದ ಮೇಲೆ ನಿಮ್ಮಲ್ಲೊಂದು ಸ್ಪೂರ್ತಿ ಕಿಡಿ ಹೇಳದಿದ್ದರೆ ಈ ಆರ್ಟಿಕಲ್ಗೆ ಒಂದು ಡಿಸ್ ಲೈಕ್ ಕೊಟ್ಟುಬಿಡಿ. ಅದಕ್ಕೂ ಮುಂಚೆ ನೀವು ಈ ಆರ್ಟಿಕಲ್ ನ್ನ ಪೂರ್ತಿಯಾಗಿ ಓದಿ ಎಂದಷ್ಟೇ ಕೇಳಿಕೊಳ್ಳುತ್ತೇನೆ.
ಸ್ನೇಹಿತರೆ ಯಶಸ್ವಿಯು ಉತ್ತರಪ್ರದೇಶದ ಭಧೋಹಿ ಜಿಲ್ಲೆಯ ಸೂರ್ಯವಾಣ ಎಂಬ ಗ್ರಾಮದಲ್ಲಿ ಆರು ಮಕ್ಕಳಲ್ಲಿ ನಾಲ್ಕನೆಯವನಾಗಿ ಜನಿಸಿದನು. ತಂದೆ ಭೂಪೇಂದ್ರ ಕುಮಾರ್ ಜೈಸ್ವಲ್ ಸಣ್ಣ ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದರೆ ತಾಯಿ ಕಾಂಚನ ಜೈಸ್ವಾಲ್ ಅವರು ಗ್ರಹಿಣಿ ಆಗಿದ್ದರು. ಕ್ರಿಕೆಟ ಅನ್ನೇ ತನ್ನ ಜೀವನವನ್ನಾಗಿಸಿ ಕೊಳ್ಳಬೇಕೆಂದು ಹೊರಟ ಈ ಬಾಲಕನಿಗೆ ಮನೆಯ ಆರ್ಥಿಕ ಪರಿಸ್ಥಿತಿ ಸಹಕರಿಸಲಿಲ್ಲ. ಆದರೆ ಆತನ ಎದೆಯಲ್ಲಿ ತಾನೊಬ್ಬ ಕ್ರಿಕೆಟ್ಟಿಗನಾಗಲೇಬೇಕೆಂಬ ಕಿಡಿ ಒಂದು ಆಗಲೇ ಹೊತ್ತಿ ಜ್ವಾಲಾಮುಖಿಯ ರೂಪ ತಾಳಿತ್ತು. ಆತ ತನ್ನ ಸ್ನೇಹಿತರೊಂದಿಗೆ ಆಟ ಆಡುತ್ತಾ ಕ್ರಿಕೆಟ್ ಅನ್ನು ಮೈಗೂಡಿಸಿಕೊಂಡ ಮೇಲೆ ತಾನಿನ್ನೂ ಹಳ್ಳಿಯಲ್ಲಿ ಇದ್ದರೆ ಕ್ರಿಕೆಟಿಗನಾಗಲು ಸಾಧ್ಯವಿಲ್ಲ ಎಂದು ಮನಗಂಡು ಕೇವಲ ಒಂಬತ್ತನೇ ವಯಸ್ಸಿನಲ್ಲಿಯೇ ತನ್ನ ಕುಟುಂಬವನ್ನ ತೊರೆದು ಮುಂಬೈನ ದಾದರ್ ಅಜಾದ್ ಮೈದಾನದಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡನು. ತಾನಿದ್ದ ಸ್ಥಳದಿಂದ ಅಜಾದ ಮೈದಾನವು ತುಂಬಾ ದೂರ ಇದ್ದುದ್ದರಿಂದ ಆತನಿಗೆ ಹೋಗಲು ಬರಲು ತುಂಬಾ ಸಮಸ್ಯೆ ಆಗುತ್ತಿತ್ತು. ಅಜಾದ್ ಮೈದಾನದ ಹತ್ತಿರ ಪಾನಿಪುರಿ ಮಾರುತಿದ್ದ ಆತನ ಚಿಕ್ಕಪ್ಪನು ಅವನಿಗೆ ಕಿರಾಣಿ ಅಂಗಡಿ ಒಂದರಲ್ಲಿ ಕೆಲಸ ಕೊಡಿಸಿದನು. ಕೇವಲ ಹತ್ತು ವರ್ಷದ ಆ ಬಾಲಕ ಮೈದಾನದಲ್ಲಿ ಪ್ರಾಕ್ಟೀಸ್ ಮಾಡಿ ಬಂದು ಅಂಗಡಿಯಲ್ಲಿ ಕೆಲಸ ಮಾಡುವ ಹೊತ್ತಿಗೆ ಬಳಲಿ ಬೆಂಡಾಗಿರುತ್ತಿದ್ದನು. ಅವನಿಗೆ ಕೆಲಸ ಮಾಡಲು ಬರುವುದಿಲ್ಲ ಎಂದು ಹೇಳಿ ಅಂಗಡಿಯ ಮಾಲೀಕರು ಅವನನ್ನ ಕೆಲಸದಿಂದ ತೆಗೆದು ಹಾಕಿದರು. ಆತ ಮುಂದೆ ತನ್ನ ಚಿಕ್ಕಪ್ಪನೊಂದಿಗೆ ಪಾನಿಪುರಿ ಮಾರುತ ತನ್ನ ಕ್ರಿಕೆಟ್ ಅಭ್ಯಾಸವನ್ನು ಮುಂದುವರೆಸಿದನು. ದಿನವಿಡೀ ಮೈದಾನದಲ್ಲಿ ಬೆವರ್ ಇಳಿಯುವಂತೆ ಅಭ್ಯಾಸ ಮಾಡಿ ಬಂದು ಸಾಯಂಕಾಲದ ಹೊತ್ತಿಗೆ ಅವರ ಚಿಕ್ಕಪ್ಪನೊಂದಿಗೆ ಪಾನಿಪುರಿ ಮಾರುತ್ತಿದ್ದ. ಇದಕ್ಕೆ ಬದಲಾಗಿ ಅವನಿಗೆ ಅವರ ಚಿಕ್ಕಪ್ಪನ ಮನೆಯಲ್ಲಿ ಇರಲು ಜಾಗ ಮತ್ತು ಊಟ ಸಿಗುತ್ತಿತ್ತು. ಹೀಗೆ ಒಂದು ವರ್ಷದ ತನಕ ಆತನ ಅಭ್ಯಾಸ ನಿರಾತಂಕವಾಗಿ ಸಾಗಿತ್ತು. ಆದರೆ ಅದೊಂದು ದಿನ ಆತನ ಚಿಕ್ಕಪ್ಪ ಅವನನ್ನ ಮನೆಯಿಂದ ಹೊರ ಹಾಕಿದನು. ಅಲ್ಲಿಂದ ಶುರುವಾಗಿತ್ತು ಯಶಸ್ವಿಯ ಜೀವನದ ನಿಜವಾದ ಅಗ್ನಿ ಪರೀಕ್ಷೆ.
ಏಕೆಂದರೆ ಮುಂಬೈ ನಂತಹ ಮಹಾನಗರದಲ್ಲಿ ಇಳಿದುಕೊಳ್ಳಲು ಜಾಗ ಬಿಡಿ ಕೇವಲ ಕುಡಿಯಲು ನೀರು ಫ್ರೀಯಾಗಿ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕೇವಲ ಹತ್ತು ವರ್ಷ ವಯಸ್ಸಿನ ಈ ಬಾಲಕನನ್ನು ಅವರ ಚಿಕ್ಕಪ್ಪ ಮನೆಯಿಂದ ಹೊರ ಹಾಕಿದ್ದನು. ಆದರೆ ಆ ಬಾಲಕ ಸೋಲೊಪ್ಪಿಕೊಳ್ಳಲಿಲ್ಲ ಆತ ಅವತ್ತೆ ಶಪಥ ಮಾಡಿದ್ದನ್ನು ಎಷ್ಟೇ ಕಷ್ಟ ಎದುರಾದರು ತಾನು ಒಬ್ಬ ಕ್ರಿಕೆಟಿಗನು ಆಗಲೇಬೇಕು ಎಂದು. ಆತ ಆ ರಾತ್ರಿ ಫುಟ್ಪಾತ್ ನಲ್ಲಿ ಮಲಗಿ ಮಾರನೆಯ ದಿನ ಮೈದಾನಕ್ಕೆ ಪ್ರಾಕ್ಟೀಸ್ ಗೆ ಎಂದು ಬಂದಾಗ ನಡೆದ ಘಟನೆಯನ್ನೆಲ್ಲ ತನ್ನ ಕೋಚ್ ಬಳಿ ಹೇಳಿದ. ಕಾಕತಾಳಿಯ ಎಂಬಂತೆ ಅವತ್ತು ಅಜಾದ್ ಮೈದಾನದಲ್ಲಿ ಪ್ರಾಕ್ಟೀಸ್ ಮ್ಯಾಚ್ ಒಂದು ನಡೆಯಲಿತ್ತು. ಈ ಪಂದ್ಯದಲ್ಲಿ ಯಶಸ್ವಿಯು ಒಳ್ಳೆಯ ಪ್ರದರ್ಶನ ನೀಡಿದರೆ ಆತನಿಗೆ ಇಳಿದುಕೊಳ್ಳಲು ಮೈದಾನದ ಹತ್ತಿರ ಟೆಂಟ್ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ ಎಂದು ಹೇಳಿ ಅವನಿಗೆ ಆ ತಂಡದಲ್ಲಿ ಅವಕಾಶ ಕೊಟ್ಟರು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಯಶಸ್ವಿಯು ಆ ಪಂದ್ಯದ ಹೀರೋ ಆಗಿ ಹೊರಹೊಮ್ಮಿದ ಹೀಗಾಗಿ ಅವನಿಗೆ ಮೈದಾನದ ಸಮೀಪದಲ್ಲಿದ್ದ ಟೆಂಟ್ ನಲ್ಲಿ ಇಳಿದುಕೊಳ್ಳಲು ಅವಕಾಶ ಸಿಕ್ಕಿತ್ತು. ಆದರೆ ಅವನ ಕಷ್ಟ ಇಲ್ಲಿಗೆ ಮುಗಿಯಲಿಲ್ಲ ಏಕೆಂದರೆ ಇರಲಿ ಸಿಕ್ಕಿತ್ತು ಆದರೆ ಒಂದು ಹೊತ್ತಿನ ಊಟಕ್ಕೂ ಅವನ ಬಳಿ ಹಣ ಇರಲಿಲ್ಲ. ಆತ ಇಳಿದುಕೊಂಡಿದ್ದ ಟೆಂಟ್ ಅದೆಷ್ಟು ದುಸ್ಥಿತಿಯದ್ದು ಆಗಿತ್ತು ಎಂದರೆ ಅದರಲ್ಲಿ ಶೌಚಾಲಯ ವ್ಯವಸ್ಥೆ ಬಿಡಿ, ಒಂದು ಬಲ್ಬ್ ಕೂಡ ಇರಲಿಲ್ಲ ಮಳೆಗಾಲದ ದಿನಗಳಲ್ಲಿ ನೀರೆಲ್ಲ ಒಳಗೆ ನುಗ್ಗಿ ಬಿಡುತ್ತಿತ್ತು. ಟೆಂಟ್ ನಲ್ಲಿ ಆತ ನೆಲದ ಮೇಲೆ ಮಲಗುತ್ತಿದ್ದ ಕಾರಣ ಮಳೆಗಾಲದಲ್ಲಿ ರಾತ್ರಿ ಇಡಿ ಎಚ್ಚರದಿಂದ ಕಾಲ ಕಳೆಯುತ್ತಿದ್ದ. ಏಕೆಂದರೆ ಆತ ಇರುತ್ತಿದ್ದ ಟೆಂಟನ್ನ ಸುತ್ತಮುತ್ತ ಹುಳ ಹುಪ್ಪಟ್ಟೆಗಳ ಆತಂಕ ಹೆಚ್ಚಿತ್ತು. ಹೊಟ್ಟೆಪಾಡಿಗಾಗಿ ಅವನು ಪಾನಿಪುರಿ ಮಾರಲು ಶುರು ಮಾಡಿದ, ಬೇರೊಂದು ತಂಡದ ಪರವಾಗಿ ಆಡಲು ಶುರು ಮಾಡಿದ. ಇದರಿಂದ ಅವನಿಗೆ ಒಂದು ಹೊತ್ತಿನ ಊಟ ಸಿಗುತ್ತಿತ್ತು ಮತ್ತು ದಿನಕ್ಕೆ 250 ಸಂಬಳವೂ ಸಿಗುತ್ತಿತ್ತು. ಹೀಗೆ ಅವನ ಜೀವನವು ಮೂರು ವರ್ಷಗಳ ತನಕ ಸಾಗಿತ್ತು. ಸ್ನೇಹಿತರೆ ನಿಮಗೆ ನೆನಪಿರಲಿ, ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸುವ ಸಂದರ್ಭದಲ್ಲಿ ಯಶಸ್ವಿಗೆ ಇದ್ದ ವಯಸ್ಸು ಕೇವಲ 10 ರಿಂದ 13 ವರ್ಷ. ಇಂತಹ ಸಂದರ್ಭಗಳಲ್ಲಿ ಎಂತಹ ಗಟ್ಟಿಗನು ಇದ್ದರೂ ಎದೆಗುಂದ ಬೇಕಾಗುತ್ತದೆ. ಆದರೆ ಯಶಸ್ವಿಯು ಕಿಂಚಿತ್ತು ಹಿಂಜರಿಯಲಿಲ್ಲ. ಏಕೆಂದರೆ ಕ್ರಿಕೆಟ್ ಅವನಿಗೆ ಈಗ ಕೇವಲ ಆಟವಾಗಿ ಇರದೇ ಅವನ ಜೀವನವೇ ಆಗಿಬಿಟ್ಟಿತ್ತು.
ಸ್ನೇಹಿತರೆ ಹೇಳ್ತಾರಲ್ಲ ಅದೃಷ್ಟವು ಸಾಧಿಸಿಯೇ ತೀರುತ್ತೇನೆ ಎನ್ನುವ ಛಲವಂತರಿಗೆ ಮಾತ್ರ ಸಾಥ್ ನೀಡುತ್ತದೆಯಂತೆ. ಯಶಸ್ವಿಯ ಜೀವನದಲ್ಲಿ ಪವಾಡ ಎಂಬಂತೆ ಆ ದಿನ ಒದಗಿ ಬಂದಿತ್ತು. ಆ ದಿನ ಅವನ ಇಡೀ ಜೀವನದ ದಿಕ್ಕನ್ನೇ ಬದಲಿಸುತ್ತದೆ ಎಂದು ಸ್ವತಹ ಯಶಸ್ವಿಯು ಕೂಡ ಅಂದುಕೊಂಡಿರಲಿಲ್ಲ. ಅಂದು ಅಜಾದ್ ಮೈದಾನದಲ್ಲಿ ಯಶಸ್ವಿಯು ಎಂದಿನಂತೆ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಆಡುತ್ತಾ ತನ್ನ ಮನಮೋಹಕ ಹೊಡೆತಗಳಿಂದ ಎದುರಾಳಿ ಬೌಲರ್ ಗಳನ್ನ ಹಿಗ್ಗ ಮುಗ್ಗ ಥಳಿಸುತ್ತಿದ್ದನು. ಅದೇ ದಿನ ಜ್ವಾಲಾ ಸಿಂಗ್ ಎಂಬ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನನ್ನು ಭೇಟಿ ಮಾಡಲು ಅಜಾದ್ ಮೈದಾನಗೆ ಬಂದಿದ್ದರು. ಅಚಾನಕ್ಕಾಗಿ ಜ್ವಾಲಾ ಸಿಂಗ್ ಅವರ ಗಮನವು ಯಶಸ್ವಿಯ ಆಟದ ಮೇಲೆ ಬೀಳುತ್ತದೆ. ಜೈಸ್ವಾಲ್ ಆಟ ನೋಡಿ ಅವರು ಬೆಕ್ಕಸ ಬೆರಗಾಗುತ್ತಾರೆ. ಆ ಪಂದ್ಯ ಮುಗಿಯುವವರೆಗೂ ಅವರ ಗಮನವೆಲ್ಲ ಯಶಸ್ವಿಯ ಮೇಲೆಯೇ ಇರುತ್ತದೆ. ಪಂದ್ಯ ಮುಗಿದ ಮೇಲೆ ಜ್ವಾಲಾಸಿಂಗರು ಯಶಸ್ವಿಯನ್ನು ಭೇಟಿಯಾಗಿ ಅವನ ಕಥೆಯನ್ನೆಲ್ಲ ಕೇಳಿ ಭಾವುಕರು ಆಗುತ್ತಾರೆ. ಏಕೆಂದರೆ ಸ್ವತಹ ಜ್ವಾಲಾ ಸಿಂಗ್ ಅವರು ಕೂಡ ಕ್ರಿಕೆಟಿಗನಾಗಬೇಕೆಂದು ಉತ್ತರ ಪ್ರದೇಶದಿಂದ ಮುಂಬೈ ಗೆ ಬಂದಿದ್ದರು ಆದರೆ ಅವರು ಕ್ರಿಕೆಟಿಗರು ಆಗಲು ಸಾಧ್ಯವಾಗಲಿಲ್ಲ. ಆದರೆ ಅವರು ಬಡ ಮಕ್ಕಳಿಗಾಗಿ ಕ್ರಿಕೆಟ್ ಅಕಾಡೆಮಿ ಒಂದನ್ನ ಶುರು ಮಾಡಿದ್ದರು. ತನ್ನಂತೆಯೇ ಬಡತನ ಹಿನ್ನೆಲೆಯಿಂದ ಬಂದಿದ್ದ ಯಶಸ್ವಿಗೆ ಅವರು ತಮ್ಮ ಅಕಾಡೆಮಿಯಲ್ಲಿಯೇ ಇರಲು ವಸತಿ ಮತ್ತು ಅವನಿಗೆ ಕ್ರಿಕೆಟ್ ಕಲಿಸುವ ಹೊಣೆಯನ್ನು ಹೊತ್ತುಕೊಂಡು ಅವನನ್ನು ತಮ್ಮ ಅಕಾಡೆಮಿಗೆ ಕರೆದುಕೊಂಡು ಹೋದರು. Mumbai Cricket Club ಎಂಬ ಹೆಸರಿನ ಜ್ವಾಲಾಸಿಂಗ್ ಅವರ ಅಕಾಡೆಮಿಗೆ ಹೋದ ನಂತರ ಯಶಸ್ವಿಯ ಜೀವನವೇ ಬದಲಾಗಿ ಬಿಟ್ಟಿತು. ಏಕೆಂದರೆ ಅಲ್ಲಿ ಯಶಸ್ವಿಗೆ ಹೊತ್ತು ಹೊತ್ತಿಗೆ ಸರಿಯಾದ ಊಟ ಸಿಗುತ್ತಿತ್ತು. ಅಲ್ಲದೆ ಜ್ವಾಲಾ ಸಿಂಗ್ ಅವರ ಅದ್ಭುತ ಮಾರ್ಗದರ್ಶನದಲ್ಲಿ ಅವನ ಆಟ ಮತ್ತಷ್ಟು ಪ್ರೌಢತ್ವವನ್ನು ಪಡೆದುಕೊಂಡಿತು. ಮುಂದೆ ಯಶಸ್ವಿಯ ಜ್ವಾಲಾ ಸಿಂಗರ ಕ್ರಿಕೆಟ್ ಕ್ಲಬ್ ಪರವಾಗಿ ಆಡಿ ಅತಿ ಹೆಚ್ಚು ರನ್ ಗಳಿಸಿ ಸೆಲೆಕ್ಟರ್ಗಳ ಗಮನವನ್ನು ಸೆಳೆದನು. ಇದರಿಂದ ಅವನಿಗೆ ಬೇರೆ ಬೇರೆ ಕ್ಲಬ್ ಗಳ ಪರವಾಗಿ ಆಡಲು ಅವಕಾಶಗಳು ಒದಗಿ ಬಂದವು. ಕ್ರಿಕೆಟ್ ಅನ್ನೇ ತನ್ನ ಜೀವನವನ್ನಾಗಿಸಿಕೊಂಡ ಯಶಸ್ವಿಗೆ ಶಾಲೆಗೆ ಹೋಗಲು ಆಗಿರಲಿಲ್ಲ. ಆದರೆ ಈಗ ಅವನಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿತ್ತು. ಹಾಗಾಗಿ ಅವನು ದಿನಪೂರ್ತಿ ಕ್ರಿಕೆಟ್ ಅಭ್ಯಾಸ ಮಾಡಿ ಬಂದು ಸಾಯಂಕಾಲ ಟ್ಯೂಷನ್ ಗೆ ಹೋಗಲು ಶುರು ಮಾಡಿದ. ಸ್ನೇಹಿತರೆ ವಿಚಿತ್ರ ಏನು ಗೊತ್ತಾ? ಇನ್ನುವರೆಗೂ ಯಶಸ್ವಿ ಹತ್ರ ಒಂದೇ ಒಂದು ಡಿಗ್ರಿ ಇಲ್ಲ. ಏಕೆಂದರೆ ಅವನು ಓದಿಗಿಂತ ಹೆಚ್ಚು ಕ್ರಿಕೆಟಿಗೆ ತನ್ನ ಹೆಚ್ಚಿನ ಸಮಯವನ್ನು ನೀಡಿದ್ದನು. ಹೀಗಾಗಿ ಆತ ದೇಶಿ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾನೆ.
ಯಶಸ್ವಿಯು ಕೇವಲ 14ನೇ ವಯಸ್ಸಿನಲ್ಲಿಯೇ 2015 ರಲ್ಲಿ ನಡೆದ ಲೈಮ್ ಲೈಟ್ ಪಂದ್ಯ ಒಂದರಲ್ಲಿ 319 ರನ್ನ ಬಾರಿಸುವುದರ ಜೊತೆಗೆ 99 ರನ್ನು ನೀಡಿ 13 ವಿಕೆಟ್ಟು ಉರುಳಿಸಿ ವಿಶ್ವ ದಾಖಲೆ ಮಾಡಿದನು. ಈ ಪ್ರದರ್ಶನದಿಂದಾಗಿ ಅವನನ್ನು ಭಾರತದ ಅಂಡರ್ 16 ತಂಡಕ್ಕೆ ಆಯ್ಕೆ ಮಾಡಲಾಯಿತು. ಮುಂದೆ ಒಂದರ ನಂತರ ಒಂದರಂತೆ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಯಶಸ್ವಿಯನ್ನು 2018ರಲ್ಲಿ ಭಾರತದ ಅಂಡರ್ 19 ತಂಡಕ್ಕೆ ಆಯ್ಕೆ ಮಾಡಲಾಯಿತು. ಅದೇ ವರ್ಷ ನಡೆದ ಏಷ್ಯಾ ಕಪ್ ನಲ್ಲಿ 318 ರನ್ ಬಾರಿಸುವ ಮೂಲಕ ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ. ಅಷ್ಟೇ ಅಲ್ಲದೆ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ.
ಸ್ನೇಹಿತರೆ ಇದಷ್ಟೇ ಅಲ್ಲದೆ ಯಶಸ್ವಿಯು 2019ರ ಅಂಡರ್ 19 ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ಸನ್ ಇಸ್ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದನು. ಮುಂದೆ ಆತ ಆಡಿದ ಪಂದ್ಯಗಳೆಲ್ಲ ದಾಖಲೆಗಳಾಗಲು ಶುರುವಾದವು. ವಿಜಯ ಹಜಾರೆ ಟ್ರೋಪಿಯಲ್ಲಿ ಜಾರ್ಖಂಡ ತಂಡದ ವಿರುದ್ಧ ಕೇವಲ 154 ಎಸೆತಗಳಲ್ಲಿ 23ರ ಗಳಿಸುವುದರ ಮೂಲಕ ದ್ವಿ ಶತಕ ಸಾಧಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದನು.
ಮುಂದೆ 2019ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಈತನಿಗೆ 2.4 ಕೋಟಿ ರೂಪಾಯಿ ಕೊಟ್ಟು ತನ್ನ ತಂಡದಲ್ಲಿ ಸೇರಿಸಿಕೊಂಡಿತು.ಪಾದಾರ್ಪಣೆ ಮಾಡಿದ ಮೊದಲ ಐಪಿಎಲ್ ಸೀಸನ್ ನಲ್ಲಿ ರನ್ ಗಳಿಸಲು ಸ್ವಲ್ಪ ಪರದಾಡಿದರು ನಂತರದ ಸೀಸನ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದನು. ಇನ್ನು ಈ ವರ್ಷದ ಅಂದ್ರೆ 2023ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಶತಕ ಸಿಡಿಸುವ ಮೂಲಕ ಐಪಿಎಲ್ ನಲ್ಲಿ ಶತಕ ಸಿಡಿಸಿದ ನಾಲ್ಕನೇ ಅತಿ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದನು. ಅದಷ್ಟೇ ಅಲ್ಲದೆ ಐಪಿಎಲ್ ನ ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವುದರ ಮೂಲಕ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾನೆ. ಸದ್ಯ ಈತನ ಆಟವನ್ನ ಗಮನಿಸಿದ ಅನೇಕ ಕ್ರಿಕೆಟ್ ತಜ್ಞರು ಈತ ಭವಿಷ್ಯದ ಭಾರತದ ಸ್ಟಾರ್ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸ್ನೇಹಿತರೆ ಕೊನೆಯದಾಗಿ ಈ ಆರ್ಟಿಕಲ್ ನ ಸಾರಾಂಶ ಇಷ್ಟೇ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ನೀವು ನಿಮ್ಮ ಛಲ ಬಿಡದೆ ಪ್ರಯತ್ನವನ್ನು ಮಾಡಿದರೆ ಯಶಸ್ವಿನಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ನಮ್ಮ ದೇಶದಲ್ಲಿ ಯಶಸ್ವಿ ಜೈಸ್ವಾಲ್ ನಂತಹ ಅನೇಕ ಪ್ರತಿಭಾವಂತ ಆಟಗಾರರು ಇದ್ದಾರೆ. ಅವರಿಗೆ ಸೂಕ್ತವಾದ ವೇದಿಕೆ, ಮಾರ್ಗದರ್ಶನ ಮತ್ತು ಅವಕಾಶಗಳ ಕೊರತೆ ಇದೆ. ಅಂತಹ ಪ್ರತಿಭಾವಂತರಿಗೆ ಈ ಆರ್ಟಿಕಲ್ ಅನ್ನು ಶೇರ್ ಮಾಡಿ. ಯಾರಿಗೆ ಗೊತ್ತು ಈ ಆರ್ಟಿಕಲ್ ಓದಿದ ಮೇಲೆ ಅವರಲ್ಲೂ ಸಾಧಿಸಬೇಕೆಂಬ ಕಿಚ್ಚೊಂದು ಹೊತ್ತಿ ಅವರ ಸಾಧನೆಗೆ ಸ್ಫೂರ್ತಿ ಆಗಬಹುದು.