ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ ಹಿಂದುಗಳ ಪವಿತ್ರ ಸ್ಥಳ ಎಂದೆ ಕರೆಯಲ್ಪಡುವ 12 ಜ್ಯೋತಿರ್ಲಿಂಗಗಳು ಯಾವವು ಮತ್ತು ಅವು ಎಲ್ಲಿವೆ ಎಂಬುದನ್ನ ತಿಳಿದುಕೊಳ್ಳೋಣ.
ಸ್ನೇಹಿತರೆ ಭಾರತವು ಪ್ರಾಚೀನ ಕಾಲದಿಂದಲೂ ಕಲೆ, ಸಂಗೀತ, ಶಿಲ್ಪ ಕಲೆ, ವಾಸ್ತು ಶಿಲ್ಪ, ಸಂಸ್ಕೃತಿಗೆ ಹೆಸರಾದಂತಹ ದೇಶ. ಹಲವು ಸಾಮ್ರಾಜ್ಯಗಳು ಈ ದೇಶವನ್ನು ಆಳಿ ಇಲ್ಲಿನ ಸಂಸ್ಕೃತಿಕ ಮೌಲ್ಯವನ್ನು ಹೆಚ್ಚಿಸಿವೆ. ಅದರಲ್ಲೂ ಹಲವು ಹಿಂದೂ ಸಾಮ್ರಾಜ್ಯಗಳು ಹಿಂದುಗಳ ಪಾಲಿಗೆ ಪವಿತ್ರ ಎನಿಸುವಂತಹ ಹತ್ತು ಹಲವು ಅದ್ಭುತ ದೇವಾಲಯಗಳನ್ನು ನಿರ್ಮಿಸಿವೆ. ಹೀಗೆ ಹಿಂದುಗಳ ಪಾಲಿಗೆ ಪವಿತ್ರ ಎನಿಸುವಂತಹ ದೇವಾಲಯಗಳಲ್ಲಿ 12 ಜ್ಯೋತಿರ್ಲಿಂಗಗಳು ಮಹತ್ವದ್ದಾಗಿವೆ. ಹಾಗಾದರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ ಹಿಂದುಗಳ ಪವಿತ್ರ ಸ್ಥಳ ಎಂದೆ ಕರೆಯಲ್ಪಡುವ 12 ಜ್ಯೋತಿರ್ಲಿಂಗಗಳು ಯಾವವು ಮತ್ತು ಅವು ಎಲ್ಲಿವೆ ಎಂಬುದನ್ನ ತಿಳಿದುಕೊಳ್ಳೋಣ.
Thank you for reading this post, don't forget to subscribe!1. ಸೋಮನಾಥ ದೇವಾಲಯ – ಇದು 12 ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಜ್ಯೋತಿರ್ಲಿಂಗ ಎಂದು ಹೆಸರುವಾಸಿಯಾಗಿದೆ. ಪ್ರಸ್ತುತ ಇದು ಗುಜರಾತಿನ ಗಿರ್ ಎಂಬ ಸ್ಥಳದಲ್ಲಿದೆ. ಪ್ರತಿನಿತ್ಯ ಇದು ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಭಕ್ತರಿಗೆ ತೆರೆದಿರುತ್ತದೆ.
2. ನಾಗೇಶ್ವರ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಇದು ಒಂದು ಪ್ರಸಿದ್ಧವಾದ ದೇವಾಲಯವಾಗಿದೆ. ಎಲ್ಲ ರೀತಿಯ ವಿಷದಿಂದ ರಕ್ಷಣೆಗೆ ಈ ದೇವಾಲಯ ಹೆಸರುವಾಸಿಯಾಗಿದೆ. ದೇವಾಲಯ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ಭಕ್ತರಿಗೆ ತೆರೆದಿರುತ್ತದೆ.
3.ಭೀಮಶಂಕರ ದೇವಾಲಯ- ಇದು ಕೂಡ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಪ್ರಸ್ತುತ ಮಹಾರಾಷ್ಟ್ರದಲ್ಲಿದೆ. ಇದನ್ನು ಕುಂಭಕರ್ಣನ ಮಗ ಭೀಮ ಸ್ಥಾಪಿಸಿದ ಎಂಬ ನಂಬಿಕೆಗಳಿವೆ. ಇದೆ ವಲಯವು ಬೆಳಿಗ್ಗೆ 4 ರಿಂದ ರಾತ್ರಿ 9 ರವರೆಗೆ ಭಕ್ತರಿಗೆ ತೆರೆದಿರುತ್ತದೆ.
4. ತ್ರಯಂಬಕೇಶ್ವರ ದೇವಾಲಯ – ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಮಹಾರಾಷ್ಟ್ರ ರಾಜ್ಯದಲ್ಲಿದೆ. ಈ ದೇವಾಲಯವು ಬ್ರಹ್ಮ ವಿಷ್ಣು ಮಹೇಶ್ವರರ ವಾಸ ಸ್ಥಳ ಎಂದು ನಂಬಲಾಗಿದೆ. ಈ ದೇವಾಲಯವು ಬೆಳಗ್ಗೆ 5:30 ರಿಂದ ರಾತ್ರಿ 9ರವರೆಗೆ ಭಕ್ತರಿಗೆ ತೆರೆದಿರುತ್ತದೆ.
5.ಗೃಷ್ನೇಶ್ವರ ದೇವಾಲಯ – ಅಜಂತ ಎಲ್ಲೋರ ಗುಹೆಗಳ ಸಮೀಪದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದನ್ನು ಅಲ್ಯಾಬಾಯಿ ಹೋಳ್ಕರ್ ಅವರು ಸ್ಥಾಪಿಸಿದ್ದಾರೆ. ಈ ದೇವಾಲಯವು ಬೆಳಗ್ಗೆ 5:30 ರಿಂದ ರಾತ್ರಿ 9ರವರೆಗೆ ಭಕ್ತರಿಗೆ ತೆರೆದಿರುತ್ತದೆ.
6. ವೈದ್ಯನಾಥ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಇದು ಅತ್ಯಂತ ಪ್ರಸಿದ್ಧವಾದ ಜ್ಯೋತಿರ್ಲಿಂಗವಾಗಿದೆ. ರಾವಣನು ಶಿವನಿಂದ ಪಡೆದ ಲಿಂಗವನ್ನು ಇಲ್ಲಿ ಸ್ಥಾಪಿಸಿದನೆಂದು ನಂಬಿಕೆಗಳಿವೆ. ಇದು ಪ್ರಸ್ತುತ ಜಾರ್ಖಂಡಿನಲ್ಲಿದೆ. ಇದೆ ವಲಯವು ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಭಕ್ತರಿಗೆ ತೆರೆದಿರುತ್ತದೆ.
7. ಮಹಾಕಾಳೇಶ್ವರ ದೇವಾಲಯ- ಇದು ಕೂಡ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ಜ್ಯೋತಿರ್ಲಿಂಗವಾಗಿದೆ. ಇದನ್ನು ಕೇವಲ ಐದು ವರ್ಷದ ಬಾಲಕನಾದ ಶ್ರೀಕರ ಎಂಬುವನು ಉಜ್ಜೈನಿಯ ರಾಜನಾದ ಚಂದ್ರಸೇನನ ಭಕ್ತಿಯಿಂದ ಪ್ರೇರಣೆ ಪಡೆದು ಸ್ಥಾಪಿಸಿದನೆಂಬ ನಂಬಿಕೆಗಳಿವೆ. ಪ್ರಸ್ತುತ ಈ ದೇವಾಲಯವು ಮಧ್ಯಪ್ರದೇಶದ ಉಜ್ಜಯಿನಿ ಅಲ್ಲಿದೆ. ಈ ದೇವಾಲಯ ಬೆಳಗ್ಗೆ 4 ರಿಂದ ರಾತ್ರಿ 11 ಗಂಟೆವರೆಗೆ ಭಕ್ತರಿಗೆ ತೆರೆದಿರುತ್ತದೆ.
8. ಓಂಕಾರೇಶ್ವರ ದೇವಾಲಯ- ಇದು ಕೂಡ ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗವಾಗಿದ್ದು ಪ್ರಸ್ತುತ ಮಧ್ಯಪ್ರದೇಶದ ಖಂಡವಾನಲ್ಲಿದೆ. ದೇವತೆಗಳಿಗೂ ಮತ್ತು ರಾಕ್ಷಸರಿಗೂ ಜಗಳವಾದಾಗ ಶಿವನು ಓಂಕಾರೇಶ್ವರ ರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾದನು ಎಂಬ ನಂಬಿಕೆಗಳಿವೆ. ಈ ದೇವಾಲಯವು ಬೆಳಿಗ್ಗೆ 5 ರಿಂದ ರಾತ್ರಿ 8.30 ರವರೆಗೆ ಭಕ್ತರಿಗೆ ತೆರೆದಿರುತ್ತದೆ.
9. ಕಾಶಿ ವಿಶ್ವನಾಥ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಅತಿ ಹೆಚ್ಚು ಪ್ರಸಿದ್ಧವಾಗಿರುವ ಈ ದೇವಾಲಯವು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಈ ದೇವಾಲಯವನ್ನು ಕೂಡ ಅಹಲ್ಯಬಾಯಿ ಹೋಳ್ಕರ್ ಅವರು ಸ್ಥಾಪಿಸಿದ್ದಾರೆ. ಈ ದೇವಾಲಯ ಬೆಳಗ್ಗೆ 3 ರಿಂದ ರಾತ್ರಿ 11 ಗಂಟೆವರೆಗೆ ಭಕ್ತರಿಗೆ ತೆರೆದಿರುತ್ತದೆ.
10. ಕೇದಾರನಾಥ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಮತ್ತೊಂದು ಪ್ರಸಿದ್ಧವಾದ ಜ್ಯೋತಿರ್ಲಿಂಗವೆಂದರೆ ಅದು ಕೇದಾರನಾಥ. ಪ್ರಸ್ತುತ ಇದು ಉತ್ತರಾಖಂಡ ರಾಜ್ಯದಲ್ಲಿದೆ. ಇದೇ ದೇವಾಲಯದ ಹಿಂದೆ ಆದಿ ಶಂಕರಾಚಾರ್ಯರ ಸಮಾಧಿ ಇದೆ. ದೇವಾಲಯವು ಬೆಳಗಿನ ನಾಲ್ಕರಿಂದ ರಾತ್ರಿ ಒಂಬತ್ತು ಗಂಟೆವರೆಗೆ ಭಕ್ತರಿಗೆ ತೆರೆದಿರುತ್ತದೆ.
11. ರಾಮೇಶ್ವರಂ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಇದೊಂದು ಕೂಡ ಪ್ರಸಿದ್ಧಿ ಹೊಂದಿದಂತಹ ಜ್ಯೋತಿರ್ಲಿಂಗವಾಗಿದೆ. ಪ್ರಸ್ತುತ ಇದು ತಮಿಳುನಾಡಿನ ರಾಮೇಶ್ವರಂ ದ್ವೀಪದಲ್ಲಿದೆ. ರಾವಣನ ವಿರುದ್ಧ ಜಯಗಳಿಸಿದ ನಂತರ ರಾಮನು ಇಲ್ಲಿ ಬಂದು ಶಿವನನ್ನು ಪೂಜಿಸಿದನು ಎಂಬ ನಂಬಿಕೆ ಇದೆ. ಈ ದೇವಾಲಯವು ಬೆಳಗ್ಗೆ 5 ರಿಂದ ರಾತ್ರಿ 9:00 ವರೆಗೆ ಭಕ್ತರಿಗೆ ತೆರೆದಿರುತ್ತದೆ.
12. ಮಲ್ಲಿಕಾರ್ಜುನ ದೇವಾಲಯ- 12 ಜ್ಯೋತಿರ್ಲಿಂಗಗಳಲ್ಲಿ ಕೊನೆಯ ಜ್ಯೋತಿರ್ಲಿಂಗ ಆಗಿದ್ದು ಪ್ರಸ್ತುತ ಆಂಧ್ರಪ್ರದೇಶದ ಶ್ರೀಶೈಲಂ ನಲ್ಲಿದೆ. ದಕ್ಷಿಣ ಭಾರತದ ಮಟ್ಟಿಗೆ ಅತ್ಯಂತ ಪ್ರಸಿದ್ಧವಾಗಿರುವ ಜ್ಯೋತಿರ್ಲಿಂಗ ಇದಾಗಿದೆ. ಈ ದೇವಾಲಯ ಬೆಳಗ್ಗೆ 4:30 ರಿಂದ ರಾತ್ರಿ 10 ಗಂಟೆವರೆಗೆ ಭಕ್ತರಿಗೆ ತೆರೆದಿರುತ್ತದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…