ದಿಲ್ಲಿಯ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ಜಗತ್ತಿನ ನಂಬರ್ ಒನ್ ಕ್ರಿಕೆಟರ್ ಆಗಿ ಹೊರಹೊಮ್ಮುತ್ತಾನೆ. ಯಾವ ಕ್ರಿಕೆಟ್ ಕಂಡರೆ ಇಡೀ ಜಗತ್ತೇ ಹುಚ್ಚೆದ್ದು ಕುಣಿಯುತ್ತೋ ಅಂತಹ ಕ್ರಿಕೆಟ್ ನಲ್ಲಿ ಕಿಂಗ್ ಆಗಿ ಮೆರೆಯುತ್ತಾನೆ. ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರೇ ಆಗಿಬಿಡುತ್ತಾನೆ. ಇಂದು ಆತನ ಹೆಸರಲ್ಲಿ 70ಕ್ಕು ಅಧಿಕ ಶತಕಗಳಿವೆ, ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳಿವೆ. ಆತನ ನೆಟ್ವರ್ತೆ ಕೋಟಿಗಳಲ್ಲಿದೆ ಸಾಲು ಸಾಲು ಸೋಲೇದುರಾದಾಗ WHAT DO YOU THINK ನಿಮಗೇನೇನಿಸಿತ್ತು, ಇನ್ನು ವಾಪಸ್ ಬರುವುದಿಲ್ಲ ಎಂದೆನಿಸಿತಲ್ಲವೇ? ಪ್ರತಿಯೊಬ್ಬರ ಜೀವನದಲ್ಲಿ ಏರಿಳಿತ ಇರುತ್ತವೆ, ಪ್ರತಿಯೊಬ್ಬರ ಜೀವನದಲ್ಲಿ ಪ್ಲಸ್ ಮೈನಸ್ ಇರುತ್ತವೆ. ಯಾವ ವ್ಯಕ್ತಿಯ ಅಂತಹ ಪರಿಸ್ಥಿತಿಯಲ್ಲಿ ಅವಡುಗಚ್ಚಿ ನಿಲ್ಲುತ್ತಾನೋ,ಅವನೇ ಮುಂದೊಂದು ದಿನ ಜಗತ್ತನ್ನೇ ಆಳುತ್ತಾನೆ ಯಾಕೆಂದರೆ ಜಗತ್ತು ಶರಣಾಗುತ್ತದೆ, ಜಗತ್ತಿನ ಜನ ಶರಣಾಗುತ್ತಾರೆ. ಕೇವಲ ಜಗತ್ತನ್ನು ಆಳುವವರು ಬೇಕಾಗಿದ್ದಾರೆ ಅಷ್ಟೇ. ಕೆಟ್ಟ ಪರಿಸ್ಥಿತಿಗಳು ಪ್ರತಿಯೊಬ್ಬರ ಜೀವನದಲ್ಲಿ ಬರುತ್ತವೆ ಆದರೆ ಬದಲಾಯಿಸಬಲ್ಲ ಛಲದಂಕಮಲ್ಲ ಗಟ್ಟಿಗನು ಅಂತ ಪರಿಸ್ಥಿತಿಗಳನ್ನೇ ಬದಲಾಯಿಸಿಬಿಡುತ್ತಾನೆ. ಯಾಕಂದರೆ ಈತ ಅದೇ ಹುಡುಗ ತನ್ನ ತಂದೆಯ ಸಾವಿನ ಸುದ್ದಿ ಕೇಳಿದರು ತನ್ನ ತಂಡದ ಗೆಲುವಿಗಾಗಿ ಹೊರಡುತ್ತಾನೆ. ಕ್ರಿಕೆಟ್ ಕಂಡರೆ ಆತನಿಗಿರುವ ಈ ನಿಷ್ಠೆಯೇ ಇಂದು ಆತನನ್ನು ಕ್ರಿಕೆಟ್ ಲೋಕದ ದಂತಕತೆಯನ್ನಾಗಿಸಿದೆ.
Thank you for reading this post, don't forget to subscribe!ಅವನ ಫಿಟ್ನೆಸ್ ಕುರಿತು ಅನುಮಾನಗಳು ಕೇಳಿ ಬಂದಾಗ, ಆತ ಇಷ್ಟು ಶ್ರಮ ಪಡುತ್ತಾನೆ, ಇಷ್ಟು ಶ್ರಮ ಪಡುತ್ತಾನೆ, ಅವನೇ ಭಾರತದ ಫಿಟ್ನೆಸ್ ಐಕಾನ್ ಆಗಿ ಹೊರಹೊಮ್ಮುತ್ತಾನೆ. ಆತನ ಜಾಗದಲ್ಲಿ ಬೇರೆ ಯಾರಾದರೂ ಆಗಿದ್ದರೆ ಜನರ ಕುಹಕ ಮಾತುಗಳಿಗೆ ಹುಚ್ಚರಾಗಿ ಬಿಡುತ್ತಿದ್ದರು. ಆದರೆ ಈತ ತನ್ನ ಪರಿಶ್ರಮದಿಂದಲೇ ತನ್ನ ಶತ್ರುಗಳನ್ನು ಹುಚ್ಚರನ್ನಾಗಿಸಿದ.
ಸ್ನೇಹಿತರೆ, ಅದು ಕ್ರಿಕೆಟೇ ಆಗಲಿ ಜೀವನವೇ ಆಗಲಿ ಯಾವಾಗಲೂ ಒಂದು ಮಾತನ್ನು ನೆನಪಿಡಿ, ಎಂದಿಗೂ ನೀವು ನಿಮ್ಮ ಶತ್ರುಗಳಿಗೆ ಪ್ರತಿಕ್ರಿಯಸಬೇಡಿ. ಏಕೆಂದರೆ sometimes
Silence is better than unnecessary drama.
If you want to be a winner
Then you want to hustle like winner.
If you want to be a great winner then respect your hater.
ಅಂದ್ರೆ ನೀವು ಒಬ್ಬ ಸಾಧಕರಾಗಬೇಕಾಗಿದ್ದರೆ ಸಾಧಕರಂತೆ ಶ್ರಮ ಪಡಿ. ಅದೇ ನೀವು ಒಬ್ಬ ಶ್ರೇಷ್ಠ ಸಾಧಕರಾಗಬೇಕೆಂದಿದ್ದರೆ ನಿಮ್ಮ ಶತ್ರುಗಳನ್ನು ಗೌರವಿಸಿ. ಏಕೆಂದರೆ ಅವರು ನಿಮಗೆ ನಿಮ್ಮ ವೀಕ್ನೆಸ್ ಗಳನ್ನು ತೋರಿಸುತ್ತಾರೆ. ನೀವು ಮತ್ತಷ್ಟು ಬಲಿಷ್ಠರಾಗಲು ಅವಕಾಶಗಳನ್ನು ಮಾಡಿಕೊಡುತ್ತಾರೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ಹಂತದಲ್ಲಿ ಅಂತಹ ಸಂದರ್ಭ ಬಂದೇ ಬರುತ್ತದೆ, ಆತ ಅಂದುಕೊಂಡಿದ್ದೆಲ್ಲವೂ ಆಗಲಾರದಂತಹ ಎಲ್ಲಾ ಪರಿಸ್ಥಿತಿಗಳು ಅವನ ವಿರುದ್ಧವಾಗಿ ಬಿಡುತ್ತವೆ. ಆದರೆ ಅಂತಹ ಸಂದರ್ಭದಲ್ಲಿ ವ್ಯಕ್ತಿಯು ತಾಳ್ಮೆಯಿಂದ ಇರುವುದನ್ನು ಕಲಿಯಬೇಕು. ತನ್ನ ಮೇಲೆ ತಾನು ವಿಶ್ವಾಸ ಇಡಬೇಕು. ತನ್ನ ಕೆಲಸದ ಮೇಲೆ ವಿಶ್ವಾಸ ಇಡಬೇಕು. ಏಕೆಂದರೆ ವಿಶ್ವಾಸವೆನ್ನುವುದು ಮರಭೂಮಿಯಲ್ಲೂ ಮಳೆ ತರುವಂತ ಆಸೀಮ ಶಕ್ತಿಯಾಗಿದೆ.
ವಿರಾಟ್ ಮಾಡಿದ್ದೆ ಅದನ್ನ, ಇಡೀ ಜಗತ್ತೇ ಅವನ ಕುರಿತು criticise ಮಾಡುತ್ತಿತ್ತು. ಆದರೆ ವಿರಾಟ್ ಮಾತ್ರ ತನ್ನನ್ನು ತಾನು ಬಲವಾಗಿ ನಂಬಿದ್ದನು. ಏಕೆಂದರೆ ಅವನಿಗೆ ಗೊತ್ತಿತ್ತು ಮುಂದೊಂದು ದಿನ ಆಡಿಕೊಂಡವರೆ ಅವನಿಗೆ ಚಪ್ಪಾಳೆ ಹೊಡೆಯುತ್ತಾರೆಂದು. ಸ್ನೇಹಿತರೆ ಜೀವನದಲ್ಲಿ ಹೇಟರ್ಸ್ಗಳು ಇದ್ದೇ ಇರುತ್ತಾರೆ ಟ್ರೋಲರ್ ಗಳು ಇದ್ದೇ ಇರುತ್ತಾರೆ.. ಹಾಗಂತ ಬದುಕುವುದನ್ನು ನಿಲ್ಲಿಸೋಕಾಗುತ್ತಾ.
ಇಲ್ಲ ಸಾಧ್ಯವಿಲ್ಲ ಏಕೆಂದರೆ ಇದು ನಿಮ್ಮದೇ ಜೀವನ ನೀವು ಅಂದುಕೊಂಡಂತೆ ಬದುಕಿ ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಹೊರಡಿ ವಿರಾಟ್ ನಂತೆ ನೀವು ಸಾಧನೆಯ ಶಿಖರವನ್ನೇರಿ.
ನಮಸ್ಕಾರ..
Surya Sen: ಸ್ವಾತಂತ್ರ್ಯ ಹೋರಾಟಗಾರ ಸೂರ್ಯ ಸೇನ್ ಬಗ್ಗೆ ನೀವು ತಿಳಿಯದ ಸ್ಟೋರಿ !!
ಸೂರ್ಯಸೇನ್
ಇಂದಿನ ನಮ್ಮ ಮೊದಲ ಸ್ವತಂತ್ರ ಸಿಂಹ ಸೂರ್ಯಸೆನ್, 1930ರಲ್ಲಿ ನಡೆದ ಪ್ರಖ್ಯಾತ ಚಿತ್ತಗಾಂಗ್ ಶಸ್ತ್ರಾಸ್ತ್ರ ದರೋಡೆಯ ಅಂದ್ರೆ ಚಿತ್ತಗಾಂಗ್ ಆರ್ಮೌರಿ ರೆಡ್ ನ ಪ್ರಮುಖ ರೂವಾರಿಗಳಾದ ಸೂರ್ಯಸೇನ್ ಅವರು 22 March 1894 ರಂದು ಅಂದಿನ ಬಂಗಾಳ ಪ್ರೆಸಿಡೆನ್ಸಿಯ ಅಂದರೆ ಇಂದಿನ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ಜಿಲ್ಲೆಯ ನೊಪಾರ ಎಂಬಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಸೂರ್ಯ ಕುಮಾರ್ ಸೆನ್, ಇವರ ತಂದೆ ರಾಮ್ ನಿರಂಜನ್ ಅವರು ಶಾಲಾ ಶಿಕ್ಷಕರು ಆಗಿದ್ದರು.1916ರಲ್ಲಿ ಮುರ್ಷದಾಬಾದ್ ನ ಬರ್ಯಾಮ್ಪುರ್ ಕಾಲೇಜಿನಲ್ಲಿ B.A.
ಓದುತ್ತಿರುವಾಗಲೇ ತಮ್ಮ ಗುರುಗಳಾದ ಸತೀಶ್ ಚಂದ್ರ ಚಕ್ರವರ್ತಿ ಅವರಿಂದ ಪ್ರೇರಣೆ ಪಡೆದು, ಭಾರತೀಯ ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದರು. ಮುಂದೆ 1918ರಲ್ಲಿ ಬಿ ಎ ಡಿಗ್ರಿಯನ್ನು ಮುಗಿಸಿಕೊಂಡು, ಚಿತ್ತಗಾಂಗೆ, ಮರಳಿದ ಸೇನ್ ಅವರು ಸ್ಥಳೀಯ ಶಾಲೆ ಒಂದರಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದರು. ತಮ್ಮ ಅದ್ಭುತ ವಾಕ್ಚಾತುರ್ಯ ಮತ್ತು ನಾಯಕತ್ವ ಗುಣಗಳಿಂದ ‘ಮಾಸ್ಟರ್ ದಾ’ ಎಂಬ ಹೆಸರಿನಿಂದ ಪ್ರಖ್ಯಾತರಾದರು. ಮೊದಲೇ ರಾಷ್ಟ್ರೀಯ ವಿಚಾರಧಾರಿಗಳತ್ತ ಆಕರ್ಷಿತರಾಗಿದ್ದ ‘ಮಾಸ್ಟರ್ ದಾ’ 1918ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿತ್ತಗಾಂಗ್ ಶಾಖೆಯು ಆರಂಭಗೊಂಡಾಗ ಶಿಕ್ಷಕ ವೃತ್ತಿಯನ್ನು ತೊರೆದು, ಅದರ ಅಧ್ಯಕ್ಷರಾಗಿ ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮ್ಮಿಕ್ಕುತ್ತಾರೆ. ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಂದಲೇ ಬ್ರಿಟಿಷರ ನಿದ್ದೆಗೆಡಿಸಿದ್ದ ‘ಮಾಸ್ಟರ್ ದಾ ‘ 1920 ರಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಅತ್ಯುತ್ಸಾಹವಾಗಿ ಭಾಗವಹಿಸಿದ್ದರು. ಇದಕ್ಕಾಗಿ ಅವರು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಅಸ್ಸಾಂ- ಬೆಂಗಾಲ್
ಮಾರ್ಗವಾಗಿ ಚಲಿಸುತ್ತಿದ್ದ ಬ್ರಿಟಿಷ್ ಸೇನಾ ರೈಲ್ವೆ ಗಳಿಂದ ಸಂಪತ್ತನ್ನು ದೋಚಿ ಸ್ವತಂತ್ರ ಚಳುವಳಿಗೆ ವೇಗ ತುಂಬುತ್ತಿದ್ದರು. ಇದಕ್ಕಾಗಿ ಅವರು ಮತ್ತೆ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದರು.
‘ಮಾಸ್ಟರ್ ದಾ’ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಟಕ್ಕಾಗಿ ‘ಚಿತ್ತಾ ಗಾಂಗ್ ಗ್ರೂಪ್ ‘ ಎಂಬ ಹೆಸರಿನ ತಮ್ಮದೇ ಆದ ಗ್ರೂಪ್ ಒಂದನ್ನು ಕಟ್ಟಿ ಬಿಸಿ ರಕ್ತದ ತರುಣರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿ, ತಮ್ಮ ತಂಡದಲ್ಲಿ ಸೇರಿಸಿಕೊಳ್ಳುತ್ತಿದ್ದರು. ಆಯಲ್ಲ ಎಳೆಯ ತರುಣರ ಪಾಲಿಗೆ ‘ಮಾಸ್ಟರ್ ದಾ’ ಆದರ್ಶ ನಾಯಕ ರಾಗಿದ್ದರು. ಈ ಎಳೆಯ ತರುಣ ಕ್ರಾಂತಿಕಾರಿಗಳನ್ನು ಇಟ್ಟುಕೊಂಡೆ ‘ಮಾಸ್ಟರ್ ದಾ’ ಚಾಕಚಕ್ಯತೆಯಿಂದ ಬ್ರಿಟಿಷರ ಸಂಪತ್ತನ್ನು ಲೂಟಿ ಮಾಡುತ್ತಿದ್ದರು.
ಅಂದು 18ನೇ ತಾರೀಕು ಏಪ್ರಿಲ್ 1930,’ಮಾಸ್ಟರ್ ದಾ’ ಮತ್ತು ಅವರ ತರುಣ ಕ್ರಾಂತಿಕಾರಿಗಳ ತಂಡವು ಚಿತ್ತಗಾಂಗ್ ನಲ್ಲಿರುವ ಬ್ರಿಟಿಷರ ಪೊಲೀಸ್ ಠಾಣೆಯನ್ನು ಲೂಟಿ ಮಾಡಿ ಅಲ್ಲಿನ ಶಸ್ತ್ರಾಗಾರದಲ್ಲಿದ್ದ ಎಲ್ಲಾ ಶಸ್ತ್ರಗಳನ್ನು ಮತ್ತು ಯುದ್ಧ ಸಾಮಗ್ರಿಗಳನ್ನು ಕೊಳ್ಳೆ ಹೊಡೆಯಲು ಯೋಜನೆ ರೂಪಿಸಿತು. ಇದಕ್ಕಾಗಿ ಚಿತ್ತಗಾಂಗ್ ಅನ್ನು ತಲುಪಲಿ ಇದ್ದ ಎಲ್ಲಾ ಟೆಲಿಫೋನ್, ಟೆಲಿಗ್ರಾಫ್,ರೈಲು ಮುಂತಾದ ಮಾರ್ಗಗಳನ್ನು ನಾಶ ಮಾಡಿ ಚಿತ್ತಗಾಂಗ್ ಅನ್ನು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವತಂತ್ರಗೊಳಿಸುವ ಯೋಜನೆ ಇದಾಗಿತ್ತು. ಅಂದುಕೊಂಡಂತೆ ‘ಮಾಸ್ಟರ್ ದಾ’ ಮತ್ತು ಅವರ ತಂಡ ಪೊಲೀಸ್ ಠಾಣೆಯನ್ನು ಲೂಟಿ ಮಾಡಿ, ಅದರ ಮೇಲೆ ತಿರಂಗ ಧ್ವಜವನ್ನು ಹಾರಿಸಿದರು. ಆದರೆ ಅಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ತರಲು ಸಾಧ್ಯವಾಗಲಿಲ್ಲ. ಮುಂದೆ ‘ಮಾಸ್ಟರ್ ದಾ ‘ ಮತ್ತು ಅವರ ತಂಡ ಹತ್ತಿರದ ಗುಡ್ಡ ಜಲಾಲಬಾದ್ ಬೆಟ್ಟ ಗುಡ್ಡಗಳಲ್ಲಿ ತಲೆಮರೆಸಿಕೊಂಡರು. ಆದರೆ ಕೆಲ ದಿನಗಳ ನಂತರ ವಿಷಯ ತಿಳಿಯುತ್ತಿದ್ದಂತೆ ಬ್ರಿಟಿಷ ಸೇನೆಯು ಜಲಾಲಾಬಾದ್ ಬೆಟ್ಟವನ್ನು ಸುತ್ತುವರೆದು
‘ಮಾಸ್ಟರ್ ದಾ’ ಮತ್ತು ಅವರ ತಂಡದೊಂದಿಗೆ ಗುಂಡಿನ ಚಕಮಕಿ ನಡೆಸಿತು. ಈ ಗುಂಪಿನ ದಾಳಿಯಲ್ಲಿ ಮಾಸ್ಟರ್ ದಾ ತಂಡದ 12 ಕ್ರಾಂತಿಕಾರಿಗಳು ವೀರ ಮರಣ ಅಪ್ಪಿದರು ಇನ್ನು ಹಲವರು ಬಂಧಿತರಾದರು ‘ಮಾಸ್ಟರ್ ದಾ’ ಸೇರಿದಂತೆ ಇನ್ನೂ ಕೆಲವರು ಬ್ರಿಟಿಷರ ಕನ್ ತಪ್ಪಿಸಿ ಪರಾರಿ ಆಗುವಲ್ಲಿ ಯಶಸ್ವಿಯಾದರು.
ಮುಂದೆ ಸೂರ್ಯ ಸೆನ್ ರೈತನಾಗಿ, ಕೂಲಿ ಆಳಾಗಿ, ಅರ್ಚಕನಾಗಿ, ಮನೆಯಾಳಾಗಿ ಬ್ರಿಟಿಷರ ಕಣ್ತಪ್ಪಿಸಿ ವೇಷ ಮರಿಸಿಕೊಂಡು ಕ್ರಾಂತಿಕಾರಿ ಚಳುವಳಿಗಳನ್ನು ನಡೆಸುತ್ತಿದ್ದರು. ಕೆಲವೊಮ್ಮೆ ಮುಸಲ್ಮಾನ್ ವೇಷವನ್ನು ಧರಿಸಿರುವುದು ಉಂಟು.
ನಮ್ಮ ದೇಶದ ದುರಾದೃಷ್ಟವೋ ಏನೋ ಗೊತ್ತಿಲ್ಲ, ನಮ್ಮ ನೆಲದ ಸ್ವಾತಂತ್ರ್ಯಕ್ಕಾಗಿ ಬಳದಾಡುತ್ತಿದ್ದ ಈ ಮಹಾ ಚೇತನವನ್ನು ಅವರ ಸಂಬಂಧಿಕನೇ ಆದ ನೇತ್ರಾಸೆನ್ ಎನ್ನುವವ ಸೂರ್ಯ ಸೆನ್ ರ ಬಗ್ಗೆ ಬ್ರಿಟಿಷರಿಗೆ ಸುಳಿವು ನೀಡಿದ. ಈ ಈ ತುಳುವಿನ ಬೆನ್ನತ್ತಿ ಬಂದ ಬ್ರಿಟಿಷರು ಸೂರ್ಯ ಸೆನ್ ರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅವರಿಗೆ ಅತಿ ಕಠೋರವಾದ ಚಿತ್ರ ವಿಚಿತ್ರ ಹಿಂಸೆಯನ್ನು ನೀಡಲಾಯಿತು. ಕೊನೆಗೆ ಜನವರಿ 12 1934ರಲ್ಲಿ ‘ಮಾಸ್ಟರ್ ದಾ’ ಮೂರ್ಚೆ ಹೋದಂತಹ ಸ್ಥಿತಿಯಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು ಅಲ್ಲಿಗೆ ಪೂರ್ವದಲ್ಲಿ ಹುಟ್ಟಿದ ಸ್ವಾತಂತ್ರ್ಯ ಜ್ಯೋತಿಯ ಕ್ರಾಂತಿ ಕಿಡಿ ಒಂದು ಶಾಶ್ವತವಾಗಿ ನಂದಿ ಹೋಯಿತು.
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.