ಸ್ನೇಹಿತರೇ ಗೂಗಲ್, ಈ ಹೆಸರನ್ನು ಕೇಳದವರು ಇಂದಿನ ಜಗತ್ತಿನಲ್ಲಿ ಯಾರಾದರೂ ಇದ್ದಾರಾ ? ಚಿಕ್ಕಮಕ್ಕಳಿಂದ ಹಿಡಿದು ಹಣ್ಣು ಹಣ್ಣು ವೃದ್ಧರೂ ಕೂಡ ಗೂಗಲ್‌ನ ಪ್ರಭಾವಕ್ಕೆ ಒಳಗಾದವರೇ…ಇಂದು ಜಗತ್ತಿನ ನಂ.1 ಸಚ್೯ ಇಂಜಿನ್ ಆಗಿರುವ ಗೂಗಲ್ ಆರಂಭದಲ್ಲಿ ಕೇವಲ 1 ಮಿಲಿಯನ್ ಡಾಲರ್‌ಗೆ ತನ್ನ ಕಂಪನಿಯನ್ನು ಮಾರಲು ತಯಾರಾಗಿತ್ತು ಎಂದರೆ ನೀವು ನಂಬಲೇಬೇಕು…ಹಾಗಾದರೆ ಬನ್ನಿ ಸ್ನೇಹಿತರೇ ಈ ಆರ್ಟಿಕಲ್‌ನಲ್ಲಿ ಗೂಗಲ್‌ನ ಯಶೋಗಾಥೆಯನ್ನು ತಿಳಿದು ಕೊಳ್ಳೋಣ…
Thank you for reading this post, don't forget to subscribe!ಇದು 1998 ರ ಮಾತು. ಆಗ ತಾನೇ ಗೂಗಲ್ ಜನ್ಮ ತಾಳಿತ್ತು. ಆಗಿನ್ನೂ ಗೂಗಲ್ ಚಿಕ್ಕ ಕಂಪನಿಯಾಗಿತ್ತು. ಆ ಸಮಯದಲ್ಲಿ ಗೂಗಲ್‌ನ ಸಂಸ್ಥಾಪಕರಾದ ಲ್ಯಾರಿ ಪೇಜ್ & ಸೆರ್ಗಿ ಬ್ರೇನ್ ಅವರು ಆ ಸಂದರ್ಭದಲ್ಲಿ ಪ್ರಚದ ನಂ.1 ಸಚ್೯ ಇಂಜಿನ್ ಆದ Yahoo ನ ಮಾಲೀಕರಿಗೆ ಗೂಗಲ್ ಅನ್ನು ಕೇವಲ 1 ಮಿಲಿಯನ್ ಡಾಲರ್‌ಗೆ ಕೊಂಡುಕೊಳ್ಳುವಂತೆ ಕೇಳಿಕೊಂಡಿದ್ದರು. ಆದರೆ Yahoo ಕಂಪನಿಯು ಈ ಆಫರ್ ಅನ್ನು ಕಡ್ಡಿ ಮುರಿದಂತೆ ತಿರಸ್ಕರಿಸಿತು.
ಇದಾದ ನಂತರ ಲ್ಯಾರಿ ಪೇಜ್ & ಸೆರ್ಗಿ ಬ್ರೇನ್ ಅವರು ತಮ್ಮ ಗೂಗಲ್ ಕಂಪನಿಯನ್ನು ಮತ್ತಷ್ಟು ಸುಧಾರಿಸಲು ಪಣ ತೊಟ್ಟರು. ಇದಾಗಿ 4 ವರ್ಷಗಳು ಕಳೆದ ನಂತರ 2002 ರಲ್ಲಿ ಇವರು ಮತ್ತೊಮ್ಮೆ Yahoo ಹತ್ತಿರ ಹೋಗಿ ತಮ್ಮ ಕಂಪನಿಯನ್ನು ಕೊಂಡುಕೊಳ್ಳಲು ಹೇಳುತ್ತಾರೆ.ಆದರೆ ಈ ಬಾರಿಯೂ Yahoo ಕಂಪನಿಯು ಗೂಗಲ್ ಅನ್ನು ಕೊಂಡುಕೊಳ್ಳಲು ನಿರಾಕರಿಸುತ್ತದೆ.
ಮುಂದೆ ಲ್ಯಾರಿ ಪೇಜ್ & ಸೆರ್ಗಿ ಬ್ರೇನ್ ಅವರ ಕಠಿಣ ಪರಿಶ್ರಮ & ಹಠದಿಂದ ನೋಡ ನೋಡುತ್ತಿದ್ದಂತೆಯೇ ಗೂಗಲ್ ಕಂಪನಿಯು Yahoo ಅನ್ನು ಹಿಂದಿಕ್ಕಿ ಜಗತ್ತಿನ ನಂ.1 ಸರ್ಚ್ ಇಂಜಿನ್ ಆಗಿ ಹೊರಹೊಮ್ಮಿತು. ಯಾವ ಗೂಗಲ್ ಕಂಪನಿಯನ್ನು ಕೇವಲ 1 ಮಿಲಿಯನ್ ಡಾಲರ್‌ಗೆ ಕೊಂಡುಕೊಳ್ಳಲು Yahoo ನಿರಾಕರಿಸಿತ್ತೋ, ಇಂದು ಅದೇ ಗೂಗಲ್ ಕಂಪನಿಯ ಒಟ್ಟು ಆದಾಯ 1420 ಬಿಲಿಯನ್ ಡಾಲರ್. ಆಶ್ಚರ್ಯಕರ ವಿಷಯ ಏನೆಂದರೆ, ಇಂದು ಎಲ್ಲರಿಗೂ Yahoo ಎಂಬ ಕಂಪನಿಯೊಂದಿದೆ ಎಂಬುದೇ ಮರೆತು ಹೋಗಿದೆ. ಅಷ್ಟರ ಮಟ್ಟಿಗೆ ಗೂಗಲ್ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ..
ಸ್ನೇಹಿತರೇ, ಆದ್ದರಿಂದ ಅವಕಾಶಗಳು ಬಂದಾಗ ಕೈಚೆಲ್ಲಿ ಮೂರ್ಖರಾಗುವ ಬದಲು ಅವುಗಳನ್ನು ಬಳಸಿಕೊಂಡು ಚತುರರಾಗುವುದು ನಿಜವಾದ ಬುದ್ಧಿವಂತನ ಲಕ್ಷಣ..!
ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ… ನಾನು ಇನ್ನಷ್ಟು ಹೊಸ ಹೊಸ ಸಂಗತಿಗಳ ಕುರಿತು ಆರ್ಟಿಕಲ್ ಅನ್ನು ತರುತ್ತೇನೆ..!
Motivation: 20,000 ರೂ. ಸಾಲದಿಂದ 1 ಲಕ್ಷ ಕೋಟಿ ಕಂಪನಿ ಕಟ್ಟಿದ ಛಲಗಾರನ ಕಥೆ !
ಯಶಸ್ಸು ಎನ್ನುವುದು ಒಂದೇ ದಿನದಲ್ಲಿ ಸಿಕ್ಕು ಬಿಡುವಂತಿದ್ದರೆ ಜಗತ್ತಿನ ತುಂಬಾ ಇಂದು ಸಾಧಕರಿರುತ್ತಿದ್ದರು….ಅದು ಒಂದೇ ದಿನದಲ್ಲಿ ಆಗುವಂಥ ಪವಾಡವಲ್ಲ….ಹಲವು ವರ್ಷಗಳ ದೀರ್ಘ ತಪಸ್ಸಿನ ನಂತರ ಒಲಿಯುವ ಸುಮಧುರ ಸಂಗತಿಯೇ ಯಶಸ್ಸು… ಇಂದು ಭಾರತದಾದ್ಯಂತ 5G ನೆಟ್‌ವರ್ಕ್ ನೀಡುತ್ತಿರುವ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ Airtel ಕಂಪನಿಯ ಮಾಲಿಕನ ಯಶೋಗಾಥೆ ಇದು….
23 ಅಕ್ಟೋಬರ್ 1957 ರಲ್ಲಿ ಲುಧಿಯಾನದಲ್ಲಿ ಒಬ್ಬ ಹುಡುಗನ ಜನನವಾಗುತ್ತದೆ. ಓದು ಬರಹದಲ್ಲಿ ಅಷ್ಟೊಂದು ಆಸಕ್ತಿಯಿಲ್ಲದ ಈ ಬಾಲಕ ಬಾಲ್ಯದಿಂದಲೇ ತಾನೊಬ್ಬ businessman ಆಗಬೇಕೆಂದು ಕನಸು ಕಂಡಿದ್ದ. ಈ ಬಾಲಕ ಉಳಿದ ಬಾಲಕರಂತೆ ಕೇವಲ ಕನಸು ಕಾಣಲಿಲ್ಲ. ಕೇವಲ 18ನೇ ವಯಸ್ಸಿನಲ್ಲಿಯೇ 20,000 ರೂ. ಸಾಲವನ್ನು ತೆಗೆದುಕೊಂಡು ಸೈಕಲ್‌ನ ಬಿಡಿಭಾಗಗಳನ್ನು ತಯಾರಿಸಲು ಶುರು ಮಾಡುತ್ತಾನೆ.ಕೆಲವು ದಿನಗಳ ನಂತರ ಅವನಿಗೆ ಈ ವ್ಯಾಪಾರದಲ್ಲಿ ಹೆಚ್ಚು ಕಾಲ ಕಳೆದಷ್ಟು ಲಾಭವಿಲ್ಲವೆಂಬುದು ಮನವರಿಕೆಯಾಗುತ್ತದೆ. ಆತ ಆ business ಅನ್ನು ಬಂದ್ ಮಾಡಿ ಮುಂಬೈಗೆ ಕಾಲಿಡುತ್ತಾನೆ.
ಮುಂಬೈಗೆ ಬಂದ ನಂತರ ಆತ ಜಪಾನಿನಿಂದ ಆಮದು ಮಾಡಿಕೊಂಡ Generator ಗಳನ್ನು ಮಾರುವ ಕೆಲಸವನ್ನು ಶುರು ಮಾಡುತ್ತಾನೆ. ಈ ವ್ಯಾಪಾರವು ಅವನಿಗೆ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ. ಆದರೆ ಹೇಳ್ತಾರಲ್ಲ…ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತವೆ ಎಂದು.. ಇವರ ಜೀವನದಲ್ಲೂ ಹಾಗೆ ಆಯ್ತು.. ಭಾರತ ಸರ್ಕಾರವು ಜಪಾನಿನಿಂದ ಆಮದಾಗುತ್ತಿದ್ದ Generator ಗಳನ್ನು import ಮಾಡಿಕೊಳ್ಳುವುದನ್ನು ನಿಲ್ಲಿಸುತ್ತದೆ. ಆದರೆ ಆತ ಅಲ್ಲಿಗೇ ನಿಲ್ಲುವುದಿಲ್ಲ. ಆತ 1984 ರಲ್ಲಿ ತೈವಾನ್‌ನ ಕಿಂಗ್‌ಟೆಲ್ ಕಂಪನಿಯ ಟೆಲಿಫೋನ್‌ಗಳನ್ನು ಮಾರಲು ಶುರು ಮಾಡುತ್ತಾನೆ. ವರ್ಷ 1992 ಈತನ ಜೀವನದಲ್ಲಿಯೇ Turning Point ವರ್ಷ ಎಂದರೆ ತಪ್ಪಾಗಲಾರದು. ಆ ವರ್ಷ ಈತನಿಗೆ Mobile Phone Network ನ ಲೈಸೆನ್ಸ್ ಸಿಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಆತನ ಯಶಸ್ಸಿನ ನಾಗಾಲೋಟ ! ಅಲ್ಲಿಯವರೆಗೆ ಭಾರತೀಯ ಟೆಲಿಕಾಮ್ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿದ್ದ Mobile Phone Network ಸೇವೆಗಳು ಈತನ ಚಾಣಾಕ್ಷತನದಿಂದ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸಿಗುವಂತಾಯ್ತು…
ಹೀಗೆ ತನ್ನ ಸತತ ಪ್ರಯತ್ನದಿಂದಲೇ ತನ್ನ ಕಷ್ಟಗಳನ್ನು ಸೋಲಿಸಿ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ಆಳಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಸ್ನೇಹಿತರೇ…ಅವರ ಹೆಸರೇ ಸುನಿಲ್ ಭಾರ್ತಿ ಮಿತ್ತಲ್…..ಪ್ರಸ್ತುತ ನಾವು ನೀವು ನಮ್ಮ Mobile Phone ಗೆ ಬಳಸುತ್ತಿರುವ Airtel ಸಿಮ್‌ನ ಮಾಲೀಕರು… ಇವರ ಪ್ರಸ್ತುತ ಒಟ್ಟು ಆದಾಯ 1 ಲಕ್ಷ ಕೋಟಿಗಿಂತಲೂ ಹೆಚ್ಚಿದೆ..
ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಉಪಯುಕ್ತ ಮಾಹಿತಿ ಎನ್ನಿಸಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…
Alexander: ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಸಾಯೋಕು ಮುಂಚೆ ಬಿಚ್ಚಿಟ್ಟ 3 ರಹಸ್ಯಗಳು: ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಸ್ಟೋರಿ
ಜಗತ್ತನ್ನೇ ಗೆದ್ದ ಮಹಾನ್ ಪರಾಕ್ರಮಿ ಅಲೆಕ್ಸಾಂಡರ್ ಭಾರತವನ್ನು ಗೆಲ್ಲಬೇಕೆಂದು ಈ ದೇಶಕ್ಕೆ ಬಂದಾಗ ಇಲ್ಲಿನ ಗಡಿಭಾಗದ ಅತಿಚಿಕ್ಕ ಸಾಮ್ರಜ್ಯದ ರಾಜ ಪುರೂರವನ ತೀವ್ರ ವಿರೋಧವನ್ನು ಎದುರಿಸಲಾಗದೇ ದಣಿದ ತನ್ನ ಸೈನಿಕರ ಸಲಹೆಯಂತೆ ತನ್ನ ದೇಶಕ್ಕೆ ಮರಳಿದಾಗ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಆತ ಇನ್ನೇನು ಸಾವು ಸಮೀಪಿಸುತ್ತಿದ್ದಂತೆ ತನ್ನ ಸೇನಾಧಿಪತಿಯನ್ನು ಕರೆದು ತನ್ನ ಕೊನೆಯ 3 ಆಸೆಗಳನ್ನು ನೆರವೇರಿಸಲು ಹೇಳುತ್ತಾನೆ. ಹಾಗಾದರೆ ಯಾವವು ಅಲೆಕ್ಸಾಂಡರ್ ನ ಆ 3 ಕೊನೆಯ ಆಸೆಗಳು ಎಂಬುದನ್ನ ಈ ಆರ್ಟಿಕಲ್‌ನಲ್ಲಿ ತಿಳಿದುಕೊಳ್ಳೊಣ.
ಅಲೆಕ್ಸಾಂಡರ್ ನ ಮೊದಲ ಆಸೆ “ನಾನು ಸತ್ತ ಮೇಲೆ ನನ್ನ ಶವ ಪೆಟ್ಟಿಗೆಯನ್ನು ಜಗತ್ತಿನ ಪ್ರಸಿದ್ಧ ವೈದ್ಯರು ಹೊರಬೇಕು.”
ಎರಡನೇಯ ಆಸೆ “ನನ್ನ ಶವಯಾತ್ರೆಯ ದಾರಿಯುದ್ದಕ್ಕೂ ಚಿನ್ನ, ಬೆಳ್ಳಿ & ಇತ್ಯಾದಿ ಅತ್ಯಮೂಲ್ಯ ಬೆಲೆ ಬಾಳುವ ಹರಳುಗಳನ್ನು ಚೆಲ್ಲಬೇಕು.”
ಮೂರನೇಯ ಆಸೆ “ನನ್ನ ಶವಯಾತ್ರೆ ಸಾಗುವಾಗ ನನ್ನ ಎರಡೂ ಕೈಗಳನ್ನು ಎಲ್ಲರಿಗೂ ಕಾಣುವ ಹಾಗೆ ಶವಪೆಟ್ಟಿಗೆಯ ಹೊರಗೆ ಇಡಿ.”
ಅಲೆಕ್ಸಾಂಡರ್‌ನ ಈ ವಿಚಿತ್ರ ಆಸೆಗಳನ್ನು ಕೇಳಿ ಆತನ ಸೇನಾಧಿಪತಿಯು ದಂಗಾಗಿ, “ನಾವು ನಿಮ್ಮ ಕೊನೆಯ ಆಸೆಗಳನ್ನು ನಿಮ್ಮ ಇಚ್ಛೆಯಂತೆ ಪೂರೈಸುತ್ತೇವೆಂದು ಪ್ರಮಾಣ ಮಾಡುತ್ತೇವೆ. ಆದರೆ ಈ ನಿಮ್ಮ ವಿಚಿತ್ರ ಆಸೆಗಳ ಅರ್ಥವೇನು ಎಂಬುದನ್ನು ಹೇಳುತ್ತೀರಾ” ಎಂದು ಕೇಳಿದನು.
ಅದಕ್ಕೆ ಅಲೆಕ್ಸಾಂಡರ್ ಹೇಳಿದ, “ನನ್ನ ಮೊದಲನೇ ಆಸೆಯಂತೆ ನಾನು ಸತ್ತ ಮೇಲೆ ನನ್ನ ಶವಪೆಟ್ಟಿಗೆಯನ್ನು ಜಗತ್ತಿನ ಪ್ರಸಿದ್ಧ ವೈದ್ಯರು ಹೊರಬೇಕು ಎಂಬುದು. ಇದರ ಅರ್ಥವೇನೆಂದರೆ ಜಗತ್ತಿನ ಶ್ರೇಷ್ಠಾದಿ-ಶ್ರೇಷ್ಠ ವೈದ್ಯರಿದ್ದರೂ, ನನ್ನ ಸಾವನ್ನು ಯಾರಿಂದಲೂ ತಡೆಯಲಾಗಲಿಲ್ಲವೆಂದು ಜಗತ್ತಿಗೆ ಗೊತ್ತಾಗಲಿ.
ಇನ್ನು ನನ್ನ ಎರಡನೇಯ ಆಸೆಯಾದ ಶವಯಾತ್ರೆಯ ದಾರಿಯುದ್ದಕ್ಕೂ ಚಿನ್ನ, ಬೆಳ್ಳಿ, ಹವಳ, ಮುತ್ತು-ರತ್ನಗಳ ಚೆಲ್ಲುವುದರ ಅರ್ಥವೇನೆಂದರೆ ಇಲ್ಲಿಯವರೆಗೆ ನಾನು ಸಂಪಾದಿಸಿದ ಯಾವ ಸಿರಿ-ಸಂಪತ್ತೂ ನನ್ನೊಂದಿಗೆ ಬರುವುದಿಲ್ಲವೆಂದು ಜಗತ್ತಿಗೆ ತಿಳಿಸುವುದು.
ಇನ್ನು ನನ್ನ ಕೊನೆಯ ಆಸೆಯಾದ “ನನ್ನ ಕೈಗಳನ್ನು ಶವದ ಪೆಟ್ಟಿಗೆ ಹೊರಗೆ ಇಡುವುದರ ಅರ್ಥವೇನೆಂದರೆ, ನಾನು ಭೂಮಿಗೆ ಬರುವಾಗ ಬರಿಗೈಯಲ್ಲೇ ಬಂದೆ. ಆದರೆ ನಾನು ನನ್ನ ಸ್ವಾರ್ಥದಿಂದ ಇಡೀ ಜಗತ್ತನ್ನೇ ಗೆಲ್ಲಲು ಹೊರಟೆ. ಆದರೆ ಈಗ ನನ್ನ ಸಾವು ಸಮೀಪಿಸುತ್ತಿರುವುದರಿಂದ ನನಗೆ ಈಗ ಮನವರಿಕೆಯಾಗಿದೆ, ಹೋಗುವಾಗ ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲವೆಂದು. ಆದ್ದರಿಂದ ನನ್ನ ಎರಡೂ ಕೈಗಳನ್ನೂ ಶವಪೆಟ್ಟಿಗೆಯ ಮೇಲೆ ಎಲ್ಲರಿಗೂ ಕಾಣಿಸುವ ಹಾಗೆ ಇಡಿ. ಯಾಕೆಂದರೆ ಜಗತ್ತಿಗೆ ಗೊತ್ತಾಗಲಿ ಇಷ್ಟೊಂದು ಪರಾಕ್ರಮ ಮೆರೆದ ಅಲೆಕ್ಸಾಂಡರ್ ಹೋಗುವಾಗ ಏನೂ ತೆಗೆದುಕೊಂಡು ಹೋಗಲಿಲ್ಲ, ಬರಿಗೈಯಲ್ಲೇ ಹೋಗಬೇಕಾಯ್ತು ಎಂದು.
ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಉಪಯುಕ್ತ ಮಾಹಿತಿ ಎನ್ನಿಸಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…
Kempegowda statue: ಬೆಂಗಳೂರಿನ ಅದ್ಭುತ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಿದವರು ಇವರೇ ನೋಡಿ !
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಎಂದೇ ಖ್ಯಾತರಾದ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರಗತಿ (prosperity) ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. 108 ಅಡಿ ಎತ್ತರವಿರುವ ಈ ಪ್ರತಿಮೆಯು ಈಗ ವಲ್ಡ್೯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದೆ. ಇಂತಹ ಅದ್ಭುತ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದ್ದು ಸುತಾರ್ ಕುಟುಂಬ.
ಪದ್ಮ ಭೂಷಣ ಪುರಸ್ಕೃತರಾದ ವಾಂಜಿ ರಾಮ್ ಸುತಾರ್ ಅವರು ಪ್ರತಿಮೆ ನಿರ್ಮಾಣ ಮಾಡಿ ಭಾರತದ ಅತ್ಯಂತ ಶ್ರೇಷ್ಠ ಶಿಲ್ಪಿ ಎನಿಸಿಕೊಂಡಿದ್ದಾರೆ. ಸುತಾರ್ ಕುಟುಂಬದ ಮೂರು ತಲೆಮಾರಿನ ಪರಿಶ್ರಮದಿಂದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಿದೆ.
ಒಂದೇ ಕುಟುಂಬದ ಮೂರು ತಲೆಮಾರಿನ ಶಿಲ್ಪಿಗಳು ಹಾಗೂ ಇತರೆ 200 ಶಿಲ್ಪಿಗಳು ಸತತ ಒಂಬತ್ತು ತಿಂಗಳ ಕಾಲ ಇದರ ಕೆತ್ತನೆಯಲ್ಲಿ ತೊಡಗಿದ್ದಾರೆ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ವಾಂಜಿ ರಾಮ್ ಸುತಾರ್ ಅವರು ಪ್ರತಿಮೆ ಹೇಗೆ ಕಾಣುತ್ತದೆ ಹಾಗೂ ಇದರ ಪರಿಕಲ್ಪನೆಯನ್ನು ಅಂತಿಮಗೊಳಿಸಿದ್ದಾರೆ. ಇನ್ನು ಅವರ ಸತತ ಪರಿಶ್ರಮ ಹಾಗೂ ಮೇಲ್ವಿಚಾರಣೆಯಲ್ಲಿ ಪ್ರತಿಮೆಯ ಕೆತ್ತನೆ ಹಾಗೂ ನಿರ್ಮಾಣದ ಕೆಲಸದ ಜವಾಬ್ದಾರಿಯನ್ನು ಅವರ ಪುತ್ರ ಅನಿಲ್ ಸುತಾರ್ ಹೊತ್ತುಕೊಂಡಿದ್ದರು.
ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿದೆ ಸಹಯೋಗ ನಡೆಸಿಕೊಂಡು ಜತೆಗೆ ಅಂತಿಮ ಪ್ರತಿಷ್ಠಾಪನೆಯನ್ನು ನೋಡಿಕೊಂಡಿದ್ದು ಮೊಮ್ಮಗ ಸಮೀರ್ ಸುತಾರ್. ಹೀಗೆ ಕುಟುಂಬದ ಮೂರು ತಲೆಮಾರುಗಳು ಪ್ರತಿಮೆ ನಿರ್ಮಾಣದಲ್ಲಿ ಭಾಗಿಯಾದಂತಾಗಿದೆ. ಗುಜರಾತಿನಲ್ಲಿರುವ ಏಕತೆಯ ಪ್ರತಿಮೆ ನಿರ್ಮಾಣದಲ್ಲಿಯೂ ಸುತಾರ್ ಕುಟುಂಬ ಅತಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದೆ. ವಿಕಾಸ ಸೌಧ ಹಾಗೂ ವಿಧಾನ ಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದೂ ಕೂಡಾ ಇದೇ ಸುತಾರ್ ಕುಟುಂಬವೇ.
ಕೆಂಪೇಗೌಡರ ಪ್ರತಿಮೆ ಅನಾವರಣದ ಹಿಂದೆ ಸತತ ಒಂಬತ್ತು ತಿಂಗಳ ಪರಿಶ್ರಮ ಇದೆ. ಮೊದಲು ಸುತಾರ್ ಅವರು ಕೆಂಪೇಗೌಡರ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಿ ಸಮರ್ಪಕವಾದ ರೇಖಾಚಿತ್ರ ತಯಾರಿಸಿದ್ದಾರೆ. ನಂತರ ನೋಯ್ಡಾದಲ್ಲಿರುವ ಸ್ಟುಡಿಯೋದಲ್ಲಿ ಮೊದಲು ಮೂರು ಅಡಿಗಳ ಮಾದರಿ ರಚಿಸಲಾಗಿದೆ. ನಂತರ ಮತ್ತೆ 10 ಅಡಿಗಳ ಮಾದರಿಯನ್ನು ರಚಿಸಿ ನಂತರ ಅದಕ್ಕೆ ಬೇಕಾದ ಕಂಚು ಹಾಗೂ ಉಕ್ಕಿನ ಭಾಗಗಳ ಮೌಲ್ಡಿಂಗ್‌ಗಳನ್ನು ನಿರ್ಮಿಸಲಾಗಿದೆ, ನಂತರ ಇವುಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತಂದು ಜೋಡಿಸಲಾಗಿದೆ. ಈ ರೀತಿಯಾಗಿ ಕೆಂಪೇಗೌಡರ ಪುತ್ಥಳಿಯು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ.
ಸುತಾರ್ ಕುಟುಂಬವು ಇಷ್ಟು ಅತ್ಯತ್ತಮವಾಗಿ ಮತ್ತು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಅವರ ಸಂಶೋಧನೆಯೂ ಮುಖ್ಯವಾಗಿದೆ. ಬೆಂಗಳೂರು ದೊರೆಯ ಉಡುಗೆ ತೊಡುಗೆಗಳು ಹೇಗಿತ್ತು, ಅವರ ಶಸ್ತ್ರಾಸ್ತ್ರಗಳು ಹೇಗಿದ್ದವು? ಅವರ ಛಾಪು, ವ್ಯಕ್ತಿತ್ವ, ಗತ್ತು, ಗಾಂಭೀರ್ಯ ಎಲ್ಲವನ್ನು ಅರಿಯುವುದು ಮೊದಲ ಹಂತ, ತದನಂತರ ಮಾತ್ರ ಇಂತಹ ಅದ್ಭುತವಾದ ಪ್ರತಿಮೆ ಮೂಡಿ ಬರಲು ಸಾಧ್ಯ.
“ನಮಗೆ ಕೆಂಪೇಗೌಡರ ಬಗ್ಗೆ ಸಾಕಷ್ಟು ಹೆಮ್ಮೆಯಿದೆ, ಈ ಪ್ರತಿಮೆಯನ್ನು ನೋಡಿದಾಗ ಸಂತಸವಾಗುತ್ತದೆ. ಈ ಮುಂಚೆ ಕೆಂಪೇಗೌಡರ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಪ್ರತಿಮೆ ತಯಾರಿಗಾಗಿ ಸಂಶೋಧನೆ ನಡೆಸುತ್ತಾ ಹೋದಂತೆ ಅವರ ಬಗ್ಗೆ ತಿಳಿಯಿತು. ಅದ್ಭುತ ವ್ಯಕ್ತಿತ್ವದ ಪರಿಚಯವಾಗಿದೆ” ಎಂದು ಸುತಾರ್ ಕುಟುಂಬ ಹೇಳಿದೆ. ಸೊಗಸಾದ ಪ್ರತಿಮೆ ನಿರ್ಮಾಣ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಸುತಾರ್ ಕುಟುಂಬವನ್ನು ಅಭಿನಂದಿಸಿದರು.
ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಉಪಯುಕ್ತ ಮಾಹಿತಿ ಎನ್ನಿಸಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…