ಇಲ್ಲಿದೆ ನೋಡಿ ಭಾರತ ತಂಡದ ವಿಶ್ವಕಪ್ ಕ್ರಿಕೇಟ್ 2023 ರ ಸಂಪೂರ್ಣ ವೇಳಾಪಟ್ಟಿ

Spread the love

ಸ್ನೇಹಿತರೇ ಏಕದಿನ ವಿಶ್ವಕಪ್ ಗೆ ಅದ್ದೂರಿ ಚಾಲನೆ ದೊರೆತಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡವಾದ ಇಂಗ್ಲೆಂಡ್ ಅನ್ನು ನ್ಯೂಜಿಲ್ಯಾನ್ಡ್ ತಂಡವು ಮಣಿಸಿದೆ. ಅಲ್ಲದೇ 2ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್ ಲ್ಯಾಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿವೆ. ಇನ್ನು ಭಾರತವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಧಿಕೃತವಾಗಿ ವಿಶ್ವಕಪ್ ಕದನಕ್ಕೆ ಭಾಗಿಯಾಗಲಿದೆ. ಹಾಗಾದರೆ ಬನ್ನಿ ಸ್ನೇಹಿತರೇ ಇವತ್ತಿನ ಈ ಅರ್ಟಿಕಲ್ ನಲ್ಲಿ ಭಾರತ ಯಾವ ತಂಡದ ಜೊತೆ ಎಲ್ಲಿ ಮುಖಮುಖಿಯಾಗಲಿದೆ ಮತ್ತು ಯಾವಾಗ ಮುಖಾಮುಖಿ ಆಗಲಿದೆ ಎಂಬುದರ ಸಂಪೂರ್ಣ ವೇಳಾಪಟ್ಟಿ ನೋಡೋಣ.

Thank you for reading this post, don't forget to subscribe!

1.ಭಾರತ vs ಆಸ್ಟ್ರೇಲಿಯಾ – 08, ಅಕ್ಟೋಬರ್ – ಚೆನ್ನೈ
2.ಭಾರತ vs ಅಫಗಾನಿಸ್ತಾನ್ – 11, ಅಕ್ಟೋಬರ್- ದೆಹಲಿ
3. ಭಾರತ vs ಪಾಕಿಸ್ತಾನ – 14, ಅಕ್ಟೋಬರ್ – ಅಹಮದಾಬಾದ್
4. ಭಾರತ vs ಬಾಂಗ್ಲಾದೇಶ – 19, ಅಕ್ಟೋಬರ್ – ಅಹಮದಾಬಾದ್
5.ಭಾರತ vs ನ್ಯೂಜಿಲ್ಯಾಂಡ್ – 22, ಅಕ್ಟೋಬರ್ – ಧರ್ಮಶಾಲಾ
6.ಭಾರತ vs ಇಂಗ್ಲೆಂಡ್ – 29, ಅಕ್ಟೋಬರ್ – ಲಖನೌ
7.ಭಾರತ vs ಶ್ರೀಲಂಕಾ – 02, ನವೆಂಬರ್ – ಮುಂಬೈ
8.ಭಾರತ vs ದಕ್ಷಿಣ ಆಫ್ರಿಕಾ – 05, ನವೆಂಬರ್ – ಕೊಲ್ಕತ್ತಾ
9.ಭಾರತ vs ನೆದರ್ ಲ್ಯಾಂಡ್ – 12, ನವೆಂಬರ್ – ಬೆಂಗಳೂರು

ಇದನ್ನೂ ಓದಿ….

ನೆದರ್ಲ್ಯಾಂಡ್ ತಂಡವನ್ನು ಮಣಿಸಿ ವಿಜಯ ಸಾಧಿಸಿದ ನ್ಯೂಜಿಲ್ಯಾಂಡ್ ತಂಡ!

ಸ್ನೇಹಿತರೆ ಏಕದಿನ ವಿಶ್ವಕಪ್ ಗೆ ಅದ್ದೂರಿ ಚಾಲನೆ ದೊರಕಿದ್ದು ಎಲ್ಲ ತಂಡಗಳ ಕಣ್ಣು ಟ್ರೋಫಿಯ ಮೇಲಿದೆ. ನಿನ್ನೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ನ್ಯೂಜಿಲ್ಯಾಂಡ್ ಮತ್ತು ನೆದರ್ಲ್ಯಾಂಡ್ ತಂಡಗಳ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವು 99 ರನ್ ಗಳಿಂದ ಜಯ ಸಾಧಿಸಿದೆ. ನ್ಯೂಜಿಲ್ಯಾಂಡಿನ ಸ್ಟಾರ್ ಆಟಗಾರರಾದ ಮಿಚೆಲ್ ಸೆಂಟ್ನರ್ ಅವರು ಐದು ವಿಕೆಟ್ಗಳನ್ನು ಕಬಳಿಸುವುದರ ಮೂಲಕ ನೆದರ್ಲ್ಯಾಂಡ್ ಗೆ ಆಘಾತವನ್ನು ಉಂಟು ಮಾಡಿದರು. ಈ ಏಕದಿನ ವಿಶ್ವಕಪ್ ನಲ್ಲಿ ಪ್ರಥಮ ಐದು ವಿಕೆಟ್ಗಳ ಗೊಂಚಲು ಇದಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡವು 322 ರನ್ಗಳಿಗೆ ಏಳು ವಿಕೆಟ್ಗಳನ್ನು ಕಳೆದುಕೊಂಡು 50 ಓವರ್ ಗಳ ಆಟವನ್ನು ಮುಗಿಸಿತ್ತು. ನ್ಯೂಜಿಲೆಂಡ್ ತಂಡದ ಪರವಾಗಿ ಯಂಗ್ ರವೀಂದ್ರ ಲಾಥಮ್ ಅವರು ತಲಾ 51ಗಳನ್ನ ಕಲೆ ಹಾಕುವ ಮೂಲಕ ಒಟ್ಟು ಮೊತ್ತವನ್ನು 322 ಕ್ಕೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು.ನ್ಯೂಜಿಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ ತಂಡಕ್ಕೆ ಮಿಚ್ಚಲ್ ಸೆಂಟ್ನರ್ ಅವರು ಸಿಂಹ ಸ್ವಪ್ನವಾಗಿ ಕಾಡಿದರು. ಕಳೆದ ಪಾಕಿಸ್ತಾನ್ ಪಂದ್ಯದ ವಿರುದ್ಧದಲ್ಲಿ ತಲಾ ಅರ್ಧ ಶತಕ ಬಾರಿಸಿದ ವಿಕ್ರಂಜಿತ್ ಸಿಂಗ್ ಮತ್ತು ಬಾಸ್ ಡಿ ಲೀಡ್ ಅವರು ಈ ಪಂದ್ಯದಲ್ಲಿ ಮುಗ್ಗರಿಸಿದರು. ಕಾಲಿನ್ ಅಕರ್ಮನ್ ಅವರೊಬ್ಬರೇ 69 ಎಸೆತಗಳನ್ನ ಎದುರಿಸಿ 73 ರನ್ಗಳನ್ನ ಕಲೆಹಾಕಿ 223 ರನ್ ಗಳಾಗುವವರೆಗೂ ಏಕಾಂಗಿ ಹೋರಾಟ ನಡೆಸಿದರು. ಮಿಚಲ್ ಸೆಂಟ್ನರ್ ಅವರ ಅನ್ನು ಹೊರತುಪಡಿಸಿ ಮ್ಯಾಟ್ ಹೆನ್ರಿ ರಚಿನ್ ರವೀಂದ್ರ ಮತ್ತು ಟ್ರೆಂಟ್ ಬೋಲ್ಟ್ ಅವರು ಕೂಡ ನೆದರ್ಲ್ಯಾಂಡ್ ಗೆ ಬೆಂಬಿಡದೆ ಕಾಡಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಿಸಬೇಕಾಗಿತ್ತು. ಕಳೆದ ಪಂದ್ಯದ ಶತಕವೀರ ಡೆವನ್ ಕಾನ್ವೆ ಅವರು ಈ ಪಂದ್ಯದಲ್ಲಿ ಕೇವಲ 32 ರನ್ಗಳಿಗೆ ಔಟ್ ಆಗುವ ಮೂಲಕ ನ್ಯೂಜಿಲ್ಯಾಂಡ್ ತಂಡ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿತು. ನಂತರ ಆರಂಭಿಕ ವಿಲ್ ಯಂಗಗೆ ಜೊತೆಯಾದ ಭಾರತೀಯ ಮೂಲದ ರವೀಂದ್ರ ಅವರು ತಲ ಅರ್ಧಶತಕ ಬಾರಿಸಿ ತಂಡದ ಒಟ್ಟು ಮೊತ್ತ 300ರ ಗಡಿ ದಾಟುವಲ್ಲಿ ಅತ್ತಿ ಉಪಯುಕ್ತವಾದ ಕೊಡುಗೆ ನೀಡಿದರು. ಡೆವನ್ ಕಾನ್ವೆ ಮತ್ತು ವಿಲ್ ಎಂಗ್ ಅವರು ಪ್ರಥಮ ವಿಕೆಟ್ ಜೊತೆ ಆಟದಲ್ಲಿ 67 ರನ್ಗಳನ್ನು ಕಲೆ ಹಾಕಿದರು. ಯಂಗ್ ಅವರು 80 ಎಸೆತಗಳನ್ನು ಎದುರಿಸಿ 70 ರನ್ನುಗಳನ್ನು ಕಲೆ ಹಾಕಿದರು. ಇನ್ನು ಮೂರನೇ ವಿಕೆಟ್ ಗೆ ಅವರೊಂದಿಗೆ ಜೊತೆಯಾದ ರಚಿನ್ ರವೀಂದ್ರ ಅವರು 51 ಎಸೆತಗಳಲ್ಲಿ 51 ರನ್ಗಳನ್ನ ಕಲೆಹಾಕಿ ತಂಡದ ಮೊತ್ತ ಸುಧಾರಿಸುವಲ್ಲಿ ಪಾತ್ರ ವಹಿಸಿದರು. ಅವರು ಯಂಗ್ ಜೊತೆ 77 ರನ್ಗಳ ಜೊತೆ ಆಟವನ್ನು ನಿಭಾಯಿಸಿದರು. ನಂತರ ಬಂದ ಡೇರಿಲ್ ಮಿಚೆಲ್ ಅವರು 47 ಎಸೆತಗಳಲ್ಲಿ 48 ರನ್ಗಳನ್ನ ಕಲೆಹಾಕಿ ಟಾಮ್ ಲಾತಂ ಅವರೊಂದಿಗೆ 53 ರನ್ ಗಳ ಜೊತೆ ಆಟದ ಸಾಥ್ ನೀಡಿದರು. ತಮ್ಮ ಐದು ವಿಕೆಟ್ಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಮಿಚೆಲ್ ಸ್ಯಾಂಟ್ನರ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಶುಭಮನ್ ಗಿಲ್ ?

ಸ್ನೇಹಿತರೆ ಏಕದಿನ ವಿಶ್ವಕಪ್ 2023ರ ಅದ್ದೂರಿಯಾಗಿ ಆರಂಭವಾಗಿದ್ದು ಎಲ್ಲ ತಂಡಗಳ ಕಣ್ಣು ಚಾಂಪಿಯನ್ ಪಟ್ಟದ ಮೇಲೆ ನೆಟ್ಟಿದೆ. ಇನ್ನು ಅತಿಥಿಯ ತಂಡವಾದ ಭಾರತವು ಕೂಡ ತನ್ನ ಪ್ರಥಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಜಯಗಳಿಸುವುದರ ಮೂಲಕ ಅಧಿಕೃತವಾಗಿ ತನ್ನ ವಿಜಯ ಯಾತ್ರೆಯನ್ನು ಆರಂಭಿಸಿದೆ. ಆದರೆ ಪ್ರಥಮ ಪಂದ್ಯದಲ್ಲಿ ಆರಂಭಿಕರಾಗಿ ಆಡಬೇಕಿದ್ದ ಶುಭಮನ್ ಗಿಲ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರ ಸ್ಥಾನವನ್ನು ಇಶಾನ್ ಕಿಶನ್ ಅವರು ತುಂಬಿದ್ದರು. ಆದರೆ ಆ ಪಂದ್ಯದಲ್ಲಿ ಭಾರತದ ಬೌಲಿಂಗ್ ತಂಡವು ಅದ್ಭುತ ಪ್ರದರ್ಶನವೇನೋ ನೀಡಿತ್ತು ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾದ ರೋಹಿತ್ ಶರ್ಮ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರು ಶೂನ್ಯವನ್ನು ಸುತ್ತಿದ್ದರು. ತಂಡವು ಸೋಲಿನ ಸುಳಿಯ ಹಂತದಲ್ಲಿದ್ದಾಗ ಆಪತ್ಭಾಂಧವರಾಗಿ ಕರ್ನಾಟಕದ ಕನ್ನಡಿಗರಾದ ಕೆ ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯವರು ಶತಕದ ಜೊತೆಯಾಟ ಆಡುವ ಮೂಲಕ ಭಾರತ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡಕ್ಕೆ ಕೊಂಡು ಹೋಗಿದ್ದರು. ಆದರೆ ಇದೀಗ ಬೀಸಿಸಿಐ ಒಂದು ಸಿಹಿ ಸುದ್ದಿ ನೀಡಿದ್ದು ಆರಂಭಿಕ ಆಟಗಾರರಾದ ಶುಭಮಂಗಳ ಅವರು ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಬರಲಿರುವ ಪಾಕಿಸ್ತಾನ ತಂಡದ ವಿರುದ್ಧ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅವರು ತಂಡಕ್ಕೆ ಮರಳಿದರೆ ಅವರ ಬದಲಾಗಿ ಆಡುತ್ತಿರುವ ಇಶಾನ್ ಕಿಶನ್ ಅವರು ಹೊರಗೆ ಹೋಗಬೇಕಾಗುತ್ತದೆ. ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಅಪಘಾನಿಸ್ತಾನ ತಂಡದ ವಿರುದ್ಧ ಅಕ್ಟೋಬರ್ 11ರಂದು ಆಡಲಿದೆ. ಅದರ ನಂತರ ಪಂದ್ಯವು ಅಕ್ಟೋಬರ್ 14ರಂದು ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.

ಇದನ್ನೂ ಓದಿ..

ಏಷ್ಯನ್ ಗೇಮ್ಸ್ ಚಾಂಪಿಯನ್ಗಳನ್ನ ಭೇಟಿಯಾದ ಪ್ರಧಾನಿ ಮೋದಿ ಹೇಳಿದ್ದೇನು ನೋಡಿ!

ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಪದಕ ಜಯಿಸಿ ಬಂದ ಭಾರತದ ಅಥ್ಲೆಟ್ ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದರು ಅಲ್ಲದೆ ಅವರ ಉನ್ನತಿಗಾಗಿ ಬೇಕಾಗುವ ಎಲ್ಲ ರೀತಿಯ ಸಹಾಯ ಮಾಡಲು ಸರ್ಕಾರ ಬದ್ಧ ಎಂದು ಮಂಗಳವಾರ ಅವರೊಂದಿಗೆ ನಡೆದ ಸಂವಾದದಲ್ಲಿ ಆಶ್ವಾಸನೆ ಕೊಟ್ಟರು. ಇತ್ತೀಚಿಗೆ ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಅಥ್ಲೆಟ್ ಗಳು ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನವನ್ನು ನೀಡಿ ಒಟ್ಟು 107 ಪದಕಗಳನ್ನು ಜಯಿಸಿ ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿ ಮಂಗಳವಾರ ತವರಿಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರವು ಇಂತಹ ಅದ್ಭುತ ಕ್ರೀಡಾಪಟುಗಳಿಗೆ ಎಂತಹ ಸಹಾಯಕ್ಕಾದರೂ ಅವರ ಉನ್ನತಿಗಾಗಿ ಅಥವಾ ಗುಣಮಟ್ಟವನ್ನ ಹೆಚ್ಚಿಸಲು ನಾವು ಬದ್ಧವಾಗಿದ್ದೇವೆ ಎಂದು ಆಶ್ವಾಸನೆ ನೀಡಿದರು. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಏನೂ ಇಲ್ಲ ಆದರೆ ಅವರಿಗೆ ಅವಶ್ಯಕವಾದ ಅವಕಾಶ ಮತ್ತು ಮಾರ್ಗದರ್ಶನದ ಕೊರತೆ ಹೆಚ್ಚಾಗಿ ಕಾಡುತ್ತದೆ. ಈ ಕಾರಣದಿಂದ ಸರ್ಕಾರವು ತೆಗೆದುಕೊಂಡ ಕ್ರಮಗಳಲ್ಲಿ ಖೇಲೋ ಇಂಡಿಯಾ ಕೂಡ ಒಂದು. ಆಟಗಾರರಿಗೆ ಬೇಕಾದ ಅನಿವಾರ್ಯವಾದ ಮತ್ತು ಅವಶ್ಯಕತೆ ಮತ್ತು ಅವರಿಗೆ ಸಹಾಯಧನ ಮುಂತಾದ ವಿಷಯಗಳನ್ನು ಪರಿಹರಿಸುವ ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯಾದ ಯೋಜನೆಯಾಗಿದ್ದು ಕ್ರೀಡಾಪಟುಗಳಿಗೆ ಅತ್ಯುತ್ತಮವಾಗಿ ಸಹಾಯಕವಾಗಲಿದೆ. ನಮ್ಮ ಕ್ರೀಡಾಪಟುಗಳ ತಾಳ್ಮೆ ಪರಿಶ್ರಮ ಅವರ ತ್ಯಾಗ ಇಡೀ ದೇಶಕ್ಕೆ ಮಾದರಿಯಾಗಿದ್ದು ಬರಲಿರುವ ಒಲಂಪಿಕ್ ನಲ್ಲಿ ಇನ್ನು ಅತಿ ಹೆಚ್ಚಿನ ಸಾಧನೆಯನ್ನು ಮಾಡಲಿ ಮತ್ತು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹಾರೈಸಿದರು. ಅಂತೆ ಚೀನಾದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ ನಲ್ಲಿ ಭಾರತವು 28 ಚಿನ್ನದ ಪದಕಗಳೊಂದಿಗೆ ಒಟ್ಟು 107 ಪದಕಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ತನ್ನ ಏಷ್ಯನ್ ಗೇಮ್ಸ್ ಅನ್ನು ಮುಗಿಸಿದ್ದು ಮುಂಬರಲಿರುವ ಒಲಿಂಪಿಕ್ ಮೇಲೆ ಕಣ್ಣೀರಿಸಿದೆ.

Recent Posts

Rain Update: ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ನಿಮ್ಮ ಜಿಲ್ಲೆಯಲ್ಲಿಯೂ ಆಗಲಿದೆಯಾ ಚೆಕ್ ಮಾಡಿ!

. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ…

56 years ago

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago