Categories: information

ಇದನ್ನು ಓದಿದ ಬಳಿಕ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆಗುವುದಿಲ್ಲ!

Spread the love

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಲ್ಲಿ ಹೆಚ್ಚಾಗಿ ಕೇಳಲ್ಪಡುವ ಪ್ರಶ್ನೆಗಳೆಂದರೆ ಅದು ಭಾರತದ ರಾಷ್ಟ್ರಪತಿಗಳ ಕುರಿತು.ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ಬಗ್ಗೆ ಪ್ರಶ್ನೆಗಳು ಕೇಳುವುದು ಬಹಳ ಸಹಜವಾಗಿದೆ. ಇದು ಕೇಳಲು ಸಾಮಾನ್ಯ ಎನಿಸಿದರೂ ಇಂತಹ ಪ್ರಶ್ನೆಗಳನ್ನೇ ಹಲವರು ತಪ್ಪಾಗಿ ಉತ್ತರಿಸುತ್ತಾರೆ. ಹಾಗಾಗಿ ಇವತ್ತಿನ ಈ ಅರ್ಟಿಕಲ್ ನಲ್ಲಿ ಭಾರತದ ಸ್ವಂತಂತ್ರ್ಯದ ನಂತರದಿಂದ ಹಿಡಿದು ಇಲ್ಲಿಯವರೆಗಿನ ರಾಷ್ಟ್ರಪತಿಗಳು ಯಾರ್ಯಾರು ಎಂಬುದನ್ನ ಚಿತ್ರಸಹಿತ ನೋಡೋಣ ಬನ್ನಿ.

Thank you for reading this post, don't forget to subscribe!

1. ಡಾII ರಾಜೇಂದ್ರ ಪ್ರಸಾದ್ (26 ಜನೆವರಿ 1950 ರಿಂದ 13 ಮೇ 1962)
ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಗಳಾಗಿ ಎರಡು ಬಾರಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಂವಿಧಾನ ಸಭೆಯ ಅಧ್ಯಕ್ಷರು ಆಗಿದ್ದರು. ಇವರಿಗೆ 1962 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

2. ಡಾ. ಸರ್ವಪಲ್ಲಿ ರಾಧಾಕೃಷ್ಣನ್ : (13 ಮೇ 1962-13 ಮೇ 1967)
ಇವರು ಭಾರತದ 2 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಸೆಪ್ಟೆಂಬರ್ 5,1888 ರಂದು ಜನಿಸಿದರು. ಇವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಇವರಿಗೆ 1954 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರಕಿದೆ.

3. ಡಾ. ಝಾಕಿರ್ ಹುಸೇನ್ : (13 ಮೇ 1967-03 ಮೇ 1969)
ಇವರು ಭಾರತದ 3 ನೇ ರಾಷ್ಟ್ರಪತಿ ಆಗಿದ್ದಾರೆ. ಅಲ್ಲದೇ ಇವರು ಭಾರತದ ಪ್ರಥಮ ಮುಸ್ಲಿಂ ರಾಷ್ಟ್ರಪತಿಗಳಾಗಿದ್ದಾರೆ ಮತ್ತು ಇವರು ಸೇವೆಯಲ್ಲಿದ್ದಾಗಲೇ ಮರಣ ಹೊಂದಿದರು. ಇವರ ಅಕಾಲಿಕ ಮರಣದಿಂದಾಗಿ ತೆರವುಗೊಂಡಿದ್ದ ಸ್ಥಾನವನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಎಂ. ಹಿದಾಯತ್ತುಲ್ಲಾ ಅವರು ರಾಷ್ಟ್ರಪತಿಗಳಾದರು.

4. ವಿ. ವಿ. ಗಿರಿ : (24 ಆಗಸ್ಟ್ 1969-24 ಆಗಸ್ಟ್ 1974)
ಇವರು ಭಾರತದ ನಾಲ್ಕನೇ ರಾಷ್ಟ್ರಪತಿಗಳು. ಇವರ ಪೂರ್ಣ ಹೆಸರು ವರಾಹಗಿರಿ ವೆಂಕಟ ಗಿರಿ. ಇವರಿಗೆ 1975 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರಕಿದೆ.

5.ಫಕ್ರುದ್ದಿನ್ ಅಲಿ ಅಹ್ಮದ್ : (24 ಆಗಸ್ಟ್ 1974-11 ಫೆಬ್ರವರಿ 1977)
ಇವರು ಭಾರತದ 5 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಕೂಡ ಸೇವೆಯಲ್ಲಿದ್ದಾಗಲೇ ಮರಣ ಹೊಂದಿದರು. ಇವರ ಅಕಾಲಿಕ ಮರಣದಿಂದಾಗಿ ತೆರವುಗೊಂಡಿದ್ದ ಸ್ಥಾನವನ್ನು ಬಿ. ಡಿ.ಜತ್ತಿಯವರು ನಿಭಾಯಿಸಿದ್ದರು.

6. ನೀಲಂ ಸಂಜೀವ್ ರೆಡ್ಡಿ : (25 ಜುಲೈ 1977-25 ಜುಲೈ 1982)
ಇವರು ಭಾರತದ 6 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಆಂಧ್ರ ಪ್ರದೇಶದ ಪ್ರಥಮ ಮುಖ್ಯಮಂತ್ರಿಗಳೂ ಆಗಿದ್ದರು.

7. ಗ್ಯಾನಿ ಜೇಲ್ ಸಿಂಗ್ : (25 ಜುಲೈ 1982-25 ಜುಲೈ 1987)
ಇವರು ಭಾರತದ 7 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ರಾಷ್ಟ್ರಪತಿಗಳಾಗುವ ಮುನ್ನ ಪಂಜಾಬಿನ ಮುಖ್ಯಮಂತ್ರಿ ಆಗಿದ್ದರು.

8. ಆರ್. ವೆಂಕಟರಮಣ : (25 ಜುಲೈ 1987-25 ಜುಲೈ 1992)
ಇವರು ಭಾರತದ 8 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು 1984 ರಿಂದ 1987 ರವರೆಗೆ ಭಾರತದ ಉಪರಾಷ್ಟ್ರಪತಿಗಳಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

9. ಡಾ. ಶಂಕರ್ ದಯಾಳ್ ಶರ್ಮ: (25 ಜುಲೈ 1992-25 ಜುಲೈ 1997)
ಇವರು ಭಾರತದ 9 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು 1952 ರಿಂದ 1956 ರವರೆಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

10. ಕೆ. ಆರ್. ನಾರಾಯಣ: (25 ಜುಲೈ 1997-25 ಜುಲೈ 2002)
ಇವರು ಭಾರತದ 10 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಭಾರತದ ಪ್ರಥಮ ದಲಿತ ರಾಷ್ಟ್ರಪತಿಗಳಾಗಿದ್ದಾರೆ.

11. ಡಾ. ಎ. ಪಿ. ಜೆ. ಅಬ್ದುಲ್ ಕಲಾಂ: (25 ಜುಲೈ 2002-25 ಜುಲೈ 2007)
ಇವರು ಭಾರತದ 11 ನೇ ರಾಷ್ಟ್ರಪತಿ ಆಗಿದ್ದಾರೆ. ಇವರನ್ನು ಭಾರತದ ಮೀಸೈಲ್ ಮ್ಯಾನ್ ಎಂತಲೂ ಕರೆಯುತ್ತಾರೆ. ಇವರಿಗೆ 1997 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರಕಿದೆ.

12. ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್: (25 ಜುಲೈ 2007-25 ಜುಲೈ 2012)
ಇವರು ಭಾರತದ 12 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಆಗಿದ್ದಾರೆ.

13. ಪ್ರಣಬ್ ಮುಖರ್ಜಿ: (25 ಜುಲೈ 2012-25 ಜುಲೈ 2017)
ಇವರು ಭಾರತದ 13 ನೇ ರಾಷ್ಟ್ರಪತಿ ಆಗಿದ್ದಾರೆ. ಇವರಿಗೆ 2018 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರಕಿದೆ.

14. ರಾಮನಾಥ ಕೋವಿಂದ: (25 ಜುಲೈ 2017-21 ಜುಲೈ 2022)
ಇವರು ಭಾರತದ 14 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

15.ಶ್ರೀಮತಿ ದ್ರೌಪದಿ ಮುರ್ಮು: (21 ಜುಲೈ 2022 ರಿಂದ ಇಲ್ಲಿಯವರೆಗೆ )
ಇವರು ಭಾರತದ 15 ನೇ ರಾಷ್ಟ್ರಪತಿ ಆಗಿದ್ದಾರೆ. ಇವರು ಭಾರತದ ಪ್ರಥಮ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಆಗಿದ್ದಾರೆ. ಇವರು ಜಾರ್ಖಂಡ್ ನ ರಾಜ್ಯಪಾಲರು ಆಗಿದ್ದರು.

ಇದನ್ನೂ ಓದಿ..

ಜನಸಂಖ್ಯಾ ಸ್ಫೋಟ ಎಂದರೇನು? ಅದರಿಂದಾಗುವ ಹಾನಿಗಳೇನು?

ಜನಸಂಖ್ಯಾ ಸ್ಫೋಟ ಎಂದರೇನು?
ಯಾವುದೇ ಒಂದು ದೇಶದ ಜನಸಂಖ್ಯೆಯು ಕಡಿಮೆ ಅವಧಿಯಲ್ಲಿ ಹೆಚ್ಚು ಉನ್ನತಿಯನ್ನು ಕಾಣುವುದಕ್ಕೆ ಜನಸಂಖ್ಯಾ ಸ್ಫೋಟ ಎಂದು ಕರೆಯುತ್ತಾರೆ. ಜನಸಂಖ್ಯೆಯನ್ನು ಅಧ್ಯಯನ ಮಾಡುವ ವಿಭಾಗಕ್ಕೆ ಜನಸಂಖ್ಯಾ ಶಾಸ್ತ್ರ(ಡೆಮಗ್ರಪಿ) ಎಂದು ಕರೆಯಲಾಗುತ್ತದೆ. ಇದು ಜನರ ಪ್ರಮಾಣ ಮರಣ ಪ್ರಮಾಣ ವಲಸೆ ಪ್ರಮಾಣಗಳ ಕುರಿತು ಸವಿವರವಾಗಿ ಅಧ್ಯಯನ ಮಾಡುವುದಕ್ಕೆ ಡೆಮೊಗ್ರಾಫಿ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಾರಣಗಳು :-
1. ಬಡತನ :
ಬಡತನವು ನೇರವಾಗಿ ಜನನ ಪ್ರಮಾಣದ ಮೇಲೆ ಪ್ರಭಾವವನ್ನು ಬೀರುತ್ತದೆ. ಭಾರತದ ಬಡ ರಾಜ್ಯಗಳಾದ ಬಿಹಾರ್ ಉತ್ತರ ಪ್ರದೇಶ ರಾಜಸ್ಥಾನ ಮಧ್ಯಪ್ರದೇಶಗಳು ಹೆಚ್ಚಿನ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ ಅಂದರೆ 3.1 ರಷ್ಟು ಫಲವತ್ತತೆಯನ್ನು ಇವು ಹೊಂದಿವೆ. ಅದೇ ಭಾರತದ ಶ್ರೀಮಂತ ರಾಜ್ಯಗಳಾದ ಕೇರಳ ತಮಿಳುನಾಡು ಫಲವತ್ತತೆಯ ಪ್ರಮಾಣ 1.8ರಷ್ಟು ಇದೆ. ಬಡ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರೇ ಒಂದು ಆಸ್ತಿ ಎಂದು ಭಾವಿಸಿರುತ್ತಾರೆ. ಇದಕ್ಕಾಗಿ ಕುಟುಂಬದ ಆದಾಯ ಹೆಚ್ಚಿಸಲು ಅವರು ಹೆಚ್ಚು ಹೆಚ್ಚು ಸದಸ್ಯರನ್ನು ಹೊಂದಲು ಬಯಸುತ್ತಾರೆ. ಈ ಕಾರಣದಿಂದ ಜನಸಂಖ್ಯಾ ಸ್ಪೋಟ ಉಂಟಾಗುತ್ತದೆ
2. ಜನಸಂಖ್ಯಾ ಸ್ಫೋಟದಿಂದ ಆಗುವ ನಷ್ಟಗಳ ಕುರಿತು ತಿಳುವಳಿಕೆ ಇಲ್ಲದಿರುವುದು :
ಇದಕ್ಕೆ ಮೂಲ ಕಾರಣ ಅನಕ್ಷರತೆ. ಈ ಕಾರಣದಿಂದಾಗಿ ಕುಟುಂಬ ಯೋಜನೆಯ ಲಾಭಗಳ ಕುರಿತು ಅವರಿಗೆ ಅರಿವು ಉಂಟಾಗುವುದಿಲ್ಲ. ಅಲ್ಲದೆ ಗರ್ಭನಿರೋಧಕಗಳು ಮತ್ತು ಅವುಗಳ ವಿಧಗಳ ಬಗ್ಗೆಯೂ ಅವರಿಗೆ ಮಾಹಿತಿ ಇರುವುದಿಲ್ಲ. ಕೆಲವೊಮ್ಮೆ ಧಾರ್ಮಿಕ ನಂಬಿಕೆಗಳು ಕೂಡ ಗರ್ಭ ನಿರೋಧಕಗಳನ್ನು ಬಳಸಲು ಅಡ್ಡಿ ಉಂಟು ಮಾಡುತ್ತವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇಂತಹ ಗರ್ಭ ನಿರೋಧಕ ತಂತ್ರಜ್ಞಾನವನ್ನ ಬಳಸಲು ಹಿಂಜರಿಕೆ ಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
3. ಮಹಿಳಾ ಸಬಲೀಕರಣದ ಕೊರತೆ :
ಮಹಿಳೆಯರಿಗೆ ಸಾರ್ವಜನಿಕ ಉದ್ಯೋಗಗಳಲ್ಲಿ ಅವಕಾಶ ನೀಡದಿರುವುದು ಜನನ ಪ್ರಮಾಣ ಹೆಚ್ಚಿಗೆ ಆಗಲು ಕಾರಣವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಸಾರ್ವಜನಿಕ ಉದ್ಯೋಗಗಳಲ್ಲಿ ಕೆಲಸ ಮಾಡುವ ಮಹಿಳೆಯರ ಫಲವತ್ತತೆಯ ಪ್ರಮಾಣ ಕಡಿಮೆ ಎಂದು ತಿಳಿದುಬಂದಿದೆ. ಅಲ್ಲದೆ ಹಳ್ಳಿಗಳಲ್ಲಿ ಸಾರ್ವಜನಿಕ ಉದ್ಯೋಗಗಳಲ್ಲಿ ಕೆಲಸ ಮಾಡದ ಮಹಿಳೆಯರ ಫಲವತ್ತತೆಯ ಪ್ರಮಾಣ ಹೆಚ್ಚು ಎಂದು ತಿಳಿದು ಬಂದಿದೆ. ಸ್ನೇಹಿತರೆ ಫಲವತ್ತತೆಯ ಪ್ರಮಾಣ ಹೆಚ್ಚಾದಷ್ಟು ಜನಸಂಖ್ಯಾ ಸ್ಪೋಟ ಹೆಚ್ಚಾಗುತ್ತದೆ. ಮಹಿಳೆಯರಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇರುವುದರಿಂದ ಇದು ಕೂಡ ಜನಸಂಖ್ಯಾ ಸ್ಫೋಟಕ್ಕೆ ಮುಖ್ಯವಾದ ಕಾರಣವಾಗಿದೆ. ಜೊತೆಗೆ ಬಾಲ್ಯ ವಿವಾಹವು ಕೂಡ ಜನಸಂಖ್ಯಾ ಸ್ಪೋಟಕ್ಕೆ ಪಿಡುಗಾಗಿ ಪರಿಣಮಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜ ಆಗಿರುವುದರಿಂದ ಕುಟುಂಬ ಯೋಜನೆಯ ಎಲ್ಲಾ ನಿರ್ಧಾರಗಳನ್ನು ಕುಟುಂಬದ ಪುರುಷಣೆ ತೆಗೆದುಕೊಳ್ಳುವುದರಿಂದ ಮಹಿಳೆಯರಿಗೆ ಕುಟುಂಬ ಯೋಜನೆಯ ಹೆಚ್ಚಿನ ಸ್ವಾತಂತ್ರ್ಯ ಇರುವುದಿಲ್ಲ.
4. ಕಡಿಮೆ ಮರಣ ಪ್ರಮಾಣ ಹೆಚ್ಚು ಜನನ ಪ್ರಮಾಣ : ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಂದು ಭಾರತದಲ್ಲಿ ಮರಣಗಳ ಪ್ರಮಾಣ ಕಡಿಮೆಯಾಗಿದ್ದು ಹೆಚ್ಚು ಜನನ ಉಂಟಾಗುತ್ತಿವೆ. ಅಲ್ಲದೆ ಸರಾಸರಿ ಜೀವಿತಾವಧಿಯು ಹೆಚ್ಚಾಗಿದ್ದು ಮರಣಗಳ ಸಂಖ್ಯೆಯಲ್ಲಿ ಕ್ಷಿಣತೆ ಕಂಡುಬಂದಿದೆ.
ಜನಸಂಖ್ಯಾ ಸ್ಫೋಟದಿಂದ ಆಗುವ ಪರಿಣಾಮಗಳು :
1. ಆಹಾರ ಮತ್ತು ಸಂಪನ್ಮೂಲಗಳ ಕೊರತೆ :
ಸಂಪನ್ಮೂಲಗಳಾದ ನೀರು ಭೂಮಿ ಖನಿಜ ಮುಂತಾದವುಗಳು ಕಡಿಮೆ ಪ್ರಮಾಣದಲ್ಲಿ ಪ್ರಕೃತಿಯಲ್ಲಿ ಲಭ್ಯವಿದ್ದು ಅವು ಕೆಲವೇ ಜನಸಂಖ್ಯೆಗೆ ದೊರಕಬಹುದಾಗಿದೆ. ಆದರೆ ಎತ್ತುತ್ತಿರುವ ಜನಸಂಖ್ಯೆಯ ಸಮಸ್ಯೆಯಿಂದ ಇವುಗಳ ಲಭ್ಯದಲ್ಲಿ ಕೊರತೆ ಕಂಡು ಬಂದಿದೆ.
2. ಜನರ ಬಡತನ ಹೆಚ್ಚಾಗುತ್ತದೆ:
ಸಂಪನ್ಮೂಲಗಳ ಕೊರತೆಯಿಂದಾಗಿ ಜನರಲ್ಲಿ ಬಡತನದ ಸಮಸ್ಯೆ ಎದ್ದು ಕಾಣುತ್ತದೆ. ಆರ್ಥಿಕತೆ ಮತ್ತು ಬಡತನ ಎರಡೂ ಒಂದನ್ನೊಂದು ಅವಲಂಬಿಸಿರುವುದರಿಂದ ಬಡತನ ಹೆಚ್ಚಾದಷ್ಟು ದೇಶದ ಆರ್ಥಿಕತೆ ಕುಸಿಯುತ್ತದೆ, ದೇಶದ ಆರ್ಥಿಕತೆ ಕುಸಿದಷ್ಟು ಬಡತನ ಮತ್ತಷ್ಟು ಹೆಚ್ಚಾಗುತ್ತದೆ. ಬಡತನದ ಕಾರಣದಿಂದಾಗಿ ಕುಟುಂಬದ ಆದಾಯ ಕಡಿಮೆಯಾಗುತ್ತದೆ ಹೀಗಾಗಿ ಕುಟುಂಬದ ಆದಾಯ ಹೆಚ್ಚಿಸಲು ಜನರ ವಲಸೆ ಶುರುವಾಗುತ್ತದೆ. ಹೀಗೆ ವಲಸೆ ಬಂದ ಜನರು ಮತ್ತೊಂದು ರಾಜ್ಯದಲ್ಲಿ ಉಳಿದುಕೊಳ್ಳುವುದರಿಂದ ಅಲ್ಲಿಯೂ ಕೂಡ ಸಂಪನ್ಮೂಲದ ಕೊರತೆ ಹೆಚ್ಚಾಗುತ್ತದೆ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago