WhatsApp Group                             Join Now            
   
                    Telegram Group                             Join Now            
Spread the love

ಚಲನಚಿತ್ರರಂಗದಲ್ಲಿ ಯಾವ ಗಾಡ್ ಫಾದರ್ ಗಳಿಲ್ಲದೆ ತಮ್ಮ ಮನೋಜ್ಞ ನಟನೆಯಿಂದಲೇ ಕನ್ನಡ ಚಲನಚಿತ್ರರಂಗದಲ್ಲಿ ವಿಶೇಷ ಛಾಪನ್ನು ಮೂಡಿಸಿದಂತಹ ನಟ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್. ತಮ್ಮ ಕರಿಯರ್ ನ ಆರಂಭದಲ್ಲಿ ಸಹನಾಯಕ ನಟನಾಗಿ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಅವರು ಮುಂದೆ ತಮ್ಮ ಅದ್ಭುತ ನಟನೆಯಿಂದ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಲನಚಿತ್ರ ರಂಗದ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರವನ್ನು ವಿವರಿಸಿದ್ದಾರೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಇತ್ತೀಚೆಗೆ ಬಿಡುಗಡೆಗೊಂಡ ಅವರ ಕೆಜಿಎಫ್ 2 ಚಲನಚಿತ್ರ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಈ ಕಾರಣದಿಂದಲೇ ಅವರ ಮುಂದಿನ ಚಲನಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಹಾತೊರೆಯುತ್ತಿದ್ದಾರೆ. ಆರ್ಟಿಕಲ್ ನಲ್ಲಿ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇವೆ. ಕೊನೆಯವರೆಗೂ ತಪ್ಪದೇ ಓದಿ.

1. ಯಶ್ 19:

ಮಫ್ತಿ ಚಿತ್ರವನ್ನು ನಿರ್ದೇಶಿಸಿದ ನಾರ್ಧನ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಇಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜೋಡಿಯಾಗಿ ಪೂಜಾ ಹೆಗಡೆಯವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಸ್ಯಾಂಡಲ್ವುಡ್ನ ಅಂಗಳದಲ್ಲಿ ಹರಿದಾಡುತ್ತಿವೆ. ಈ ಚಿತ್ರದ ಚಿತ್ರೀಕರಣವು ಈ ವರ್ಷದ ಹಂತದಲ್ಲಿ ಆರಂಭವಾಗಲಿದ್ದು ಚಿತ್ರವು 2024ರ ಅಂತ್ಯದಲ್ಲಿ ಫ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

2. ಕೆ ಜಿ ಎಫ್ 3:

ಕೆಜಿಎಫ್ ಟು ಚಿತ್ರದ ಯಶಸ್ವಿನಿಂದ ಪ್ರೇರಿತವಾಗಿರುವ ಈ ಚಿತ್ರವು ಪ್ರಶಾಂತ ಅವರೇ ನಿರ್ದೇಶಿಸುತ್ತಿದ್ದು ಈ ಚಿತ್ರವನ್ನು 2025 ಕ್ಕೆ ತೆರೆಗೆ ತರಲು ಅವರು ಯೋಚಿಸುತ್ತಿದ್ದಾರೆ. ಈ ಚಿತ್ರವನ್ನು ವಿಜಯ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರವೂ ಕೂಡ ಕೆಜಿಎಫ್ 2 ನ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದ್ದು ಇದು ಅದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಗಳಿಸುವ ನಿರೀಕ್ಷೆ ಇದೆ ಎಂದು ನಿರ್ದೇಶಕರು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

      
                    WhatsApp Group                             Join Now            
   
                    Telegram Group                             Join Now            

3. ಯಶ್ 21:

ಈ ಚಿತ್ರವು ಆಕ್ಷನ್ ಡ್ರಾಮಾ ವಾಗಿದ್ದು ಇದನ್ನು ರೋಬೋಟ್ 2.0 ನಿರ್ದೇಶಕರಾದ ಎಸ್ ಶಂಕರ್ ಅವರು ನಿರ್ದೇಶನ ಮಾಡಲಿದ್ದಾರೆ. ಇದು 800 ಕೋಟಿಯ ಮತ್ತೊಂದು ಬಿಗ್ ಬಜೆಟ್ ಮೂವಿ ಆಗಿದ್ದು ಇದನ್ನು ಮೂರು ಭಾಗದಲ್ಲಿ ತೆರೆಗೆ ತರುವ ಯೋಜನೆಯನ್ನು ಶಂಕರ್ ಅವರು ವ್ಯಕ್ತಪಡಿಸಿದ್ದಾರೆ. ಮೊದಲು ಈ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಶಂಕರ್ ಅವರು ಕೊನೆಗೆ ಕನ್ನಡದ ಸ್ಟಾರ್ ಯಶ್ ಅವರನ್ನು ಆಯ್ಕೆ ಮಾಡಿದ್ದು ಮತ್ತೊಂದು ವಿಶೇಷ. ಇದನ್ನು ಕೂಡ 2025ರ ಆರಂಭದಲ್ಲಿ ಮೊದಲ ಭಾಗವನ್ನು ತೆರೆಗೆ ತರುವ ಯೋಜನೆಯ ರೂಪಿಸಿದ್ದಾರೆ ನಿರ್ದೇಶಕರು.

4. ಬ್ರಹ್ಮಾಸ್ತ್ರ 2:

ಅಯಾನ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಪಾರ್ಟ್ 1 ಚಿತ್ರದ ಮುಂದುವರಿದ ಭಾಗವಾದ ಈ ಚಿತ್ರದಲ್ಲಿ ಯಶ್ ಅವರು ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಮೊದಲು ಈ ಚಿತ್ರವನ್ನು ಹೃತಿಕ್ ರೋಷನ್ ಅವರಿಗೆ ನಟಿಸಲು ಕೇಳಲಾಗಿತ್ತು ಅಂದರೆ ಅವರು ತಿರಸ್ಕರಿಸಿದ ಕಾರಣ ಚಿತ್ರತಂಡ ಯಶ್ ಅವರಿಗೆ ಭೇಟಿಯಾಗಿತ್ತು. ಅಲ್ಲದೆ ಈ ಚಿತ್ರದಲ್ಲಿ ರಣಧೀರ ಸಿಂಗ್ ಅವರೂ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಈಗ ಈ ಚಿತ್ರದಲ್ಲಿ ನಟರಾಗಿ ಯಶ್ ಅವರು ಕಾಣಿಸಿಕೊಳ್ಳಲಿದ್ದಾರೆ ಅಥವಾ ರನ್ವೀರ್ ಸಿಂಗ್ ಅವರು ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

5. ಇನ್ನೊಂದು ಚಿತ್ರದಲ್ಲಿ ರಾಕಿ ಭಾಯ್ ಅಭಿನಯಿಸಲಿದ್ದು ಅದರ ಟೈಟಲ್ ಅನ್ನ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ಕುರಿತು ಯಶ್ ಅವರೇ ವಿಡಿಯೋ ಒಂದನ್ನು ಮಾಡಿ ಅದರಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಯಾವ ಚಿತ್ರವಾಗಿರಲಿದೆ ಮತ್ತು ಚಿತ್ರ ಚಿತ್ರದಲ್ಲಿ ಯಾರ್ಯಾರು ನಟಿಸಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ. ಇದರ ಕುರಿತಂತೆ ಯಶವರು ಆದಷ್ಟು ಬೇಗನೆ ಈ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ನೇಹಿತರೆ ಇವು ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾಗಳು. ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಮ್ಮ ವೆಬ್ಸೈಟ್ಗೆ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ನಮ್ಮ ಮುಂದಿನ ವಿಶೇಷ ಮಾಹಿತಿಯನ್ನು ನೀವೇ ಮೊದಲಿಗರಾಗಿ ಪಡೆದುಕೊಳ್ಳಿ. ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

By

Leave a Reply

Your email address will not be published. Required fields are marked *