ವಂಶಾವಳಿ ಪ್ರಮಾಣ ಪತ್ರ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸ್ಥಿತಿಯನ್ನು ಪರಿಶೀಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ವಂಶಾವಳಿ ಅಥವಾ ವಂಶವೃಕ್ಷ , ವಾಸಸ್ಥಳ ಪ್ರಮಾಣ ಪತ್ರವನ್ನು ಮನೆಯಲ್ಲಿ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಂಶಾವಳಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ
Thank you for reading this post, don't forget to subscribe!ಸರ್ಕಾರವು ಪ್ರಮಾಣ ಪತ್ರಗಳನ್ನು ಸರಳೀಕರಣಗೊಳಿಸಿ, ಕಾಗದರಹಿತವಾಗಿ ಅಳವಡಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆನ್‌ಲೈನ್ ನಲ್ಲಿಯೇ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ ಶುಲ್ಕ ಪಾವತಿ ನಿರ್ಧಷ್ಟ ಪ್ರಮಾಣ ಪತ್ರ ಪಡೆಯಬಹುದು.
ವಂಶಾವಳಿಯಲ್ಲಿ ಕುಟುಂಬದ ಸದಸ್ಯ ಎಷ್ಟುಜನರ ಹೆಸರು ಸೇರಿಸುತ್ತೀರೋ ಅವರೆಲ್ಲರ ಆಧಾರ್ ಕಾರ್ಡ್, ಪಡಿತರ ಚೀಟಿ, ವಂಶವೃಕ್ಷಕ್ಕಾಗಿ 20 ರೂಪಾಯಿ ಇ-ಸ್ಟ್ಯಾಂಪ್ ಪೇಪರ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಬರೆದು ನೋಟರಿ ಮಾಡಿಸಿಕೊಳ್ಳಬೇಕು. ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ಮಾಡಿದ ಫೈಲ್ ಗಳ ಸೈಜ್ 2 ಎಂಬಿಗಿಂತ ಕಡಿಮೆಯಿರಬೇಕು.
ಮನೆಯಲ್ಲಿಯೇ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು
ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಾಡ ಕಚೇರಿಯ ವೆಬ್‌ಸ್ಟೈಟ್ ಆಗಲಿದೆ. ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು. ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ.
ಆಗ ನ್ಯೂ ರೆಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಅದರ ಕೆಳಗಡೆ ಅಟೆಸ್ಟೇಷನ್ ಆಫ್ ಫ್ಯಾಮಿಲಿ ಟ್ರೈ ಮೇಲೆ ಕ್ಲಿಕ್ ಮಾಡಿ. ಆಗ ಕುಟುಂಬ ವಂಶವೃಕ್ಷ ದೃಢೀಕರಣ ಪೇಜ್ ಓಪನ್ ಆಗುತ್ತದೆ.ಇಲ್ಲಿ ನೀವು ಅರ್ಜಿಯನ್ನು ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಭರ್ತಿ ಮಾಡಬಹುದು. ಅರ್ಜಿಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ನಾವು, ಅರ್ಜಿದಾರರ ಹೆಸರು, ತಂದೆ ತಾಯಿಯ ಹೆಸರು, ವಿಳಾಸ, ಮೊ1ಬೈಲ್ ನಂಬರ್, ಮನೆ ಸದಸ್ಯರ ಹೆಸರು, ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಕುರಿತು, ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಸ್ಕ್ಯಾನ್ ಮಾಡಿದ ಎಲ್ಲಾ ದಖಲೆಗಳನ್ನು ಒಂದೊಂದಾಗಿ ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೊ ಸಹ ಅಪ್ಲೋಡ್ ಮಾಡಬೇಕು. ನಂತರ ಸೇವ್ ಮಾಡಬೇಕು. ಆಗ ಅಕ್ನಲಾಜ್ ನಂಬರ್ ಕ್ರಿಯೇಟ್ ಆಗುತ್ತದೆ. ಈ ನಂಬರ್ ಸಹಾಯದ ಅರ್ಜಿಯ ಸ್ಟೇಟಸ್ ನೋಡಬಹುದು.ನಿಮ್ಮ ಮೊಬೈಲ್ ನಂಬರಿಗೆ ಮೆಸೆಜ್ ಸಹ ಬರುತ್ತದೆ. ಈ ಅಕ್ನಲಾಜ್ ಮೆಂಟ್ ಪ್ರಿಂಟ್ ಸಹ ತೆಗೆದುಕೊಳ್ಳುತ್ತದೆ. ನಂತರ ಈ ಸೈನ್ ಗಾಗಿ ಫೇಲ್ಡ್ ಟ್ರಾನ್ಸಕ್ಷನ್ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಈ ಸೈನ್ ದ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ಷೋ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.. ಆಧಾರ್ ನಂಬರ್ ಹಾಕಿದ ನಂತರ ಒಟಿಪಿ ಬರುತ್ತದೆ. ಒಟಿಪಿ ನಮೂದಿಬೇಕು. ನಂತರ ಮತ್ತೆ ಫೇಲ್ಡ್ ಟ್ರಾನ್ಸೆಕ್ಷನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ. ನಂತರ ಅಕ್ನಾಲಾಜ್ಮೆಂಟ್ ಆರ್ ಡಿ ಸಂಖ್ಯೆ ಹಾಕಿ ಶೋ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಸರ್ಕಾರದ ಶುಲ್ಕ 25 ರೂಪಾಯಿ ನೀಡಬೇಕು. ಅರ್ಜಿ ಸಲ್ಲಿಸಿದ ನಂತರ ವಂಶಾವೃಕ್ಷ ಪ್ರಮಾಣ ಪತ್ರ ಪಡೆಯಬಹಬುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ನಂತರ ವಂಶಾವಳಿ ಅರ್ಜಿಯನ್ನು ಗ್ರಾಮಲೇಖಪಾಲಕರಿಗೆ ನಂತರ ಆಯ್ಕೆ ನಿರೀಕ್ಷಕರಿಗೆ ಸಲ್ಲಿಸದಿದ್ದರೆ. ಅರ್ಜಿ ಪರಿಶೀಲಿಸಿದ ನಂತರ ಅವರು ಉಪ ತಹಶೀಲ್ದಾರರಿಗೆ ಸಲ್ಲಿಸುತ್ತಾರೆ. ಎಲ್ಲಾ ಹಂತಗಳ ನಂತರ 7 ದಿನಗಳೊಳಗೆ ಅರ್ಜಿ ಪಡೆಯಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…