WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಹಿಂದೂಗಳ ಪಾಲಿಗೆ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಸುರಂಗ ನಿರ್ಮಾಣದ ವೇಳೆಯಲ್ಲಿ ನಡೆದಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಇಂದು ಇತಿಹಾಸ ಸೇರಿದೆ. ಬರೋಬ್ಬರಿ 16 ದಿನಗಳ ಸತತ ಕಾರ್ಯಾಚರಣೆಯ ಮೂಲಕ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರಗೆ ಕರೆ ತರಲಾಗಿದೆ. ಈ ಸುರಂಗ ಕೊರೆಯುತ್ತಿರುವ ಮುಖ್ಯಕಾರಣವನೆಂದರೆ…. ಚಾರ್ ಧಾಮ್ ಯಾತ್ರೆಯನ್ನು ವರ್ಷದ 12 ತಿಂಗಳುಗಳು ಕಾಲ ಸಫಲಗೊಳಿಸುವುದಕ್ಕಾಗಿ ಮತ್ತು ಭಕ್ತರ ದರ್ಶನಕ್ಕಾಗಿ. ಹಾಗದರೆ ಏನಿದು ಕಾರ್ಯಾಚರಣೆ? ಹೇಗೆ ಸುರಂಗದಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಏನಿದು ಚಾರ್ ಧಾಮ್?

ಚಾರ್ ಧಾಮ್ ಯತ್ರೆಯೆಂದರೆ,ಇದೊಂದು ಹಿಂದೂಗಳ ಯಾತ್ರೆಯಾಗಿದ್ದು ಗಂಗೋತ್ರಿ,ಯಮನೋತ್ರಿ, ಕೇದಾರನಾಥ ಮತ್ತು ಬದರಿನಾಥ ಗಳನ್ನು ಒಳಗೊಂಡಿದೆ. ಈ ಯಾತ್ರೆಗಾಗಿ ದೇಶ ವಿದೇಶಗಳಿಂದ ಯಾತ್ರಿಗಳು ಇವುಗಳಿಗೆ ಭೇಟಿ ನೀಡಲು ಬರುತ್ತಾರೆ.ಆದರೆ ಚಾರ್ ಧಾಮ್ ಯಾತ್ರೆಯನ್ನು ವರ್ಷದ 6 ತಿಂಗಳು ಅಂದರೆ ಏಪ್ರಿಲ್ ನಿಂದ ನವೆಂಬರ್ ತನಕ ಮಾತ್ರ ತೆರೆವುಗೊಳಿಸಲಾಗುತ್ತದೆ.

ನಿಜವಾಗಿ ಅಲ್ಲಿ ನಡೆದಿದ್ದೇನು? ಕಾರ್ಯಾಚರಣೆ ಯಶಸ್ವಿಯಾಗಿದ್ದು ಹೇಗೆ?

ಈ ಸುರಂಗ ಮಾರ್ಗವು ಉತ್ತರಕಾಶಿ ಜಿಲ್ಲೆಯ ಸಿಲಕ್ಯಾರಾ ಪ್ರದೇಶದಿಂದ ದಂಡಲ್ಗಾವ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.ಇದರಿಂದಾಗಿ ಉತ್ತರಕಾಶಿಯಿಂದ ಯಮನೋತ್ರಿ ನಡುವೆ ಇರುವ 28 km ಅಂತರದ 4 ಗಂಟೆ ಪಯಣವನ್ನು, ಸುರಂಗ ಮಾರ್ಗದಿಂದ ಒಂದು ಗಂಟೆಗೆ ಕಡಿಮೆ ಮಾಡಬಹುದು ಮತ್ತು ಈ ಸೌಲಭ್ಯವು ವರ್ಷದ 12 ತಿಂಗಳು ಲಭ್ಯವಿರುತ್ತದೆವೆಂಬ ಕಾರಣಕ್ಕೆ ಸುರಂಗ ಮಾರ್ಗದ ಕಾಮಗಾರಿಯನ್ನು ಕೈಗೊಲಾಯಿತು.
ಸುರಂಗ ಮಾರ್ಗವು ನಾಲ್ಕುವರೆ ಕಿಲೋ ಮೀಟರ್ ಉದ್ದವಿದ್ದು, ದಂಡಲ್ಗಾವ್ ನಿಂದ ಸುರಂಗ ಕಾಮಗಾರಿ 1750 ಮೀಟರ್ ಪೂರ್ಣವಾಗಿ, ಸಿಲಕ್ಯಾರಾ ನಿಂದ 2 km ಸುರಂಗವನ್ನು ಕೊರೆಯಲಾಗಿತ್ತು. ಈ ಕಾಮಗಾರಿ ನಡೆವ ವೇಳೆಯಲ್ಲಿ ಸುಮಾರು 60ಮೀಟರ್ ನಷ್ಟು ಮಣ್ಣು ಕುಸಿದು ಬಿದ್ದ ಕಾರಣ 41 ಕಾರ್ಮಿಕರು ಸುರಂಗದಲ್ಲಿ ಅತಂತ್ರರಾಗಿ ಸಿಲುಕಿದ್ದರು. ತಕ್ಷಣ ಅವರಿಗೆ ಡ್ರಿಲ್ ಸಹಾಯದಿಂದ ಒಂದು ಪೈಪ್ ಅಳವಡಿಸುವ ಮೂಲಕ ಆಮ್ಲಜಕವನ್ನು ಒದಗಿಸಲಾಯಿತು ಮತ್ತು ಆ ಪೈಪ್ ಮೂಲಕವೇ ಅವರೊಂದಿಗೆ ಸಂಪರ್ಕ ಕಲ್ಪಿಸಲಾಯಿತು.
ಈ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸುಮಾರು 16 ದಿನಗಳನ್ನು ತೆಗೆದುಕೊಂಡಿದೆ, ನವೆಂಬರ್ 12 ರಂದು ಈ ಘಟನೆ ಸಂಭವಿಸಿದ್ದು, ನವೆಂಬರ್ 28 ರಂದು ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸುವವಲ್ಲಿ ಕಾರ್ಯಾಚರಣೆ ಯಶಸ್ವಿ ಆಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ international tunnel expert ಅರ್ನಾಲ್ಡ್ ದಿಕ್ಸ್ (arnold Dix) ರವರ ಪಾತ್ರ ಪ್ರಮುಖವಾದದ್ದು.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *