ಸ್ನೇಹಿತರೇ ಇತ್ತೀಚಿಗೆ ಇಂಟರ್ನೆಟ್ ಬಂದ ಬಳಿಕ ಭಾರತದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಇಂಟರ್ನೆಟ್ ಬಗ್ಗೆ ಅರಿವು ಹೆಚ್ಚಾದಂತೆ ಹಲವರು ಅದನ್ನೇ ತಮ್ಮ ಹೊಟ್ಟೆ ಪಾಡಿಗೆ ಸಾಧನ ಮಾಡಿಕೊಂಡವರಿದ್ದಾರೆ. ಅಂಥವರಲ್ಲಿ ಪ್ರಮುಖರು ಎಂದರೆ ಯುಟ್ಯೂಬರ್ಸ್. ಕಳೆದ ವರ್ಷ ಕೇವಲ ಯೂಟ್ಯೂಬ್ ಒಂದರಿಂದಲೇ ಭಾರತದ ಬೊಕ್ಕಸಕ್ಕೆ ಬರೋಬ್ಬರಿ 10,000 ಕೋಟಿ ರೂಪಾಯಿಯಷ್ಟು ತೆರಿಗೆ ಹರಿದು ಬಂದಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ.ಅದೇ ವರದಿಯ ಪ್ರಕಾರ ಬರೋಬ್ಬರಿ 7 ಲಕ್ಷ ಕುಟುಂಬಗಳು ತಮ್ಮ ಆದಾಯದ ಮೂಲವಾಗಿ ಯೂಟ್ಯೂಬ್ ಅನ್ನು ನೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದೆ.
Thank you for reading this post, don't forget to subscribe!ಸ್ನೇಹಿತರೇ ಈ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಯೂಟ್ಯೂಬ್ ನ ಮಹತ್ವ ಏನು ಎಂಬುದು ಗೊತ್ತಾಗುತ್ತದೆ. ಯುಟ್ಯೂಬರ್ಸ್ಗಳು ತಮ್ಮ ಒಂದು ವಿಡಿಯೋ ಮಾಡಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಪ್ರಮುಖವಾದವು ಎಂದರೆ ಯಾವ ಯಾವ ಆಪ್ಸ್ ಬಳಸಬೇಕು ಎಂಬುದು. ಹಾಗಾಗಿ ಈ ಆರ್ಟಿಕಲ್ ನಲ್ಲಿ ನಾವು ಪ್ರತಿಯೊಬ್ಬ ಯುಟ್ಯೂಬರ್ಸ್ ಮೊಬೈಲ್ ನಲ್ಲಿ ಇರಲೇಬೇಕಾದ ಅವಶ್ಯಕ ಅಪ್ಲಿಕೇಶನ್ಸ್ (ಆಪ್ಸ್) ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ..!
1. Kinemaster : ಯಾವುದೇ ಒಂದು ವಿಡಿಯೋ ಮಾಡಲು ನಿಮಗೆ ಮೂಲಭೂತವಾಗಿ ನಿಮಗೆ ಬೇಕಾದದ್ದು ನೀವು ರೆಕಾರ್ಡ್ ಮಾಡಿರುವ ವಿಡಿಯೋವನ್ನು ಎಡಿಟ್ ಮಾಡುವ ಆಪ್. ಯುಟ್ಯೂಬರ್ಸ್ಗಳಿಗೆಂದೇ ಹೇಳಿ ಮಾಡಿಸಿದಂತಿರುವ ಈ ಆಪ್ ಹಲವು ವಿವಿಧ ರೀತಿಯ ಫಿಚರ್ಸ್ ಹೊಂದಿದ್ದು ನಿಮ್ಮ ವಿಡಿಯೋವನ್ನ ಉನ್ನತ ಗುಣಮಟ್ಟಕ್ಕೆ ಹೆಚ್ಚಿಸುತ್ತದೆ. ಹಲವಾರು ಯುಟ್ಯೂಬರ್ಸ್ ಇಂದು ಈ ಆಪ್ ಮೂಲಕವೇ ಲಕ್ಷಾಂತರ subscribers ಗಳನ್ನು ಗಳಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಆಪ್ ಮಹತ್ವದ್ದಾಗಿದೆ.
2. Pixellab : ಸ್ನೇಹಿತರೇ ನಿಮ್ಮ ವಿಡಿಯೋವನ್ನು ಹೆಚ್ಚು ಜನ ನೋಡಬೇಕೆಂದರೆ ನಿಮ್ಮ ವಿಡಿಯೋದ thumbnail ಆಕರ್ಷಕವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಹೆಚ್ಚು ವೀಕ್ಷಣೆ ಆಗುತ್ತವೆ. ಈ ಆಪ್ ನಿಮಗೆ ಅಂತಹ ಅದ್ಭುತ thumbnail ರಚಿಸುವಲ್ಲಿ ಸಹಾಯ ಮಾಡುತ್ತದೆ. ಹಲವಾರು ಪ್ರಸಿದ್ಧ ಯುಟ್ಯೂಬರ್ಸ್ಇಂದಿಗೂ ಈ ಆಪ್ ಮೂಲಕವೇ ತಮ್ಮ ವಿಡಿಯೋದ thumbnailತಯಾರಿಸುತ್ತಾರೆ.
3. Yt Studio : ಸ್ನೇಹಿತರೆ ಇದು ಯೂಟ್ಯೂಬ್ ಅವರದ್ದೇ ಆದ official ಆಪ್ ಆಗಿದ್ದು ಇದರ ಸಹಾಯದಿಂದ ನೀವು ನಿಮ್ಮ ಚಾನೆಲ್ನ ಬೆಳವಣಿಗೆಯನ್ನು ಗಮನಿಸಬಹುದಾಗಿದೆ. ಅಲ್ಲದೇ ನಿಮ್ಮ ವಿಡಿಯೋಗಳ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು. ಯಾವ ವಿಡಿಯೋದಿಂದ ನಿಮಗೆ ಎಷ್ಟು ಹಣ ಬಂತು, ಯಾವ ವಿಡಿಯೋ ನಿಮ್ಮ ಚಾನೆಲ್ ಗೆ ಹೆಚ್ಚು subscribers ಗಳನ್ನು ತಂದುಕೊಟ್ಟಿತು ಹೀಗೆ ವಿವಿಧ ರೀತಿಯ ಮಾಹಿತಿಯನ್ನು ನೀವು ಈ ಆಪ್ ಮೂಲಕ ಪಡೆಯಬಹುದು.
4.Tube buddy : ಈ ಆಪ್ ಮೂಲಕ ನೀವು ನಿಮ್ಮ ವಿಡಿಯೋ ವೈರಲ್ ಆಗಲು ಬೇಕಾದ keyword ಗಳ ಮಾಹಿತಿಯನ್ನು ಪಡೆಯಬಹುದು. ಮುಂದೆ ಯಾವ ರೀತಿಯ ವಿಡಿಯೋ ಮಾಡಿದರೆ ನಿಮ್ಮ ಚಾನೆಲ್ ಗೆ subscribers ಹೆಚ್ಚಾಗುತ್ತಾರೆ ಎಂಬ ಉಪಯುಕ್ತ ಮಾಹಿತಿಯನ್ನು ಇಲ್ಲಿ ಸಿಗುತ್ತದೆ.
5.Screen Recorder : ಸ್ನೇಹಿತರೇ ನೀವು ಯಾವುದಾದರೂ tech ಗೆ ಸಂಬಂಧಿಸಿದ ವಿಡಿಯೋ ಮಾಡುತ್ತಿದ್ದರೆ ಈ ನಿಮಗೆ ಬಹಳ ಮಹತ್ವದ್ದಾಗಿದೆ. ಹಲವು ರೀತಿಯ ಫಿಚರ್ಸ್ ಗಳ ಜೊತೆಗೆ high quality ವಿಡಿಯೋ ಮಾಡಲು ಈ ಆಪ್ ನ ಅವಶ್ಯಕತೆ ಬಹಳ ಇದೆ. ಈ ಆಪ್ ಸಹಾಯದಿಂದ ವಿಡಿಯೋದಲ್ಲಿ ನೀವು ಹೇಳಬೇಕೆಂದಿರುವ ಅಥವಾ ತೋರಿಸಬೇಕೆಂದಿರುವ ನಿರ್ದಿಷ್ಟ ವಿಷಯಗಳನ್ನು ನೀವು ನಿಮ್ಮ subscribers ಗಳಿಗೆ ತಲುಪಿಸಬಹುದು.
ಸ್ನೇಹಿತರೆ ಈ ಅರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.