Categories: information

ಆಚಾರ್ಯ ಚಾಣಕ್ಯ ಶಿಕ್ಷಕನಾಗಿದ್ದ ವಿಶ್ವ ವಿದ್ಯಾಲಯ ಇದೇ ನೋಡಿ ! ಎಂತೆಂತಹ ವಿದ್ಯೆ ಕಲಿಸಲಾಗುತ್ತಿತ್ತು ಗೊತ್ತಾ ಅಲ್ಲಿ ?

ಸ್ನೇಹಿತರೇ ನಳಂದ ವಿಶ್ವವಿದ್ಯಾಲಯಕ್ಕೂ ವಿಭಿನ್ನವಾದ, ಪುರಾತನವಾದ ಮತ್ತು ನಳಂದ ವಿಶ್ವವಿದ್ಯಾಲಯಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿದ್ಯಾಲಯ ಒಂದಿತ್ತು.. ಅದೇ ತಕ್ಷಶಿಲಾ! ಅದನ್ನು ಗ್ರೀಕರು ಉಚ್ಚರಿಸಲು ಬಾರದೆ ಟ್ಯಾಕ್ಷಿಲಾ ಎಂದು ಕರೆದರು.ಕ್ರಿಸ್ತಪೂರ್ವ 326 ರ ಸಂದರ್ಭದಲ್ಲಿ ಅಂಬಿ ಎಂಬ ರಾಜನು ಗಾಂಧಾರವನ್ನು ಆಳ್ವಿಕೆ ಮಾಡುತ್ತಿದ್ದನು. ಅದರ ರಾಜಧಾನಿ ತಕ್ಷಶಿಲಾ ನಗರ.

Spread the love

ಸ್ನೇಹಿತರೇ ನಳಂದ ವಿಶ್ವವಿದ್ಯಾಲಯಕ್ಕೂ ವಿಭಿನ್ನವಾದ, ಪುರಾತನವಾದ ಮತ್ತು ನಳಂದ ವಿಶ್ವವಿದ್ಯಾಲಯಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿದ್ಯಾಲಯ ಒಂದಿತ್ತು.. ಅದೇ ತಕ್ಷಶಿಲಾ! ಅದನ್ನು ಗ್ರೀಕರು ಉಚ್ಚರಿಸಲು ಬಾರದೆ ಟ್ಯಾಕ್ಷಿಲಾ ಎಂದು ಕರೆದರು.ಕ್ರಿಸ್ತಪೂರ್ವ 326 ರ ಸಂದರ್ಭದಲ್ಲಿ ಅಂಬಿ ಎಂಬ ರಾಜನು ಗಾಂಧಾರವನ್ನು ಆಳ್ವಿಕೆ ಮಾಡುತ್ತಿದ್ದನು. ಅದರ ರಾಜಧಾನಿ ತಕ್ಷಶಿಲಾ ನಗರ. ಅಲ್ಲಿ ಭಾರತ ಮತ್ತು ನಾನಾ ದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿದ್ಯಾಲಯ ಒಂದಿತ್ತು. ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುತ್ತಿದ್ದರು. ಅಲ್ಲಿ ತರ್ಕ, ಖಗೋಳ, ವಿಜ್ಞಾನ, ಗಣಿತ, ಭಾಷಾಶಾಸ್ತ್ರ, ನ್ಯಾಯಶಾಸ್ತ್ರ, ರಾಜ್ಯಶಾಸ್ತ್ರ, ವೈದ್ಯ, ಆಯುರ್ವೇದ, ಇತಿಹಾಸ ಪ್ರಾಣಿಗಳನ್ನು ಪಳಗಿಸುವ ಕಲೆ, ಹೀಗೆ 64 ವಿದ್ಯೆಗಳನ್ನು ಹೇಳಿಕೊಡಲಾಗುತ್ತಿತ್ತು. ಅಲ್ಲಿನ ಗ್ರಂಥಾಲಯದಲ್ಲಿದ್ದ ಗ್ರಂಥಗಳನ್ನು ಗ್ರೀಕರು ತರ್ಜುಮೆ ಮಾಡಿ ವಿಶ್ವಕ್ಕೆ ಜ್ಞಾನ ಭಂಡಾರವನ್ನು ತಲುಪಿಸಿದರು. ವಿಶ್ವ ಅದನ್ನು ಗ್ರೀಕರ ಕೊಡುಗೆ ಎಂದು ಭಾವಿಸಿತು.

Thank you for reading this post, don't forget to subscribe!

ಈ ತಕ್ಷಶಿಲಾ ಬಗ್ಗೆ ಮೊದಲ ಉಲ್ಲೇಖ ಸಿಗುವುದು ರಾಮಾಯಣ ಕಾಲದಲ್ಲಿ. ಅವತ್ತಿಗೆ ರಾಮನ ತಮ್ಮ ಭರತನ ಮಗ “ತಕ್ಷ” ಆಳ್ವಿಕೆ ಮಾಡುತ್ತಿದ್ದ. ಹಾಗಾಗಿ ಇದನ್ನು ತಕ್ಷಶಿಲಾ ಎಂದು ಕರೆಯಲಾಯಿತು. ಹಾಗೆ ಮಹಾಭಾರತದ ಕಾಲದಲ್ಲಿ ಈ ಪ್ರದೇಶ ಗಾಂಧಾರ ರಾಜನ ಹಿಡಿತದಲ್ಲಿತ್ತು. ಶಕುನಿಯ ಪೂರ್ವಜರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಮುಂದೆ ಜನಮೇಜಯ ಇದೇ ಜಾಗದಲ್ಲಿ ಸರ್ಪ ಸಂಹಾರ ಯಾಗವನ್ನು ಮಾಡಿದ್ದು ಎಂದು ಹೇಳುತ್ತಾರೆ.

ಇನ್ನು ತಕ್ಷಶಿಲಾದ ನೇರ ಅರ್ಥವನ್ನು ಹುಡುಕುವುದಾದರೆ
ಒಡೆದಕಲ್ಲು ಅಥವಾ ಒಡೆದ ಬಂಡೆಗಳ ನಗರ ಎಂಬ ಅರ್ಥ ಸಿಗುತ್ತೆ. ಇಲ್ಲಿ ಸಿಕ್ಕಿರುವ ಸಾಕಷ್ಟು ವಸ್ತುಗಳು ತಕ್ಷಶಿಲಾದ ಆಯಸ್ಸನ್ನು ಕ್ರಿಸ್ತ ಹುಟ್ಟುಕ್ಕಿಂತ 3500 ವರ್ಷಗಳಿಗಿಂತ ಮುಂಚೆ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಶಿಲಾಯುಗದ ಕಾಲದಲ್ಲಿ ಇಲ್ಲಿ ಜನವಸತಿ ಇತ್ತು ಎನ್ನುವುದಕ್ಕೆ ಇಲ್ಲಿ ಪುರಾವೆಗಳು ಸಿಕ್ಕಿವೆ. ತಕ್ಷಶಿಲಾ ಎನ್ನುವುದು ನಾಗರಿಕತೆಯಿಂದ 500 ವರ್ಷಗಳ ಮೊದಲಿನದು ಎಂಬುದು ಉತ್ಖನನಗಳಿಂದ ತಿಳಿಯುತ್ತದೆ. ದುರಂತ ಎಂದರೆ ಭಾರತದ ಭವ್ಯ ಸಂಸ್ಕೃತಿ ಮತ್ತು ಇತಿಹಾಸದ ಕುರುಹು ಆಗಿದ್ದ ತಕ್ಷಶಿಲಾ ಈಗ ಪಾಕಿಸ್ತಾನಕ್ಕೆ ಸೇರಿದೆ.

ಇದು ಅವತ್ತಿಗೆ ಉನ್ನತ ವಿದ್ಯಾಭ್ಯಾಸದ ಕೇಂದ್ರವಾಗಿತ್ತು ಇಲ್ಲಿಗೆ ವಿದ್ಯಾರ್ಥಿಗಳು ತಮ್ಮ ಹದಿನಾರನೇ ವಯಸ್ಸಿಗೆ ಬರುತ್ತಿದ್ದರು. ಇಲ್ಲಿ ಚಾಣಕ್ಯ ನಂತಹ ಮಹಾ ಗುರುಗಳು ಇದ್ದರು ಅರ್ಥಶಾಸ್ತ್ರ ರೂಪುಗೊಂಡಿದ್ದೇ ಇಲ್ಲಿ ಎಂದು ಹೇಳಲಾಗುತ್ತದೆ. ಚರಕನೆಂಬ ಮಹಾವೈದ್ಯ ವಿದ್ಯಾಭ್ಯಾಸ ನಡೆಸಿ ನಂತರ ಇಲ್ಲಿ ಶಿಕ್ಷಕ ವೃತ್ತಿಯನ್ನು ಕೂಡ ಮುಂದುವರಿಸಿದ್ದರು. ಸಂಸ್ಕೃತ ಪಂಡಿತರಾಗಿದ್ದ ಪಾನಿನಿ ಇಲ್ಲಿ ಶಿಕ್ಷಕರಾಗಿದ್ದರು. ವಿಶೇಷ ಅಂದರೆ ಒಬ್ಬ ಶಿಕ್ಷಕರ ಬಳಿ 100 ವಿದ್ಯಾರ್ಥಿಗಳು ಇರುತ್ತಿದ್ದರು. ಓರ್ವ ವಿದ್ಯೆ ಬೇಡಿ ಬಂದ ಯಾವ ಹೊಸ ಶಿಷ್ಯನಿಗೂ ವಿದ್ಯೆಯನ್ನು ನಿರಾಕರಿಸುತ್ತಿರಲಿಲ್ಲ. ಇಲ್ಲಿ ಯಾವ ವಿದ್ಯಾರ್ಥಿಗೂ ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲ ಏಕೆಂದರೆ ಅವಾಗಿನ್ನು ಶಿಕ್ಷಣವನ್ನು ಹಣಕ್ಕಾಗಿ ಮಾರಾಟ ಮಾಡುವ ಪದ್ಧತಿ ಭಾರತದಲ್ಲಿ ಇರಲಿಲ್ಲ. ಇಲ್ಲಿ ಅವಕಾಶ ಪಡೆಯಲು ಅರ್ಹತೆ ಒಂದೇ ಮಾನದಂಡವಾಗಿತ್ತು. ತಕ್ಷಶಿಲಾ ಅನೇಕ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ನಂದ, ಮೌರ್ಯ, ಇಂಡೋಗ್ರೀಕರು ಕುಶಾನರು, ಗುಪ್ತ ಸಾಮ್ರಾಜ್ಯದ ಚಕ್ರ ಛಾಯೆಯಲ್ಲಿ ತಕ್ಷಶಿಲಾ ವಿದ್ಯಾರ್ಜನೆಯ ಕೇಂದ್ರವಾಗಿ ಬೆಳಗುತ್ತಿತ್ತು.

ನಂತರ ಬಂದ ಹೂಣರು ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ಸಾಮಾನ್ಯ ವರ್ಷ 470ರ ಕಾಲಿಗೆ ಸಂಪೂರ್ಣವಾಗಿ ತಕ್ಷಶಿಲಾ ತನ್ನ ವೈಭವವನ್ನು ಕಳೆದುಕೊಂಡಿತ್ತು. ಅದರ ಬಗ್ಗೆ ಚೀನಾ ಪ್ರವಾಸಿಗ ಹ್ಯೂ ಯನ್ ತ್ಸಾಂಗ್ 6ನೇ ಶತಮಾನದಲ್ಲಿ ಭೇಟಿಕೊಟ್ಟು ತಕ್ಷಶಿಲಾ ವಿಶ್ವವಿದ್ಯಾಲಯದ ಬಗ್ಗೆ ಉಲ್ಲೇಖಿಸಿದ್ದಾನೆ. ಅಲ್ಲಿದ್ದ ಪಳಿಯುಳಿಕೆಗಳ ಬಗ್ಗೆ, ವಿಹಾರಗಳ ಬಗ್ಗೆ, ಸ್ತೂಪಗಳ ಬಗ್ಗೆ ಒಂದಷ್ಟು ಮಾಹಿತಿ ತಿಳಿಸಿದ್ದಾನೆ ಅಷ್ಟೊತ್ತಿಗೆ ತಕ್ಷಶಿಲಾ ವಿಶ್ವವಿದ್ಯಾಲಯ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು ಎಂದು ದಾಖಲೆಗಳಿಂದ ಸ್ಪಷ್ಟವಾಗುತ್ತೆ. ಹತ್ತನೇ ಶತಮಾನದ ಹೊತ್ತಿಗೆ ತಕ್ಷಶಿಲಾ ಭಾರತವನ್ನು ಸಂಪೂರ್ಣವಾಗಿ ಕೈ ಬಿಟ್ಟು ಹೋಯಿತು ನಂತರದ ದಿನಗಳಲ್ಲಿ ಘಜನಿ,ಮೊಘಲರ ಆಳ್ವಿಕೆಗೆ ಒಳಪಟ್ಟ ತಕ್ಷಶಿಲಾ ಯಾವ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಳ್ಳಲಿಲ್ಲ.

1947ರಲ್ಲಿ ಭಾರತದ ವಿಭಜನೆಯ ಸಂದರ್ಭದಲ್ಲಿ ಭಾರತದ ಭವ್ಯ ಸಂಸ್ಕೃತಿ ಮತ್ತು ಶೈಕ್ಷಣಿಕ ಹೆಮ್ಮೆಯಂತಿದ್ದ ತಕ್ಷಶಿಲಾ ಪಾಕಿಸ್ತಾನದ ಪಾಲಾಯತು.

ಶತಮಾನಗಳ ಕಾಲ ಭೂಗರ್ಭ ಸೇರಿದ್ದ ಪಳಿಯುಳಿಕೆಗಳು 1863 ರಲ್ಲಿ ಹೊರ ಬಿದ್ದವು. ಅಲೆಕ್ಸಾಂಡರ್ ಇನ್ನಿಂಗ್ ಹ್ಯಾಮ್ ಮತ್ತು ಹ್ಯೂ ಯೆನ್ ತ್ಸಾಂಗ್ ಉಲ್ಲೇಖ ಆಧರಿಸಿ ತಕ್ಷಶಿಲಾ ಎಂದು ಹೆಸರಿಡಲಾಯಿತು. ತಕ್ಷಶಿಲಾ ವಿಶ್ವವಿದ್ಯಾಲಯ ಎನ್ನುವುದು ಜಗತ್ ಜಾಹಿರವಾಯಿತು. ಸುತ್ತಲಿನ ಗೋಡೆಗಳು ಅರ್ಧ ಚಂದ್ರಾಕೃತಿಯಲ್ಲಿ ನಿರ್ಮಿಸಲಾಗಿದ್ದು ಅವತ್ತಿಗೆ ಇಂಥದ್ವೊಂದು ಪರಿಕಲ್ಪನೆ, ಅದ್ಭುತವಾದ ವಾಸ್ತು ಶಾಸ್ತ್ರವನ್ನು ನೋಡಿ ಬ್ರಿಟಿಷರು ಸಂಶೋಧಕರು ಬೆರಗಾಗಿದ್ದರು. 1980 ರಲ್ಲಿ ಯುನೆಸ್ಕೋ ಈ ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿತು. ಒಂದು ಕಾಲದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಂದ ಕಂಗೊಳಿಸುತ್ತಿದ್ದ ಈ ಶಿಕ್ಷಣ ತಾರೆ ಈಗ ನಿರ್ಜೀವ ಪಳೆಯುಳಿಕೆಯಿಂದ ರಣರಣಿಸುತ್ತಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago