ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ ಹೊಂದಿರುವವರು, ಸರ್ವೆ ನಂಬರ್ ತಿಳಿದುಕೊಳ್ಳಬೇಕೇ… ನೀವು ಖರೀದಿಸುವ ಜಮೀನಿನ ಮೇಲೆ ನ್ಯಾಯಾಲಯದ ಯಾವುದಾದರೂ ತಕರಾರು ಇದೆಯೇ ಎಂಬುದನ್ನು ತಿಳಿದುಕೊಳ್ಳಿ ಎಲ್ಲಿಯೂ ಹೋಗಬೇಕಿಲ್ಲ.
Thank you for reading this post, don't forget to subscribe!ಯಾರಿಗೂ ಕೇಳಬೇಕಿಲ್ಲ. ನಿಮ್ಮ ಮೊಬೈಲ್ ನಲ್ಲಿ ದಿಶಾಂಕ್ ಆಯಪ್ ( ದಿಶಾಂಕ್ ಆಪ್ ) ಬಳಸಿ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಮಾಹಿತಿ
ಯಾವುದೇ ಜಮೀನು ಅಥವಾ ಆಸ್ತಿಯನ್ನು ಖರೀದಿಸುವಾಗ ಆ ಜಮೀನಿನ ನಿಜವಾದವರು ಎಂದು ತಿಳಿದುಕೊಳ್ಳುತ್ತೇವೆ. ಆ ಜಮೀನು ಖರೀದಿ ಮಾಡುತ್ತಿರುವವರ ಹೆಸರಿನಲ್ಲಿ ಪರಿಶೀಲಿಸುವುದು ಸಾಮಾನ್ಯ. ಅಷ್ಟೇ ಅಲ್ಲ ನೀವು ನಿಂತಿರುವ ಜಮೀನಿನ ಸರ್ವೆ ನಂಬರ್ ವಿವರವನ್ನು ಸಹ ದಿಶಾಂಕ್ ಆಯಪ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.
ಏನಿದು ದಿಶಾಂಕ್ ಆಯಪ್? (ದಿಶಾಂಕ್ ಆಪ್ ಎಂದರೇನು)
ರಾಜ್ಯ ಸರ್ಕಾರದ ಇಲಾಖೆಯು ಈ ದಿಶಾಂಕ್ ಆಯಪ್ ಅನ್ನು ಪರಿಚಿಯಿಸಿದೆ. ಈ ಆಯಪ್ ಸಹಾಯದಿಂದ ಆಸ್ತಿಯ ವಿವರಗಳನ್ನೆಲ್ಲಾ ತಿಳಿದುಕೊಳ್ಳಬಹುದು. ನಾವು ನಿಂತಿರುವ ಸ್ಥಳದ ಸರ್ವೆ ನಂಬರ್ ಅಥವಾ ಇದು ಸರ್ಕಾರದ ಜಮೀನು/ಖಾಸಗಿ ಜಮೀನನ್ನು ತಿಳಿಸುತ್ತದೆ. ಪ್ರತಿ ಸರ್ವೆ ನಂಬರ್ ಗಳ ಗಡಿರೇಖೆ, ರಸ್ತೆ, ಕೆರೆ, ಕಾಲುವೆಗಳ ಗಡಿರೇಖೆ.
ದಿಶಾಂಕ್ ಆ್ಯಪ್? ಸಹಾಯದಿಂದ ಆಸ್ತಿಯ ವಿವರ ಹೇಗೆ ನೋಡಬೇಕು?
1.)ಮೊದಲು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಗೂಗಲ್ ನಲ್ಲಿ Dishaank ಎಂದು ಟೈಪ್ ಮಾಡಬೇಕು. ಆಗ Dishaank app on google play ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.ksrsac.sslr&hl=en_IN&gl=US

2) ಆ್ಯಪ್ ಓಪನ್ ಮಾಡಿದ ಬಳಿಕ ಅಲ್ಲಿ ನೀವು ಭಾಷೆಯನ್ನು ಆಯ್ಕೆ ಮಾಡಬಹುದು.

3). ಮುಂದೆ ನಿಮ್ಮ ಹೆಸರು ಮತ್ತು ಇಮೇಲ್ ಐಡಿ ಯನ್ನು ನಮೂದಿಸಿ ಅದರ ಜೊತೆ ಮೊಬೈಲಿನ ನಂಬರ್ ಹಾಕಿ otp ಮೇಲೆ ಕ್ಲಿಕ್ ಮಾಡಿ

4)ಆಗ ನೀವು ಇದ್ದ ಸ್ಥಳ ಅಂದರೆ ಯಾವ ಸರ್ವೆ ನಂಬರ್ ನಲ್ಲಿರುತ್ತೀರೋ ಅಲ್ಲಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಸರ್ವೆ ನಂಬರ್ ಸಹ ಕಾಣಿಸಿಕೊಂಡಿದೆ. ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಿ

5) ಆಗ ನೀವುಜಿಲ್ಲೆ ತಾಲೂಕು ಹೋಬಳಿ ಗ್ರಾಮ ಅದರ ಜೊತೆ ದಯವಿಟ್ಟು ಸರ್ವೇ ನಂಬರ್ ನೊಂದಿಸಿ.

ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿ ಸರ್ನೋಕ್ ಸಂಖ್ಯೆ ಸ್ಟಾರ್ ಇದ್ದರೆ ಸ್ಟಾರ್, ಸಂಖ್ಯೆ ಇದ್ದರೆ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು, ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡ ಮೇಲೆ ಕ್ಲಿಕ್ ಮಾಡಿ. ಆಗ ಆ ಜಮೀನಿನ ಯಾರಿದ್ದಾರೋ ಅವರ ಹೆಸರು, ಜಮೀನಿನ ವಿಸ್ತೀರ್ಣ, ಭೂವಿಯ ವಿಧ, ಆ ಭೂಮಿಗೆ ನ್ಯಾಯಾಲಯ ಯಾವುದಾದರೂ ತಡೆಯಾಜ್ಞೆ ಇದೆಯೇ ಎಂಬುದು ಸೇರಿದಂತೆ ಇನ್ನಿತರೆ ಮಾಹಿತಿ ಕಾಣಿಸಿಕೊಂಡಿದೆ.
ಬಲಗಡೆಯಿರುವ ನಾಲ್ಕು ಲೈನ್ ಸರ್ಕಲ್ ನಲ್ಲಿ ಕ್ಲಿಕ್ ಮಾಡಿದರೆ ನಕ್ಷೆ ಸೂಚಿ ಇನ್ನೊಂದು ಪರದೆ ತೆರೆಯುತ್ತದೆ. ಅಲ್ಲಿ ನೀವು ರಾಜ್ಯದ ಗಡಿ, ಎಲ್ಲಿ ಜಿಲ್ಲೆ, ತಾಲೂಕು, ಗ್ರಾಮದ ಗಡಿ, ಬೆಟ್ಟ, ನದಿ, ಟ್ಯಾಂಕ್ ರಸ್ತೆ, ರೈಲು ಮಾರ್ಗವನ್ನು ಆಯ್ಕೆ ಮಾಡಲಾಗುತ್ತದೆ ಮಾಡಿಕೊಂಡು ನೋಡಿಕೊಳ್ಳಬಹುದು.
ಯಾವುದೇ ಆಸ್ತಿ ಖರೀದಿಸಲು ಮುಂಚಿತವಾಗಿ ಈ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ನೀವು ಜಮೀನು ಖರೀದಿ ಮಾಡುವುದನ್ನು ಮುಂಚಿತವಾಗಿ ಪರಿಶೀಲಿಸುವುದು ಉತ್ತಮ. ಇಲ್ಲಿ ನಕಾಶೆ ಸಾಂಕೇತಿಕವಾದದ್ದು, ಮಾಹಿತಿಗಾಗಿ ಬಳಸಿಕೊಳ್ಳಲು ಬೇರೆ ಇಲಾಖೆಯು ಈ ದಿಶಾಂಕ್ ಆಯಪ್ ಕಾಣಿಸಿದೆ.
ಓದುಗರಲ್ಲಿ ವಿನಂತಿ,
ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode