ಅಷ್ಟೇ ಅಲ್ಲದೆ ಹಲವು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಇಂತಹ ರೈತರಿಗೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಏನೋ ನೀಡಿತು ನಿಜ, ಆದರೆ ಅದು ಶಾಶ್ವತ ಪರಿಹಾರ ಅಲ್ಲ.
ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಸಾಲಿನಲ್ಲಿ ನಿಗದಿತ ಮಳೆಯಾಗದ ಕಾರಣ ಹಲವು ರೈತರ ಬೆಳೆಗಳು ಹಾನಿಯಾಗಿ ರೈತರ ಇಳುವರಿಗೆ ಭಾರಿ ಹೊಡೆತ ಬಿದ್ದಿತ್ತು.
Thank you for reading this post, don't forget to subscribe!ಅಷ್ಟೇ ಅಲ್ಲದೆ ಹಲವು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಇಂತಹ ರೈತರಿಗೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಏನೋ ನೀಡಿತು ನಿಜ, ಆದರೆ ಅದು ಶಾಶ್ವತ ಪರಿಹಾರ ಅಲ್ಲ.
ಮೀನುಗಾರರಿಗೆ ಮೀನು ನೀಡುವುದು ದೊಡ್ದ ಸಹಾಯವಲ್ಲ, ಅವರಿಗೆ ಮೀನುಗಾರಿಕೆ ಕಲಿಸುವುದು ದೊಡ್ದ ಸಹಾಯ ಎನಿಸುತ್ತದೆ. ಹಾಗೆಯೇ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿ ಕೈತೊಳೆದುಕೊಳ್ಳುವುದಕ್ಕಿಂತ ಬೆಳೆ ಹಾನಿಯಾಗದಂತೆ ಜಾಗ್ರತೆ ವಹಿಸುವುದು ನಿಜವಾದ ರೈತರ ಅಭಿವೃದ್ಧಿ ಎನಿಸುತ್ತದೆ.
ಅದರಂತೆ ಇದೀಗ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯ ನಿರತವಾಗಿದ್ದು, ಇದೀಗ ರೈತರ ಸಾಮರ್ಥ್ಯವನ್ನು ಸದೃಢಗೊಳಿಸಲು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲು ಮುಂದಾಗಿದೆ.
ಹೌದು ರೈತ ಮಿತ್ರರೇ ರಾಜ್ಯ ಸರ್ಕಾರ ಇದೀಗ ರೈತರಿಗೆ ಕೃಷಿ ಹೊಂಡ ನಿರ್ಮಿಸಲು ಶೇಕಡಾ 90 ರಷ್ಟು ಸಬ್ಸಿಡಿ ನೀಡುತ್ತಿದ್ದು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ. ಈ ಸಬ್ಸಿಡಿ ಯೋಜನೆ ಇದೀಗ ಕೇವಲ ಹಾವೇರಿ ಜಿಲ್ಲೆಯ ರೈತರಿಗೆ ಮಾತ್ರ ಲಭ್ಯವಿದ್ದು, ಹಾವೇರಿ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಬಹುದು ಎಂದು ಹಾವೇರಿ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ರೈತರಿಗೆ ಬರದ ಸಂದರ್ಭದಲ್ಲಿ ಬೆಳೆಗಳ ನೀರಾವರಿಗೆ ಸಹಕರಿಯಾಗಲಿದ್ದು ಇದರಿಂದ ರೈತರು ಬರದಲ್ಲೂ ಉತ್ತಮ ಇಳುವರಿ ಪಡೆಯಬಹುದು.
ರಾಜ್ಯ ಸರ್ಕಾರದ ಈ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲು ಶೇಕಡಾ 90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಅದೇ ರೀತಿಯಾಗಿ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 80 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.
ಇನ್ನು ಕೃಷಿ ಹೊಂಡ ನಿರ್ಮಿಸಲು ಬೇಕಾದ ಪಾಲಿಥಿನ್ ಹೊದಿಕೆ ಖರೀದಿಸಲು 50,000 ರೂಪಾಯಿವರೆಗೆ ಧನ ಸಹಾಯ ಸಿಗಲಿದೆ. ಅದೇ ರೀತಿ ಡಿಸೇಲ್ ಪಂಪ್ ಸೆಟ್ ಮೇಲೆ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡಾ 90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇನ್ನು ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ನಿರ್ಮಿಸಲು ಶೇಕಡಾ 50 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.
ಹಾಗಾಗಿ ಹಾವೇರಿ ಜಿಲ್ಲೆಯ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಕೃಷಿ ಜಂಟಿ ನಿರ್ದೇಶಕರು ಈ ಮೂಲಕ ಮನವಿ ಮಾಡಿದ್ದಾರೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…
ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…