ಬೆಂಗಳೂರು: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ ಬಂದಿದೆ. 2025–26ನೇ ಸಾಲಿನ SSLC (10ನೇ ತರಗತಿ) ಹಾಗೂ ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮತ್ತು ಪಿಯು ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ
ಬೆಂಗಳೂರು: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ ಬಂದಿದೆ. 2025–26ನೇ ಸಾಲಿನ SSLC (10ನೇ ತರಗತಿ) ಹಾಗೂ ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮತ್ತು ಪಿಯು ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಈ ಬಾರಿಗೆ ಪರೀಕ್ಷೆಗಳನ್ನು ಹಿಂದಿನ ವರ್ಷಕ್ಕಿಂತ ಒಂದು ತಿಂಗಳು ಮುಂಚೆಯೇ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಈಗಲೇ ತಮ್ಮ ಓದಿನ ತಯಾರಿ ಪ್ರಾರಂಭಿಸಬೇಕಾಗಿದೆ.
ಈ ವರ್ಷ SSLC ಪರೀಕ್ಷೆ 1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಪರೀಕ್ಷೆ 2 ಮೇ 18ರಿಂದ ಮೇ 25ರವರೆಗೆ ನಿಗದಿಯಾಗಿದೆ.
SSLC ಪರೀಕ್ಷೆ 1 ವಿವರಗಳು:
1.ಮಾ.18: ಪ್ರಥಮ ಭಾಷೆ
2.ಮಾ.23: ವಿಜ್ಞಾನ
3.ಮಾ.25: ದ್ವಿತೀಯ ಭಾಷೆ
4.ಮಾ.28: ಗಣಿತ
5.ಮಾ.30: ತೃತೀಯ ಭಾಷೆ
6.ಏ.2: ಸಮಾಜ ವಿಜ್ಞಾನ
SSLC ಪರೀಕ್ಷೆ 2 ವಿವರಗಳು
1.ಮೇ 18: ಪ್ರಥಮ ಭಾಷೆ
2.ಮೇ 19: ವಿಜ್ಞಾನ
3.ಮೇ 20: ದ್ವಿತೀಯ ಭಾಷೆ
4.ಮೇ 21: ಗಣಿತ
5.ಮೇ 22: ತೃತೀಯ ಭಾಷೆ
6.ಮೇ 23: ಸಮಾಜ ವಿಜ್ಞಾನ
ವಿದ್ಯಾರ್ಥಿಗಳಿಗೆ ಸಲಹೆ: ಈ ವರ್ಷವೂ SSLCಗೆ ಎರಡು ಪ್ರಯೋಗಾತ್ಮಕ ಪರೀಕ್ಷೆಗಳ ಮಾದರಿ ಮುಂದುವರಿದಿದ್ದು, ಮೊದಲ ಪರೀಕ್ಷೆಯಲ್ಲಿ ಅಂಕ ತೃಪ್ತಿ ಇಲ್ಲದಿದ್ದರೆ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಯಲ್ಲಿ ಭಾಗವಹಿಸಬಹುದು.
ದ್ವಿತೀಯ ಪಿಯುಸಿ ಪರೀಕ್ಷೆ 1 ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ, ಮತ್ತು ಪರೀಕ್ಷೆ 2 ಏಪ್ರಿಲ್ 24ರಿಂದ ಮೇ 9ರವರೆಗೆ ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ:
1.ಫೆ.28: ಕನ್ನಡ, ಅರೇಬಿಕ್
2.ಮಾ.2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
3.ಮಾ.3: ಇಂಗ್ಲಿಷ್
4.ಮಾ.4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
5.ಮಾ.5: ಇತಿಹಾಸ
6.ಮಾ.6: ಭೌತಶಾಸ್ತ್ರ
7.ಮಾ.7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
8.ಮಾ.9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
9.ಮಾ.10: ಅರ್ಥಶಾಸ್ತ್ರ
10.ಮಾ.11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
11.ಮಾ.12: ಹಿಂದಿ
12.ಮಾ.13: ರಾಜ್ಯಶಾಸ್ತ್ರ
13.ಮಾ.14: ಲೆಕ್ಕಶಾಸ್ತ್ರ, ಗಣಿತ
14.ಮಾ.16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
15.ಮಾ.17: ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
1.ಪ್ರತಿ ವಿಷಯಕ್ಕೆ ಸಮಯ ಪಟ್ಟಿ ಮಾಡಿ ಓದಿ. ದಿನಕ್ಕೆ ಕನಿಷ್ಠ 6 ಗಂಟೆ ಓದುವ ಅಭ್ಯಾಸ ಇರಲಿ.
2.ಪೂರ್ವ ವರ್ಷದ ಪ್ರಶ್ನೆಪತ್ರಿಕೆಗಳು ಅಭ್ಯಾಸ ಮಾಡಲು ಪ್ರಯತ್ನಿಸಿ.
3.ಗ್ಯಾಪ್ ಡೇಸ್‌ಗಳನ್ನು ವಿಷಯ ಪುನರಾವರ್ತನೆಗೆ ಬಳಸಿ.
4.ಆರೋಗ್ಯದ ಕಡೆ ಗಮನ ನೀಡಿ. ಉತ್ತಮ ನಿದ್ರೆ ಹಾಗೂ ಆಹಾರ ಅಗತ್ಯ.
ಕರ್ನಾಟಕದ SSLC ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ 2025–26ನೇ ಸಾಲಿನ ಪರೀಕ್ಷಾ ವೇಳಾಪಟ್ಟಿ ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ಈಗಲೇ ತಯಾರಿ ಪ್ರಾರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ಪರೀಕ್ಷೆ ದಿನಾಂಕದ ಹತ್ತಿರ ಬಂದಾಗ ಆತಂಕ ಪಡುವ ಬದಲು, ನಿಯಮಿತವಾಗಿ ಓದು, ಅಭ್ಯಾಸ ಮತ್ತು ಆತ್ಮವಿಶ್ವಾಸ ಇರಲಿ
All the best
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…