WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದ ಜೀವನವನ್ನು ಒಮ್ಮೆ ಕಲ್ಪಿಸಿಕೊಂಡರೆ ಹೇಗಿರುತ್ತೆ? ಆ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇಂದು ನಾವು ಎಲ್ಲವನ್ನೂ ತೊರೆದು ಬದುಕಬಹುದು. ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೇ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ ಎನ್ನುವಷ್ಟು ಅವು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಆದರೆ ಇತ್ತೀಚೆಗೆ ನಾಸಾ ಬಿಚ್ಚಿಟ್ಟಿರುವ ಭಯಾನಕ ಮಾಹಿತಿ ನಿಮ್ಮನ್ನು ದಂಗಾಗಿಸುತ್ತದೆ. ಅಷ್ಟಕ್ಕೂ ಏನದು ಅಂತಹ ರಹಸ್ಯ ? ಅದ್ರಲ್ಲಿ ಅಂಥದ್ದೇನಿದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಹೌದು ಸ್ನೇಹಿತರೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಇತ್ತೀಚಿಗೆ ಬಿಡುಗಡೆಗೊಳಿಸಿರುವ ವರದಿ ಪ್ರಕಾರ 2025ಕ್ಕೆ ಭೂಮಿಯ ಸುತ್ತಲೂ ಇರುವ ಕಾಂತ ಕ್ಷೇತ್ರಕ್ಕೆ ಸೂರ್ಯನಿಂದ ಹೊರಹೊಮ್ಮುವ ಬಲಿಷ್ಠ ಸೂರ್ಯಕಿರಣಗಳ ರಾಶಿ ಅಥವಾ ಸೋಲಾರ್ ಸ್ಟಾರ್ಮ್ ಬಂದು ಬಡಿಯಲಿದ್ದು, ಇದರಿಂದ ಭೂಮಿಯು ತನ್ನ ಕಾಂತೀಯ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ನಾಸಾ ವರದಿ ಮಾಡಿದೆ. ಒಂದು ವೇಳೆ ಭೂಮಿಯ ಕಾಂತಕ್ಷೇತ್ರವು ತನ್ನ ಶಕ್ತಿಯನ್ನು ಕಳೆದುಕೊಂಡರೆ ಇವತ್ತು ನಾವು ಅದರ ಸಹಾಯದಿಂದ ಬಳಸುತ್ತಿರುವ ಮೊಬೈಲ್,ಇಂಟರ್ನೆಟ್, ಕರೆಂಟ್ ಇತ್ಯಾದಿಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

ಏದು ಸೋಲಾರ್ ಸ್ಟಾರ್ಮ್?

ಸ್ನೇಹಿತರೇ ಸೂರ್ಯನ ಮೇಲ್ಮೈಯಲ್ಲಿ ಸದಾ ನ್ಯುಕ್ಲಿಯರ್ ಫ್ಯೂಜನ್ ಎಂಬ ಕ್ರಿಯೆ ನಡೆಯುತ್ತಿರುತ್ತದೆ. ಈ ಕ್ರಿಯೆಯಿಂದಾಗಿ ಸೂರ್ಯನಲ್ಲಿ ಬಹಳಷ್ಟು ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪತ್ತಿಯಾದ ಶಾಖವನ್ನು ಅದು ಕಿರಣಗಳ (ಬೆಂಕಿ ಉಂಡೆ) ರೂಪದಲ್ಲಿ ಹೊರಗೆ ಚಿಮ್ಮುತ್ತದೆ. ಹೀಗೆ ಹೊರಗೆ ಚಿಮ್ಮಿದ ಕಿರಣಗಳ (ಬೆಂಕಿ ಉಂಡೆ) ರಾಶಿಯೇ ಸೋಲಾರ್ ಸ್ಟಾರ್ಮ್.

ಹೇಗೆ ಇದು ಮೊಬೈಲ್,ಇಂಟರ್ನೆಟ್ ನಾಶ ಮಾಡುತ್ತದೆ?

ಇವತ್ತು ನಾವು ಬಳಸುತ್ತಿರುವ ಮೊಬೈಲ್ ಇಂಟರ್ನೆಟ್ ಸಹಾಯದಿಂದ ಕೆಲಸ ಮಾಡುತ್ತದೆ. ಈ ಇಂಟರ್ನೆಟ್ ಬಾಹ್ಯಾಕಾಶದಲ್ಲಿರುವ ಕೃತಕ ಉಪಗ್ರಹಗಳ ಸಹಾಯದಿಂದ ಕೆಲಸ ಮಾಡುತ್ತದೆ. ಒಂದು ವೇಳೆ ಸೂರ್ಯನಿಂದ ಹೊರಹೊಮ್ಮುವ ಬೆಂಕಿ ಉಂಡೆಗಳು ಭೂಮಿಯ ಸುತ್ತ ಇರುವ ಕಾಂತ ಕ್ಷೇತ್ರಕ್ಕೆ ಬಂದು ಬಡಿದಾಗ, ಕಾಂತ ಕ್ಷೇತ್ರ ನಾಶವಾಗುತ್ತದೆ. ಕಾಂತ ಕ್ಷೇತ್ರ ನಾಶವಾದರೆ ಭೂಮಿಯ ಸುತ್ತ ಇರುವ ಉಪಗ್ರಹಗಳಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ, ಅವು ಸೂರ್ಯನ ಶಾಖದಿಂದ ನಾಶವಾಗುತ್ತವೆ. ಆ ಮೂಲಕ ನಮ್ಮ ಮೊಬೈಲ್, ಟಿವಿ ಇತ್ಯಾದಿ ವಸ್ತುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಅಷ್ಟೇ ಅಲ್ಲದೆ ಭೂಮಿಯ ಕಾಂತ ಕ್ಷೇತ್ರದ ಸಹಾಯದಿಂದ ಕೆಲಸ ಮಾಡುವ ಪವರ್ ಗ್ರಿಡ್ ಗಳು ಕೂಡ ನಾಶವಾಗಲಿದ್ದು ಜಗತ್ತಿನ ತುಂಬಾ ಮತ್ತೆ ಕತ್ತಲು ಆವರಿಸುತ್ತದೆ ಎಂದೂ ನಾಸಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಒಂದು ವೇಳೆ ಇದು ವಿಜ್ಞಾನಿಗಳು ಅಂದುಕೊಂಡಂತೆ ನಡೆದರೆ ಜಗತ್ತು 1930-40 ರ ದಶಕದಂತೆ ಯಾವುದೇ ತಂತ್ರಜ್ಞಾನ ಇಲ್ಲದ ಹಿಂದುಳಿದ ಜಗತ್ತು ಆಗಲಿದೆ ಎಂದು ಅವರು ಹೇಳಿದ್ದಾರೆ.

      
                    WhatsApp Group                             Join Now            
   
                    Telegram Group                             Join Now            

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *