ಸ್ನೇಹಿತರೆ ನಾವು ನೀವು ಎಲ್ಲಿಗಾದರೂ ಹೋಗಬೇಕಾದರೆ ಆಟೋ ಅಥವಾ ಟ್ಯಾಕ್ಸಿ ಬಳಸುವುದು ಸಾಮಾನ್ಯ. ಆದರೆ ನೀವು ಗಾಳಿಯಲ್ಲಿ ಸಂಚರಿಸುವ ಟ್ಯಾಕ್ಸಿ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ವಿಮಾನದಂತೆ ಗಾಳಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಆಟೋ ರೀತಿಯ ಟ್ಯಾಕ್ಸಿ ಇದ್ದರೆ ಹೇಗಾಗುತ್ತದೆ? ಯೋಚಿಸಿದ್ದೀರಾ? ಇಂತಹ ವಿಷಯವನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಮತ್ತು ಕುತೂಹಲ ಉಂಟಾಗುತ್ತದೆ. ಹಾಗಾದರೆ ಏನಿದು ಏರ್ ಟ್ಯಾಕ್ಸಿ ಮತ್ತು ಏನಿದರ ಮಹತ್ವ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Thank you for reading this post, don't forget to subscribe!ಹೌದು ಸ್ನೇಹಿತರೆ ನಾವು ಇಂದು ಟ್ಯಾಕ್ಸಿ ಅಲ್ಲಿ ಓಡಾಡುವ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಗಾಳಿಯಲ್ಲಿ ತೇಲಾಡುವ ಏರ್ ಟ್ಯಾಕ್ಸಿ ಬರಲಿವೆ. ಹೀಗೊಂದು ಮಹತ್ವದ ನಿರ್ಧಾರವನ್ನು ಏರ್ ಇಂಡಿಗೋ ವಿಮಾನಯಾನ ಸಂಸ್ಥೆಯ ಪಿತೃ ಸಂಸ್ಥೆಯಾದ ಇಂಟರ್ಗ್ಲೊಬ್ ಎಂಟರ್ಪ್ರೈಸಸ್ ಘೋಷಿಸಿದೆ. ಅದು ಆರ್ಚರ್ ಏವಿಯೇಷನ್ ಸಂಸ್ಥೆಯ ಜೊತೆ ಸಹಭಾಗಿತ್ವದಲ್ಲಿ ಇಂತಹ ಏರ್ ಟ್ಯಾಕ್ಸಿಗಳನ್ನು ತಯಾರಿಸಲು ಒಪ್ಪಂದವನ್ನು ಮಾಡಿಕೊಂಡಿದೆ.
ಇನ್ನು ಈ ಏರ್ ಟ್ಯಾಕ್ಸಿಗಳು 2026 ರ ಹೊತ್ತಿಗೆ ಕಾರ್ಯರೂಪಕ್ಕೆ ಬರಲಿವೆ ಎಂದೂ ಸಹ ಎರಡು ಕಂಪನಿಗಳು ಘೋಷಿಸಿವೆ. ಇದಕ್ಕೆ ಕುರಿತಂತೆ ಸರ್ಕಾರದಿಂದ ಪರವಾನಿಗೆ ಪಡೆಯಲು ಅವು ಸಜ್ಜಾಗಿದ್ದು, ಕೆಲವೇ ದಿನಗಳಲ್ಲಿ ಅವು ಅಧಿಕೃತವಾಗಿ ಏರ್ ಟ್ಯಾಕ್ಸಿ ತಯಾರಿಸಲು ಮುಂದಾಗಲಿವೆ.
ಹೀಗೆ ಕಾರ್ಯರೂಪಕ್ಕೆ ಬಂದ ಮೇಲೆ ಈ ಟ್ಯಾಕ್ಸಿಗಳಿಗೆ ಪ್ರತ್ಯೇಕ ನಿಲ್ದಾಣವನ್ನು ಮಾಡಲು ಅವು ನಿರ್ಧರಿಸಿವೆ. ಇನ್ನು ಈ ಟ್ಯಾಕ್ಸಿಗಳು ವಿದ್ಯುತ್ ಚಾಲಿತ ವಾಹನಗಳಿರಲಿದ್ದು, ಕಡಿಮೆ ಸಮಯದಲ್ಲಿ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಸಹಾಯ ಮಾಡಲಿವೆ.
ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow ‘ ಮಾಡಿಕೊಳ್ಳಿ. ಹಾಗೆ ಈ ಆರ್ಟಿಕಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.