ಸ್ನೇಹಿತರೆ ಇನ್ನೇನು 2023 ಮುಗಿಯುತ್ತ ಬಂದಿತು. ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ನಲ್ಲಿ ಹತ್ತು ಹಲವು ವಿಶಿಷ್ಟ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ತೆರೆ ಕಾಣಲಿದ್ದು ಸಹಜವಾಗಿ ಪ್ರೇಕ್ಷಕರ ಗಮನ ತಮ್ಮ ನೆಚ್ಚಿನ ನಟರ ಚಿತ್ರಗಳ ಮೇಲೆ ನೆಟ್ಟಿದೆ. ಅದರಂತೆ ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣಲಿರುವ ಹತ್ತು ಹಲವು ಅದ್ಭುತ ಚಿತ್ರಗಳಲ್ಲಿ ಒಂದು ಎನ್ನಬಹುದಾದ 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತ ಜಯದ ರೂವಾರಿಯಾದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಜೀವನ ಚರಿತ್ರೆಯೊಳಗೊಂಡ ಶಾಮ್ ಬಹದ್ದೂರ್ ಎಂಬ ಚಿತ್ರವು ಡಿಸೆಂಬರ್ 1 ರಂದು ತೆರೆ ಕಾಣಲಿದೆ. ಅದರ ಕುರಿತದ ಸಂಪೂರ್ಣ ಮಾಹಿತಿ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರ ಡಿಸೆಂಬರ್ ಎಂಬುದು ವರ್ಷದ ಅಂತ್ಯವೂ ಹೌದು ಮತ್ತು ಚಿತ್ರರಂಗದ ಪಾಲಿಗೆ ಮಹತ್ತ್ವದ ತಿಂಗಳೂ ಹೌದು. ಏಕೆಂದರೆ ವರ್ಷದುದ್ದಕ್ಕೂ ಬಿಡುಗಡೆಯಾಗದ ಚಿತ್ರಗಳು ವರ್ಷಾಂತದಲ್ಲಿ ಪರದೆಗೆ ತರಬೇಕೆಂಬ ಮಹತ್ತರ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿರುತ್ತಾರೆ. ಅಂತೆಯೇ ವಿಕ್ಕಿ ಕೌಶಲ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ ಸ್ಯಾಮ್ ಬಹದ್ದೂರ್ ಸಿನೆಮಾ ಡಿಸೆಂಬರ್ 1 ಕ್ಕೆ ಬಿಡುಗಡೆಯಾಗಲಿದೆ.
ಈ ಸಿನಿಮಾ 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಚಳುವಳಿಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದ ಸಂದರ್ಭದ ಕಥೆಯನ್ನು ಒಳಗೊಂಡಿದೆ. ಯುದ್ಧದಲ್ಲಿ ಭಾರತ ವಿಜಯ ಸಾಧಿಸಲು ಬಹು ಮುಖ್ಯ ಪಾತ್ರವನ್ನು ವಹಿಸಿದಂತಹ ಫೀಲ್ಡ್ ಮಾರ್ಷಲ್ ಮಾಣಿಕ್ಯ ಅವರ ಜೀವನ ಚರಿತ್ರೆಯನ್ನು ಈ ಸಿನಿಮಾ ಒಳಗೊಂಡಿದೆ. ಮಾಣಿಕ್ಷಾ ಅವರ ಬಾಲ್ಯ ಯೌವನ ಹಾಗೂ ಸೇನೆಯಲ್ಲಿ ಅವರ ಸೇವೆ ಮುಂತಾದ ಕಥೆಯನ್ನು ಸಿನಿಮಾ ಹೇಳುತ್ತದೆ. ಚಿತ್ರದ ಮುಖ್ಯ ಪಾತ್ರಗಳ ಪರಿಚಯ ಇಲ್ಲಿದೆ ನೋಡಿ..
ಸ್ಯಾಮ್ ಮಾಣಿಕ್ ಷಾ – ವಿಕ್ಕಿ ಕೌಶಲ
ಇಂದಿರಾ ಗಾಂಧಿ – ಫಾತಿಮಾ ಸನಾ ಶೇಖ್
ಸಿಲ್ಲೊ ಮಾಣಿಕ್ ಷಾ(ಮಾಣಿಕ್ ಷಾ ಹೆಂಡತಿ) – ಸನ್ಯಾ ಮಲ್ಹೋತ್ರಾ
ಯಾಹ್ಯಾ ಖಾನ್: ಮೊಹಮದ್ ಜೀಶನ್
ಚಿತ್ರದ ಟ್ರೈಲರ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.