ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಆಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಜಗತ್ತಿನ ಅತ್ಯಂತ ಕಠಿಣ ಕೆಲಸಗಳಲ್ಲಿ ಪ್ರಮುಖವಾದ ಕೆಲಸ ಎಂದರೆ ಅದು ಒಕ್ಕಲುತನ ಅಥವಾ ಕೃಷಿ. ಏಕೆಂದರೆ ಕೃಷಿಯಲ್ಲಿ ಬೀಜ ಬಿತ್ತುವುದು ಅಷ್ಟೇ ನಮ್ಮ ಕೈಯಲ್ಲಿ ಇರುತ್ತದೆ. ಉಳಿದಂತೆ ಎಲ್ಲಾ ಪ್ರಕೃತಿಯ ಆಟ. ಅದರಲ್ಲೂ ಭಾರತದ ಕೃಷಿ ಕ್ಷೇತ್ರವು ಮುಂಗಾರು ಮಳೆ ಆಧಾರಿತವಾಗಿದ್ದು ಇದು ಕೃಷಿ ಕ್ಷೇತ್ರದ ಜೊತೆಗೆ ಜೂಜಾಟದಲ್ಲಿ ತೊಡಗುತ್ತದೆ.
ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಆಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಜಗತ್ತಿನ ಅತ್ಯಂತ ಕಠಿಣ ಕೆಲಸಗಳಲ್ಲಿ ಪ್ರಮುಖವಾದ ಕೆಲಸ ಎಂದರೆ ಅದು ಒಕ್ಕಲುತನ ಅಥವಾ ಕೃಷಿ. ಏಕೆಂದರೆ ಕೃಷಿಯಲ್ಲಿ ಬೀಜ ಬಿತ್ತುವುದು ಅಷ್ಟೇ ನಮ್ಮ ಕೈಯಲ್ಲಿ ಇರುತ್ತದೆ. ಉಳಿದಂತೆ ಎಲ್ಲಾ ಪ್ರಕೃತಿಯ ಆಟ. ಅದರಲ್ಲೂ ಭಾರತದ ಕೃಷಿ ಕ್ಷೇತ್ರವು ಮುಂಗಾರು ಮಳೆ ಆಧಾರಿತವಾಗಿದ್ದು ಇದು ಕೃಷಿ ಕ್ಷೇತ್ರದ ಜೊತೆಗೆ ಜೂಜಾಟದಲ್ಲಿ ತೊಡಗುತ್ತದೆ.
Thank you for reading this post, don't forget to subscribe!ಹೀಗೆ ಪ್ರಕೃತಿಯ ವಿಪರೀತ ಏರಿಳಿತದಿಂದಾಗಿ ರೈತನ ಬದುಕು ನಿಜಕ್ಕೂ ದುಸ್ತರವಾಗುತ್ತದೆ. ಕಾರಣ, ಕೃಷಿ ಚಟುವಟಿಕೆಗಾಗಿ ಆತ ಅಲ್ಲಿ ಇಲ್ಲಿ ಸಾಲ ಮಾಡಿ ಬಿತ್ತನೆ ಮಾಡಿರುತ್ತಾನೆ. ಅಂತಹ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಉಂಟಾದರೆ ಆತನ ಬದುಕು ಬೀದಿಗೆ ಬಂದು ಬಿಡುತ್ತದೆ.
ಈ ಕಾರಣದಿಂದ ರೈತರು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅಥವಾ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಮಾಡುತ್ತಾರೆ. ಇನ್ನು ಮುಂದಿನ ವರ್ಷವೂ ಅಂದುಕೊಂಡಂತೆ ಬೆಳೆ ಬರದಿದ್ದರೆ ರೈತರು ಸಾಲಮನ್ನಾ ಅಥವಾ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರದ ಮೊರೆ ಹೋಗಬೇಕಾಗುತ್ತದೆ.
ಹಾಗಾದರೆ ಕೃಷಿ ಸಹಕಾರಿ ಸಂಘಗಳಲ್ಲಿ ಸಾಲವನ್ನು ಪಡೆದಿರುವ ರೈತರು ಇಲ್ಲಿಯವರೆಗೆ ತಮ್ಮ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನ ಸುಲಭವಾಗಿ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊಟ್ಟಮೊದಲು ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ಮಾದರಿ ಸ್ಥಳದಲ್ಲಿ ರೈತ ಎಂದು ಹಾಕಿ, ಕೆಳಗೆ ನೀಡಲಾಗಿರುವ ಜಾಗದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ ಕೆಳಗೆ ನೀಡಲಾಗಿರುವ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ನಿಮ್ಮ ಗ್ರಾಮದಲ್ಲಿ ಇಲ್ಲಿಯವರೆಗೆ ಯಾವ ಯಾವ ರೈತರಿಗೆ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಎಷ್ಟು ಸಾಲಮನ್ನಾ ಆಗಿದೆ, ಅವರ ಯಾವ ದಿನಾಂಕದಂದು ಎಷ್ಟು ಸಾಲಮನ್ನಾ ಆಗಿದೆ, ಸಾಲಮನ್ನಾ ಯಶಸ್ವಿಯಾಗಿದೆಯೋ ಅಥವಾ ವಿಫಲ ಆಗಿದೆಯೋ ಎಂಬ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.
ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಸಾಲಮನ್ನಾ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಅಂಗೈನಲ್ಲೇ ಪಡೆಯಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…
Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…
ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…