ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಆಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಜಗತ್ತಿನ ಅತ್ಯಂತ ಕಠಿಣ ಕೆಲಸಗಳಲ್ಲಿ ಪ್ರಮುಖವಾದ ಕೆಲಸ ಎಂದರೆ ಅದು ಒಕ್ಕಲುತನ ಅಥವಾ ಕೃಷಿ. ಏಕೆಂದರೆ ಕೃಷಿಯಲ್ಲಿ ಬೀಜ ಬಿತ್ತುವುದು ಅಷ್ಟೇ ನಮ್ಮ ಕೈಯಲ್ಲಿ ಇರುತ್ತದೆ. ಉಳಿದಂತೆ ಎಲ್ಲಾ ಪ್ರಕೃತಿಯ ಆಟ. ಅದರಲ್ಲೂ ಭಾರತದ ಕೃಷಿ ಕ್ಷೇತ್ರವು ಮುಂಗಾರು ಮಳೆ ಆಧಾರಿತವಾಗಿದ್ದು ಇದು ಕೃಷಿ ಕ್ಷೇತ್ರದ ಜೊತೆಗೆ ಜೂಜಾಟದಲ್ಲಿ ತೊಡಗುತ್ತದೆ.
Thank you for reading this post, don't forget to subscribe!ಹೀಗೆ ಪ್ರಕೃತಿಯ ವಿಪರೀತ ಏರಿಳಿತದಿಂದಾಗಿ ರೈತನ ಬದುಕು ನಿಜಕ್ಕೂ ದುಸ್ತರವಾಗುತ್ತದೆ. ಕಾರಣ, ಕೃಷಿ ಚಟುವಟಿಕೆಗಾಗಿ ಆತ ಅಲ್ಲಿ ಇಲ್ಲಿ ಸಾಲ ಮಾಡಿ ಬಿತ್ತನೆ ಮಾಡಿರುತ್ತಾನೆ. ಅಂತಹ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಉಂಟಾದರೆ ಆತನ ಬದುಕು ಬೀದಿಗೆ ಬಂದು ಬಿಡುತ್ತದೆ.
ಇದನ್ನೂ ಓದಿ: MSP: 14 ಮುಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ ! ರೈತರಿಗೆ ಸಿಗಲಿದೆ 2 ಲಕ್ಷ ಕೋಟಿ ರೂಪಾಯಿ ಬೆಂಬಲ ಬೆಲೆ!
ಹಾಗಾಗಿ ರೈತ ಸರ್ಕಾರದ ಅಭಯ ಹಸ್ತಕ್ಕಾಗಿ ನಿರೀಕ್ಷಿಸುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಹಜವಾಗಿದೆ. ಇನ್ನು ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ರೈತರಿಗೆ ಅಷ್ಟು ಇಷ್ಟು ಪ್ರಯೋಜನಕಾರಿ ಯೋಜನೆಗಳನ್ನು ತಂದಿರುವುದು ಇತ್ತೀಚಿನ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಒಂದು.
ಇದನ್ನೂ ಓದಿ: Gruhalakshmi: ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ಹಣ ಬಿಡುಗಡೆ ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಯಾವ ಯಾವ ರೈತರ ಸಾಲ ಮನ್ನಾ ಆಗಲಿದೆ?
ಇದೀಗ ತೆಲಂಗಾಣ ಸರ್ಕಾರವು ತನ್ನ ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ರೈತರ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಮಾಡಲು ಮುಂದಾಗಿದೆ. ಅಲ್ಲದೆ ಅದರ ಜೊತೆಗೆ ರೈತರಿಗೆ ಪ್ರತಿ ವರ್ಷ 15,000 ರೂಪಾಯಿ ಧನ ಸಹಾಯ ಮಾಡುವ ಮಹತ್ವದ ನಿರ್ಧಾರಕ್ಕೆ ತೆಲಂಗಾಣ ಸಚಿವ ಸಂಪುಟ ಸೈ ಎಂದಿದೆ.
ಇದನ್ನೂ ಓದಿ: ಪಿಎಂ ಕಿಸಾನ್: ದೇಶದ 9.3 ಕೋಟಿ ರೈತರ ಖಾತೆಗೆ 17 ನೇ ಕಂತಿನ ಹಣ ಜಮಾ ! ನಿಮ್ಮ ಹಣ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಇದಕ್ಕಾಗಿ ತೆಲಂಗಾಣ ರಾಜ್ಯ ಸರ್ಕಾರದ ಬೊಕ್ಕಸದಿಂದ ಒಟ್ಟು 31,000 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ. ಇದು ಕಾಂಗ್ರೇಸ್ ಪಕ್ಷದ ಚುನಾವಣಾ ಪೂರ್ವ ಪ್ರಣಾಳಿಕೆಯ ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಅದನ್ನು ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿಯವರು ತಿಳಿಸಿದ್ದಾರೆ.
ಇನ್ನು ತೆಲಂಗಾಣ ಸರ್ಕಾರದ ಈ ನಿರ್ಧಾರದಿಂದ ತೆಲಂಗಾಣ ರಾಜ್ಯದ 47 ಲಕ್ಷ ರೈತರ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಅಗಲಿದ್ದು ಅದರ ಜೊತೆಗೆ ವರ್ಷಕ್ಕೆ 15,000 ರೂಪಾಯಿ ಧನ ಸಹಾಯ ಕೂಡ ಸಿಗಲಿದೆ.
ಇದನ್ನೂ ಓದಿ: ಬೆಳೆ ಪರಿಹಾರ ಹಣ: 3 ನೇ ಕಂತಿನ ಹಣ ಜಮಾ |ಆಧಾರ್ ನಂಬರ್ ಹಾಕಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯೇ ಎಂಬುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಿ!
ಇನ್ನು ತೆಲಂಗಾಣ ಸರ್ಕಾರದ ಈ ನಿರ್ಧಾರದಿಂದ ನಮ್ಮ ರಾಜ್ಯದ ರೈತ ಸಂಘಟನೆಗಳು ರೈತರ ಸಾಲಮನ್ನಾ ಮಾಡಲು ಆಗ್ರಹಿಸಿವೆ. ಅದರಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಕೂಡ ಮುಂದಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
- ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರಾಚೀನ ಕಾಲದಿಂದಲೂ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ಪ್ರಮುಖ ಪಾತ್ರವಹಿಸಿದೆ. ಚಿನ್ನವನ್ನು ಸಾಂಪ್ರದಾಯಕವಾಗಿ ಪ್ರಪಂಚಾದ್ಯಂತ ಮೌಲ್ಯಯುತವಾದ ವಿತ್ತೀಯ ಅಸ್ತಿಯಂದು ಪರಿಗಣಿಸಲಾಗಿದೆ
- ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ ಎಲ್ಲಾ ಸಂತ್ರಸ್ತ ತಾಲೂಕುಗಳಿಗೆ ಸುಮಾರು 1,033 ಕೋಟಿ ರೂಪಾಯಿ ಹಾನಿಯಾಗಿದ್ದು, ಈ ಪರಿಹಾರ (parihara) ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ನಿಮಗೆ ಗೊತ್ತೇ ಇದೆ ಹಾಗಾದರೆ ಈ ಅಂಕಣದಲ್ಲಿ ಯಾರಿಗೆ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳೋಣ.
- ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿCheck your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು, ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಆಕಾರಬಂದ್ ಚೆಕ್ ಮಾಡಬಹುದು.
- Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿರುವ ರೈತರಿಗೆ ಬೆಳೆ ಪರಿಹಾರ ಹಣ (bele parihara hana) ಜಮಾ ಆಗುವುದಿಲ್ಲ. ಈ ಪಟ್ಟಿಯಲ್ಲಿರುವ ರೈತರು ತಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದೆ.
- ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಇಂತಹ ಕೃಷಿಯ ಮೂಲ ಅನಿವಾರ್ಯತೆ ಎಂದರೆ ಅದು ಮಳೆ.
- RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು ಸಾವಿರಾರು ರೈತರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ. ಇನ್ನು ಹಲವು ವರ್ಷಗಳಿಂದ ಬಿತ್ತಿ ಬೆಳೆದ ಜಮೀನಿನ ಮೇಲೆ ಹೀಗೆ ಏಕಾಏಕಿ ಹಕ್ಕು ಚಲಾಯಿಸುತ್ತಿರುವ ವಕ್ಫ್ ಬೋರ್ಡ್ ವಿರೋಧಿಸಿ ಹಲವಾರು ರೈತರು ಪ್ರತಿಭಟನೆಗೆ ಇಳಿದಿದ್ದಾರೆ.
- ಬೆಳೆ ವಿಮೆ ಹಣ ಜಮಾ ಆಗಿಲ್ಲವೇ ? ಈ ನಂಬರಿಗೆ ಒಂದು ಕರೆ ಮಾಡಿ ಸಾಕು! ನಿಮ್ಮ ಹಣ ಜಮಾ ಆಗುತ್ತೆಹೀಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರ್ಕಾರವು ಬೆಳೆ ವಿಮೆ ಪರಿಹಾರ ಹಣವನ್ನು ನೀಡುತ್ತದೆ. ಇದನ್ನ ನಿರ್ದಿಷ್ಟ ಬೆಳೆ ವಿಮೆ ಕಂಪನಿಗಳಿಗೆ ನೀಡಲಾಗಿರುತ್ತದೆ. ಪ್ರತಿಯೊಂದು ಜಿಲ್ಲೆಗೂ ಬೇರೆ ಬೇರೆ ವಿಮಾ ಕಂಪನಿ ಇರುತ್ತದೆ.
- ನಿಮ್ಮ ಜಮೀನನ್ನು ನಿಮ್ಮ ನೆರೆಯವರು ಒತ್ತುವರಿ ಮಾಡಿದ್ದಾರೆಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆ ನಿಮ್ಮ ಜಮೀನಿನ ನಕ್ಷೆ ಬೇಕಾಗಿದೆಯೇ ? ಅಥವಾ ನಿಮ್ಮ ಜಮೀನಿನಲ್ಲಿ ಕಾಲುದಾರಿ ಹಾದು ಹೋಗಿದೆ ಎಂದು ಚೆಕ್ ಮಾಡಬೇಕೆ? ಅಥವಾ ನಿಮ್ಮ ಪಕ್ಕದ ಜಮೀನಿನವರು ನಿಮ್ಮ ಜಮೀನಲ್ಲಿ ಒತ್ತುವರಿ ಮಾಡಿದ್ದಾರೆಂದು ತಿಳಿಯಬೇಕೇ?
- ಈ ವರ್ಷದ ಮುಂಗಾರು ಹಂಗಾಮಿನ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿಇಂತಹ ಬೆಳೆ ಹಾನಿಯಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಪರಿಹಾರ ಹಣ ಜಮಾ ಮಾಡುತ್ತದೆ.
- 50,000 ಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು ! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಚೆಕ್ ಮಾಡಿಹೌದು ಸ್ನೇಹಿತರೆ, ಕೇವಲ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 50,000 ಕ್ಕು ಹೆಚ್ಚು ನಕಲಿ ರೇಶನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದ್ದಾರೆ.
- ತುಂತುರು ನೀರಾವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರೈತರಿಗೆ ಭರ್ಜರಿ ಅವಕಾಶ ಲಭ್ಯವಾಗಿದೆ. ಕೃಷಿ ಇಲಾಖೆಯ ವತಿಯಿಂದ ತುಂತುರು ನೀರಾವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಿಂದ ನೀರಿನ ವ್ಯರ್ಥ ಕಡಿಮೆಯಾಗುವುದರ ಜೊತೆಗೆ ಬೆಳೆಗಳ ಉತ್ಪಾದಕತೆ ಹೆಚ್ಚಾಗಲಿದೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯೋಜನೆಗೆ ಸಂಬಂಧಿಸಿದ ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಆಧುನಿಕ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.










