WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಭಾರತ ಕ್ರಿಕೆಟ್ ಕಂಡ ಮಹಾನ್ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಪಾಲಿನ ದೇವರು ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮನಗಂಡು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು. ಸಮಾರಂಭದಲ್ಲಿ ಬಿಸಿಸಿಐ ವೈಸ್ ಪ್ರೆಸಿಡೆಂಟ್ ರಾಜೀವ್ ಶುಕ್ಲಾ, ಮತ್ತು ಕಾರ್ಯದರ್ಶಿ ಜಯ್ ಶಾ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಅಮೋಲ್ ಕಾಳೆ, ಮತ್ತು ಕಾರ್ಯದರ್ಶಿ ಅಜಿಂಕ್ಯ ನಾಯ್ಕ್. ನಂತರ ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಇದ್ದರು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಈ ಪ್ರತಿಮೆಯನ್ನು ವಾಂಖೆಡೆ ಸ್ಟೇಡಿಯಂನ ಸಚಿನ್ ಸ್ಟ್ಯಾಂಡ್ ನ ಬಳಿ ನಿರ್ಮಿಸಲಾಗಿದ್ದು , ಸಚೀನರವರ 50 ವರ್ಷಗಳ ಜೀವನದ ಗೌರವಾರ್ಥವಾಗಿ ಅನಾವರಣ ಗೊಳಿಸಲಾಯಿತು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ತಮ್ಮ 50ನೇ ಜನ್ಮ ದಿನವನ್ನು ಸಚೀನ ಆಚರಿಸಿಕೊಂಡಿದ್ದಾರೆ. ವಿಶೇಷ ಎಂದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನವೆಂಬರ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಚೀನ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.ಸಚಿನ್ ತೆಂಡೂಲ್ಕರ್ ಅವರು ಏಕದಿನ ಮಾದರಿಯಲ್ಲಿ 18426 ರನ್ ಗಳು ಮತ್ತು ಟೆಸ್ಟ್ ಮಾದರಿಯಲ್ಲಿ 15921 ರನ್ ಬಾರಿಸಿದ್ದಾರೆ.ಅಲ್ಲದೇ ಕ್ರಿಕೆಟ್ನ ಎಲ್ಲ ಮಾದರಿಯಿಂದ ಅವರು ಒಟ್ಟು 100 ಶತಕಗಳನ್ನು ಬಾರಿಸಿ ಕ್ರಿಕೆಟ್ ಲೋಕದ ದೇವರು ಎಂದು ಎನಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ, ಸಚಿನ್ ತೆಂಡೂಲ್ಕರ್ ಮತ್ತು ಅವರ ಕುಟುಂಬದವರು ಪ್ರತಿಮೆಯ ಅನಾವರಣದ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

By

Leave a Reply

Your email address will not be published. Required fields are marked *