ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಇಂದು ನೀವು ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕಾದರೆ ನಿಮ್ಮ ಪಹಣಿ ಪತ್ರಕ್ಕೆ ನಿಮ್ಮ ಆಧಾರ ಕಾರ್ಡ ಲಿಂಕ್ ಆಗಿರುವುದು ಕಡ್ಡಾಯವಾಗಿದೆ. (rtc adhar link)
Thank you for reading this post, don't forget to subscribe!ಒಂದು ವೇಳೆ ನಿಮ್ಮ ಪಹಣಿ ಪತ್ರಕ್ಕೆ ನಿಮ್ಮ ಆಧಾರ ಕಾರ್ಡ ಲಿಂಕ್ ಆಗಿಲ್ಲದಿದ್ದರೆ ನಿಮಗೆ ಪಿಎಂ ಕಿಸಾನ್ ಹಣ, ಬೆಳೆ ಪರಿಹಾರ ಹಣ, ಬೆಳೆ ವಿಮೆ ಹಣ ಹಾಗೂ ಸರ್ಕಾರದ ಇತರೆ ಸಬ್ಸಿಡಿಯ ಪ್ರಯೋಜನ ಸಿಗುವುದಿಲ್ಲ.
ಆದ್ದರಿಂದ ಮನೆಯಲ್ಲೇ ಕುಳಿತು ನೀವು ನಿಮ್ಮ ಮೊಬೈಲ್ ಸಹಾಯದಿಂದ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡುವ ಸುಲಭ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಮಾಡುವುದು ಹೇಗೆ? RTC Adhar link
ಹಂತ -1) ಮೊದಲಿಗೆ ರೈತರು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://landrecords.karnataka.gov.in/service4
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಕೆಳಗೆ ನೀಡಲಾಗಿರುವ ಕ್ಯಾಪ್ಚ ಹಾಕಿ send otp ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಗೆ ಬಂದ OTP ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಮೂದಿಸಿ ಕೆಳಗೆ ನೀಡಲಾಗಿರುವ ಚಿಕ್ಕ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಟಿಕ್ ಮಾಡಿ verify ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ನಿಮ್ಮ ಆಧಾರ್ ಕಾರ್ಡ್ ಅನ್ನು ಯಶಸ್ವಿಯಾಗಿ verify ಮಾಡಲಾಗಿದೆ ಎಂದು ಕಾಣಿಸುತ್ತದೆ.ನಂತರ ok ಮೇಲೆ ಕ್ಲಿಕ್ ಮಾಡಿ.

ಹಂತ -6) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ನಂಬರ್ ಹಾಕಿ ಕೆಳಗೆ ನೀಡಲಾಗಿರುವ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಟಿಕ್ ಮಾಡಿ ಒಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.

ಹಂತ -7) ನಂತರ ನಿಮಗೆ ಹೊಸದೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಜಿಲ್ಲೆ ಹಾಗೂ ನಿಮ್ಮ ವಿಳಾಸ ಹಾಗೂ ನಿಮ್ಮ ಫೋಟೋ ಕಾಣಿಸುತ್ತದೆ.
ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ನಿಮ್ಮ ಆಧಾರ್ ನಂಬರಿಗೆ ಯಾವ ಪಹಣಿಗೆ ಲಿಂಕ್ ಆಗಿದೆ ಹಾಗೂ ಯಾವ ಸರ್ವೇ ನಂಬರ್ ಲಿಂಕ್ ಆಗಿದೆ ಎಂಬುದು ಕಾಣಿಸುತ್ತದೆ.
ಈ ರೀತಿಯಾಗಿ ರೈತರು ಸುಲಭವಾಗಿ ಮನೆಯಲ್ಲಿ ಕುಳಿತು ತಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಬಹುದು.
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇
https://chat.whatsapp.com/FM1qVgdNtJm5m1M9SL0BHc?mode=ac_t