ಸ್ನೇಹಿತರೆ ಭಾರತದಲ್ಲಿ ಒಂದು ಕಡೆ ಬಡತನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಇನ್ನೊಂದು ಕಡೆ ಶ್ರೀಮಂತರ ಗಳಿಕೆಯೂ ಕೂಡ ಹೆಚ್ಚುತ್ತಿದೆ. ಒಂದು ಅಧ್ಯಯನದ ಪ್ರಕಾರ ಭಾರತದ 90 % ರಷ್ಟು ಸಂಪತ್ತು ಕೇವಲ ಬೆರಳೆಣಿಕೆಯಷ್ಟು ಜನರ ಬಳಿ ಇದೆ. ಹೀಗಾಗಿ ಇಂತಹ ಶ್ರೀಮಂತರ ಮೇಲೆ ಸಾಮಾನ್ಯವಾಗಿ ಕೇಳಿ ಬರುವ ಅಪವಾದ ಏನೆಂದರೆ ಇವರು ತಮ್ಮ ಹಣವನ್ನು ದಾನವಾಗಿ ಕೊಡುವುದಿಲ್ಲ ಬದಲಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ ಎಂಬುದು. ಆದರೆ ಇತ್ತೀಚಿಗೆ ಬಿಡುಗಡೆಯಾದ ವರದಿ ಒಂದರ ಪ್ರಕಾರ ಭಾರತದ ಯಾವ ಯಾವ ಶ್ರೀಮಂತರು ಒಂದು ದಿನಕ್ಕೆ ಎಷ್ಟು ಹಣವನ್ನು ದಾನವಾಗಿ ನೀಡಿದ್ದಾರೆ ಎಂಬುದನ್ನು ವರದಿ ಮಾಡಿದೆ. ಅದರ ಸಂಪೂರ್ಣ ಮಾಹಿತಿ ಈ ಕೆಳಗಿದೆ ಓದಿ.
Thank you for reading this post, don't forget to subscribe!1. ಶಿವ ನಾಡರ್ : ಎಚ್ ಸಿ ಎಲ್ ಕಂಪನಿಯ ಮಾಲೀಕರಾದ ಇವರು ಪ್ರತಿದಿನ 5.6 ಕೋಟಿ ಅಷ್ಟು ಹಣವನ್ನು ಬಡವರಿಗೆ ದಾನವಾಗಿ ನೀಡುತ್ತಾರೆ.
2. ಅಜೀಮ್ ಪ್ರೇಮ್ ಜಿ : ವಿಪ್ರೊ ಕಂಪನಿಯ ಸಂಸ್ಥಾಪಕರಾದ ಇವರು ಪ್ರತಿದಿನ 4.8 ಕೋಟಿ ರಷ್ಟು ಹಣವನ್ನು ಬಡವರಿಗೆ ದಾನದ ರೂಪದಲ್ಲಿ ನೀಡುತ್ತಾರೆ.
3. ಮುಕೇಶ್ ಅಂಬಾನಿ : ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಒಡೆಯರಾದ ಇವರು ಪ್ರತಿದಿನ 1.03 ಕೋಟಿ ಅಷ್ಟು ಹಣವನ್ನು ದಾನವಾಗಿ ನೀಡುತ್ತಾರೆ.
4. ಕುಮಾರ್ ಮಂಗಲಂ : ಆದಿತ್ಯ ಬಿರ್ಲಾ ಕಂಪನಿಯ ಮಾಲೀಕರಾದ ಇವರು ಪ್ರತಿದಿನ 78 ಲಕ್ಷಗಳಷ್ಟು ಹಣವನ್ನು ಬಡವರಿಗೆ ದಾನದ ರೂಪದಲ್ಲಿ ನೀಡುತ್ತಾರೆ.
5. ಗೌತಮ್ ಅದಾನಿ : ಅದಾನಿ ಎಂಟರ್ಪ್ರೈಸಸ್ ನ ಒಡೆಯರಾದ ಇವರು ಪ್ರತಿದಿನ 78 ಲಕ್ಷ ರೂಪಾಯಿಗಳಷ್ಟು ಹಣವನ್ನು ಬಡವರಿಗೆ ದಾನವಾಗಿ ನೀಡುತ್ತಾರೆ.
6. ಬಜಾಜ್ ಫ್ಯಾಮಿಲಿ : ಬಜಾಜ್ ಆಟೋಮೊಬೈಲ್ಸ್ ಕಂಪನಿಯ ಒಡೆಯರಾದ ಈ ಕುಟುಂಬವು ಪ್ರತಿದಿನ 72 ಲಕ್ಷ ರೂಪಾಯಿಗಳಷ್ಟು ಹಣವನ್ನು ಬಡವರಿಗೆ ದೇಣಿಗೆಯಾಗಿ ನೀಡುತ್ತದೆ.
7. ಅನಿಲ ಅಗರ್ವಾಲ್ : ವೇದಾಂತ ಗ್ರೂಪ್ ಕಂಪನಿಯ ಒಡೆಯರಾದ ಇವರು ಪ್ರತಿದಿನ 66 ಲಕ್ಷ ರೂಪಾಯಿಗಳಷ್ಟು ಹಣವನ್ನ ಬಡವರಿಗೆ ದಾನವಾಗಿ ನೀಡುತ್ತಾರೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನೀವು ನಮ್ಮ ವೆಬ್ಸೈಟನ್ನು ಮೊದಲು ಬಾರಿ ನೋಡುತ್ತಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.