ಸ್ನೇಹಿತರೆ ಐಪಿಎಲ್. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್, ಯಾರಿಗೆ ತಾನೇ ಗೊತ್ತಿಲ್ಲ. ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆದ ಐಪಿಎಲ್ ನಿಂದ ಅನೇಕ ಜನರ ಜೀವನವೇ ಬದಲಾಗಿಬಿಟ್ಟಿದೆ. ಇದನ್ನು ಚಿನ್ನದ ಮೊಟ್ಟೆ ಇಡುವ ಲೀಗ್ ಎಂದು ಕೂಡ ಬಣ್ಣಿಸಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ನದ್ದು ಅದೆಷ್ಟು ಕ್ರೇಜ್ ಇದೆ ಅಂದ್ರೆ ಇಲ್ಲಿ ಹುಟ್ಟುವ ಮಗು ಅ ಆ ಇ ಈ ಕಲಿಯೋಕು ಮುಂಚೆನೆ ಕ್ರಿಕೆಟ್ ಅನ್ನ ಕಲಿತಿರುತ್ತೆ. ಇಂತಹ ಶ್ರೀಮಂತ ಕ್ರಿಕೆಟಲ್ಲಿ ಅದೊಂದು ತಂಡ ಮಾತ್ರ ಚಾಂಪಿಯನ್ ಆಗದಿದ್ದರೂ ಯಾವ ಚಾಂಪಿಯನ್ ತಂಡಕ್ಕೂ ಇರಲಾರದಷ್ಟು ಅಭಿಮಾನಿ ಬಳಗ ಜನಪ್ರಿಯತೆಯನ್ನು ಹೊಂದಿದೆ.ಆ ತಂಡ ಮೈದಾನಕ್ಕಿಳಿದರೆ ಸಾಕು ಅಲ್ಲಿ ಅಭಿಮಾನಿಗಳ ಹುಚ್ಚು ಮುಗಿಲು ಮುಟ್ಟಿರುತ್ತದೆ, ಬಿಜಿನೆಸ್ ಮ್ಯಾನ್ ಗಳ ಜೇಬು ತುಂಬಿರುತ್ತೆ. ಹೌದು ಸ್ನೇಹಿತರೆ ನಾನು ಹೇಳ್ತಾ ಇರೋದು ಐಪಿಎಲ್ ನ ಸ್ಟಾರ್ ತಂಡವಾದ ಆರ್ಸಿಬಿ ಬಗ್ಗೆನೇ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ. ಆರ್ಸಿಬಿ ತಂಡ ಇದುವರೆಗೆ ಐಪಿಎಲ್ ನಲ್ಲಿ ನಡೆದು ಬಂದ ದಾರಿ ಮತ್ತು ಅದು ನಿರ್ಮಿಸಿರುವ ದಾಖಲೆಗಳು ಎಂದು ಇವತ್ತಿನ ಈ ಆರ್ಟಿಕಲ್ ನಲ್ಲಿ ನೋಡೋಣ.
ಗೆಳೆಯರೇ ಐಪಿಎಲ್ ನ ಅತಿ ಇಂಟರೆಸ್ಟಿಂಗ್ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಪ್ರತಿ ವರ್ಷ ಬಲಾdhyaಯ ಆಟಗಾರರನ್ನು ಹೊಂದಿದ್ದರು ಇಲ್ಲಿಯವರೆಗೆ ಒಂದೇ ಒಂದು ಬಾರಿ ಚಾಂಪಿಯನ್ ಆಗಿಲ್ಲ. ಇಲ್ಲಿಯತನಕ ಮೂರು ಬಾರಿ ಐಪಿಎಲ್ ಫೈನಲ್ ಗೆ ಏರಿದರೂ ಒಮ್ಮೆಯೂ ಟ್ರೋಪಿಗೆ ಮುತ್ತಿಕ್ಕಲಾಗಿಲ್ಲ. ಐಪಿಎಲ್ ನ ಇತಿಹಾಸದಲ್ಲಿ ಯಾವುದೇ ತಂಡದ ಸರ್ವಾಧಿಕ ರನ್ ಮತ್ತು ಯಾವುದೇ ತಂಡ ಬಾರಿಸದಷ್ಟು ಸಿಕ್ಸರ್ ಗಳ ದಾಖಲೆ ಈ ತಂಡದ ಹೆಸರಲ್ಲಿದೆ ಹೀಗೆ ಐಪಿಎಲ್ ನಲ್ಲಿ ಹೆಚ್ಚಾಗಿರುವ ಈ ತಂಡದ ಅದ್ವಿತೀಯ ದಾಖಲೆಗಳನ್ನು ತಿಳಿದುಕೊಳ್ಳುವ ಮುನ್ನ ಈ ತಂಡ ನಡೆದು ಬಂದ ದಾರಿಯನ್ನು ನೋಡೋಣ ಬನ್ನಿ.
ಆರ್ಸಿಬಿ ತಂಡವು ಐಪಿಎಲ್ ನ ಆರಂಭದಿಂದಲೂ ಇರುವಂತಹ ತಂಡವಾಗಿದೆ 2018ರಲ್ಲಿ ಮೂಲತಃ ಲಿಕ್ಕರ್ ಅಂದ್ರೆ ಮದ್ಯದ ಕಂಪನಿಯಾದ ವಿಜಯ ಮಲ್ಯ ಒಡೆತನದ ರಾಯಲ್ ಚಾಲೆಂಜ್ ಎಂಬ ಕಂಪನಿಯು ಅಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಬಿಡ್ ಮೊತ್ತವಾದ 111.6 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿತ್ತು. ಈ ಕಂಪನಿಯ ಹೆಸರಿನೊಂದಿಗೆ ರಾಜಧಾನಿಯಾದ ಬೆಂಗಳೂರಿನ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ತಂಡವನ್ನ ಕಟ್ಟಲಾಯಿತು. ಆಡಿದ ಪ್ರಥಮ ಸೀಸನ್ ನಲ್ಲಿ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲಿ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಗೊಂಡಿತ್ತು. ಆದರೆ ಅದರ ಮರು ವರ್ಷದ ಐಪಿಎಲ್ ನಲ್ಲಿ ಅಂದರೆ 2009ರ ಐಪಿಎಲ್ ನಲ್ಲಿ ಫೈನಲ್ ಗೆ ಲಗ್ಗೆ ಇಡುವ ಮೂಲಕ ಭರ್ಜರಿ ವಾಪಸತಿಯನ್ನು ಮಾಡಿತ್ತು ಆದರೆ ದುರದೃಷ್ಟವಶಾತ್ ಫೈನಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಎದುರು 6 ರನ್ನಗಳ ಅಂತರದಿಂದ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ವಿಫಲಗೊಂಡಿತು.
2013ರ ಐಪಿಎಲ್ ನಲ್ಲಿ ಆರ್ ಸಿ ಬಿ ಯು ಪುಣ್ಯ ವಾರಿಯರ್ಸ್ ತಂಡದ ವಿರುದ್ಧ ಬರೋಬ್ಬರಿ 263 ರಗಳ ಕೋಟೆಯನ್ನ ಕಟ್ಟಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡದ ಸರ್ವಾಧಿಕ ರನ್ ಗಳಿಕೆಯಾಗಿದೆ. ಇನ್ನು ಐಪಿಎಲ್ ನ ಅತಿ ಕನಿಷ್ಠ ರನ್ ಗಳಿಕೆಯ ದಾಖಲೆಯು ಆರ್ಸಿಬಿಯ ಹೆಸರಿನಲ್ಲಿದೆ ಅದು 2017ರ ಐಪಿಎಲ್ ನಲ್ಲಿ ಕೆಕೆಆರ್ ತಂಡದ ವಿರುದ್ಧ ಕೇವಲ 49 ರನ್ಗಳಿಗೆ ಸರ್ವ ಪತನ ಕಂಡು ಒಲ್ಲದ ಮನಸ್ಸಿನಿಂದ ಈ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು.
ಐಪಿಎಲ್ ನ ಆರಂಭದಿಂದಲೂ ಆರ್ಸಿಬಿ ಪರವಾಗಿ ಹಲವಾರು ಶ್ರೇಷ್ಠ ಆಟಗಾರರು ಆಡಿದ್ದಾರೆ ಉದಾಹರಣೆಗೆ ರಾಹುಲ್ ದ್ರಾವಿಡ್,ಜಹಿರ್ ಖಾನ್,ಅನಿಲ್ ಕುಂಬಳೆ, ಜಾಕ್ ಕಾಲಿಸ್,ವಿರಾಟ್ ಕೊಹ್ಲಿ ಅಂತ ಘಟಾನುಘಟಿ ಆಟಗಾರರು ಆಡಿದ್ದಾರೆ. 2011ರಲ್ಲಿ ವೆಸ್ಟ್ ಇಂಡಿಸನ ದೈತ್ಯ ಆಟಗಾರ ಕ್ರಿಸ್ ಗೇಲ್ ರನ್ನ ಆರಂಭಿಕ ಆಟಗಾರ ನನ್ನಾಗಿ ಕನಕ್ ತಿಳಿಸುವ ಮೂಲಕ ಐಪಿಎಲ್ ನ ಶ್ರೇಷ್ಠ ದಾಖಲೆಗಳಿಗೆ ಆರ್ಸಿಬಿಯು ನಾಂದಿ ಹಾಡಿತ್ತು. ಏಕೆಂದರೆ ಆರ್ಸಿಬಿಯಾ ಇಂದಿನ ಈ ಮಟ್ಟದ ಯಶಸ್ವಿಗೆ ಮತ್ತು ಜನಪ್ರಿಯತೆಗೆ ಹೆಚ್ಚಿನ ರೀತಿಯಲ್ಲಿ ಕೊಡುಗೆ ನೀಡಿದವರಂದರೆ ಅದು ಕ್ರಿಸ್ ಗೇಲ್ ಮಾತ್ರ. ಏಕೆಂದರೆ ಗೇಲ್ ಆರ್ಸಿಬಿ ಪರವಾಗಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಕೇವಲ 55 ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಇಲ್ಲಿಂದ ಅವರು ಆರ್ಸಿಬಿಯ ಭರವಸೆಯ ಆಟಗಾರನಾಗಿ ಹೊರಹೊಮ್ಮಿದರು. ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ನಿಂದಲೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಈ ದೈತ್ಯ ಆಟಗಾರ ಕೇವಲ 30 ಎಸೆತಗಳಲ್ಲಿಯೇ ಸೆಂಚುರಿ ಬಾರಿಸಿದ ಆಟಗಾರ ಎನ್ನುವ ದಾಖಲೆಯನ್ನು ಹೊಂದಿದ್ದಾರೆ. ಈ ಸೆಂಚುರಿಯು ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಂದ್ಯದಲ್ಲಿಯೇ ಸಿಡಿದಂತದ್ದು. ಈ ಪಂದ್ಯದಲ್ಲಿಯೇ 175 ರನ್ ಗಳಿಸುವ ಮೂಲಕ ಐಪಿಎಲ್ ನ ಇತಿಹಾಸದಲ್ಲಿ ಪಂದ್ಯ ಒಂದರಲ್ಲಿ ಬ್ಯಾಟ್ಸ್ಮನ್ ಒಬ್ಬನ ಶ್ರೇಷ್ಠ ಸ್ಕೋರ್ ಆಗಿ ಇದು ಅಚ್ಚಾಗಿ ಉಳಿದಿದೆ.
ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರ ಅದ್ಭುತ ಪ್ರದರ್ಶನದಿಂದ ಆರ್ಸಿಬಿಯು ಐಪಿಎಲ್ ನಲ್ಲಿ ಅತಿ ಹೆಚ್ಚು ಸೆಂಚುರಿ ಹೊಂದಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಇಲ್ಲಿಯವರೆಗೆ ಆರ್ ಸಿ ಬಿ ಪರವಾಗಿ ಒಟ್ಟು 15 ಶತಕಗಳು ಸಿಡಿದಿವೆ ಇದರಲ್ಲಿ ಅವರದ್ದೇ ಆರು ಶತಕಗಳಿದ್ದರೆ ವಿರಾಟ್ ಕೊಹ್ಲಿ ಅವರ ಐದು ಶತಕಗಳು ಸೇರಿವೆ.
ಇಡೀ ಐಪಿಎಲ್ ನ ಇತಿಹಾಸದಲ್ಲಿ ಅತಿ ಹೆಚ್ಚು ಶಕ್ತಿ ಗಳಿಸಿದ ತಂಡಗಳ ಪೈಕಿ ಆರ್ಸಿಬಿಯು ಒಟ್ಟು 1,433 ಸಿಕ್ಸರ್ ನೊಂದಿಗೆ ಮುಂಬೈ ಇಂಡಿಯನ್ಸ್ ನಂತರ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಮುಂಬೈ 1,442 ಸಿಕ್ಸರ್ ಗಳನ್ನ ಸಿಡಿಸಿದೆ.
ಇನ್ನು 2013ರಲ್ಲಿ ತಂಡದ ಕ್ಯಾಪ್ಟನ್ ಆಗಿ ಚುಕ್ಕಾಣಿ ಏರಿದ ವಿರಾಟ್ ಕೊಹ್ಲಿಯು ಬಹುತೇಕ ಐಪಿಎಲ್ ನ ಎಲ್ಲಾ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 973 ರನ್ ಬಾರಿಸುವುದರ ಮೂಲಕ ಇಲ್ಲಿಯವರೆಗೆ ಐಪಿಎಲ್ ಸೀಸನ್ ಒಂದರಲ್ಲಿ ಮುರಿಯಲಾಗದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇದೇ ವರ್ಷದಲ್ಲಿ ಆರ್ಸಿಬಿಯು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಫೈನಲ್ ಗೆ ತಲುಪಿತ್ತು ಆದರೆ ಫೈನಲ್ ನಲ್ಲಿ ಅದೃಷ್ಟ ಮತ್ತೊಮ್ಮೆ ಕೈಕೊಟ್ಟ ಕಾರಣ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಗ್ಗರಿಸಬೇಕಾಯಿತು. ಐಪಿಎಲ್ ನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಕೆಯ ದಾಖಲೆಯು ವಿರಾಟ್ ಕೊಹ್ಲಿ ಹೆಸರಲ್ಲಿದೆ. ಅವರು ಇಲ್ಲಿಯವರೆಗೆ ಐಪಿಎಲ್ ನಲ್ಲಿ ಒಟ್ಟು 6844 ರನ್ ಕಲೆ ಹಾಕಿದ್ದಾರೆ. ಐಪಿಎಲ್ ನ ಸೀಸನ್ 1ರಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ದಾಖಲೆಯು ವಿರಾಟರ ಹೆಸರಲ್ಲಿದೆ. 2016ರ ಐಪಿಎಲ್ ನಲ್ಲಿ ಅವರು ನಾಲ್ಕು ಶತಕ ಸಿಡಿಸುವ ಮೂಲಕ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಶ್ರೇಷ್ಠ ದಾಖಲೆಗಳನ್ನು ಹೊಂದಿದ್ದರೂ ವಿರಾಟ್ ಅವರು ಅದೃಷ್ಟದ ಆಟದಿಂದ ಆರ್ಸಿಬಿ ತಂಡದ ನಾಯಕನಾಗಿ ಅತಿ ಹೆಚ್ಚು ಅಂದರೆ 55 ಪಂದ್ಯಗಳನ್ನು ಸೋತ ನಾಯಕ ಎನಿಸಿಕೊಂಡಿದ್ದಾರೆ.
ಆರ್ಸಿಬಿಯು ಇಲ್ಲಿಯವರೆಗೆ ಒಟ್ಟು 7 ನಾಯಕರನ್ನು ಕಂಡಿದೆ. 2008ರಲ್ಲಿ ರಾಹುಲ್ ದ್ರಾವಿಡ್, 2009ರಲ್ಲಿ ಕೆವಿನ್ ಪೀಟರ್ಸನ್, ಅದೇ ವರ್ಷ ಅನಿಲ್ ಕುಂಬಳೆ, 2011ರಲ್ಲಿ ಡೇನಿಯಲ್ ವೆಟ್ಟೋರಿ, 2017ರಲ್ಲಿ ಶೇನ್ ವಾಟ್ಸನ್, 2017 ರಿಂದ 2021 ರವರೆಗೆ ವಿರಾಟ್ ಕೊಹ್ಲಿ ಮತ್ತು 2022 ರಿಂದ ಇಲ್ಲಿಯವರೆಗೆ ಪಾಪ್ ಡು ಪ್ಲೇಸಿಸ್ ಅವರು ಆರ್ಸಿಬಿಯ ಮುಂದಾಳಾಗಿ ತಂಡವನ್ನು ಮುನ್ನಡೆಸಿದ್ದಾರೆ.
ಆರ್ಸಿಬಿ ತಂಡವು ತನ್ನ ಕ್ಯಾಪ್ಟನ್ ಕೋಚ್ ಮತ್ತು ಥೀಮ್ ಸಾಂಗ್ಸ್ ಗಳನ್ನು ಅಷ್ಟೇ ಅಲ್ಲದೆ ಹಲವು ಬಾರಿ ತನ್ನ ಲೋಗೋ ಮತ್ತು ಜರ್ಸಿಯನ್ನು ಬದಲಾಯಿಸಿದೆ ಆರಂಭದಲ್ಲಿ ಆರ್ ಸಿ ಬಿ ಯ ಜರ್ಸಿಯು ಕೆಂಪು ಮತ್ತು ಗೋಲ್ಡನ್ ಎಲ್ಲೋ ಬಣ್ಣದಲ್ಲಿತ್ತು, ಅದರ ನಂತರ ಹಲವು ಬಾರಿ ಜರ್ಷಿಯನ್ನ ಬದಲಾಯಿಸಿದೆ. ಪ್ರಸ್ತುತ ಇರುವ ಆರ್ಸಿಬಿಯ ಜರ್ಸಿಯು ಎರಡು ರೀತಿಯಲ್ಲಿದೆ ಅದರಲ್ಲಿ ಒಂದು ರೀತಿಯದ್ದನ್ನ ತವರು ಮೈದಾನದಲ್ಲಿ ಹಾಕಿಕೊಂಡು ಆಡಿದರೆ ಮತ್ತೊಂದನ್ನು ಎದುರಾಳಿ ಮೈದಾನದಲ್ಲಿ ಹಾಕಿಕೊಂಡು ಆಡಲಾಗುತ್ತದೆ. ಆರ್ಸಿಬಿ ಐಪಿಎಲ್ ನ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವನ್ನ ದೆಹಲಿ ವಿರುದ್ಧ ಗೆದ್ದಿದೆ ಇನ್ನು ಅತಿ ಕಡಿಮೆ ಗೆಲುವನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದೆ ದೆಹಲಿ ತಂಡದ ವಿರುದ್ಧ ಆರ್ಸಿಬಿ ತಂಡದ ಗೆಲುವಿನ ಪರ್ಸೆಂಟೇಜ್ ಶೇಕಡ 61 ರಷ್ಟಿದ್ದರೆ ಅದೇ ಮುಂಬೈ ತಂಡದ ವಿರುದ್ಧ ಕೇವಲ 38ರಷ್ಟಿದೆ.
ಐಪಿಎಲ್ ನ ಆರಂಭದ ಚೊಚ್ಚಲ ಸೀಸನ್ ನಲ್ಲಿ ಆರ್ಸಿಬಿ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ರಾಹುಲ್ ದ್ರಾವಿಡ್ ಅವರನ್ನು ಬಿಟ್ಟರೆ ಬೇರೊಬ್ಬ ಆಟಗಾರ 300 ರನ್ಗಳನ್ನ ಗಳಿಸಲು ಆಗಲಿಲ್ಲ. ಐಪಿಎಲ್ ನ ಎರಡನೇ ಆವೃತ್ತಿಯಲ್ಲಿ ಆರ್ ಸಿ ಬಿ ಯು ಅದ್ಭುತ ಕಂಬ್ಯಾಕ್ ಮಾಡಿತು. ಈ ಸೀಸನ್ ನಲ್ಲಿ ಮನೀಶ್ ಪಾಂಡೆ ಫೈನಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಐಪಿಎಲ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನ್ನುವ ದಾಖಲೆಯನ್ನು ಬರೆದರು. ಆದರೆ ಅವರ ಈ ಅದ್ಭುತ ಆಟವು ಆರ್ಸಿಬಿಯನ್ನು ಅಂದು ಗೆಲ್ಲಿಸಲಿಲ್ಲ.
ಇನ್ನು 2014ರ ಐಪಿಎಲ್ ನಲ್ಲಿ ಆರ್ ಸಿ ಬಿ ಯುವರಾಜ್ ಸಿಂಗ್ ಅವರಿಗೆ 14 ಕೋಟಿ ಕೊಟ್ಟು ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿತ್ತು ಆದರೆ ಈ ಸೀಸನ್ ನಲ್ಲಿ ಯುವರಾಜ್ ಸಿಂಗರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಬಾರದ ಕಾರಣ ತಂಡ ಹೊರ ಬಿದ್ದಿತ್ತು. ಈ ಕಾರಣದಿಂದ ಯುವರಾಜ್ ಸಿಂಗರು ಅಭಿಮಾನಿಗಳಿಂದ ಟೀಕೆಗೂ ಒಳಗಾಗಬೇಕಾಗಿತ್ತು.
ಕಿಸ್ ಗೇಲ್ ವಿರಾಟ್ ಕೊಹ್ಲಿ ನಂತರ ಆರ್ಸಿಬಿ ಕಂಡ ಮತ್ತೊಬ್ಬ ಶ್ರೇಷ್ಠ ಬ್ಯಾಟ್ಸ್ಮನ್ ಅಂದರೆ ಅದು ಆರ್ಸಿಬಿಯ ಆಪದ್ಬಾಂಧವ ಎಬಿ ಡಿವಿಲಿಯರ್ಸ್. ಮಿಸ್ಟರ್ ತ್ರಿ 60 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರು ಐಪಿಎಲ್ ನ ಮೋಸ್ಟ ಸಕ್ಸಸ್ಫುಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಅವರು ತಮ್ಮ ಆಕರ್ಷಕ ಮೋನಚು ಬ್ಯಾಟಿಂಗ್ ಶೈಲಿಯಿಂದ ಎದುರಾಳಿಯು ಸಹ ಅವರ ಆಟವನ್ನು ಕುಳಿತು ನೋಡುವಂತೆ ಆಡುತ್ತಿದ್ದರು. ಇವರು ಮೈದಾನಕ್ಕಿಳಿದರೆ ಸಾಕು ಚೆಂಡು ಮೈದಾನದ ಎಲ್ಲಾ ಮೂಲೆಗಳನ್ನು ಕಂಡುಬರುತ್ತಿತ್ತು. ಇವರೊೊಬ್ಬರು ಇದ್ದರೆ ಸಾಕು ಅಂದು ಮೈದಾನದ ತುಂಬೆಲ್ಲ ಕೇವಲ ಕೆಂಪು ಧ್ವಜಗಳೇ ರಾರಾಜಿಸುತ್ತಿದ್ದವು. ಸ್ನೇಹಿತರೆ ಎಬಿಡಿ ವಿಲಿಯರ್ಸ್ ಕುರಿತಂತೆ ಮುಂದೊಂದು ದಿನ ಸಾಧ್ಯವಾದರೆ ಅವರಿಗಾಗಿಯೇ ಒಂದು ಡೆಡಿಕೇಟೆಡ್ ಆರ್ಟಿಕಲ್ ನ್ನ ಬರೆದು ಹಾಕುತ್ತೇನೆ.
ಸ್ನೇಹಿತರೆ ಆರ್ಸಿಬಿ ಯು ಕೇವಲ ಶ್ರೇಷ್ಠ ಬ್ಯಾಟ್ಸ್ಮನ್ಗಳನ್ನ ಅಷ್ಟೇ ಹೊಂದಿರಲಿಲ್ಲ ಬದಲಿಗೆ ವಿಶ್ವವಿಖ್ಯಾತ ಬೌಲರ್ ಗಳು ಕೂಡ ಆರ್ಸಿಬಿ ಪರವಾಗಿ ಆಡಿದ್ದಾರೆ ಅವರಲ್ಲಿ ಪ್ರಮುಖರಾದವಾರು ಯಾರಂದ್ರೆ ಯಜುವೇಂದ್ರ ಚಾಹಲ್. ಅವರು ತಮ್ಮ ಸ್ಪಿನ್ನ ಕೈಚಳಕದಿಂದ ಆರ್ಸಿಬಿ ಪರ ಆಡಿದ 70 ಪಂದ್ಯಗಳಿಂದ 82 ವಿಕೆಟ್ಗಳನ್ನು ಉರುಳಿಸಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದರು. ಐಪಿಎಲ್ ನ ಶ್ರೇಷ್ಠ ಬೌಲರ್ಗಳ ಪಟ್ಟಿಯಲ್ಲಿ ಆರ್ಸಿಬಿ ಪರವಾಗಿ ಅವರು ತಮ್ಮ ಹೆಸರನ್ನು ಸೇರಿಸಿದ್ದಾರೆ.
ಆರ್ಸಿಬಿ ತಂಡದ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆಗಿದೆ ಭಾರತದಲ್ಲಿ ಪ್ರಮುಖ ಮತ್ತು ಹಳೆಯ ಮೈದಾನಗಳಲ್ಲಿ ಒಂದಾಗಿರುವ ಈ ಮೈದಾನದಲ್ಲಿ ಏಕಕಾಲಕ್ಕೆ 40,000 ಪ್ರೇಕ್ಷಕರು ಕ್ರಿಕೆಟ್ ಅನ್ನ ಕಣ್ತುಂಬಿಕೊಳ್ಳಬಹುದಾಗಿದೆ. ತನ್ನ ಅಭಿಮಾನಿಗಳಿಗಾಗಿ ಸ್ಟೇಡಿಯಂ ನಲ್ಲಿ ಫ್ರೀ ವೈಫೈ ಸೌಲಭ್ಯವನ್ನು ಒದಗಿಸಿದ ಮೊದಲ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವ ಪ್ರತಿಯೊಬ್ಬ ಪ್ರೇಕ್ಷಕನು ಈ ಸವಲತ್ತನ್ನು ಬಳಸಬಹುದಾಗಿದೆ.
ಸ್ನೇಹಿತರೆ ಒಟ್ಟಾರೆಯಾಗಿ ಈ ಆರ್ಟಿಕಲ್ ನ ಸಾರಾಂಶ ಹೇಳಬೇಕೆಂದರೆ ಇಡೀ ಐಪಿಎಲ್ ನಲ್ಲಿ ಆರ್ಸಿಬಿಯು ಕೇವಲ ಒಂದು ತಂಡವಾಗಿ ಇರದೆ ಅದು ಸಹಸ್ರಾರು ಅಭಿಮಾನಿಗಳ ಎಮೋಷನ್ ಆಗಿದೆ ಅದು ಇಲ್ಲಿಯವರೆಗೂ ಒಂದು ಕಪ್ನ ಗೆಲ್ಲದಿದ್ದರೂ ಪ್ರತಿಬಾರಿಯೂ ಈ ಸಲ ಕಪ್ ನಮ್ಮದೇ ಎಂಬ ಭರವಸೆ ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಐಪಿಎಲ್ ನ ರಂಗನ್ನ ಹೆಚ್ಚಿಸುತ್ತದೆ. ಸ್ನೇಹಿತರೆ ನನಗನಿಸುತ್ತೆ ಆರ್ಸಿಬಿಯು ಕಪ್ ಗೆದ್ದರೆ ಅಲ್ಲಿಗೆ ಐಪಿಎಲ್ ನ ಒಂದು ಅಧ್ಯಾಯ ಮುಗಿದಂತೆ. ಅದಕ್ಕೆ ನೀವು ಏನಂತೀರಿ ಎಂಬುದನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.