ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ರಾಜ್ಯ ಸರ್ಕಾರವು ಆರ್ಥಿಕವಾಗಿ ಬಡತನದಲ್ಲಿರುವ ಎಲ್ಲಾ ಅರ್ಹ ಫಲಾನುಭವಿ ಕುಟುಂಬಗಳಿಗೆ ದವಸ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದೆ.
Thank you for reading this post, don't forget to subscribe!ಈ ಉಚಿತ ದವಸ ಧಾನ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಬೇಕು.ಇನ್ನು ಕೇವಲ ರೇಷನ್ ಕಾರ್ಡ್ ಹೊಂದಿದ್ದರೆ ಮಾತ್ರ ರೇಷನ್ ಸಿಗುತ್ತದೆ ಎಂದು ಗ್ಯಾರಂಟಿ ಇಲ್ಲ. Ration card karnataka
ಏಕೆಂದರೆ ಇತ್ತೀಚೆಗೆ ರಾಜ್ಯ ಸರ್ಕಾರವು ಉಚಿತ ರೇಶನ್ ದವಸ ಧಾನ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯನ ಇಕೆವೈಸಿ ಕಡ್ಡಾಯವಾಗಿ ಮಾಡಬೇಕೆಂದು ತಿಳಿಸಿದೆ. Ration card status
ಯಾರು ರೇಷನ್ ಕಾರ್ಡ್ ಇಕೆವೈಸಿ ಮಾಡಿಸುವುದಿಲ್ಲವೋ ಅಂತವರಿಗೆ ಉಚಿತ ದವಸ ಧಾನ್ಯಗಳನ್ನ ಕೊಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಹಾಗಾದರೆ ಮೊಬೈಲ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಇಕೆವೈಸಿ ಮಾಡಿಸುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ. Ration card status karnataka
ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಇಕೆವೈಸಿ ಮಾಡಿಸುವುದು ಹೇಗೆ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯ ಹೆಸರಿನ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ರೇಷನ್ ಕಾರ್ಡ್ ವಿವರ ಎಂದು ಕಾಣಿಸುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ.ಅಲ್ಲಿ ನಿಮಗೆ With OTP ಮತ್ತು Without OTP ಎಂದು ಕಾಣಿಸುತ್ತದೆ. ಅದರಲ್ಲಿ ನೀವು Without OTP ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ RC ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ನಿಮ್ಮ ರೇಷನ್ ಕಾರ್ಡಿನಲ್ಲಿ ಇಕೆವೈಸಿ ಆಗಿರುವ ಸದಸ್ಯರ ಹೆಸರು ಕಾಣಿಸುತ್ತದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಇಕೆವೈಸಿ ಆಗಿರದಿದ್ದರೆ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಕ್ಷಣವೇ ಇಕೆವೈಸಿ ಮಾಡಿಸಿ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇