WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಕನ್ನಡದ ನಟಿಯಾದ ರಶ್ಮಿಕಾ ಮಂದಣ್ಣ ಅವರ ಕುರಿತಾದ ವಿಡಿಯೋ ಒಂದು ಹೆಚ್ಚು ವೈರಲ್ ಆಗುತ್ತಿದೆ. ಇದು ಇಡೀ ಇಂಟರ್ನೆಟ್ ಬಳಸುವ ಬಳಕೆದಾರರಲ್ಲಿ ದಿಗ್ಭ್ರಮೆ ಮೂಡಿಸಿದೆ. ಈ ವಿಡಿಯೋವನ್ನು ಡೀಪ್ ಫೇಕ್ ತಂತ್ರಜ್ಞಾನದ ಸಹಾಯದಿಂದ ಇದನ್ನು ತಯಾರಿಸಲಾಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ ಏನಿದು ಡೀಪ್ ಫೇಕ್ ಟೆಕ್ನಾಲಜಿ? ಯಾಕೆ ಇದರ ಬಗ್ಗೆ ಇಷ್ಟು ವಿವಾದ ಕೇಳಿಬರುತ್ತಿವೆ ಎಂಬುದನ್ನು ಈ ಅರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಸ್ನೇಹಿತರೇ ಸದ್ಯ ಇಂಟರ್ನೆಟ್ ನಲ್ಲಿ ಓಡಾಡುತ್ತಿರುವ ರಶ್ಮಿಕಾ ಮಂದಣ್ಣ ಅವರ ಫೇಕ್ ವಿಡಿಯೋ ಮೂಲತಃ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (influencer) ಆದ ಜಾರಾ ಪಟೇಲ್ ರದ್ದು. ಅವರ ಮುಖವನ್ನು ಡೀಪ್ ಫೇಕ್ ಟೆಕ್ನಾಲಜಿ ಮೂಲಕ ಬದಲಿಸಿ ಅದನ್ನು ರಶ್ಮಿಕಾ ಮಂದಣ್ಣ ಅವರ ಮುಖವಾಗಿ ಚಿತ್ರಿಸಲಾಗಿದೆ. ಈ ಕುರಿತಂತೆ ಬಾಲಿವುಡ್ ಬಿಗ್ ಬಿ ಎಂದು ಖ್ಯಾತರಾದ ಅಮಿತಾಬ್ ಬಚ್ಚನ್ ಅವರನ್ನು ಸೇರಿದಂತೆ ಹಲವು ಸೆಲೆಬ್ರಿಟಿಗಳು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಈಗಾಗಲೇ ಇಂತಹ ವಿಡಿಯೋ ಗಳು ಸೋಶಿಯಲ್ ಮೀಡಿಯಾ ಪ್ಲೇಟ್ಫಾರ್ಮ್ ನಲ್ಲಿ ಕಂಡ ತಕ್ಷಣವೇ ಮುಂದಿನ 24 ಗಂಟೆಗಳ ಅವಧಿಯಲ್ಲಿ ಅವುಗಳನ್ನು ತೆಗೆದು ಹಾಕುವಂತೆ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲೇಟ್ಫಾರ್ಮ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಏನಿದು ಡೀಪ್ ಫೇಕ್ ಟೆಕ್ನಾಲಜಿ?

ಸ್ನೇಹಿತರೆ ಇದೊಂದು ಕೃತಕ ಬುದ್ಧಿಮತ್ತೆ (Artificial Intelligence) ಸಹಾಯದಿಂದ ಅಭಿವೃದ್ಧಿಯಾದ ತಂತ್ರಜ್ಞಾನ ಆಗಿದ್ದು, Facial Recognition Technology ಸಹಾಯದಿಂದ ಮತ್ತು Generative Adversarial Network (GAN ) ಎಂಬ ತಂತ್ರಜ್ಞಾನದ ಸಹಾಯದಿಂದ ಒಬ್ಬ ವ್ಯಕ್ತಿಯ ಮುಖವನ್ನು ಮತ್ತು ಅವರ ದೇಹದ ಅಂಗಗಳ ಚಲನ ವಲನಗಳನ್ನು ಅನುಸರಿಸಿ ಅದಕ್ಕೆ ಇನ್ನೊಬ್ಬ ವ್ಯಕ್ತಿಯ ಮುಖ ಅಥವಾ ಬೇರೆ ಯಾವುದೇ ಅಂಗವನ್ನು ಸೇರಿಸಿ ಮೂಲ ವ್ಯಕ್ತಿಯ ಗುರುತೆ ಸಿಗದಂತೆ ನಮಗೆ ಬೇಕಾದವರ ಹಾಗೆ ತಯಾರಿಸಿ ಬಿಡುತ್ತದೆ. ಈ ಕಾರಣದಿಂದಲೇ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow ‘ ಮಾಡಿಕೊಳ್ಳಿ. ಹಾಗೆ ಈ ಆರ್ಟಿಕಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

By

Leave a Reply

Your email address will not be published. Required fields are marked *